ಉತ್ತರಾಖಂಡ ಸರಕಾರವು ಸಂಜೀವನಿ ಗಿಡಮೂಲಿಕೆಯನ್ನು ಶೋಧಿಸಲಿದೆ !

ರಾಮಾಯಣ ಬೊಗಳೆಯೆಂದು ಹೇಳುವವರು ಇದಕ್ಕೇನು ಉತ್ತರಿಸುವರು ?
  • ಸಂಜೀವನಿಗಾಗಿ ಸಮಿತಿಯ ಸ್ಥಾಪನೆ
  • ರೂ. ೨೫ ಕೋಟಿ ಮೊತ್ತ ವೆಚ್ಚವಾಗುವ ಸಾಧ್ಯತೆ
ನವ ದೆಹಲಿ : ಯುದ್ಧದಲ್ಲಿ ಹೋರಾಡುವಾಗ ಶಸ್ತ್ರ ತಗುಲಿ ಲಕ್ಷ್ಮಣನು ಪ್ರಜ್ಞೆತಪ್ಪಿದಾಗ, ಅವನಿಗೆ ಔಷಧೋಪಚಾರ ಮಾಡಲು ವೈದ್ಯರು ಹನುಮಂತನಿಗೆ ದ್ರೋಣಗಿರಿ ಪರ್ವತದಿಂದ ಸಂಜೀವನಿ ಗಿಡಮೂಲಿಕೆ ಯನ್ನು ತರಲು ಕಳುಹಿಸಿದ್ದರು
; ಆದರೆ ನಿರ್ದಿಷ್ಟ ವನಸ್ಪತಿ ಗಿಡಮೂಲಿಕೆಯು ತಿಳಿಯದ ಕಾರಣ ಹನುಮಂತನು ಸಂಪೂರ್ಣ ದ್ರೋಣಗಿರಿ ಪರ್ವತವನ್ನೇ ಎತ್ತಿ ತಂದಿದ್ದನು ಹಾಗೂ ಆ ಮೂಲಕ ಲಕ್ಷ್ಮಣನ ಪ್ರಾಣವನ್ನು ಉಳಿಸಿದ್ದನು. ಈಗ ಈ ಸಂಜೀವನಿ ಗಿಡಮೂಲಿಕೆಯನ್ನು ಶೋಧಿಸಲು ಉತ್ತರಾಖಂಡ ಸರಕಾರವು ನಿರ್ಣಯಿಸಿದೆ. ಈ ಕಾರ್ಯಕ್ಕಾಗಿ ಸುಮಾರು ೨೫ ಕೋಟಿ ಮೊತ್ತ ವೆಚ್ಚ ಮಾಡಲಿದೆ. ಹಿಮಾಲಯದಲ್ಲಿರುವ ಈ ವನಸ್ಪತಿಯನ್ನು ಶೋಧಿ ಸಲು ಉತ್ತರಾಖಂಡ ಸರಕಾರವು ಒಂದು ಸಮಿತಿಯನ್ನು ರಚಿಸಿದ್ದು ಈ ಸಮಿತಿಯ ಅಧಿಕಾರಿಗಳಿಗೆ ದ್ರೋಣಗಿರಿ ಪರ್ವತದ ಮೇಲೆ ಹೋಗಲು ಆದೇಶಿಸಿದೆ. ಮುಂದಿನ ತಿಂಗಳಿನಿಂದ ಈ ಸಮಿತಿಯು ಕಾರ್ಯಾರಂಭ ಮಾಡಲಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉತ್ತರಾಖಂಡ ಸರಕಾರವು ಸಂಜೀವನಿ ಗಿಡಮೂಲಿಕೆಯನ್ನು ಶೋಧಿಸಲಿದೆ !