ಪ್ರಸಾರಮಾಧ್ಯಮಗಳಿಗೆ ಬೈಟ್ ನೀಡುವ ಪದ್ಧತಿ !

ಶ್ರೀ. ಅಭಯ ವರ್ತಕ್
ವಾರ್ತಾವಾಹಿನಿಗಳಲ್ಲಿ ೨೪ ಗಂಟೆ ತೋರಿಸುವ ವಾರ್ತೆಗಳು ಸಮಾಜದ ಮಾನಸಿಕತೆ ಮತ್ತು ವಿಚಾರಗಳ ದಿಶೆಯ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಆದ್ದರಿಂದ ಹಿಂದೂ ರಾಷ್ಟ್ರದ, ಅಂದರೆ ಸನಾತನ ಧರ್ಮ ರಾಜ್ಯದ ವಿಚಾರವನ್ನು ನಮಗೆ ಜನರಿಗೆ ತಲುಪಿಸುವುದಿದ್ದರೆ, ಹಿಂದುತ್ವನಿಷ್ಠರು ಸಹ ಈ ಮಾಧ್ಯಮದ ಬಗ್ಗೆ ಗಾಂಭೀರ್ಯದಿಂದ ವಿಚಾರ ಮಾಡಬೇಕು. ವಾರ್ತಾವಾಹಿನಿಗಳಲ್ಲಿ ಚರ್ಚಾಕೂಟ, ಸಂದರ್ಶನಗಳಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಹೇಗೆ ಭಾಗವಹಿಸಬೇಕಾಗುತ್ತದೆಯೋ, ಹಾಗೆಯೇ ಯಾವುದಾದರೊಂದು ದೊಡ್ಡ ಘಟನೆಯ ಬಗ್ಗೆ ಅಥವಾ ವಿರೋಧಕರ ಆಂದೋಲನದ ಬಗ್ಗೆ ನಮ್ಮ ಸಂಘಟನೆಯ ೧-೨ ನಿಮಿಷಗಳ ಭೂಮಿಕೆಯನ್ನೂ ತ್ವರಿತವಾಗಿ ಕೇಳಲಾಗುತ್ತದೆ. ಇಂತಹ ಸಂಕ್ಷಿಪ್ತದಲ್ಲಿ ವ್ಯಕ್ತಪಡಿಸುವ ಭೂಮಿಕೆಗೆ ವಾರ್ತಾವಾಹಿನಿಗಳ ಭಾಷೆಯಲ್ಲಿ ‘ಬೈಟ್’ ಎಂದು ಹೇಳುತ್ತಾರೆ. ಇದೇ ರೀತಿ ದೂರವಾಣಿ ಮೂಲಕ ಹೇಳಿಕೆಯನ್ನು ನೀಡುವುದಿದ್ದರೆ, ಅದಕ್ಕೆ ‘ಫೊನೋ’ ಎಂದು ಹೇಳುತ್ತಾರೆ. ಸ್ವಲ್ಪದರಲ್ಲಿ ಫೊನೋ ಇದು ಬೈಟ್‌ನ ಒಂದು ಪ್ರಕಾರವೇ ಆಗಿದೆ.
ನಮ್ಮ ಈ ಬೈಟ್‌ಅನ್ನು ವಾರ್ತಾವಾಹಿನಿಗಳಲ್ಲಿ ಮುಖ್ಯ ವಾರ್ತೆಯ ಜೊತೆಗೆ ಸತತವಾಗಿ ತೋರಿಸುವುದರಿಂದ ಅದು ಹೆಚ್ಚೆಚ್ಚು ಜನರಿಗೆ ತಲುಪುತ್ತದೆ. ಈ ರೀತಿ ವಾರ್ತಾವಾಹಿನಿಗಳಿಗೆ ಬೈಟ್‌ಗಳನ್ನು ಕೊಡುವುದರಿಂದಲೂ ನಾವು ಜನರಲ್ಲಿ ಪ್ರಭಾವೀ ಜಾಗೃತಿಯನ್ನು ಮಾಡಬಹುದು. ಸನಾತನ ಸಂಸ್ಥೆಯು ಈ ವಿಷಯದ ಗಾಂಭೀರ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಕ್ತಾರರ ಒಂದು ಗುಂಪನ್ನು ನಿರ್ಮಿಸಲು ಕಳೆದ ಆರು ತಿಂಗಳುಗಳಿಂದ ಹಿಂದೂ ಜನಜಾಗೃತಿ ಸಮಿತಿಯ ಜೊತೆಗೆ ಪ್ರಯತ್ನವನ್ನು ಮಾಡುತ್ತಿದೆ. ಇಲ್ಲಿ ಸಂತೋಷದ ವಿಷಯವೆಂದರೆ, ಇಂದು ನಮ್ಮಲ್ಲಿ ಹಿಂದೂ ಧರ್ಮದ ವಿಷಯವನ್ನು ಪ್ರಖರವಾಗಿ ಮಂಡಿಸುವ ೪೦ ವಕ್ತಾರರು ಸಿದ್ಧರಾಗಿದ್ದು ಅವರು ವಿವಿಧ ವಾಹಿನಿಗಳಲ್ಲಿ ನಿಯಮಿತವಾಗಿ ಧರ್ಮದ ಭೂಮಿಕೆಯನ್ನು ಮಂಡಿಸುತ್ತಿದ್ದಾರೆ. ಬೈಟ್ ನೀಡುವುದು ಪ್ರವಕ್ತಾರರಾಗುವುದರ ಮೊದಲ ಹಾಗೂ ಮಹತ್ವದ ಹಂತವಾಗಿರುವುದರಿಂದ ಈ ವಿಷಯವನ್ನು ಈಗ ನಾವು ತಿಳಿದುಕೊಳ್ಳೋಣ. (photo)
೧. ಬೈಟ್‌ಗಳನ್ನು ನೀಡುವಾಗ ಗಮನದಲ್ಲಿಡಬೇಕಾದ ಸಾಮಾನ್ಯವಿಷಯಗಳು
೧ ಅ. ಹಿನ್ನೆಲೆ : ನಾವು ಯಾವ ಸ್ಥಳದ ಬೈಟ್ ನೀಡುವವರಿ ದ್ದೇವೆಯೋ, ಅಲ್ಲಿನ ಹಿನ್ನೆಲೆ ಹೇಗಿದೆ ಎಂಬುದನ್ನು ನೋಡಬೇಕು, ಉದಾ. ನಮ್ಮ ಆಂದೋಲನದ ಸ್ಥಳದ ಬೈಟ್ ನೀಡುತ್ತಿದ್ದರೆ, ನಮ್ಮ ಹಿಂದಿರುವ ಆಂದೋಲನಕಾರರು ಶಿಸ್ತುಬದ್ಧವಾಗಿ ನಿಂತಿರುವುದು ಮತ್ತು ಆಂದೋಲನಕಾರರ ಕೈಯಲ್ಲಿರುವ ಫಲಕ, ಹಸ್ತಫಲಕ ಇತ್ಯಾದಿಗಳು ವ್ಯವಸ್ಥಿತವಾಗಿರುವುದನ್ನು ನೋಡಿಕೊಳ್ಳಬೇಕು.
೧ ಆ. ಧ್ವನಿ : ನಮ್ಮ ಧ್ವನಿಯ ಜೊತೆಗೆ ಸುತ್ತಮುತ್ತಲಿನ ಗೊಂದಲ ಕೇಳಿಸದಿರುವ ಸ್ಥಳದಲ್ಲಿ ಬೈಟ್ ನೀಡಬೇಕು. ಆಂದೋಲನದಲ್ಲಿ ಘೋಷಣೆ ಅಥವಾ ಭಾಷಣ ನಡೆಯುತ್ತಿದ್ದರೆ ಬೈಟ್ ಪೂರ್ಣವಾಗುವವರೆಗೆ ಅವು ಗಳನ್ನು ನಿಲ್ಲಿಸಬೇಕು.
೧ ಇ. ಬೈಟ್ ನೀಡುವಾಗಿನ ಮಾತಿನ ಪದ್ಧತಿ ಮತ್ತು ದೇಹಭಾಷೆ
೧. ಮಾತುಗಳಲ್ಲಿ ನಮ್ರತೆ ಇರಬೇಕು
೨. ಸುಸ್ಪಷ್ಟವಾಗಿ ಕೇಳಿಸುವ ಗತಿಯಲ್ಲಿ ಮಾತನಾಡಬೇಕು. ಮಾತುಗಳು ಬಹಳ ವೇಗವಾಗಿ ಅಥವಾ ನಿಧಾನವಾಗಿರಬಾರದು.
೩. ಭಾಷಣ ಮಾಡುವಾಗ ಧ್ವನಿಯೇರಿಸಿ ಮಾತನಾಡಬೇಕಾಗುತ್ತದೆ, ಬೈಟ್ ನೀಡುವಾಗ ಹಾಗಿರಬಾರದು.
೪. ಕ್ಯಾಮೆರಾದ ಕಡೆಗೆ ನೋಡಿ ಆತ್ಮವಿಶ್ವಾಸದಿಂದ ಹಾಗೂ ದೃಢನಿಶ್ಚಯದಿಂದ ಮಾತನಾಡಬೇಕು.
೫. ಜಾತ್ಯತೀತ ಪತ್ರಕರ್ತರು ಪ್ರಶ್ನೆಗಳನ್ನು ಅಯೋಗ್ಯ ಪದ್ಧತಿಯಿಂದ ಕೇಳಿದರೂ ನಾವು ದೃಢವಾಗಿ ಮತ್ತು ಸಂಯಮದಿಂದ ಉತ್ತರಿಸಬೇಕು.
೬. ಕೈಸನ್ನೆಗಳು ಕಡಿಮೆ ಇರಬೇಕು ಹಾಗೂ ಒಂದೇ ಸ್ಥಳದಲ್ಲಿ ಸ್ಥಿರವಾಗಿದ್ದು ಮಾತನಾಡಬೇಕು.
೭. ಬೈಟ್ ನೀಡಲು ಆರಂಭಿಸುವ ಮೊದಲು ತಮ್ಮ ಹೆಸರು, ಹುದ್ದೆ ಮತ್ತು ಸಂಘಟನೆಯ ಹೆಸರನ್ನು ಹೇಳಬೇಕು.
೧ ಈ. ವಾರ್ತಾವಾಹಿನಿಗಳ ವಿಚಾರಸರಣಿ
೧. ಹೆಚ್ಚಿನ ವಾರ್ತಾವಾಹಿನಿಗಳು ಆಧುನಿಕವಾದಿ ಸಂಪಾದಕರ ಕೈಯಲ್ಲಿರುವುದರಿಂದ ಅವರು ನಮ್ಮ ಬೈಟ್‌ನಲ್ಲಿ ಅವರಿಗೆ ಆವಶ್ಯಕವಿರು ವಷ್ಟೇ ವಿಷಯವನ್ನು ಪ್ರಸಾರ ಮಾಡಿ ಘಟನೆಗೆ ಬೇರೆಯೇ ಬಣ್ಣ ಬಳಿ
ಯಲು ಪ್ರಯತ್ನಿಸುತ್ತಾರೆ. ಆದ್ದರಿಂದ ಬೈಟ್ ತೆಗೆದುಕೊಳ್ಳುವ ವಾರ್ತಾ ವಾಹಿನಿಯ ವಿಚಾರಸರಣಿಯನ್ನು ಅಧ್ಯಯನ ಮಾಡಿಯೇ ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಬೇಕು.
೨. ಬಹಳಷ್ಟು ಸಲ ಪತ್ರಕರ್ತರು ಬೈಟ್‌ಗಳನ್ನು ತೆಗೆದುಕೊಳ್ಳುವಾಗ ಅವರಿಗೆ ಬೇಕಾಗುವ ಹೇಳಿಕೆಗಳನ್ನೇ ನಮ್ಮ ಬಾಯಿಯಿಂದ ಹೇಳಿಸಿ ಕೊಳ್ಳಲು ಉದ್ದೇಶಪೂರ್ವಕ ಪ್ರಯತ್ನಿಸುತ್ತಾರೆ. ಆಗ ನಾವು ವಿವಾದಾತ್ಮಕ ಹೇಳಿಕೆಗಳನ್ನು ನೀಡದೆ ನಮ್ಮ ಭೂಮಿಕೆಯನ್ನೇ ಮಂಡಿಸಬೇಕು.
೧ ಉ. ಸುವ್ಯವಸ್ಥೆ : ನಮಗೆ ಹಿಂದೂ ಧರ್ಮದ ಪ್ರವಕ್ತಾರರೆಂದು ಭೂಮಿಕೆಯನ್ನು ಮಂಡಿಸುವುದಿರುತ್ತದೆ, ಆದುದರಿಂದ ನಮ್ಮ ಆಚರಣೆ, ವೇಶಭೂಷಣ, ಕೇಶರಚನೆ ಇತ್ಯಾದಿ ಹಿಂದೂ ಧರ್ಮಕ್ಕನುಸಾರವಿರಬೇಕು.
೨. ಬೈಟ್ ನೀಡುವ ಮೊದಲು ಆ ವಿಷಯದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕು !
ಅ. ಬಹಳಷ್ಟು ಸಲ ವಾರ್ತಾವಾಹಿನಿಗಳು ಯಾವುದಾದರೊಂದು ವಿಷಯದ ಬಗ್ಗೆ ಬೈಟ್ ತೆಗೆದುಕೊಳ್ಳಲು ದೂರವಾಣಿ ಕರೆ ಮಾಡುತ್ತಾರೆ. ಆಗ ನಮಗೆ ಆ ವಿಷಯದ ಬಗ್ಗೆ ಮಾಹಿತಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಇಂತಹ ಪ್ರಸಂಗದಲ್ಲಿ ಮೊತ್ತಮೊದಲು ನಾನು ಈಗ ಹೊರಗಿದ್ದೇನೆ, ಈ ವಿಷಯದಲ್ಲಿ ಮಾಹಿತಿ ಪಡೆದು ೫- ೧೦ ನಿಮಿಷಗಳಲ್ಲಿ ತಮ್ಮೊಂದಿಗೆ ಸಂಪರ್ಕ ಮಾತನಾಡುತ್ತೇನೆ, ಎಂದು ಹೇಳಬೇಕು.
ಆ. ವಾರ್ತಾಪತ್ರಗಳ ಜಾಲತಾಣಗಳು ಅಥವಾ ವಾರ್ತಾವಾಹಿನಿಗಳಲ್ಲಿ ಆ ವಿಷಯದ ವಾರ್ತೆ ಉಪಲಬ್ಧವಿದೆಯೇ, ಎಂಬುದನ್ನು ತಕ್ಷಣ ನೋಡಬೇಕು. ನಮಗೆ ಬೇರೆ ಎಲ್ಲಿಯೂ ಮಾಹಿತಿ ಸಿಗದಿದ್ದರೆ, ಸಂಬಂಧಪಟ್ಟ ಪತ್ರಕರ್ತನಿಂದಲೇ ಆ ವಿಷಯದ ವಿವರವಾದ ಮಾಹಿತಿಯನ್ನು ಪಡೆದು ಕೊಳ್ಳಬೇಕು ಮತ್ತು ನಂತರವೇ ಆ ವಿಷಯದ ಬೈಟ್ ಕೊಡಬೇಕು.
ಇ. ಕೆಲವೊಮ್ಮೆ ಪತ್ರಕರ್ತರು ಯಾವುದಾದರೊಂದು ವಿಷಯದಲ್ಲಿ ನಮ್ಮ ಉಗ್ರಸ್ವರೂಪದ ಪ್ರತಿಕ್ರಿಯೆಗಳನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಅದಕ್ಕೆ ವಿರೋಧಿಗಳ ಪ್ರತಿಕ್ರಿಯೆಗಳನ್ನು ತೆಗೆದುಕೊಂಡು ಇಲ್ಲದಿರುವ ವಿಷಯವನ್ನು ಸೃಷ್ಟಿಸಿ ವಾರ್ತೆಗಳನ್ನು ಬಣ್ಣಿಸುತ್ತಾರೆ. ಹೀಗಾಗಲು ಬಿಡಬಾರದು.
೩. ವಾರ್ತಾವಾಹಿನಿಗಳಲ್ಲಿ ಪ್ರಭಾವೀ ಬೈಟ್ 
ನೀಡಲು ನಿರಂತರವಾಗಿ ಅಧ್ಯಯನ ಮಾಡುವುದು ಆವಶ್ಯಕವಾಗಿರುತ್ತದೆ !
ಅ. ಈ ದೃಷ್ಟಿಯಿಂದ ಪ್ರತಿದಿನ ಒಂದು ರಾಷ್ಟ್ರೀಯ ಮತ್ತು ಒಂದು ರಾಜ್ಯ ಸ್ತರದ ದಿನಪತ್ರಿಕೆಯನ್ನು ಓದಬೇಕು. ಎಂಡ್ರಾಯಿಡ್ ತಂತ್ರಾಂಶದ ಸಂಚಾರಿವಾಣಿ ಇರುವವರು ‘ನ್ಯೂಸ್ ಹಂಟ್’ನಂತಹ ಅಪ್ಲಿಕೇಶನ್ ಉಪಯೋಗಿಸಿದರೆ ಅದರಲ್ಲಿ ನಿರಂತರ ಬರುವ ಹೊಸ ಹೊಸ ವಾರ್ತೆ ಗಳನ್ನು ಓದಿದರೆ ನಿಯಮಿತ ಅಧ್ಯಯನವಾಗುತ್ತದೆ.
ಆ. ಹಿಂದೂ ಧರ್ಮದ ಅಧ್ಯಯನವಿರಬೇಕು. ಸನಾತನ ಸಂಸ್ಥೆಯು ಧರ್ಮಶಿಕ್ಷಣ ನೀಡುವಂತಹ ೨೯೦ ಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಾಶಿಸಿದೆ. ಈ ಗ್ರಂಥಗಳ ಅಧ್ಯಯನ ಮಾಡಿದರೆ ನಮ್ಮ ಹಿಂದೂ ಧರ್ಮದ ಅಧ್ಯಯನವಾಗಬಹುದು.
ಇ. ರಾಷ್ಟ್ರ ಮತ್ತು ಧರ್ಮಹಿತದ ದೃಷ್ಟಿಕೋನ ಸ್ಪಷ್ಟವಾಗಲು ಅವು ಗಳ ಅಧ್ಯಯನವಿರುವುದು ಆವಶ್ಯಕವಾಗಿದೆ. ಈ ಅಧ್ಯಯನವನ್ನು ನಾವು ಪ್ರತಿದಿನ HinduJagruti.org ವೆಬ್‌ಸೈಟ್ ಅಥವಾ ಸನಾತನ ಪ್ರಭಾತ ವನ್ನು ಓದಿ ಹೆಚ್ಚಿಸಿಕೊಳ್ಳಬಹುದು. ಇವೆರಡೂ ಮಾಧ್ಯಮಗಳ ವಾರ್ತೆ ಗಳಲ್ಲಿ ಪ್ರತಿದಿನ ಸಮಾಜ, ರಾಷ್ಟ್ರ ಮತ್ತು ಧರ್ಮ ಹಿತದ ದೃಷ್ಟಿಕೋನ ವನ್ನು ನೀಡಲಾಗುತ್ತದೆ.
೪. ಆದರ್ಶ ಬೈಟ್ ನೀಡಲು ತೆಗೆದುಕೊಳ್ಳಬೇಕಾದ ದಕ್ಷತೆ !
ಅ. ಭೂಮಿಕೆಯು ಧರ್ಮಶಾಸ್ತ್ರಸಮ್ಮತ ಮತ್ತು ರಾಷ್ಟ್ರಹಿತವನ್ನು ರಕ್ಷಿಸುವುದಾಗಿರಬೇಕು.
ಆ. ನಮ್ಮ ಭೂಮಿಕೆಯನ್ನು ಪ್ರಭಾವಿ ಶಬ್ದಗಳನ್ನು ಉಪಯೋಗಿಸಿ ನಿರ್ಧಿಷ್ಟ ಶಬ್ದಗಳಲ್ಲಿ ಮಂಡಿಸಲು ಬರಬೇಕು.
ಇ. ನಮ್ಮ ಭೂಮಿಕೆ ಯೋಗ್ಯವಾಗಿದೆ ಎಂಬುದು ಖಚಿತವಿಲ್ಲದಿದ್ದರೆ, ಧರ್ಮದ ಅಧ್ಯಯನಕಾರರು, ವಿಚಾರವಂತರು, ಅನುಭವೀ ವಕ್ತಾರರು ಮುಂತಾದವರೊಂದಿಗೆ ಚರ್ಚೆ ಮಾಡಬೇಕು. ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಹಿಂದುತ್ವವಾದಿ ವಕೀಲರೊಂದಿಗೆ ಚರ್ಚಿಸಬೇಕು.
ಈ. ಬೈಟ್ ನೀಡುವ ಮೊದಲು ಎಲ್ಲ ಅಂಶಗಳನ್ನು ಬರೆದುಕೊಳ್ಳ ಬೇಕು. ಆ ಅಂಶಗಳ ಪ್ರಾಧಾನ್ಯಕ್ರಮವನ್ನು ನಿರ್ಧರಿಸಿ ಅದಕ್ಕನುಸಾರ ಮಾತನಾಡಬೇಕು.
೫. ವಿವಿಧ ಪ್ರಸಂಗಗಳಲ್ಲಿ ಬೈಟ್ ನೀಡುವಾಗ ನಮ್ಮ ಭೂಮಿಕೆ ಹೇಗಿರಬೇಕು ?
೫ ಅ. ನ್ಯಾಯಾಲಯಗಳ ನಿರ್ಣಯಗಳ ಬಗ್ಗೆ ಬೈಟ್ ನೀಡುವಾಗ ತೆಗೆದುಕೊಳ್ಳಬೇಕಾದ ಕಾಳಜಿ : ನ್ಯಾಯಾಲಯಗಳು ನೀಡಿದ ನಿರ್ಣಯ ಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವಾಗ ನ್ಯಾಯಾಲಯಕ್ಕೆ ಯಾವುದೇ ರೀತಿಯಲ್ಲಿ ಅವಮಾನವಾಗದಂತೆ ಕಾಳಜಿವಹಿಸಬೇಕು. ಸಾಧ್ಯವಿದ್ದರೆ ವಕೀಲರ ಸಲಹೆ ಪಡೆದೇ ನ್ಯಾಯಾಲಯಗಳ ನಿರ್ಣಯಗಳ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಬೇಕು, ಉದಾ. ಶನಿಶಿಂಗಣಾಪುರದ ಪ್ರಕರಣ ದಲ್ಲಿ ನ್ಯಾಯಾಲಯವು ಯಾವ ಯಾವ ಸ್ಥಳಗಳಲ್ಲಿ ಪುರುಷರು ಹೋಗಬಹುದೋ, ಅಲ್ಲಲ್ಲಿ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ನಿರ್ಣಯ ನೀಡಿತು. ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಾಗ ನಾವು ಮಾನ್ಯ ನ್ಯಾಯಾಲಯವನ್ನು ಸನ್ಮಾನಿಸುತ್ತೇವೆ. ನ್ಯಾಯಾಲಯ ನೀಡಿದ ನಿರ್ಣಯವು ದುರ್ದೈವಿಯಾಗಿದೆ, ಏಕೆಂದರೆ ನ್ಯಾಯಾಲಯವು ಧಾರ್ಮಿಕ ವಿಷಯಗಳಲ್ಲಿ ನಿರ್ಣಯವನ್ನು ನೀಡುವಾಗ ಧಾರ್ಮಿಕ ಕ್ಷೇತ್ರದಲ್ಲಿನ ಅಧಿಕಾರಿಗಳು, ಅಂದರೆ ಶಂಕರಾಚಾರ್ಯರು, ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳು, ಕಾಶಿ ವಿದ್ವಾಂಸ ಪರಿಷತ್ತು ಮುಂತಾದವರೊಂದಿಗೆ ಚರ್ಚಿಸಬೇಕಾಗಿತ್ತು, ಎಂದು ನಮಗನಿಸುತ್ತದೆ. ನಾವು ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ಆದೇಶದ ಅಧ್ಯಯನ ಮಾಡಿ ಆವಶ್ಯಕವಿದ್ದರೆ ಮುಂದಿನ ನ್ಯಾಯಾಲಯದಲ್ಲಿ ಈ ವಿಷಯದಲ್ಲಿ ನ್ಯಾಯವನ್ನು ಬೇಡುವೆವು. ನಮ್ಮ ದೇಶದಲ್ಲಿ ನ್ಯಾಯ ಎಲ್ಲರಿಗೂ ಸಮಾನವಾಗಿರುವಾಗ ಮಸೀದಿಗಳಲ್ಲಿ ಮುಸಲ್ಮಾನ ಮಹಿಳೆಯರಿಗೆ ಪ್ರವೇಶವಿಲ್ಲ, ಇದರ ಬಗ್ಗೆ ಬೇರೆ ನ್ಯಾಯ ಹಾಗೂ ಹಿಂದೂಗಳ ದೇವಸ್ಥಾನ ಗಳಲ್ಲಿ ಮಹಿಳೆಯರಿಗೆ ಪ್ರವೇಶವಿದ್ದರೂ ಗರ್ಭಗುಡಿಯೊಳಗೆ ಪ್ರವೇಶ ಕ್ಕಾಗಿ ಬೇರೆ ನ್ಯಾಯ, ಇದು ಅನ್ಯಾಯಕಾರಿಯಾಗಿದೆ ಎಂದು ಹೇಳಿದ್ದೆವು.
ಇದರಲ್ಲಿ ನಮಗೆ ಏನು ಹೇಳಬೇಕಾಗಿತ್ತೋ, ಅದನ್ನೇ ಹೇಳಿದ್ದೇವೆ. ಕೇವಲ ನ್ಯಾಯಾಲಯದ ಅವಮಾನವಾಗದಂತೆ ಕಾಳಜಿ ವಹಿಸಲಾಗಿದೆ.
೫ ಆ. ಅಧಿಕಾರರೂಢ ಪಕ್ಷಗಳಿಗೆ ಸಂಬಂಧಿಸಿದ ಭೂಮಿಕೆ : ಕೆಲವು ರಾಜಕೀಯ ಪಕ್ಷಗಳ ಧೋರಣೆಗಳನ್ನು ವಿರೋಧಿಸಿದರೆ ಕೆಲವು ಹಿಂದುತ್ವವಾದಿಗಳೇ ನಮ್ಮ ವಿರುದ್ಧ ಮಾತನಾಡುತ್ತಾರೆ. ಇಂತಹ ಸಮಯದಲ್ಲಿ ನಮ್ಮ ಬೈಟ್‌ನಿಂದ ಹಿಂದೂಗಳೇ ಹಿಂದೂಗಳ ವಿರೋಧಿ ಗಳಾಗಲು ಅವಕಾಶ ಕೊಡಬಾರದು, ಉದಾ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಬಗ್ಗೆ ಭಾಜಪವು ಸಾವಧಾನದ ಭೂಮಿಕೆಯನ್ನು ಅವಲಂಬಿಸಿದೆ. ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಾಗ ನಾವು, ಯಾವಾಗ ಮಾನ್ಯ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಯೆಂದು ಘೋಷಿಸಲಾಯಿತೋ, ಅಂದಿನಿಂದ ದೇಶದಲ್ಲಿ ಹಿಂದೂಗಳಿಗೆ ಒಂದು ಆಶಾಕಿರಣ ಕಾಣಿಸಿತ್ತು. ಭಾಜಪವು ನಾವು ಅಭಿವೃದ್ಧಿಯ ಅಂಶದ ಮೇಲೆ ಚುನಾವಣೆಯನ್ನು ಎದುರಿಸಿದ್ದೇವೆ ಮತ್ತು ನಮಗೆ ಎಲ್ಲ ಧರ್ಮೀಯರು ಮತ ನೀಡಿದ್ದಾರೆ ಎಂದಷ್ಟೇ ಹೇಳಿದರೂ, ವಾಸ್ತವಿಕತೆಯೇನೆಂದರೆ, ಸರ್ವಸಾಮಾನ್ಯ ಹಿಂದೂಗಳು ಒಬ್ಬ ಪ್ರಖರ ಹಿಂದುತ್ವವಾದಿಯೆಂದು ಮೋದಿಯವರಿಗೆ ಮತನೀಡಿದ್ದರು. ಮೋದಿ ಅಧಿಕಾರವನ್ನೇರಿದ ನಂತರ ಶ್ರೀರಾಮ ಮಂದಿರವನ್ನು ನಿರ್ಮಿಸುವರು, ಕಾಶ್ಮೀರಿ ಪಂಡಿತರ ಪುನರ್ವಸತಿ ಮಾಡುವರು, ಪಾಕಿಸ್ತಾನಕ್ಕೆ ಪಾಠ ಕಲಿಸುವರು, ಇತ್ಯಾದಿ ಆಶಾಭಾವನೆಗಳಿದ್ದವು; ಆದರೆ ದುರ್ಭಾಗ್ಯವೆಂದರೆ, ಅಧಿಕಾರವನ್ನು ಪಡೆದು ೨ ವರ್ಷಗಳಾದರೂ ಇದುವರೆಗೆ ಈ ವಿಷಯದಲ್ಲಿ ಏನೂ ಆಗಿಲ್ಲ. ಆದ್ದರಿಂದ ಹಿಂದೂಗಳಲ್ಲಿ ಅಸಂತೋಷವಿದೆ. ಹೀಗೆ ವಿಷಯವನ್ನು ಮಂಡಿಸಬಹುದು.
೫ ಇ. ಪೊಲೀಸರಿಗೆ ಸಂಬಂಧಿಸಿದ ಭೂಮಿಕೆ : ಪೊಲೀಸರ ಬಗ್ಗೆ ವಕೀಲರ ಸಲಹೆಯನ್ನು ಪಡೆದು ನಮ್ಮ ಭೂಮಿಕೆಯನ್ನು ಮಂಡಿಸಬೇಕು, ಉದಾ. ಪುನಃ ಪುನಃ ಆಗುವ ಸನಾತನದ ವಿಚಾರಣೆಯ ಸಂದರ್ಭದಲ್ಲಿ ನಾವು ಪೊಲೀಸರ ವಿಚಾರಣೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಪುನಃ ಪುನಃ ಹೇಳಿದ್ದೇವೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಸನಾತನದ ವಿರುದ್ಧ ಕ್ರಮತೆಗೆದುಕೊಳ್ಳುತ್ತಿದ್ದಾರೆ. ನಾವು ತನಿಖಾ ದಳದವರಿಗೆ ಸಂಪೂರ್ಣ ಸಹಾಯ ಮಾಡುತ್ತಿದ್ದರೂ, ಪೊಲೀಸರು ಮಾತ್ರ ಸನಾತನದ ಅಮಾಯಕ ಸಾಧಕರನ್ನು ದುರುಪಯೋಗಿಸಿ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ.
೫ ಈ. ಹಿಂದುತ್ವವಾದಿಗಳ ಆಕ್ರಮಕ ಕೃತಿಗಳು ಅಥವಾ ಹೇಳಿಕೆಗಳ ಬಗೆಗಿನ ಭೂಮಿಕೆ : ತೃಪ್ತಿ ದೇಸಾಯಿಯವರಂತಹ ಆಧುನಿಕವಾದಿ ಮಹಿಳೆಗೆ ನೂಕು ನುಗ್ಗಾಟ ಮಾಡುವುದು,
ಸುಧೀಂದ್ರ ಕುಲಕರ್ಣಿಯಂತಹ ಪಾಕ್ ಪ್ರೇಮಿಯ ಮುಖಕ್ಕೆ ಮಸಿ ಬಳಿಯುವುದು ಮುಂತಾದ ಪ್ರಸಂಗಗಳಲ್ಲಿ ಹಿಂದೂಗಳ ಭಾವನೆಗಳ ವಿಚಾರವಾಗಬೇಕು, ಎಂಬ ಭೂಮಿಕೆಯನ್ನು ತೆಗೆದುಕೊಳ್ಳಬೇಕು, ಉದಾ. ಹಿಂದೂಗಳು ಯಾವಾಗಲೂ ಕಾನೂನು ಮಾರ್ಗದಿಂದ ಮನವಿಪತ್ರ
ಗಳನ್ನು ನೀಡಿ, ತಮ್ಮ ಬೇಡಿಕೆಗಳನ್ನು ಮುಂದಿಡುತ್ತಾರೆ. ಆಂದೋಲನ ಗಳನ್ನು ಮಾಡುತ್ತಾರೆ; ಆದರೆ ಈ ವಿಷಯದಲ್ಲಿ ಯಾವುದೇ ಕಾರ್ಯಾಚರಣೆ ಯಾಗುವುದಿಲ್ಲ. ಆದ್ದರಿಂದ ಕೆಲವರ ತಾಳ್ಮೆ ತಪ್ಪುತ್ತದೆ ಹಾಗೂ ಅವರು ಇಂತಹ ಕೃತಿ ಅಥವಾ ಹೇಳಿಕೆಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಅವರ ಧಾರ್ಮಿಕಭಾವನೆಗಳನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ ಎಂದು ಹೇಳಬೇಕು.
೫ ಉ. ನಮ್ಮ ಆಂದೋಲನಗಳ ಭೂಮಿಕೆ : ನಮ್ಮ ಆಂದೋಲನಗಳಿಗೆ ಸಂಬಂಧಿಸಿ ಬೈಟ್ ನೀಡುವಾಗ ಆಂದೋಲನದ ಉದ್ದೇಶವೇನು ?, ಆಂದೋಲನದ ಬೇಡಿಕೆಗಳು ಏನಿವೆ ?, ಆಂದೋಲನದಲ್ಲಿ ಯಾವ ಸಂಘಟನೆ ಗಳು ಭಾಗವಹಿಸುತ್ತಿವೆ ?, ಬೇಡಿಕೆಗಳು ಈಡೇರದಿದ್ದರೆ, ಮುಂದಿನ ಕೃತಿ ಏನಿರುವುದು ? ಇಂತಹ ನಿರ್ಧಿಷ್ಟ ಅಂಶಗಳನ್ನು ಹೇಳಬೇಕಾಗಿರುತ್ತದೆ.
೬. ವಾರ್ತಾವಾಹಿನಿಗಳ ಮುಂದೆ ಭೂಮಿಕೆಯನ್ನು
ಮಂಡಿಸುವಾಗ ತೆಗೆದುಕೊಳ್ಳಬೇಕಾದ ಕಾಳಜಿ ಮತ್ತು ತಡೆಗಟ್ಟಬೇಕಾದ ತಪ್ಪುಗಳು
ಪ್ರಸಾರಮಾಧ್ಯಮಗಳ ಮುಂದೆ ನಾವು ಮಂಡಿಸಿದ ಭೂಮಿಕೆಯು ಬಿಲ್ಲಿನಿಂದ ಹೊರಟ ಬಾಣದಂತಿರುತ್ತದೆ. ಅದನ್ನು ಹಿಂತಿರುಗಿ ಪಡೆಯಲು ಆಗುವುದಿಲ್ಲ ಮತ್ತು ನಾವು ರಾಜಕಾರಣಿಗಳಾಗಿರದ ಕಾರಣ ಒಮ್ಮೆ ನೀಡಿದ ಹೇಳಿಕೆಯನ್ನು ನಾನು ಹಾಗೆ ಹೇಳಲೇ ಇಲ್ಲ, ನನಗೆ ಹಾಗೆ ಹೇಳಬೇಕಾ ಗಿರಲಿಲ್ಲ, ಹೀಗೆ ಹಿಂದೆ ಪಡೆಯುವುದು ತಪ್ಪಾಗುತ್ತದೆ. ಆದ್ದರಿಂದ ನಾವು ಮಂಡಿಸುವ ಭೂಮಿಕೆಯು ಯೋಗ್ಯವೇ ಆಗಿರಬೇಕು, ಎಂಬುದರ ಬಗ್ಗೆ ಕಾಳಜಿ ವಹಿಸಬೇಕು.
ಅ. ಯಾವುದಾದರೊಂದು ವಿಡಂಬನಾತ್ಮಕ ಚಲನಚಿತ್ರವನ್ನು ವಿರೋಧಿಸುವಾಗ ನೀವು ಚಲನಚಿತ್ರವನ್ನು ನೋಡಿದ್ದೀರಾ ? ಎಂಬ ಪ್ರಶ್ನೆ ಬಂದೇ ಬರುತ್ತದೆ. ಆದ್ದರಿಂದ ಬೈಟ್ ನೀಡುವವರಾದರೂ ಚಲನಚಿತ್ರವನ್ನು ನೋಡಿರಬೇಕು.
ಆ. ಅರ್ಧ ಮಾಹಿತಿಯ ಆಧಾರದಲ್ಲಿ ಪ್ರತಿಕ್ರಿಯೆಗಳನ್ನು ನೀಡಬಾರದು. ‘ನಾನು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಹೇಳುವೆನು’, ಎಂದು ಹೇಳಬೇಕು.
ಇ. ಯಾವ ವಿಷಯದ ಬಗ್ಗೆ ಮಾತನಾಡುವವರಿದ್ದೀರೋ, ಆ ವಿಷಯದ ಕಾಗದಪತ್ರಗಳನ್ನು ಜೊತೆಗಿಟ್ಟುಕೊಳ್ಳಬೇಕು. ಬೈಟ್ ನೀಡುವಾಗ ಅವುಗಳನ್ನು ತೋರಿಸಬೇಕು.
ಈ. ರಾಷ್ಟ್ರೀಯ ವಾರ್ತಾವಾಹಿನಿಯಾಗಿದ್ದರೆ, ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ಬೈಟ್ ನೀಡಿದರೆ ವಿಷಯ ದೇಶಾದ್ಯಂತ ತಲುಪುತ್ತದೆ.
ಉ. ಬೈಟ್ ನೀಡುವಾಗ ಜಾತಿವಾಚಕ ವಿಷಯ ಮಾತನಾಡಬಾರದು, ಒಂದು ನಿರ್ಧಿಷ್ಟ ಸಮಾಜದ ನೇತಾರರ ಬಗ್ಗೆ ಅಯೋಗ್ಯ ರೀತಿಯಲ್ಲಿ ಮಾತನಾಡಬಾರದು.
ಊ. ಭಾವನೆಯ ಭರದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಬಾರದು.
ಎ. ಪತ್ರಕರ್ತರಿಂದ ವಿಷಯಾಂತರವಾಗುತ್ತಿದ್ದರೆ, ಆ ಪ್ರಶ್ನೆಗಳಿಗೆ ಉತ್ತರಿಸಬಾರದು. ನಾವು ಇಂದಿನ ವಿಷಯದ ಬಗ್ಗೆ ಮಾತನಾಡೋಣ, ಎಂದು ಹೇಳಬೇಕು.
೭. ಸಂಚಾರಿವಾಣಿ ಬಂದ್ (ಸ್ವಿಚ್‌ಆಫ್) ಮಾಡಬಾರದು !
ವಕ್ತಾರರು ತಮ್ಮ ಸಂಚಾರಿವಾಣಿಯನ್ನು ಯಾವುದೇ ಕಾರಣಕ್ಕಾಗಿ ಸ್ವಿಚ್ ಆಫ್ ಮಾಡಬಾರದು. ಒಂದು ಸಮಿತಿ ಸೇವಕರನ್ನು ಸಂಪರ್ಕಿಸಿ ಪತ್ರಕರ್ತರು ಬೈಟ್ ತೆಗೆದುಕೊಳ್ಳಲು ಬರುತ್ತಿದ್ದರು, ಆದರೆ ಈ ಅವಧಿಯಲ್ಲಿ ಸಮಿತಿ ಸೇವಕರ ಸಂಚಾರಿವಾಣಿ ಯಾವುದೋ ಕಾರಣ ದಿಂದ ನಿಷ್ಕ್ರಿಯವಾಯಿತು. ಆದ್ದರಿಂದ ಪತ್ರಕರ್ತರಿಗೆ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ. ಅದರ ಪರಿಣಾಮದಿಂದ ಲಕ್ಷಗಟ್ಟಲೆ ಜನರಿಗೆ ಧರ್ಮದ ವಿಷಯ ತಲಪುವ ಅವಕಾಶ ತಪ್ಪಿಹೋಯಿತು.
೮. ನೀಡಿದ ಬೈಟ್ ಮತ್ತು ಪ್ರಸಾರವಾದ ವಾರ್ತೆಯನ್ನು ಅಧ್ಯಯನ ಮಾಡಬೇಕು
ಸಂಬಂಧಪಟ್ಟ ಪತ್ರಕರ್ತರಿಗೆ ಬೈಟ್‌ನ ಪ್ರಸಾರದ ಸಮಯವನ್ನು ವಿಚಾರಿಸಿಕೊಂಡು ನಾವು ಸ್ವತಃ ನೋಡಬೇಕು ಹಾಗೂ ಇತರ ಅನುಭವಿ ಸಹಾಯಕರಿಗೆ ನೋಡಲು ಹೇಳಬೇಕು. ಇದರಿಂದ ನಮ್ಮ ಕೊರತೆಗಳನ್ನು ಅಧ್ಯಯನ ಮಾಡಬಹುದು, ಹಾಗೆಯೇ ಪತ್ರಕರ್ತರು ಆ ಬೈಟ್‌ನ್ನು ಹೇಗೆ ತೋರಿಸಿದರು ಮತ್ತು ಅದರ ಪರಿಣಾಮ ಹೇಗಾಯಿತು ? ಎಂಬುದರ ಅಧ್ಯಯನ ಮಾಡಿ ಮುಂದಿನ ಬಾರಿ ಈ ವಾರ್ತಾವಾಹಿನಿಯೊಂದಿಗೆ ಎಂತಹ ಧೋರಣೆಯನ್ನಿಟ್ಟುಕೊಳ್ಳಬೇಕೆಂಬುದನ್ನೂ ನಿರ್ಧರಿಸಬಹುದು.
- ಶ್ರೀ. ಅಭಯ ವರ್ತಕ್, ವಕ್ತಾರರು, ಸನಾತನ ಸಂಸ್ಥೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರಸಾರಮಾಧ್ಯಮಗಳಿಗೆ ಬೈಟ್ ನೀಡುವ ಪದ್ಧತಿ !