ದೇವಸ್ಥಾನಗಳ ಪಾವಿತ್ರ್ಯ ಕಾಪಾಡುವುದು ಅದರ ಬಗ್ಗೆ ಜಾಗೃತಿ ಮೂಡಿಸುವುದು

ಶ್ರೀ ಗಣಪತಿಯ, ಹಾಗೆಯೇ ಇತರ ದೇವತೆಗಳ ದೇವಸ್ಥಾನಗಳಲ್ಲಿ ಆಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿರಿ !
. ದರ್ಶನಕ್ಕಾಗಿ ಜನಸಂದಣಿ ಮಾಡಬೇಡಿರಿ. ಸಾಲಿನಲ್ಲಿ ನಿಂತು ಶಾಂತಿಯಿಂದ ದರ್ಶನ ಪಡೆಯಿರಿ. ಶಾಂತಿಯಿಂದ ಭಾವಪೂರ್ಣ ದರ್ಶನ ವನ್ನು ಪಡೆಯುವುದರಿಂದ ದರ್ಶನದ ನಿಜವಾದ ಲಾಭವಾಗುತ್ತದೆ.
. ದೇವಸ್ಥಾನದಲ್ಲಿ ಅಥವಾ ಗರ್ಭಗುಡಿಯಲ್ಲಿ ಗಲಾಟೆ ಮಾಡ ಬೇಡಿರಿ. ಇದರಿಂದ ದೇವಸ್ಥಾನದ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ, ಹಾಗೆಯೇ ಅಲ್ಲಿ ದರ್ಶನ ಪಡೆಯುವ, ನಾಮಜಪ ಮಾಡುವ ಅಥವಾ ಧ್ಯಾನಕ್ಕೆ ಕುಳಿತ ಭಕ್ತರಿಗೂ ತೊಂದರೆಯಾಗುತ್ತದೆ.
. ಕೆಲವೊಮ್ಮೆ ದೇವರ ಎದುರಿಗೆ ಹಣವನ್ನಿಡಲು ಬಹಳ ಒತ್ತಾಯಿಸಲಾಗುತ್ತದೆ. ಅದಕ್ಕೆ ಮಣಿಯದೇ ನಮ್ರವಾಗಿ ನಿರಾಕರಿಸಿ.

. ದೇವಸ್ಥಾನದ ಪರಿಸರವನ್ನು ಸ್ವಚ್ಛವಾಗಿಡಿ. ಆವರಣದಲ್ಲಿ ಪ್ರಸಾದದ ಪೊಟ್ಟಣದ ಖಾಲಿ ಹೊದಿಕೆ, ತೆಂಗಿನಕಾಯಿಯ ಗೆರಟೆ ಇತ್ಯಾದಿಗಳು ಕಂಡುಬಂದರೆ ಅವುಗಳನ್ನು ಕೂಡಲೇ ತೆಗೆದು ಕಸದ ಬುಟ್ಟಿಗೆ ಹಾಕಿರಿ.
ದೇವಸ್ಥಾನದ ಸಾತ್ತ್ವಿಕತೆಯನ್ನು ಉಳಿಸುವುದು, ಪ್ರತಿಯೊಬ್ಬ ಭಕ್ತನ ಕರ್ತವ್ಯವೇ ಆಗಿದೆ; ಆದುದರಿಂದ ಮೇಲಿನ ತಪ್ಪು ಆಚರಣೆಗಳ ಬಗ್ಗೆ, ದೇವಸ್ಥಾನಕ್ಕೆ ಬರುವ ಭಕ್ತರು, ಹಾಗೆಯೇ ದೇವಸ್ಥಾನದ ಅರ್ಚಕರು, ವಿಶ್ವಸ್ಥರು ಮುಂತಾದವರಿಗೆ ನಮ್ರವಾಗಿ ಪ್ರಬೋಧನೆ ಮಾಡಿರಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಸ್ಥಾನಗಳ ಪಾವಿತ್ರ್ಯ ಕಾಪಾಡುವುದು ಅದರ ಬಗ್ಗೆ ಜಾಗೃತಿ ಮೂಡಿಸುವುದು