ಸನಾತನವು ಅಲ್ಪಾವಧಿಯಲ್ಲಿ ವ್ಯಾಪಕವಾಗಿರುವ ಹಿಂದಿನ ಕಾರಣಕರ್ತರು : ಪರಾತ್ಪರ ಗುರು ಡಾ. ಆಠವಲೆ !

ಶ್ರೀ. ಭೂಷಣ ಕೇರಕರ
ಯಾವುದೇ ಸಂಸ್ಥೆಯು ಬೆಳೆಯುವುದರ ಹಿಂದೆ ಕೆಲವು ವೈಶಿಷ್ಟ್ಯಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ಈ ವೈಶಿಷ್ಟ್ಯ ಗಳು ಮಾನಸಿಕ ಮತ್ತು ವ್ಯವಹಾರಿಕ ಮಟ್ಟದ್ದಾಗಿರುತ್ತವೆ. ಸನಾತನ ಸಂಸ್ಥೆಯು ಅಲ್ಪಾವಧಿಯಲ್ಲಿ ವಿಶ್ವವ್ಯಾಪಿ
ಯಾಗುವ ಹಿಂದೆಯೂ ಕೆಲವು ವೈಶಿಷ್ಟ್ಯಗಳಿವೆ. ಆದರೆ ಈ ವೈಶಿಷ್ಟ್ಯಗಳು ಆಧ್ಯಾತ್ಮಿಕ ಮಟ್ಟದ್ದಾಗಿರುತ್ತವೆ. ಪ್ರೀತಿ (ಎಲ್ಲರೊಂದಿಗೆ ನಿರಪೇಕ್ಷ ಪ್ರೇಮ), ಯಾವುದೇ ಅಪೇಕ್ಷೆಯಿಲ್ಲದೇ ನಿರಂತರವಾಗಿ ಕಾರ್ಯನಿರತವಾಗಿರುವುದು, ತನ್ನ ಗುಣ-ದೋಷಗಳನ್ನು ಆತ್ಮನಿರೀಕ್ಷಣೆ ಮಾಡಿಕೊಳ್ಳುವುದು, ಯಾವುದೇ ಆಪತ್ತು ಎದುರಾದರೂ ಈಶ್ವರನ ಮೇಲಿನ ಶ್ರದ್ಧೆಯು ದೃಢವಾಗಿರುವುದು ಹಾಗೂ ವ್ಯಾಪಕತೆ ಇವುಗಳು ಅವುಗಳಲ್ಲಿನ ಆಯ್ದ ಕೆಲವು ವೈಶಿಷ್ಟ್ಯಗಳಾಗಿವೆ. ಸನಾತನದ ವಿಚಾರಧಾರೆಯನ್ನು ಸಂಪೂರ್ಣ ಒಪ್ಪಿಕೊಳ್ಳುವ ಸಾವಿರಾರು ಸಾಧಕರಿಂದ ಈ ವೈಶಿಷ್ಟ್ಯವನ್ನು ಸ್ವಲ್ಪ ಪ್ರಮಾಣದಲ್ಲಿಯಾದರೂ ಅನುಭವಿಸಬಹುದಾಗಿದೆ. ಅಧ್ಯಾತ್ಮದಲ್ಲಿ ‘ಪಿಂಡದಿಂದ ಬ್ರಹ್ಮಾಂಡ’ ಈ ತತ್ತ್ವವಿದೆ. ಸನಾತನದ ಸಾಧಕರಲ್ಲಿಯೂ ಈ ದೈವೀ ವೈಶಿಷ್ಟ್ಯಗಳಿವೆ.
ಇದರ ಕಾರಣವೇನೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಶಿಕ್ಷಣವನ್ನು ಪ್ರಾರಂಭದಲ್ಲಿಯೇ ಸಾಧಕರಿಗೆ ನೀಡಿದ್ದಾರೆ. ಇಂದು ಪರಾತ್ಪರ ಗುರು ಡಾ. ಆಠವಲೆಯವರು ಸಾರ್ವಜನಿಕ ಜೀವನದಿಂದ ನಿವೃತ್ತರಾಗಿದ್ದಾರೆ. ಆದರೆ ಅವರು ೨೦ ರಿಂದ ೨೫ ವರ್ಷಗಳ ಹಿಂದೆ ನೀಡಿದ ಈ ಶಿಕ್ಷಣವು ಉಗಮದಿಂದ ಸಂಗಮದೆಡೆಗೆ ಹರಿಯುವ ನದಿಯಂತೆ ಅಖಂಡವಾಗಿ ಜುಳುಜುಳು ನಾದದೊಂದಿಗೆ ಹರಿಯುತ್ತಿದೆ. ಸನಾತನ ಕೇವಲ ೨೫ ವರ್ಷಗಳಲ್ಲಿ ವಿಶ್ವವ್ಯಾಪಿಯಾಗಿರುವುದರ ಹಿಂದಿರುವ ಕಾರಣವೂ ಇದೇ ಆಗಿದೆ. ಈ ಶಿಕ್ಷಣವನ್ನು ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಲ್ಲಿ ಹೇಗೆ ಬೇರೂರಿಸಿದರು ಎನ್ನುವುದರ ಮರ್ಮವನ್ನು ಹುಡುಕುವ ಕಿರು ಪ್ರಯತ್ನ ಇದಾಗಿದೆ. 


ಕೃಣ್ವಂತೋ ವಿಶ್ವಮಾರ್ಯಮ್ ’ (ಸಂಪೂರ್ಣ ಜಗತ್ತನ್ನು ಸುಸಂಸ್ಕೃತಗೊಳಿಸೋಣ !) ಎಂಬ ಉಕ್ತಿಗನುಸಾರ ಆರಂಭಿಸಿದಪರಾತ್ಪರ ಗುರು ಡಾ. ಆಠವಲೆಯವರ ವಿಶ್ವಕಾರ್ಯ !
ಬೆಳೆಯುತ್ತಾ ಬೆಳೆಯುತ್ತಾ ಹೆಮ್ಮರವಾದ ಗಿಡ !
ಪರಾತ್ಪರ ಗುರು ಡಾ. ಆಠವಲೆಯವರು ೧೯೯೧ ರಲ್ಲಿ ಸನಾತನದ ಬೀಜವನ್ನು ಬಿತ್ತಿದರು. ಆ ಸಮಯದಲ್ಲಿ ಸಂಸ್ಥೆಯ ಒಂದೇ ಆಶ್ರಮವಿತ್ತು. ಅದೆಂದರೆ ಅವರ ಮುಂಬಯಿಯ ಶೀವ ಎಂಬಲ್ಲಿದ್ದ ಪ.ಪೂ. ಡಾಕ್ಟರರ ಮನೆ. ಆ ಸಮಯದಲ್ಲಿ ಒಂದು ಗಣಕಯಂತ್ರದಲ್ಲಿ ಒಬ್ಬ ಸಾಧಕನು ಗ್ರಂಥ ಸಂಕಲನದ ಸೇವೆಯನ್ನು ಮಾಡುತ್ತಿದ್ದನು. ಅವನು ಮಲಗಿದ ಕೂಡಲೇ ಮತ್ತೊಬ್ಬ ಸಾಧಕನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುತ್ತಿದ್ದನು. ಇಂದು ಇದರ ಸಂಖ್ಯೆ ಎಷ್ಟೋ ಪಟ್ಟು ವೃದ್ಧಿಸಿದೆ, ಹಾಗೆಯೇ ಧ್ವನಿಚಿತ್ರೀಕರಣ, ಕಲಾವಿಭಾಗ, ನಿಯತಕಾಲಿಕೆ ಹೀಗೆ ಧರ್ಮಶಿಕ್ಷಣ ಮತ್ತು ಧರ್ಮರಕ್ಷಣೆಗಾಗಿ ಪ್ರಾರಂಭಗೊಂಡ ಕಾರ್ಯದ ಪ್ರತಿಯೊಂದು ವಿಭಾಗವೂ ಇಂದು ವ್ಯಾಪಕ ರೂಪವನ್ನು ತಾಳಿದೆ. ಪರಾತ್ಪರ ಗುರು ಡಾ. ಆಠವಲೆಯವರು ಪ್ರಾರಂಭದಲ್ಲಿ ಅಧ್ಯಾತ್ಮದ ಸರ್ವಾಂಗವನ್ನು ಸ್ಪರ್ಷಿಸಿ ಒಂದು ಸೈಕ್ಲೋಸ್ಟಾಯಿಲ್ ಗ್ರಂಥವನ್ನು ಮುದ್ರಿಸಿದ್ದರು. ಆ ಗ್ರಂಥದ ಪ್ರತಿಯೊಂದು ವಿಷಯವು ಒಂದು ಖಂಡವಾಗಿ ಆ ಖಂಡದಲ್ಲಿ ಅನೇಕ ಗ್ರಂಥಗಳು ಮುದ್ರಣಗೊಂಡಿವೆ. ಸನಾತನದ ವಿಚಾರಧಾರೆಯನ್ನು ಆಧರಿಸಿ ೬ ಜಾಲತಾಣಗಳು ಜನಪ್ರಿಯಗೊಂಡಿವೆ. ಸನಾತನದ ವಿಚಾರಗಳೊಂದಿಗೆ ಒಂದಾಗಿ ೪ ಆಶ್ರಮಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ಸನಾತನದ ಕಾರ್ಯದ ಪ್ರಗತಿಯ ಕುರಿತು ಇದೊಂದು ಸಂಕ್ಷಿಪ್ತ ಪರಿಚಯವು ಕೇವಲ ಉದಾಹರಣೆಗಾಗಿ ಇದೆ. ಇದರಿಂದ ಸನಾತನದ ವೃದ್ಧಿಸುತ್ತಿರುವ ಕಾರ್ಯದ ಅಂದಾಜು ತಮಗೆ ಆಗಿರಬಹುದು. ಇದನ್ನು ಹೇಳುವ ಕಾರಣವಿಷ್ಟೇ, ಪರಾತ್ಪರ ಗುರು ಡಾ. ಆಠವಲೆಯವರು ನೀಡಿರುವ ಶಿಕ್ಷಣದಿಂದಾಗಿಯೇ ಸಾಧಕರಲ್ಲಿ ಈ ದೈವಿ ಗುಣ ನಿರ್ಮಾಣವಾಯಿತು ಮತ್ತು ಈ ದೈವೀ ಕಾರ್ಯವು ನೋಡುನೋಡುತ್ತಿದ್ದಂತೆ ಬೃಹದಾಕಾರವಾಗಿ ಬೆಳೆದಿದೆ.
. ಪ್ರೀತಿ (ಎಲ್ಲರ ಮೇಲೆ ನಿರಪೇಕ್ಷ ಪ್ರೇಮ)
ಪರಾತ್ಪರ ಗುರು ಡಾ. ಆಠವಲೆಯವರು ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ಅವನು ಸಾಧಕನಾಗಿರಲಿ ಅಥವಾ ಇಲ್ಲದಿರಲಿ ನಿರಪೇಕ್ಷವಾಗಿ ಪ್ರೇಮ ಸುಧೆಯನ್ನು ಹರಿಸಿದರು. ಇಲ್ಲಿಯವರೆಗೆ ಅವರು ಸಾವಿರಾರು ಜಿಜ್ಞಾಸುಗಳಿಗೆ ಸಾಧನೆಯನ್ನು ಹೇಳಿದ್ದಾರೆ; ಆದರೆ ಆ ವ್ಯಕ್ತಿಯು ಸಾಧನೆಯನ್ನು ಮಾಡಲೇ ಬೇಕೆಂದು ಎಂದಿಗೂ ಆಗ್ರಹಿಸಲಿಲ್ಲ. ಯಾವುದಾದರೂ ವ್ಯಕ್ತಿ ಸಾಧನೆಯನ್ನು ಮಾಡುತ್ತಿಲ್ಲವೆಂದು ಅವನ ಕುರಿತಾಗಿ ತಮ್ಮ ಪ್ರೇಮವನ್ನು ಎಂದಿಗೂ ಕಡಿಮೆ ಮಾಡಲಿಲ್ಲ. ಈ ಕೆಳಗಿನ ಎರಡು ಪ್ರಸಂಗಗಳಿಂದ ನಿರಪೇಕ್ಷ ಪ್ರೀತಿಯು ಹೇಗೆ ಕಾರ್ಯನಿರ್ವಹಿಸುತ್ತದೆಯೆಂದು ನೋಡೋಣ.
೧ ಅ. ಪರಾತ್ಪರ ಗುರು ಡಾ. ಆಠವಲೆಯವರ ನಿರಪೇಕ್ಷ ಪ್ರೀತಿ ಯಿಂದಾಗಿ ಡಾ. ಜೋಶಿಯವರು ಅನೇಕ ವರ್ಷಗಳ ಬಳಿಕವೂ ಸನಾತನದ ಗ್ರಂಥಗಳನ್ನು ಗುಜರಾತಿ ಭಾಷೆಯಲ್ಲಿ ಭಾಷಾಂತರ ಮಾಡಿ ಕೊಡುವುದು :
ಗುಜರಾತಿನ ಜಾಮನಗರದ ಆಯುರ್ವೇದಿಕ ವೈದ್ಯಾಚಾರ್ಯರಾದ ಡಾ. ಪ್ರಕಾಶ ಜೋಶಿಯವರು ಸುಮಾರು ೧೫-೧೬ ವರ್ಷಗಳ ಹಿಂದೆ ಸ್ವಸಮ್ಮೋಹನ ಉಪಚಾರ ಪದ್ಧತಿಯನ್ನು ಕಲಿಯಲು ಪರಾತ್ಪರ ಗುರು ಡಾ. ಆಠವಲೆಯವರ ಬಳಿಗೆ ಬಂದಿದ್ದರು. ಆ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಅವರಿಗೆ ಈ ವಿಷಯದ ಬಗ್ಗೆ ಬರೆದಿರುವ ಗ್ರಂಥವನ್ನು ಗುಜರಾತಿ ಭಾಷೆಗೆ ಭಾಷಾಂತರಿಸುವಂತೆ ವಿನಂತಿಸಿದ್ದರು. ಬಳಿಕ ಡಾ. ಜೋಶಿಯವರು ಅಕಸ್ಮಿಕವಾಗಿ ೨೦೧೬ ರಲ್ಲಿ ದೂರವಾಣಿ ಕರೆ ಮಾಡಿ ‘೧೫-೧೬ ವರ್ಷಗಳ ಹಿಂದೆ ಡಾ. ಆಠವಲೆಯವರು ನನಗೆ ಈ ಗ್ರಂಥವನ್ನು ಭಾಷಾಂತರ ಮಾಡಲು ಹೇಳಿದ್ದರು ಮತ್ತು ಈಗ ಆ ಗ್ರಂಥದ ಭಾಷಾಂತರ ಮತ್ತು ಅದರ ಬೆರಳಚ್ಚು ಸಹ ಪೂರ್ಣಗೊಂಡಿದೆ. ಈಗ ಈ ಗ್ರಂಥವನ್ನು ನಾನು ನಿಮ್ಮ ಬಳಿಗೆ ಮುದ್ರಣಕ್ಕಾಗಿ ಕಳುಹಿಸುತ್ತೇನೆ’ ಎಂದರು. ಪರಾತ್ಪರ ಗುರು ಡಾ. ಆಠವಲೆಯವರ ಸಹವಾಸದಿಂದಾಗಿ ಆ ವ್ಯಕ್ತಿಯ ಮನಸ್ಸಿನಲ್ಲಿ ಬೀಜರೂಪದಲ್ಲಿ ಆದ ಸಂಸ್ಕಾರದ ಫಲವು ಮುಂದೆ ಎಂದಾದರೂ ದೊರಕುತ್ತದೆ ಎನ್ನುವ ಅನುಭವವವು ಆಗಾಗ ಬರುತ್ತದೆ. ಸಾಧಕರೂ ಪರಾತ್ಪರ ಗುರು ಡಾ. ಆಠವಲೆಯವರ ಗುಣಗಳ ಅನುಕರಣೆಯನ್ನು ಮಾಡುತ್ತಾರೆ. ಅದರ ಫಲ ಹೇಗೆ ದೊರೆಯುತ್ತದೆ, ಎನ್ನುವ ಕುರಿತು ಒಂದು ಪ್ರಸಂಗ ಕೆಳಗಿನಂತಿದೆ.
೧ ಆ. -೬ ವರ್ಷಗಳ ಹಿಂದೆ ದೊರೆತ ಸನಾತನದ ಸಾಧಕರ ಸಹವಾಸದಿಂದಾಗಿ ನಗರ ಜಿಲ್ಲೆಯ ಯುವಕರು ಇವತ್ತಿಗೂ ಸಾಧನೆಯಲ್ಲಿ ತೊಡಗಿರುವುದು : ಮಹಾರಾಷ್ಟ್ರದ ನಗರ ಜಿಲ್ಲೆಯಲ್ಲಿ ಸನಾತನದ ಕಾರ್ಯ ಅಷ್ಟೇನೂ ಇಲ್ಲ. ಇತ್ತೀಚೆಗೆಷ್ಟೇ ಕೆಲವು ಉಪಕ್ರಮದ ನಿಮಿತ್ತ ಸನಾತನದ ಸಾಧಕರು ನಗರ ಜಿಲ್ಲೆಯ ಕೆಲವು ಪಟ್ಟಣಗಳಿಗೆ ಹೋಗಿದ್ದರು. ಆ ಸಮಯದಲ್ಲಿ ಅಲ್ಲಿಯ ಕೆಲವು ಯುವಕರು ‘ನಾವು ಸನಾತನದ ಸಾಧಕರೇ ಆಗಿದ್ದೇವೆ. -೬ ವರ್ಷಗಳ ಹಿಂದೆ ನಮ್ಮ ಪಟ್ಟಣಕ್ಕೆ ಸನಾತನದ ಕೆಲವು ಸಾಧಕರು ಬಂದು ಸಾಧನೆಯನ್ನು ಕಲಿಸಿ ಹೋದರು. ತದನಂತರ ನಾವು ಸಾಧನೆಯನ್ನು ಮಾಡುತ್ತಿದ್ದೇವೆ. ನೀವು ನಮಗೆ ಧರ್ಮಕಾರ್ಯದ ಕುರಿತು ಮಾರ್ಗದರ್ಶನವನ್ನು ಮಾಡಿರಿ. ನಾವು ಧರ್ಮಕಾರ್ಯ ಮಾಡಲು ಸಿದ್ಧ ರಿದ್ದೇವೆ’ ಎಂದರು. -೬ ವರ್ಷಗಳ ಹಿಂದೆ ಸನಾತನದ ಸಾಧಕರು ಕೆಲವು ಯುವಕರಿಗೆ ನಿರಪೇಕ್ಷವಾಗಿ ತಿಳಿಸಿದ ಸಾಧನೆಯ ಪರಿಣಾಮವು ದೀರ್ಘಕಾಲದ ಬಳಿಕವೂ ಸ್ಥಿರವಾಗಿತ್ತು ಎನ್ನುವ ಅನುಭವವೇ ಇದಾಗಿದೆ !
೧ ಇ. ಪರಾತ್ಪರ ಗುರು ಡಾ. ಆಠವಲೆಯವರಿಂದ ದೊರೆತ ಪ್ರೀತಿಯು ಹಬ್ಬುತ್ತಿರುವುದು : ನಿರಪೇಕ್ಷ ಪ್ರೀತಿ ಎಂಬ ಸನಾತನದ ಸಾಧಕರ ಈ ವೈಶಿಷ್ಟ್ಯವು ಸಮಾಜಕ್ಕೆ ಅರಿವಾಗುತ್ತದೆ ಮತ್ತು ಯಾವುದಾದರೂ ಮಾಧ್ಯಮ ದಿಂದ ಅವರು ಸಾಮಾಜಿಕ ಧರ್ಮಕಾರ್ಯದಲ್ಲಿ ಭಾಗವಹಿಸುತ್ತಾರೆ. ಪ್ರಾರಂಭದಲ್ಲಿ ಅರ್ಪಣೆ ಅಥವಾ ಜಾಹೀರಾತು ಪಡೆಯಲು ಹೋದಾಗ ಸನಾತನದ ಎಷ್ಟೋ ಸಾಧಕರಿಗೆ ಅದು ದೊರೆಯದೇ ಬರಿಗೈಯಿಂದ ಹಿಂತಿರುಗಬೇಕಾಯಿತು. ಈ ಕಟುಅನುಭವದ ವಿಷಯದಲ್ಲಿ ಸಾಧಕರ ನಡವಳಿಕೆ-ಮಾತನಾಡುವಿಕೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ. ಅದರ ಪರಿಣಾಮವೆಂದರೆ ಸಾಧಕರು ಅರ್ಪಣೆ ಅಥವಾ ಜಾಹೀರಾತು ಪಡೆಯಲು ಕೆಲವು ಕಾರಣಗಳಿಂದ ಹೋಗದಿದ್ದರೆ, ಅರ್ಪಣೆ ನೀಡುವವರು ತಾವಾಗಿಯೇ ಅವರಿಗೆ ಈ ಕುರಿತು ಕೇಳುತ್ತಾರೆ. ಆ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರಿಂದ ದೊರೆತ ಪ್ರೀತಿಯ ಬಳುವಳಿಕೆಯೆ ರೂಪದಲ್ಲಿ ಹಬ್ಬಿ ಹೇಗೆ ಕಾರ್ಯನಿರತವಾಗಿದೆಯೆನ್ನುವ ಅನುಭವ ಬರುತ್ತದೆ.
. ಪ್ರತಿಫಲದ ಅಪೇಕ್ಷೆಯನ್ನಿಡದೇ ನಿರಂತರವಾಗಿ ಕಾರ್ಯನಿರತವಾಗಿರುವುದು
ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ಎಷ್ಟೋ ವರ್ಷಗಳಿಂದ ಆರೋಗ್ಯ ಹದಗೆಟ್ಟಿರುವ ಸಮಯವನ್ನು ಬಿಟ್ಟರೆ ಇನ್ನಿತರ ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿರುವುದು ಅಥವಾ ಮನಸ್ಸನ್ನು ಮುದ ಗೊಳಿಸಲು ಮನೋರಂಜನೆ ಮಾಡುತ್ತಿರುವುದನ್ನು ಯಾರೂ ನೋಡಿಲ್ಲ. ಇದೇ ಗುಣಗಳು ಸನಾತನದ ಸಾಧಕರಲ್ಲಿಯೂ ಮೈಗೂಡಿವೆ. ಸನಾತನದ ಸಾವಿರಾರು ಸಾಧಕರು ಸಂಸಾರ, ನೌಕರಿ-ವ್ಯವಸಾಯವನ್ನು ನಿರ್ವಹಿಸುತ್ತ ಧರ್ಮಕಾರ್ಯಕ್ಕಾಗಿ ನಿರಂತರವಾಗಿ ಕಾರ್ಯನಿರತರಾಗಿರುತ್ತಾರೆ. ಎಷ್ಟೋ ಸಾಧಕರ ದಿನವು ಪ್ರಾತಃ ಕಾಲದಲ್ಲಿ ಆರಂಭವಾಗುತ್ತದೆ ಮತ್ತು ಮಧ್ಯರಾತ್ರಿಗೆ ಕೊನೆಯಾಗುತ್ತದೆ. ಇದನ್ನು ಕಂಡು ಎಷ್ಟೋ ಜನರು ಸಾಮಾಜಿಕ ಕಾರ್ಯ ವನ್ನು ಮಾಡುವ ಯಾವುದೇ ಕಾರ್ಯಕರ್ತನಿಗಿಂತ ಸನಾತನದ ಸಾಧಕರು ೫ ಪಟ್ಟು ಹೆಚ್ಚು ಸಕ್ಷಮವಾಗಿ ನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ. ವಿಶೇಷವೆಂದರೆ ಈ ಸಾಧಕರಿಗೆ ಕಾರ್ಯನಿರತರಾಗಲು ಯಾರೂ ಪ್ರೇರಣೆ ನೀಡುವ ಅವಶ್ಯಕತೆಯಿರುವುದಿಲ್ಲ. ಅದನ್ನು ಅವರು ‘ಧರ್ಮಕಾರ್ಯವು ಗುರುಸೇವೆಯಾಗಿದೆ’ ಎನ್ನುವ ವಿಚಾರವು ಮನಸ್ಸಿನಲ್ಲಿ ಬಿಂಬಿಸಲ್ಪಟ್ಟಿರುವುದರಿಂದ ಸಾಧಕರು ಭಾವದ ಮಟ್ಟದಲ್ಲಿ ಪ್ರೇರೇಪಿತಗೊಂಡು ದೇಹಭಾವವನ್ನು ಮರೆತು ಕಾರ್ಯವನ್ನು ನಿರ್ವಹಿಸುತ್ತಾರೆ. ಇದರ ಪರಿಣಾಮವಾಗಿ ಯಾವ ಕಾರ್ಯವು ಪೂರ್ಣ ಗೊಳ್ಳಲು ಒಂದು ತಿಂಗಳು ತಗುಲುತ್ತಿತ್ತೋ ಆ ಕಾರ್ಯವನ್ನು ಸನಾತನದ ಸಾಧಕರು ಕೇವಲ ೭-೮ ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ.
. ತಮ್ಮ ಗುಣ-ದೋಷಗಳ ಕುರಿತು ಆತ್ಮನಿರೀಕ್ಷಣೆಯನ್ನು ಮಾಡುವುದು
ಸಮಾಜದಲ್ಲಿ ವೈಜ್ಞಾನಿಕತೆಯು ಹೇಗೆ ನೆಲೆಯೂರತೊಡಗಿತೋ, ಅದರಂತೆ ವ್ಯಕ್ತಿಯ ಸ್ವಭಾವದೋಷಗಳು ಹಾಗೂ ಅಹಂಗಳ ಪ್ರಮಾಣವೂ ಹೆಚ್ಚಾಗತೊಡಗಿತು. ವ್ಯಕ್ತಿಯ ಸ್ವಭಾವದೋಷ ಮತ್ತು ಅಹಂಗಳಿಂದಾಗಿ ಕಾರ್ಯದ ಗುಣಮಟ್ಟವೂ ಕಡಿಮೆಯಾಗುತ್ತದೆ. ಇದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಸಾಧಕರಿಗೆ ಕಲಿಸಿದರು ಹಾಗೂ ಸಾಧಕರು ಅದನ್ನು ಸರಿಯಾಗಿ ಮಾಡುವಂತೆ ಸಮರ್ಪಕವಾದ ನಿಯಮಗಳನ್ನು ಹಾಕಿ ಕೊಟ್ಟರು. ಇದರಿಂದ ಸಾಧಕರ ಸ್ವಭಾವದೋಷ ಮತ್ತು ಅಹಂ ಕಡಿಮೆ ಯಾಗಿ ಅವರ ಕಾರ್ಯದ ಗುಣಮಟ್ಟವೂ ಹೆಚ್ಚಾಯಿತು. ಇದರ ಪರಿಣಾಮವೆಂದರೆ ಅನೇಕ ಸಂತರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಮುಖಂಡರೂ ಸನಾತನದ ಸಾಧಕರ ತಪ್ಪುರಹಿತ ಕಾರ್ಯಪದ್ಧತಿಯನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ.ಇಂದು ಪರಾತ್ಪರ ಗುರು ಡಾ. ಆಠವಲೆಯವರು ತಾವೇ ಯಾರಿಗೂ ಮಾರ್ಗದರ್ಶನವನ್ನು ಮಾಡ ದಿದ್ದರೂ, ಅವರು ಹಾಕಿಕೊಟ್ಟ ಮಾರ್ಗದ ಆಚರಣೆಯನ್ನು ಮಾಡಿ ಅವರಿಗೆ ಅಪೇಕ್ಷಿತವಿರುವಂತೆ ಕಾರ್ಯ ಮಾಡುವ ಅಥವಾ ಆ ವಿಷಯದಲ್ಲಿ ಇತರ ರಿಗೆ ಮಾರ್ಗದರ್ಶನ ಮಾಡುವ ಕ್ಷಮತೆಯು ಈಶ್ವರನ ಕೃಪೆಯಿಂದ ಸನಾತನದ ಸಾಧಕರಲ್ಲಿ ನಿರ್ಮಾಣವಾಗಿದೆ.
. ವ್ಯಾಪಕತೆ
ಪರಾತ್ಪರ ಗುರು ಡಾ. ಆಠವಲೆಯವರು ಎಂದಿಗೂ ಯಾವುದೇ ವಿಷಯದಲ್ಲಿ ಸಂಕುಚಿತ ದೃಷ್ಟಿಯಿಂದ ವಿಚಾರ ಮಾಡಿಲ್ಲ. ಅವರು ಹಿಂದೂಗಳನ್ನು ಸಂಘಟಿತಗೊಳಿಸಲು ತಮ್ಮ ಸಂಸ್ಥೆ, ತಮ್ಮ ಸಾಧಕರು ಎನ್ನುವ ವಿಚಾರವನ್ನು ಎಂದಿಗೂ ಮಾಡಿಲ್ಲ. ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಪ್ರತಿಯೊಬ್ಬ ವ್ಯಕ್ತಿ, ಅವನು ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರತನಾಗಿರಲಿ, ಅವನಿಗೆ ಪರಾತ್ಪರ ಗುರು ಡಾ. ಆಠವಲೆಯವರು ತಮ್ಮವನೆಂದು ತಿಳಿದರು. ಮುಂದೆ ಇದೇ ಸಂಸ್ಕಾರವು ಸಾಧಕರಲ್ಲಿಯೂ ಮೈಗೂಡಿದೆ. ಇದರಿಂದಲೇ ಸಾಧಕರಲ್ಲಿ ಪ್ರತಿಯೊಬ್ಬ ಹಿಂದುತ್ವನಿಷ್ಠರ ಕುರಿತು ಧರ್ಮಬಂಧುತ್ವ ನಿರ್ಮಾಣವಾಗಿದೆ. ಸನಾತನದ ಕಾರ್ಯವು ೨೫ ವರ್ಷಗಳಲ್ಲಿ ವೃದ್ಧಿಸಿತು. ಇದರರ್ಥ ಕೇವಲ ಸಂಘಟನೆ ಬೆಳೆಯಿತೆಂದಲ್ಲ. ಹಿಂದುತ್ವನಿಷ್ಠರ ಸಹಾಯ ದಿಂದ ಮಾಡುತ್ತಿರುವ ಧರ್ಮಕಾರ್ಯಗಳ ವ್ಯಾಪ್ತಿಯು ಹೆಚ್ಚಿದೆ. ಸಾಧಕರು ಈ ವ್ಯಾಪಕತೆಯನ್ನು ಪರಾತ್ಪರ ಗುರು ಡಾ. ಆಠವಲೆಯವರಿಂದ ಕಲಿತರು.
. ಯಾವುದೇ ವಿಪತ್ತು ಎದುರಾದರೂ  ಈಶ್ವರನ ಮೇಲಿನ ಶ್ರದ್ಧೆ ದೃಢವಾಗಿರುವುದು
ವಿಪತ್ತು ಎಷ್ಟೇ ದೊಡ್ಡದಾಗಿದ್ದರೂ ‘ಈಶ್ವರನು ಭಕ್ತರ ರಕ್ಷಣೆಯನ್ನು ಮಾಡುತ್ತಾನೆ’ ಎನ್ನುವ ಅನುಭೂತಿಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಆಯಾ ಸಮಯದಲ್ಲಿ ಪಡೆದಿದ್ದಾರೆ ಮತ್ತು ಇದೇ ಶ್ರದ್ಧೆಯನ್ನು ಅವರು ಸನಾತನದ ಸಾಧಕರಲ್ಲಿಯೂ ನಿರ್ಮಿಸಿದ್ದಾರೆ. ಕಳೆದ ೭-೮ ವರ್ಷಗಳಲ್ಲಿ ಸನಾತನದ ಮೇಲೆ ಅನೇಕ ಆಪತ್ತುಗಳು ಎದುರಾದರೂ ಸಾಧಕರು ಧೃತಿಗೆಡಲಿಲ್ಲ. ಪೊಲೀಸರು ಸುಮಾರು ೭೦೦-೮೦೦ ಸಾಧಕರ ವಿಚಾರಣೆ ನಡೆಸಿದರು. ಮೂರು ಸಲ ಸನಾತನವನ್ನು ನಿಷೇಧಿಸಲು ಪ್ರಯತ್ನಿಸಲಾಯಿತು. ಇವೆಲ್ಲ ಪ್ರಸಂಗಗಳಲ್ಲಿ ಸಾಧಕರಿಗೆ ಈಶ್ವರನ ಮೇಲಿನ ಶ್ರದ್ಧೆಯು ಅಚಲ, ದೃಢವಾಗಿತ್ತು. ಆದ್ದರಿಂದಲೇ ಅವರು ಧರ್ಮಕಾರ್ಯವನ್ನು ಸ್ಥಗಿತಗೊಳಿಸುವ ಸಣ್ಣ ವಿಚಾರವನ್ನು ಸಹ ಮಾಡಲಿಲ್ಲ. ಆಪತ್ತಿನ ಸಮಯದಲ್ಲಿಯೂ ಸನಾತನದ ಕಾರ್ಯವು ಐರಾವತದಂತೆ ನಿರಂತರವಾಗಿ ನಡೆದೇ ಇತ್ತು. ಇದರ ಶ್ರೇಯಸ್ಸು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಈಶ್ವರನ ಮೇಲೆ ದೃಢ ಶ್ರದ್ಧೆ ಇಡುವಂತೆ ಆಗಾಗ ನೀಡಿರುವ ಶಿಕ್ಷಣಕ್ಕೆ ಸಲ್ಲುತ್ತದೆ. - ಶ್ರೀ. ಭೂಷಣ ಕೇರಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನವು ಅಲ್ಪಾವಧಿಯಲ್ಲಿ ವ್ಯಾಪಕವಾಗಿರುವ ಹಿಂದಿನ ಕಾರಣಕರ್ತರು : ಪರಾತ್ಪರ ಗುರು ಡಾ. ಆಠವಲೆ !