ಬೌದ್ಧರ ದೌರ್ಜನ್ಯದಿಂದ ಭೂತಾನ್‌ನ ೫೩ ಸಾವಿರ ಹಿಂದೂಗಳು ಪಡೆದರು ಅಮೇರಿಕಾದಲ್ಲಿ ಆಶ್ರಯ !

ಭೂತಾನಿನ ಪೀಡಿತ ಹಿಂದೂಗಳು ಭಾರತಕ್ಕೆ ಬರದೆ ಅಮೇರಿಕಾದಲ್ಲಿ ಆಶ್ರಯ ಪಡೆದರು,
ಇದರ ಅರ್ಥ ಭಾರತದಲ್ಲಿ ಹಿಂದೂಗಳಿಗಾಗಿ ಅನುಕೂಲ ವಾತಾವರಣವಿಲ್ಲ ಎಂದಾಗುತ್ತದೆಯೇ ?
ಈ ಪೀಡಿತ ಹಿಂದೂಗಳಿಗೆ ಭಾರತ ಸರಕಾರ ಏನು ಸಹಾಯ ಮಾಡಲಿದೆ ?
ವಾಶಿಂಗ್ಟನ್ : ೧೯೯೦ ರಲ್ಲಿ ಭೂತಾನ್‌ನಲ್ಲಿ ‘ವನ್ ನೇಶನ್’, ‘ವನ್ ಪೀಪಲ್’ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಈ ಆಂದೋಲನದಲ್ಲಿ ಬೌದ್ಧರು ನಡೆಸಿದ ದೌರ್ಜನ್ಯದಿಂದ ಇಲ್ಲಿನ ೫೦ ಸಾವಿರಕ್ಕಿಂತಲೂ ಹೆಚ್ಚು ಹಿಂದೂಗಳು ಭೂತಾನ್ ತ್ಯಜಿಸಿ ಅಮೇರಿಕಾದಲ್ಲಿ ಆಶ್ರಯ ಪಡೆದಿದ್ದರು. ಒಂದು ಸಮೀಕ್ಷೆಗನುಸಾರ ಈಗಲೂ ೫೩ ಸಾವಿರ ಕ್ಕಿಂತಲೂ ಹೆಚ್ಚು ಹಿಂದೂ ಶರಣಾರ್ಥಿಗಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.

. ಪಿಇಡಬ್ಯೂ ಸಂಶೋಧನೆಗನುಸಾರ ೨೦೦೫ ರಿಂದ ಈ ವರ್ಷದ ಆಗಸ್ಟ್ ವರೆಗೆ ೫೩ ಸಾವಿರದ ೬೬೨ ಹಿಂದೂಗಳು ಅಮೇರಿಕಾದಲ್ಲಿ ಆಶ್ರಯ ಪಡೆದಿದ್ದಾರೆ. ಇದರಲ್ಲಿ ಕೇವಲ ಭೂತಾನ್‌ವೊಂದರಿಂದಲೇ ೫೩ ಸಾವಿರದ ೧೫ ನಿರಾಶ್ರಿತರಿದ್ದಾರೆ.
. ಅಮೇರಿಕಾದಲ್ಲಿ ಭೂತಾನ್‌ನನ್ನು ಹೊರತು ಪಡಿಸಿ ಶ್ರೀಲಂಕಾದಿಂದ ೩೮೩, ನೇಪಾಳದಿಂದ ೧೪೪, ಮ್ಯಾನ್ಮಾರ್‌ನಿಂದ ೯೫, ಭಾರತದಿಂದ ೧೧, ಪಾಕಿಸ್ತಾನದಿಂದ ೬, ವಿಯೇಟ್ನಾಂನಿಂದ ೫, ಬಾಂಗ್ಲಾದೇಶದಿಂದ ೨ ಮತ್ತು ಕಾಂಬೋಡಿಯಾದಿಂದ ಒಬ್ಬ ಹಿಂದೂ ಆಶ್ರಯ ಪಡೆದಿದ್ದಾರೆ.
. ೨೦೧೬ ರಲ್ಲಿ ೨೮ ಸಾವಿರದ ೯೫೭ ಮುಸಲ್ಮಾನರು ಅಮೇರಿಕಾದಲ್ಲಿ ನೆಲೆಸಿದ್ದಾರೆ, ಇದೇ ಅವಧಿಯಲ್ಲಿ ೨೭ ಸಾವಿರದ ೫೫೬ ಕ್ರೈಸ್ತರು ನೆಲೆಸಿದ್ದಾರೆ.
. ಬೌದ್ಧ ದೇಶವಾಗಿರುವ ಭೂತಾನ್‌ನಲ್ಲಿ ಹಿಂದೂಗಳ ವಿರುದ್ಧ ೧೯೯೦ ರಿಂದಲೇ ದೌರ್ಜನ್ಯ ಆರಂಭವಾಗಿತ್ತು. ಕೊನೆಗೆ ಅಲ್ಲಿನ ಸಾವಿರಾರು ಹಿಂದೂಗಳು ಸ್ವದೇಶವನ್ನು ತ್ಯಜಿಸಿ ಅಮೇರಿಕಾದಲ್ಲಿ ಆಶ್ರಯ ಪಡೆದಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೌದ್ಧರ ದೌರ್ಜನ್ಯದಿಂದ ಭೂತಾನ್‌ನ ೫೩ ಸಾವಿರ ಹಿಂದೂಗಳು ಪಡೆದರು ಅಮೇರಿಕಾದಲ್ಲಿ ಆಶ್ರಯ !