೧೮೫೭ ರ ಸ್ವಾತಂತ್ರ್ಯಸಂಗ್ರಾಮ

೧. ಪ್ರಾರಂಭ
೧ ಅ. ಆಂಗ್ಲರ ವಿರುದ್ಧದ ಸ್ವಾತಂತ್ರ್ಯಸಂಗ್ರಾಮಕ್ಕೆ ಹಿಂದೂ-ಮುಸಲ್ಮಾನರು ಒಟ್ಟಾಗಿ ಕರೆ ನೀಡುವುದು
೧೮೫೭ ರಲ್ಲಿ ಆಂಗ್ಲರು ರಾಜ್ಯವನ್ನು ಗೆದ್ದು ಶನಿವಾರವಾಡದ ಮೇಲೆ ತಮ್ಮ ಕುರುಹು ಸ್ಥಾಪಿಸಿದರು. ನಂತರ ೫೦ ವರ್ಷಗಳ ವರೆಗೂ ಹಲವಾರು ಸಣ್ಣ- ದೊಡ್ಡ ರಾಜ್ಯಗಳನ್ನು ಗೆದ್ದುಕೊಂಡರು. ಪರಕೀಯರು ಭೇದನೀತಿ ಹಾಗೂ ಹಿಂಸಕ ರಾಜನೀತಿಯ ಸಹಾಯ ದಿಂದ ಹಲವಾರು ರಾಜ್ಯ ಸಂಸ್ಥಾನಗಳನ್ನು ನಾಶ ಮಾಡಿದರು. ಆ ಕಾಲದಲ್ಲೇ ಆಂಗ್ಲರಿಗೆ ತಿಳಿಯದಂತೆ ಹಿಂದೂ - ಮುಸಲ್ಮಾನರು ಒಟ್ಟಾಗಿ ಅವರ ವಿರುದ್ಧ ಬಂಡಾಯ ಹೂಡಿದರು.
೧ ಆ. ಆಂಗ್ಲರು ಸ್ವಾತಂತ್ರ್ಯಹೋರಾಟವನ್ನು ‘ಬಂಡಾಯ’ ಎಂದು ನಿರ್ಧರಿಸುವುದು
ಇಡೀ ಭಾರತದಲ್ಲಿ ಪದಚ್ಯುತಗೊಂಡ ರಾಜ್ಯಾಡಳಿತ ಗಳು ಒಟ್ಟಾಗಿ ಆಂಗ್ಲರನ್ನು ಓಡಿಸಲು ಯೋಜನೆಗಳನ್ನು ರೂಪಿಸಿದವು. ‘ಬಂದೂಕಿನ ಕಾಡತೂಸಿಗೆ ಗೋವಿನ ಹಾಗೂ ಹಂದಿಯ ಮಾಂಸವನ್ನು ಲೇಪಿಸುತ್ತಾರೆ’, ಎಂಬುದನ್ನು ಹೇಳಿ ಸೈನಿಕರನ್ನು ಬಡಿದೆಬ್ಬಿಸಿರು. ನವಾಬ್ ಬಹದೂರ್‌ಶಾಹಾ ಜಫರ್, ಪೇಶ್ವೆ, ತಾತ್ಯಾ ಟೊಪೆ, ಝಾನ್ಸಿ ರಾಣಿ ಹಾಗೂ ನೂರಾರು ಸಂಸ್ಥಾನಗಳು ೧೮೫೭ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಧುಮುಕಿದರು. ಆಂಗ್ಲರ ವಿರುದ್ಧ ದೆಹಲಿ, ಕಾನ್ಪೂರ, ಬರೇಲಿ, ಮೀರತ್, ಝಾನ್ಸಿ ಇಂತಹ ಆಂಗ್ಲರ ಎಲ್ಲ ಠಾಣೆಗಳ ಮೇಲೆ ಒಂದೇ ಸಮಯದಲ್ಲಿ ದಾಳಿ ಮಾಡಿದರು. ಈ ಅಪ್ರತಿಮ ಸಂಗ್ರಾಮದಲ್ಲಿ ಸಾವಿರಾರು ಆಂಗ್ಲರ ನಿದ್ದೆಗೆಟ್ಟಿತು. ಈ ಸಂಗ್ರಾಮದಲ್ಲಿ ತಾತ್ಯಾ ಟೋಪೆಯಂತಹ ವೀರರು ಪರಾಕ್ರಮದಿಂದ ಮೆರೆದರು. ವಿಜಯಶ್ರೀ ಸಮೀಪದಲ್ಲಿರುವಾಗ ಭಾರತ ದಲ್ಲಿನ ದೊಡ್ಡ ರಾಜ್ಯಾಡಳಿತಗಳು ಆಂಗ್ಲರೊಂದಿಗೆ ಸೇರಿ ಪಿತೂರಿ ನಡೆಸಿದ್ದರಿಂದ ಸ್ವಾತಂತ್ರ್ಯ ಸಂಗ್ರಾಮವನ್ನು ಆಂಗ್ಲರು ‘ಬಂಡಾಯ’ವೆಂದು ನಿರ್ಧರಿಸಿದರು.
೨. ೧೮೫೭ ರ ಸ್ವಾತಂತ್ರ್ಯಹೋರಾಟದ ವೈಶಿಷ್ಟ್ಯಗಳು
೨ ಅ. ೧೮೫೭ರ ಕ್ರಾಂತಿಕಾರರಿಗೆ ‘ಬ್ರಿಟೀಷರನ್ನು ಉಚ್ಛಾಟಿಸಿ ಸ್ವರಾಜ್ಯವನ್ನು ಸ್ಥಾಪಿಸುವ 
ಸಲುವಾಗಿ ಶಸ್ತ್ರವನ್ನು ಕೈಗೆತ್ತಿಕೊಳ್ಳದಿದ್ದರೆ ಅದು ಈಶ್ವರನ ಅಪಮಾನ’, ಎಂಬ ದೃಢವಿಶ್ವಾಸವಾಗಿತ್ತು
‘ಮುಂದೆ ೧೯ ನೇ ಶತಕದ ಕೊನೆಯಲ್ಲಿ ಹಾಗೂ ೨೦ ನೇ ಶತಕದ ಪ್ರಾರಂಭದಲ್ಲಿ ಆಂಗ್ಲರ ರಾಜ್ಯವೆಂದರೆ ಈಶ್ವರನ ವರದಾನ ಎಂದು ನಮ್ಮ ಮುಖಂಡರ ಭಾವನೆಯಾಯಿತು. ೧೮೫೭ ರಲ್ಲಿ ಆ ರೀತಿಯ ಭಾವನೆ ಯಿರಲಿಲ್ಲ. ಬ್ರಿಟೀಷರ ರಾಜ್ಯಾಡಳಿತವು ಚೆನ್ನಾಗಿತ್ತು ಅಥವಾ ಚೆನ್ನಾಗಿರಲಿಲ್ಲ ಇದು ವಿಚಾರ ಮಾಡುವ ವಿಷಯವಾಗಲು ಸಾಧ್ಯವಿಲ್ಲ; ಬ್ರಿಟೀಷರ ರಾಜ್ಯವು ಪರಕೀಯರದ್ದಾಗಿದೆ ಎಂಬ ಒಂದೇ ವಿಷಯಕ್ಕೆ ರಾಷ್ಟ್ರೀಯ ಅಗ್ರಕ್ರಮಾಂಕದಲ್ಲಿ ಪರಿಗಣಿಸಬಹುದು. ಅದಕ್ಕೆ ಎಲ್ಲರ ಒಮ್ಮತವಿತ್ತು. ಯಾವುದೇ ಧರ್ಮವು ದಾಸ್ಯತ್ವವನ್ನು ಪುರಸ್ಕರಿಸುವುದಿಲ್ಲ. ‘ಬ್ರಿಟೀಷರನ್ನು ಉಚ್ಛಾಟಿಸಿ ಸ್ವರಾಜ್ಯವನ್ನು ಸ್ಥಾಪಿಸಲು ಶಸ್ತ್ರ ಹಿಡಿಯ ದಿರುವುದು ಈಶ್ವರನ ಅವಮಾನವಾಗಿದೆ’, ಎಂಬ ದೃಢ ವಿಶ್ವಾಸದಿಂದ ವಾತಾವರಣವು ತುಂಬಿ ಹೋಗಿತ್ತು; ಆದ್ದರಿಂದ ಭಾರತದಲ್ಲಿ ಬ್ರಿಟೀಷರ ಸಾಮ್ರಾಜ್ಯದ ಮೇಲೆ ಮಾರಣಾಂತಿಕ ಆಘಾತ ಮಾಡಲಾಗಿತ್ತು.’
೨ ಆ. ಬ್ರಿಟೀಷರು ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ವನ್ನು ನಿಗ್ರಹಿಸಲು ನಡೆಸಿದ ಕ್ರೌರ್ಯದ ಇತಿಹಾಸ !
‘ಈಗ ನಾವು ೧೮೫೭ ರ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟೀಷರ ವಿರುದ್ಧ ನಮ್ಮ ಮೊದಲನೇ ರಾಷ್ಟ್ರೀಯ ಕೃತಸಂಕಲ್ಪವಾಗಿತ್ತು. ಬ್ರಿಟೀಷರು ಕಳ್ಳರು-ದರೋಡೆ ಖೋರರಾಗಿದ್ದಾರೆ, ಎಂಬ ಬಗ್ಗೆ ಯಾವುದೇ ಸಮಾಜದಲ್ಲಿ ಭಿನ್ನಾಭಿಪ್ರಾಯವಿರಲಿಲ್ಲ. ಆದ್ದರಿಂದ ಬ್ರಿಟೀಷ ರನ್ನು ಇಲ್ಲಿಂದ ಓಡಿಸಿದರೆ (ಗಂಟು ಮೂಟೆ ಕಟ್ಟಿ) ನಮ್ಮ ಸ್ವಾತಂತ್ರ್ಯವು ಸುರಕ್ಷಿತವಾಗಿರುತ್ತದೆ, ಎಂಬ ವಿಷಯದಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ ಆಗಿತ್ತು. ಆದ್ದರಿಂದ ಇಂಗ್ಲೆಂಡಿನಿಂದ ೩೦ ಸಾವಿರ ಹೆಚ್ಚುವರಿ ಸೈನಿಕರನ್ನು ಕರೆಯಿಸಿಕೊಂಡು ಕ್ರೂರವಾಗಿ ಈ ಯುದ್ಧವನ್ನು ಗೆದ್ದ ಬಳಿಕ ಮತ್ತೆ ಈ ರೀತಿಯ ಬಂಡಾಯ ಮಾಡುವ ಇಚ್ಛೆ ಭಾರತೀಯರ ಮನಸ್ಸಿನಲ್ಲಿ ಬರಬಾರದು, ಎಂದು ಬ್ರಿಟೀಷ್ ಆಡಳಿತಗಾರರು ಎರಡು ರೀತಿಯ ಉಪಾಯವನ್ನು ರೂಪಿಸಿದರು. ಮೊದಲು ಅವರು ದೊಡ್ಡ ಪ್ರಮಾಣದಲ್ಲಿ ಭಯವನ್ನುಂಟು ಮಾಡಿದರು ಹಾಗೂ ನಂತರ ಅವರು ಸಮಾಲೋಚನೆಯ ಮಾರ್ಗ ವನ್ನು ಅವಲಂಬಿಸಿದರು. ಎಂತಹ ಭಯವೆಂದರೆ ಊರಿಗೆ ಊರೇ ಧ್ವಂಸ ಮಾಡಿದರು. ರಾಜದ್ರೋಹದ ಆರೋಪವನ್ನು ತುಂಬಾ ಸಡಿಲ ಮಾಡಿದರು ಹಾಗೂ ಕೇವಲ ಸಂಶಯಿತರೆಂದು ಕಂಡುಬಂದರೂ ಅವರಿಗೆ ಗಲ್ಲು ನೀಡಿದರು. ಮರಕ್ಕೆ ನೇತಾಡಿಸಿ ಗಲ್ಲು ನೀಡುವುದರಲ್ಲಿ ಅವರಿಗೆ ವಿಶೇಷ ಆನಂದ ಸಿಗುತ್ತಿತ್ತು. ಏಕೆಂದರೆ ಬ್ರಿಟೀಷರಿಂದ ಸ್ವಾತಂತ್ರ್ಯವಾಗುವ ವಿಚಾರ ವೇನಾದರೂ ಮನಸ್ಸಿಗೆ ತಂದುಕೊಂಡರೂ ಅದು ದೂರದೂರದ ತನಕ ಹರಡಿಕೊಂಡಿದ್ದ ಬ್ರಿಟೀಷರ ಬೇಹುಗಾರರಿಗೆ ತಕ್ಷಣ ತಿಳಿಯುತ್ತಿತ್ತು ಹಾಗೂ ಅನಂತರ ಕೆಲವೇ ತಾಸಿನಲ್ಲಿ ಯುಮರಾಜನು ಬ್ರಿಟೀಷರ ನೌಕರನಾಗಿ ಪ್ರಾಣವನ್ನು ಹೇಗೆ ಹರಿಸುತ್ತಿದ್ದನೋ, ಎಂಬುದರ ಬಗ್ಗೆ ಮೈನವಿರೇಳುವ ಪ್ರದರ್ಶನವು ಯಾವುದೇ ಕಷ್ಟ ಪಡದೇ ಏರ್ಪಾಡಾಗುತ್ತಿತ್ತು. ಯಾವ ಪ್ರಾಂತ್ಯಗಳು ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಶೇಷವಾಗಿ ಭಾಗವಹಿಸಿದವೋ ಅವುಗಳಿಗೆ ಬ್ರಿಟೀಷ್ ಆಡಳಿತದಿಂದ ಆದಷ್ಟು ಕಡಿಮೆ ಲಾಭ ಸಿಗಲಿ, ಎಂದು ಬ್ರಿಟೀಷರು ನಿಗಾ ಇಡುತ್ತಿದ್ದರು. ಸಮಾಲೋಚನೆಯ ಮಾರ್ಗವನ್ನು ಮಾಡುವ ಮುನ್ನ ಯಾರಿಗೆ ಹೋರಾಡುವ ಹುಮ್ಮಸ್ಸಿತ್ತೋ ಅವರ ಬೆನ್ನು ಮುರಿದು ಪುಡಿಯಾಗುವಂತೆ ಕಾಳಜಿ ವಹಿಸಿದರು. ಎಲ್ಲ ಬಂಡಾಯಗಾರರಿಗೆ ಗಲ್ಲು ನೀಡಲು ಸಾಧ್ಯವಾಗಲಿಲ್ಲ ಏಕೆಂದರೆ ಅದಕ್ಕೆ ಬೇಕಾಗಿರುವ ಎರಡು ಲಕ್ಷ ಸೈನಿಕರು ನಮ್ಮ ಬಳಿ ಇರಲಿಲ್ಲ, ಎಂದು ಬ್ರಿಟೀಷ್ ಸೇನಾಧಿಕಾರಿಯ ಉದ್ಗಾರ ಪ್ರಸಿದ್ಧವಾಗಿತ್ತು. ಕೆಲವು ಸ್ವಾತಂತ್ರ್ಯ ಸೇನಾನಿಗಳ ಚರ್ಮ ಸುಲಿದು ಹಿಂಸೆ ನೀಡುವ ವಿಚಾರವೂ ಅವರ ಮನಸ್ಸಿಗೆ ಬಂದಿತ್ತು.’
೨ ಇ. ಗಲ್ಲಿಗೇರುವಾಗಲೂ ಸ್ಥಿತಪ್ರಜ್ಞರಾಗಿದ್ದ ೧೮೫೭ ರ ದೇಶಭಕ್ತರು !
‘ಇಂದು ಭಾರತದ ಸಂಸತ್ತಿನ ಮೇಲೆ ಸಶಸ್ತ್ರ ದಾಳಿ ನಡೆಸುವ ಹಾಗೂ ಆ ರೀತಿ ಮಾಡಿರುವುದನ್ನು ಸಾಬೀತಾದ ಬಳಿಕ ಇಸ್ಲಾಮೀ ಉಗ್ರರ ಓರ್ವ ಮುಖಂಡನಾದ ಅಫ್ಝಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸಬೇಕೇ ಬೇಡವೇ ಎಂಬ ವಿಚಾರ ಮಾಡುವ ನಾಟಕ ಮಾಡಿದ ಸೋನಿಯಾ ಗಾಂಧಿಯ ಸರಕಾರವು ಕೆನ್ನೆಯ ಮೇಲೆ ಕೈಯಿಟ್ಟುಕೊಂಡು ಕುಳಿತಿದೆ. ೧೮೫೭ ರಲ್ಲಿ ಬ್ರಿಟೀಷರ ಓರ್ವ ಸೇನಾಧಿಪತಿ ಲ್ಯಾರೆನ್ಸ್‌ರವರ ಉದ್ಗಾರ ಪ್ರಸಿದ್ಧವಾಗಿದೆ. ಅವರ ಹೇಳಿಕೆಯಂತೆ ಈ ಹೋರಾಟದಲ್ಲಿ ಬ್ರಿಟೀಷರು ಕೆಲವು ಬಂಡುಕೋರರಿಗೆ ಗಲ್ಲು ಶಿಕ್ಷೆ ವಿಧಿಸಿದರು ಹಾಗೂ ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು; ಏಕೆಂದರೆ ಪ್ರತಿಯೊಬ್ಬ ಬಂಡುಕೋರನಿಗೆ ಗಲ್ಲು ನೀಡಲು ಬೇಕಿದ್ದ ಎರಡು ಲಕ್ಷ ಸೇನಾಬಲ ನಮ್ಮ ಬಳಿಯಿರಲಿಲ್ಲ. ಅಂದರೆ ಸಂಖ್ಯೆ
ಯಲ್ಲಿ ಬ್ರಿಟೀಷರು ಕಡಿಮೆಯಿದ್ದರು; ಇಚ್ಛಾಶಕ್ತಿಯಲ್ಲಲ್ಲ ! ಯಾರಿಗೆ ಗಲ್ಲು ವಿಧಿಸಲಾಯಿತೋ, ಅವರು ತಮ್ಮ ಕೈಯ್ಯಾರೆ ಕುತ್ತಿಗೆಗೆ ಹಗ್ಗ ಸುತ್ತಿ ಕೊಂಡರು. ಆಧಾರಕ್ಕಾಗಿ ದಾರಗಂಬವನ್ನು ಹಿಡಿಯಲಿಲ್ಲ. ಹಲವರು ಕೊನೆಯ ಗಳಿಗೆಯಲ್ಲಿಯೂ ‘ನಮಗೆ ಖಂಡಿತ ಜಯ ಸಿಗುವುದು’, ಎಂದು ವ್ಯಕ್ತಪಡಿಸಿದರು. ಯಾವ ಸ್ಥಿತಪಜ್ಞರು ಗಲ್ಲಿಗೆ ಹೋದರೋ ಅವರನ್ನು ನೋಡಿ ಸಂಪೂರ್ಣ ಯೂರೋಪ್ ಖಂಡವೇ ಆಶ್ಚರ್ಯಚಕಿತಗೊಂಡಿತ್ತು ಎಂದು ಇತಿಹಾಸತಜ್ಞರು ಬರೆದಿಟ್ಟಿದ್ದಾರೆ.’ - ಶ್ರೀ. ಅರವಿಂದ ವಿಠ್ಠಲ್ ಕುಲಕರ್ಣಿ, ಹಿರಿಯ ಪತ್ರಕರ್ತರು, ಮುಂಬೈ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೧೮೫೭ ರ ಸ್ವಾತಂತ್ರ್ಯಸಂಗ್ರಾಮ