ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶ್ರೀ. ರಮಾನಂದ ಗೌಡ ಹಾಗೂ ಮಂಗಳೂರು ಸೇವಾಕೇಂದ್ರದ ಸಾಧಕರಿಂದ ಕಲಿಯಲು ಸಿಕ್ಕಿದ ಅಂಶಗಳು

ಶ್ರೀ. ರಮಾನಂದ ಗೌಡ
ಕಳೆದ ವರ್ಷ ಕೆಲವು ತಿಂಗಳು ನಾನು ಸೇವೆಗೆಂದು ಮಂಗಳೂರು ಸೇವಾಕೇಂದ್ರದಲ್ಲಿದ್ದೆನು. ಆ ಸಮಯದಲ್ಲಿ ಪ್ರಸಾರ ಸೇವಕರಾದ ಶ್ರೀ ರಮಾನಂದ ಗೌಡ ಹಾಗೂ ಇತರ ಸಾಧಕ ರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡುತ್ತಿದ್ದೇನೆ.
೧. ಶ್ರೀ. ರಮಾನಂದ ಗೌಡ ಇವರಿಂದ ಕಲಿಯಲು ಸಿಕ್ಕಿದ ಅಂಶಗಳು
೧ ಅ. ಸಾಧಕರಿಗೆ ಸೇವೆಯಲ್ಲಿ ಪ್ರೋತ್ಸಾಹ ಕೊಡುವುದು
ಶ್ರೀ. ರಮಾನಂದಣ್ಣನವರು ಜಾಹೀರಾತು ಸೇವೆಗೆ ಸಂಬಂಧಪಟ್ಟಂತೆ ಎಲ್ಲರ ಬೈಠಕ್ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಸಾಧಕರು ತಮ್ಮ ಧ್ಯೇಯವನ್ನು ಹೇಳುತ್ತಾರೆ. ಆಗ ಅಣ್ಣನವರು ಆ ಸಾಧಕರಿಗೆ, ‘ನಿಮ್ಮ ಕ್ಷಮತೆಯು ಬಹಳ ಹೆಚ್ಚಿದೆ, ನೀವು ಇನ್ನೂ ಹೆಚ್ಚಿನ ಧ್ಯೇಯವನ್ನು ಇಟ್ಟುಕೊಳ್ಳಬಹುದು’ ಎಂದು ಹೇಳಿ ಅವರ ಕ್ಷಮತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರೋತ್ಸಾಹವನ್ನು ಕೊಡುತ್ತಾರೆ.

೧ ಆ. ಸಾಧಕರ ಪ್ರಗತಿಯ ಕುರಿತು ತೀವ್ರ ತಳಮಳವಿರುವುದು
ರಮಾನಂದಣ್ಣನವರ ಮನಸ್ಸು ನಿರ್ಮಲವಾಗಿದ್ದು ಅವರಲ್ಲಿ ಸಾಧಕರ ಪ್ರಗತಿಯ ಬಗ್ಗೆ ತೀವ್ರ ತಳಮಳವಿದೆ. ಅಲ್ಲಿನ ಸಾಧಕರು ಅವರಲ್ಲಿ ತಮ್ಮ ಅಡಚಣೆಗಳನ್ನು ಮುಕ್ತವಾಗಿ ಹೇಳುತ್ತಾರೆ. ಸಾಧಕರದ್ದು ಪೂರ್ಣ ಕೇಳಿಸಿ ಕೊಂಡು ಅವರಿಗೆ ತತ್ತ್ವನಿಷ್ಠೆಯಿಂದ ಯೋಗ್ಯವಾದುದನ್ನೇ ಹೇಳುತ್ತಾರೆ. ಇದರಲ್ಲಿ ಅವರಿಗೆ ಅಪೇಕ್ಷೆಯಿಲ್ಲದೇ, ಸಾಧನೆಯಲ್ಲಿ ಸಾಧಕರ ಪ್ರಗತಿಯಾಗ ಬೇಕೆಂಬ ತಳಮಳವು ಕಂಡುಬರುತ್ತದೆ. ಅವರು ನಿರಪೇಕ್ಷವಾಗಿ ಹೇಳುವುದ ರಿಂದ ಸಾಧಕರಿಗೂ ಒತ್ತಡ ವೆನಿಸುವುದಿಲ್ಲ.
೧ ಇ. ತೀವ್ರ ಶಾರೀರಿಕ ತೊಂದರೆಯಿದ್ದಾಗಲೂ ಸ್ವಚ್ಛತೆಯ ಸೇವೆಯನ್ನು ಮಾಡುವುದು
ಒಮ್ಮೆ ಮಂಗಳೂರು ಸೇವಾಕೇಂದ್ರದಲ್ಲಿ ಸಾಧಕರ ಸಂಖ್ಯೆಯು ಕಡಿಮೆ ಯಿತ್ತು. ಆಗ ರಮಾನಂದಣ್ಣನವರಿಗೆ ಬೆನ್ನು ನೋವಿನ ಸಮಸ್ಯೆಇದ್ದಾಗಲು ತಮ್ಮ ಮಗನಾದ ಗುರುದಾಸನ ಸಹಾಯದಿಂದ ಸ್ವಾಗತಕಕ್ಷೆಯ ಮುಂದಿನ ಅಂಗಳ ಹಾಗೂ ಹೊರಗಿನ ಪರಿಸರದ ಸ್ವಚ್ಛತೆಯನ್ನು ಮಾಡಿದರು.
೧ ಈ. ಕೇಳಿಕೊಳ್ಳುವ ವೃತ್ತಿ
ಸೇವಾಕೇಂದ್ರದ ವಾಹನ ಸೇವೆಯ ಬೈಠಕ್‌ನಲ್ಲಿ ರಮಾನಂದಣ್ಣ ಮತ್ತು ನಾನು ಸಹ ಇದ್ದೆನು. ವಾಹನಗಳ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆದರೂ ಅಣ್ಣನವರು ನನಗೆ, ‘ಅಕ್ಕ ಇನ್ನೂ ಏನಾದರೂ ಮಾಡಬಹುದೇ ?’ ಎಂದು ಸತತವಾಗಿ ನನ್ನಲ್ಲಿ ಕೇಳುತ್ತಿದ್ದರು. ಇದರಿಂದ ಅವರಲ್ಲಿ ಪ್ರೇಮಭಾವ, ನಮ್ರತೆ ಹಾಗೂ ಕೇಳಿಕೊಳ್ಳುವ ವೃತ್ತಿಯಿದೆ ಎಂಬುದು ನನ್ನ ಗಮನಕ್ಕೆ ಬಂದಿತು.
೨. ಮಂಗಳೂರು ಸೇವಾಕೇಂದ್ರದಲ್ಲಿನ ಇತರ ಸಾಧಕರಿಂದ ಕಲಿಯಲು ಸಿಕ್ಕಿದ ಅಂಶಗಳು
೨ ಅ. ಸತತವಾಗಿ ಕಲಿಯುವ ಸ್ಥಿತಿಯಲ್ಲಿರುವುದು
ಸೇವಾಕೇಂದ್ರದಲ್ಲಿನ ಸಾಧಕರು ಪರಸ್ಪರ ಮಾತನಾಡುವಾಗ ತನ್ನೆದುರಿರುವ ಸಾಧಕನಿಗೆ ತನಗಿಂತ ಉತ್ತಮವಾಗಿ ಹಾಗೂ ಹೆಚ್ಚು ತಿಳಿಯುತ್ತದೆ, ಆತನಿಗೆ ಹೋಲಿಸಿದರೆ ನನಗೆ ಕಡಿಮೆ ತಿಳಿಯುತ್ತದೆ ಎಂದು ವಿಚಾರ ಮಾಡುತ್ತಾರೆ ಎಂಬುದು ಅರಿವಿಗೆ ಬರುತ್ತದೆ. ಅವರು ಸತತವಾಗಿ ಕಲಿಯುವ ಸ್ಥಿತಿಯಲ್ಲಿರುತ್ತಾರೆ.
೨ ಆ. ಸಾಧನೆಯ ಬಗ್ಗೆ ಮಾತನಾಡುವುದು
ಮೂಲ್ಕಿಯಲ್ಲಿ ಯಾವುದಾದರೊಂದು ಶಿಬಿರವಿದ್ದರೆ ಶಿಬಿರವು ಮುಗಿದ ನಂತರ ಸಾಧಕರು ತಮ್ಮ ತಮ್ಮಲ್ಲಿ ವ್ಯಷ್ಟಿ ಸಾಧನೆಯ ಬಗ್ಗೆ ಚರ್ಚಿಸುತ್ತಾರೆ. ಅವರು, ನಾವು ಎಲ್ಲಿ ಕಡಿಮೆ ಬೀಳುತ್ತೇವೆ ಎಂಬುದರ ಬಗ್ಗೆ ಮಾತನಾಡುತ್ತಾರೆ.
೨ ಇ. ಪ್ರೇಮಭಾವ
ಒಟ್ಟಾರೆ ಅಲ್ಲಿನ ಸಾಧಕರಲ್ಲಿ ತುಂಬ ಪ್ರೇಮಭಾವವಿದೆ. ಆದ್ದರಿಂದ ಅಲ್ಲಿಂದ ಆಂಧ್ರಪ್ರದೇಶಕ್ಕೆ ಹೋಗುವಾಗ ಮೊದಲು ನನಗೆ ಸ್ವಲ್ಪ ಬೇಸರವೆನಿಸಿ ಅಳು ಬಂದಿತು.
ಪ.ಪೂ. ಡಾಕ್ಟರ್, ನಿಮ್ಮ ಕೃಪೆಯಿಂದ ನನಗೆ ಅಲ್ಲಿರುವ ಅವಕಾಶ ಲಭಿಸಿತು. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ದೇವಾ, ಇವೆಲ್ಲ ಗುಣಗಳನ್ನು ಆಚರಣೆಗೆ ತರುವ ದೃಷ್ಟಿಯಿಂದ ನನಗೆ ಸಹಾಯ ಮಾಡಿರಿ ಎಂದು ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.
- ಕು. ಕನಕಮಹಾಲಕ್ಷ್ಮೀ ದೇವಕರ್, ಭಾಗ್ಯನಗರ, ತೆಲಂಗಾಣ (೪.೫.೨೦೧೬)

ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯದ ಸಾಧಕ-ಸಾಧಕಿಯರು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಹೆಚ್ಚು ಶೀಘ್ರಗತಿಯಲ್ಲಿ ತಲುಪುತ್ತಿದ್ದಾರೆ. ೨೮.೩.೨೦೧೬ ರಿಂದ ೬.೪.೨೦೧೬ ಕೇವಲ ಈ ಹತ್ತು ದಿನಗಳ ಕಾಲಾವಧಿಯಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ೪೩ ಮಂದಿ ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟವನ್ನು ತಲುಪಿದರು. ಅಂತೆಯೇ ಗುರುಪೂರ್ಣಿಮೆಯಂದೂ ಕರ್ನಾಟಕ ರಾಜ್ಯದ ೫೮ ಮಂದಿ ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟ ತಲುಪಿರುವುದನ್ನು ಘೋಷಿಸಲಾಯಿತು. ಅಂದರೆ ಕರ್ನಾಟಕದ ೧೦೧ ಸಾಧಕರು ೪ ತಿಂಗಳೊಳಗೆ ಈ ಹಂತವನ್ನು ದಾಟಿದರು. ಇದಕ್ಕಾಗಿ ಇವೆಲ್ಲ ಸಾಧಕ ರನ್ನು ಹಾಗೆಯೇ ಕರ್ನಾಟಕ ರಾಜ್ಯದ ಧರ್ಮಪ್ರಸಾರ ಪ್ರಮುಖರಾದ ಶ್ರೀ. ರಮಾನಂದ ಗೌಡ ಹಾಗೂ ಇತರ ಸಾಧಕರನ್ನು ಎಷ್ಟು ಪ್ರಶಂಸಿಸಿದರೂ ಅದು ಕಡಿಮೆಯೇ ಆಗಿದೆ. ಶ್ರೀ. ರಮಾನಂದ ಗೌಡ ಇವರು ಸಾಧಕರ ಆಧ್ಯಾತ್ಮಿಕ ಮಟ್ಟವನ್ನು ನಿಖರವಾಗಿ ಗುರುತಿಸುತ್ತಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ, ಅಭಿನಂದನೆ, ಅಭಿನಂದನೆ !
ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟವನ್ನು ತಲುಪಿರುವ ಈ ೧೦೧ ಸಾಧಕರಲ್ಲಿ ೨೭ ಮಂದಿ ಪುರುಷರಿದ್ದು ೭೪ ಮಂದಿ ಸ್ತ್ರೀಯರಾಗಿದ್ದಾರೆ. ಕಲಿಯುಗದಲ್ಲಿ ಅಹಂ ಹೆಚ್ಚು ಇರುವುದರಿಂದ ಪುರುಷರು ಸಾಧನೆಯಲ್ಲಿ ಶೀಘ್ರ ಪ್ರಗತಿ ಹೊಂದುವುದಿಲ್ಲ, ಅಹಂ ಕಡಿಮೆಯಿರುವುದರಿಂದ ಸ್ತ್ರೀಯರು ಸಾಧನೆಯಲ್ಲಿ ಶೀಘ್ರ ಪ್ರಗತಿ ಹೊಂದುತ್ತಾರೆ, ಎಂಬ ಸನಾತನ ಸಂಸ್ಥೆಯು ಹೇಳುತ್ತಿರುವ ಸಿದ್ಧಾಂತವು ಈ ಅಂಕಿಅಂಶಗಳಿಂದ ಮತ್ತೊಮ್ಮೆ ಸಿದ್ಧವಾಗುತ್ತದೆ. ಈ ಸಿದ್ಧಾಂತವನ್ನು ಸುಳ್ಳಾಗಿಸುವುದಕ್ಕೆ ಹಾಗೂ ತಮ್ಮ ಉನ್ನತಿಯು ಶೀಘ್ರವಾಗಿ ಆಗಬೇಕೆಂಬುದಕ್ಕಾಗಿ ಪುರುಷ ಸಾಧಕರು ಪ್ರಯತ್ನವನ್ನು ಹೆಚ್ಚಿಸುವುದರ ಅಗತ್ಯವಿದೆ.
-(ಪರಾತ್ಪರ ಗುರು) ಡಾ. ಆಠವಲೆNo comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶ್ರೀ. ರಮಾನಂದ ಗೌಡ ಹಾಗೂ ಮಂಗಳೂರು ಸೇವಾಕೇಂದ್ರದ ಸಾಧಕರಿಂದ ಕಲಿಯಲು ಸಿಕ್ಕಿದ ಅಂಶಗಳು