ಸನಾತನ ಸಂಸ್ಥೆಯ ನ್ಯಾಯಯುತ ಪಕ್ಷವನ್ನು ವಹಿಸುವ ಎಲ್ಲ ಹಿಂದುತ್ವವಾದಿಗಳಿಗೆ ಸಂಸ್ಥೆಯು ಆಭಾರಿಯಾಗಿದೆ !

ಪತ್ರಿಕಾಗೋಷ್ಠಿಯಲ್ಲಿ (ಎಡದಿಂದ) ಡಾ. ಆನಂದ ಕುಲಕರ್ಣಿ, ಶ್ರೀ. ಸಂತೋಷ ವಿಶ್ವಕರ್ಮ, 
ಶ್ರೀ. ಆನಂದ ಕುಲಕರ್ಣಿ, ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ, ಶ್ರೀ.ಕಿರಣ ಕಾಳೆ
ವಿಜಯಪುರದಲ್ಲಿ ಸನಾತನ ಸಂಸ್ಥೆಯನ್ನು ಬೆಂಬಲಿಸಿ ಪತ್ರಿಕಾಗೋಷ್ಠಿ !
ಸನಾತನ ಸಂಸ್ಥೆಯನ್ನು ನಿಷೇಧಿಸುವುದು ಮಾನವೀಯತೆಯ ಲಕ್ಷಣವಲ್ಲ !
- ಡಾ. ಆನಂದ ಕುಲಕರ್ಣಿ, ಅಧ್ಯಕ್ಷರು, ಹಿಂದೂಸ್ಥಾನ ಮರುನಾಮಕರಣ ಸಂಸ್ಥೆ
ವಿಜಯಪುರ : ಭಾರತದಲ್ಲಿ ಪ್ರತಿದಿನ ದಾಳಿ ಮಾಡುವ ಉಗ್ರರ ಮೇಲೆ ಮೊದಲು ನಿಷೇಧ ಹೇರಿ. ಅದನ್ನು ಬಿಟ್ಟು ಭಾರತೀಯ ಸಂಸ್ಕೃತಿ ಯನ್ನು ಕಾಪಾಡುವ ಸನಾತನ ಸಂಸ್ಥೆಯನ್ನು ಮಾನವತೆಯ ಲಕ್ಷಣವಲ್ಲ, ಎಂದು ಹಿಂದೂಸ್ಥಾನ ಮರುನಾಮಕರಣ ಸಂಸ್ಥೆಯ ಅಧ್ಯಕ್ಷರಾದ ಡಾ. ಆನಂದ ಕುಲಕರ್ಣಿಯವರು ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸನಾತನ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಹಿಂದೂದ್ವೇಷಿಗಳು ಆಗಾಗ ಆಗ್ರಹಿಸುತ್ತಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪತ್ರಿಕಾಗೋಷ್ಠಿಯನ್ನು ಮಾಡಿದವು. ಈ ಪತ್ರಿಕಾಗೋಷ್ಠಿಯಲ್ಲಿ ಪ್ರಸಿದ್ಧ ವಕೀಲರಾದ ಶ್ರೀ. ತುಳಸಿರಾಮ ಸೂರ್ಯವಂಶಿ ಇವರು ಮಾತನಾಡಿ, ‘ಸನಾತನ ಸಂಸ್ಥೆ ಒಂದು ಅಧ್ಯಾತ್ಮಿಕ ಸಂಸ್ಥೆಯಾಗಿದೆ. ಧರ್ಮದ ಪ್ರಸಾರ ಮಾಡಿ ಸಮಾಜದಲ್ಲಿನ ತಪ್ಪು ಆಚರಣೆ ನಿಲ್ಲಿಸಿ ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದೆ. ಅದಕ್ಕೆ ಇಂತಹ ಅಧ್ಯಾತ್ಮಿಕ ಸಂಸ್ಥೆಯ ಮೇಲೆ ನಿರ್ಬಂಧ ಹೇರಬಾರದು, ಎಂದರು. ‘ಛತ್ರಪತಿ ಫೌಂಢೇಶನ್’ನ ಸಂಸ್ಥಾಪಕರಾದ ಶ್ರೀ.ಕಿರಣ ಕಾಳೆಯವರು ಮಾತನಾಡುತ್ತಾ, ಸನಾತನ ಸಂಸ್ಥೆ ಎಲ್ಲ ಸಂಘಟನೆಗಳ ಮಾತೆಯಾಗಿದೆ. ಅದು ಎಲ್ಲ ಹಿಂದೂ ಸಂಘಟನೆಗಳಿಗೆ ಧರ್ಮಾಚರಣೆಯ ಬಗ್ಗೆ ಮಾರ್ಗದರ್ಶನ ಮಾಡುತ್ತದೆ. ಯಾವುದೇ ಕಾರಣಕ್ಕೂ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಬಾದು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದರು. ಈ ಪರಿಷತ್ತಿನಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ. ಆನಂದ ಕುಲಕರ್ಣಿ, ವಿಶ್ವ ಹಿಂದೂ ಯುವಸೇನೆಯ ಅಧ್ಯಕ್ಷರಾದ ಶ್ರೀ. ಸಂತೋಷ ವಿಶ್ವಕರ್ಮ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿಗೋಷ್ಠಿಯಲ್ಲಿ ಸಂಬೋಧಿಸುತ್ತಿರುವ ಮಧ್ಯದಲ್ಲಿ ಹಿಂದುತ್ವವಾದಿ ಕುಮಾರ ಮಾಲೆಮಾರ್ ಮತ್ತು ಇತರ ಗಣ್ಯರು
ಸನಾತನ ಸಂಸ್ಥೆಯ ಮೇಲಿನ ಸಂಭಾವ್ಯ ನಿಷೇಧದ ವಿರುದ್ಧ ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಹಿಂದುತ್ವವಾದಿಗಳಿಂದ ಸರಕಾರಕ್ಕೆ ಎಚ್ಚರಿಕೆ !ಮಂಗಳೂರು : ಸನಾತನ ಸಂಸ್ಥೆಯು ಸಮಾಜದ ಕಲ್ಯಾಣಕ್ಕಾಗಿ ಕಾರ್ಯ ಮಾಡುತ್ತಿದೆ. ಈ ಸಂಸ್ಥೆಯು ಜಗತ್ತಿನಾದ್ಯಂತ ಎಲ್ಲ ಜನರಿಗೆ ಅಧ್ಯಾತ್ಮದ ಕುರಿತು ಮಾರ್ಗದರ್ಶನ ಮಾಡುತ್ತಿದೆ. ಅಧ್ಯಾತ್ಮದ ಪ್ರಸಾರ ಮಾಡುವ ಇಂತಹ ಸಂಸ್ಥೆಯನ್ನು ನಿಷೇಧಿಸಲು ಸರಕಾರವು ಮುಂದಾದರೆ ಇದರ ಗಂಭೀರ ಪರಿಣಾಮ ಅನುಭವಿಸ ಬೇಕಾಗಬಹುದು, ಎಂಬ ಎಚ್ಚರಿಕೆಯನ್ನು ಹಿಂದುತ್ವವಾದಿ ಮುಖಂಡ ಕುಮಾರ ಮಲೆಮಾರ್‌ರವರು ಇತ್ತೀಚೆಗೆ ಮಂಗಳೂರಿನಲ್ಲಿ ತೆಗೆದುಕೊಂಡ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಲಕ್ಷಾಂತರ ಜನರು ಸಾಧನೆಯನ್ನು ಆರಂಭಿಸಿದ್ದು ಅವರು ಆನಂದದಿಂದ ಜೀವನ ನಡೆಸುತ್ತಿದ್ದಾರೆ. ಕೆಲವು ಹಿಂದೂವಿರೋಧಿ ಘಟಕಗಳ ಒತ್ತಡದಿಂದ ಮತ್ತು ಷಡ್ಯಂತ್ರಕ್ಕೆ ಬಲಿಯಾಗಿ ಸರಕಾರವು ಸನಾತನ ಸಂಸ್ಥೆಯನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ, ಎಂದು ಶ್ರೀ. ಮಲೆಮಾರ್‌ರವರು ಟೀಕಿಸಿದ್ದಾರೆ. ಸನಾತನ ಸಂಸ್ಥೆಯು ಪ್ರಕಟಿಸಿದ ಗ್ರಂಥಗಳ ಅಧ್ಯಯನ ಮಾಡಿ ಸಮಾಜದಲ್ಲಿ ಸದ್ಯ ನೈತಿಕಮೌಲ್ಯಗಳ ವೃದ್ಧಿಯಾಗುತ್ತಿದೆ. ಸನಾತನ ಸಂಸ್ಥೆಯು ಸಮಾಜಕ್ಕೆ ಧರ್ಮ ಮತ್ತು ಅಧ್ಯಾತ್ಮ ಇವುಗಳ ಶಿಕ್ಷಣ ನೀಡುತ್ತಿದೆ. ಆದುದರಿಂದ ಸನಾತನ ಸಂಸ್ಥೆಗೆ ಬುದ್ಧಿವಾದಿಗಳ ಹತ್ಯಾಕಾಂಡಗಳ ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಇದೊಂದು ಷಡ್ಯಂತ್ರವಾಗಿದೆ. ಇದನ್ನು ನಾವು ಖಂಡಿಸಬೇಕು, ಎಂದೂ ಶ್ರೀ. ಮಲೆಮಾರ್ ರವರು ವ್ಯಕ್ತಪಡಿಸಿದರು.
ಮೂಢನಂಬಿಕೆಯನ್ನು ನಿಷೇಧಿಸಿ ಆದರೆ ಮೂಲ ಶ್ರದ್ಧೆಯನ್ನಲ್ಲ !
ಮೂಢನಂಬಿಕೆಗಳನ್ನು ನಿಷೇಧಿಸುವಾಗ ಕರ್ನಾಟಕ ಸರಕಾರವು ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ವಿಧಿಗಳ ಮೇಲೂ ನಿಷೇಧ ಹೇರ ಬಯಸು ತ್ತಿದೆ. ಹಿಂದೂಗಳ ಧಾರ್ಮಿಕ ವಿಧಿಗಳ ಮೇಲೆ ಗದಾ ಪ್ರಹಾರ ಮಾಡಲು ಪ್ರಯತ್ನಿಸಿದರೆ ಹಿಂದೂಗಳು ಅದಕ್ಕೆ ಪೂರ್ಣ ಶಕ್ತಿಯೊಂದಿಗೆ ವಿರೋಧಿಸುವರು, ಎಂಬ ಎಚ್ಚರಿಕೆಯನ್ನು ಹಿಂದೂ ಮುಖಂಡ ಕಡಬಾ ದಿನೇಶರವರು ನೀಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಹಿಂದೂ ಯುವಾ ಸೇನೆಯ ಜಿಲ್ಲಾಧ್ಯಕ್ಷ ವೀರಪ್ಪ ಮುದುಶೆಡೆ, ಶ್ರೀ. ವಿವೇಕ ಅಂಚನ ಮತ್ತು ಶ್ರೀ. ಗಣೇಶ ಅತ್ತಾವರ ಇವರು ಉಪಸ್ಥಿತರಿದ್ದರು.


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ನ್ಯಾಯಯುತ ಪಕ್ಷವನ್ನು ವಹಿಸುವ ಎಲ್ಲ ಹಿಂದುತ್ವವಾದಿಗಳಿಗೆ ಸಂಸ್ಥೆಯು ಆಭಾರಿಯಾಗಿದೆ !