ಸನಾತನದ ೨೦ ನೇ ಸಂತರಾದ ಪೂ. (ಸೌ) ಆಶಾಲತಾ ಸಖದೇವಅಜ್ಜಿಯವರ ದೇಹತ್ಯಾಗ

ಅಂತ್ಯವಿಧಿಯ ಸಂದರ್ಭದಲ್ಲಿ ತುಳಸಿ 
ಹಾಗೂ ಪುಷ್ಪಗಳ ಹಾರಗಳಿಂದ ಅಲಂಕರಿಸಿದ 
ಪೂ.(ಸೌ.) ಸಖದೇವ ಅಜ್ಜಿಯವರ ಪಾರ್ಥಿವ ಶರೀರ


ಪೂ. (ಸೌ.) ಆಶಾಲತಾ ಸಖದೇವ

ರಾಮನಾಥಿ (ಗೋವಾ) :ಸನಾತನದ ೨೦ ನೇ ಸಂತರಾದ ಪೂ. (ಸೌ.) ಆಶಾಲತಾ ಸಖದೇವ (೮೧ ವರ್ಷ) ಇವರು ಆಗಸ್ಟ್ ೧೭ ರಂದು ಸಾಯಂಕಾಲ ೫.೧೦ ಕ್ಕೆ ಸನಾತನದ ರಾಮನಾಥಿ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ಅವರು ವೈಶಾಖ ಕೃಷ್ಣ ಪಕ್ಷ ೫, ಕಲಿಯುಗ ವರ್ಷ ೫೧೧೪ ಅಂದರೆ ೨೦೧೨ ರ ಮೇ ೧೦ ರಂದು ಸಂತಪದವಿಯನ್ನು ತಲುಪಿದ್ದರು. ಅವರು ತಮ್ಮ ಕುಟುಂಬ ವರ್ಗದವರಾದ ಪತಿ ಶ್ರೀ. ಶಶಿಕಾಂತ ಸಖದೇವ, ಮಗ ಶ್ರೀ. ಗುರುದತ್ತ, ಸೊಸೆ ಸೌ. ಹೇಮಲತಾ ಹಾಗೂ ಮಗಳು ಕು. ರಾಜಶ್ರೀ ಇವರನ್ನು ಅಗಲಿದ್ದಾರೆ. ಕು. ರಾಜಶ್ರೀಯವರು ಪೂ. (ಸೌ.) ಸಖದೇವ ಅಜ್ಜಿಯವರೊಂದಿಗೆ ಆಶ್ರಮದಲ್ಲಿದ್ದು ಅವರ ಕೊನೆಯ ಕ್ಷಣದವರೆಗೂ ಭಾವಪೂರ್ಣಸೇವೆಯನ್ನು ಮಾಡಿದರು. ಪೂ. (ಸೌ.) ಸಖದೇವ ಅಜ್ಜಿಯವರ
ಅಂತ್ಯಸಂಸ್ಕಾರವನ್ನು ಆಗಸ್ಟ್ ೧೮ ರಂದು ನೆರವೇರಿಸಲಾಯಿತು.
ಸನಾತನದ ಪರಿವಾರವು ಸಖದೇವ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ. ಸನಾತನದ ಸಂತರಾದ ಪೂ. ಸಖದೇವ ಅಜ್ಜಿಯವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಭಾವಪೂರ್ಣ ವಾತಾವರಣದಲ್ಲಿ ನೆರ ವೇರಿತು. ರಾಮನಾಥಿಯ ಸ್ಮಶಾನ ಭೂಮಿಯಲ್ಲಿ ಪೂ. (ಸೌ.) ಸಖದೇವ ಅಜ್ಜಿಯವರ ಪುತ್ರ ಶ್ರೀ. ಗುರುದತ್ತರವರು ಮಧ್ಯಾಹ್ನ ೩.೩೫ ಕ್ಕೆ ಪೂ. (ಸೌ.) ಸಖದೇವ ಅಜ್ಜಿಯವರ ಪಾರ್ಥಿವ ಶರೀರಕ್ಕೆ ಮಂತ್ರಾಗ್ನಿ ನೀಡಿದರು
ತೀವ್ರ ಶಾರೀರಿಕ ತೊಂದರೆಯನ್ನು ಅನುಭವಿಸುತ್ತಿರುವಾಗಲೂ 
ಎಲ್ಲವನ್ನೂ  ನಗುನಗುತ್ತಾಸಂತೋಷದಿಂದ ಹೇಗೆ ಸ್ವೀಕರಿಸಬೇಕು, ಎಂಬುದರ 
ಆದರ್ಶವನ್ನು ದೇಹತ್ಯಾಗದ ಕೊನೆಯ ಕ್ಷಣದವರೆಗೂ ಎಲ್ಲರೆದುರಿಟ್ಟ ಪೂ. ಸಖದೇವ ಅಜ್ಜಿ !
. ಪೂ.(ಸೌ.) ಸಖದೇವ ಅಜ್ಜಿಯವರ ಕಲ್ಪನಾತೀತ ಸಹನಶಕ್ತಿ ! : ಪೂ.(ಸೌ.) ಸಖದೇವ ಅಜ್ಜಿಯವರು ಕಳೆದ ೪ ವರ್ಷಗಳ ಅನಾರೋಗ್ಯದ ಅವಧಿಯಲ್ಲಿ ನಾವು ಕಲ್ಪಿಸಲೂ ಸಾಧ್ಯವಾಗದಷ್ಟು ಉಸಿರಾಟ ತೊಂದರೆ, ಶರೀರಕ್ಕೆ ಸಹಿಸಲು ಸಾಧ್ಯವಾಗದಷ್ಟು ವೇದನೆ, ಶರೀರಕ್ಕೆ ಬಾವು ಬರುವುದು ಮುಂತಾದ ಅನೇಕ ಶಾರೀರಿಕ ತೊಂದರೆಗಳನ್ನು ಸಹಿಸಿದರು. ಅವರಿಗೆ ಆಗುತ್ತಿರುವಷ್ಟು ಉಸಿರಾಟದ ತೊಂದರೆಯನ್ನು ಯಾರು ಸಹ ೫ ನಿಮಿಷಗಳಷ್ಟು ಕಾಲವೂ ಸಹಿಸಲು ಸಾಧ್ಯವಿಲ್ಲ. ಆದರೆ ಪೂ. ಅಜ್ಜಿಯವರು ಇಂತಹ ತೊಂದರೆಯನ್ನು ಪ್ರತಿದಿನ ಅನೇಕ ಬಾರಿ ಕಳೆದ ೪ ವರ್ಷಗಳಿಂದ ಸಹಿಸಿದರು. ಈಗ ಸಹಿಸಲು ಸಾಧ್ಯವಾಗುತ್ತಿಲ್ಲ. ಈಗ ನನ್ನನ್ನು ಈ ಕಷ್ಟದಿಂದ ಮುಕ್ತಗೊಳಿಸಿರಿ, ಎಂದು ಅವರು ಕಳೆದ ೪ ವರ್ಷಗಳಲ್ಲಿ ಒಮ್ಮೆಯೂ ಹೇಳಲಿಲ್ಲ. ಇಷ್ಟೇ ಅಲ್ಲ ಅವರು ಯಾವಾಗಲೂ ನಗುತ್ತಲೇ ಇರುತ್ತಿದ್ದರು.
. ತೀವ್ರ ತೊಂದರೆಯಾಗುತ್ತಿರುವಾಗಲೂ ತಮಗಾಗಿ ಸೂಕ್ತವಾದ ಉಪಾಯವನ್ನು ಸ್ವತಃ ಕಂಡುಹಿಡಿಯುತ್ತಿದ್ದರು : ಪೂ. ಅಜ್ಜಿಯವರು ತಮಗಾಗಿ ಉಪಾಯವೆಂದು ನಾಮಜಪ, ಮುದ್ರೆ, ನ್ಯಾಸವನ್ನು ಯಾವುದು ಮಾಡುವುದೆಂದು ಸ್ವತಃ ತಾವೇ ಕಂಡು ಹಿಡಿಯುತ್ತಿದ್ದರು ಹಾಗೂ ಅವರು ಕಂಡುಹಿಡಿದ ಉಪಾಯವು ಸರಿಯಾಗಿರುತ್ತಿತ್ತು.
. ಇಷ್ಟು ಅನಾರೋಗ್ಯವಾಗಿರುವಾಗಲೂ ಅವರು ತಮಗಾಗಿ ತಾತ್ಕಾಲಿಕ ಮತ್ತು ಸಮಷ್ಟಿಗಾಗಿ ಇತರ ಎಲ್ಲ ಸಮಯದಲ್ಲಿ ನಾಮಜಪ ವನ್ನು ಮಾಡುತ್ತಿದ್ದರು. - (ಪರಾತ್ಪರ ಗುರು) ಡಾ. ಆಠವಲೆ.
 ಪೂ. (ಸೌ). ಆಶಾಲತಾ ಸಖದೇವಅಜ್ಜಿಯವರು ಕಳೆದ ಅನೇಕ ವರ್ಷಗಳಿಂದ ವಿವಿಧ ಶಾರೀರಿಕ ತೊಂದರೆಗಳಿಂದಾಗಿ ಹೊರಗಡೆ ಎಲ್ಲಿಯೂ ಹೋಗಲಿಲ್ಲ. ಅವರು ಕಳೆದ ೫ ವರ್ಷಗಳಿಂದ ರಾಮನಾಥಿ ಆಶ್ರಮದಲ್ಲಿರುವ ಅವರ ಕೋಣೆಯಲ್ಲಿಯೇ ಇರುತ್ತಿದ್ದರು. ಹೀಗಿರುವಾಗಲೂ ಸಹ ಅವರು ಆಧ್ಯಾತ್ಮಿಕ ಸಾಧನೆಯಲ್ಲಿ ಶೀಘ್ರವಾಗಿ ಪ್ರಗತಿಯನ್ನು ಮಾಡಿಕೊಳ್ಳಬಹುದು ಎನ್ನುವ ಆದರ್ಶವನ್ನು ಎಲ್ಲರೆದುರಿಗೆ ಇಟ್ಟಿದ್ದಾರೆ. ಅನಾರೋಗ್ಯದಿಂದಾಗಿ ಆಧ್ಯಾತ್ಮಿಕ ಸಾಧನೆಯನ್ನು ಸರಿಯಾಗಿ ಮಾಡಲು ಆಗುತ್ತಿಲ್ಲ ಎಂದು ಭಾವಿಸುತ್ತಿರುವ ಸಾಧಕರು ಪೂ. ಸಖದೇವಅಜ್ಜಿಯವರ ಆದರ್ಶವನ್ನು ಇಟ್ಟುಕೊಂಡು ಆಧ್ಯಾತ್ಮಿಕ ಸಾಧನೆಯನ್ನು ಮಾಡಿದರೆ ಅವರಿಗೆ ಅಜ್ಜಿಯ ಆಶೀರ್ವಾದ ದೊರೆತು ಶೀಘ್ರವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳಬಹುದು.
-(ಪರಾತ್ಪರ ಗುರು) ಡಾ. ಆಠವಲೆ.

ಪೂ. (ಸೌ). ಸಖದೇವ ಅಜ್ಜಿಯವರ ಮಗಳಾದ ಕು. ರಾಜಶ್ರೀಯವರು ಶಿಷ್ಯಳಂತೆ ಮಾಡಿದ ಅಜ್ಜಿಯವರ ಸೇವೆ
ಕು. ರಾಜಶ್ರೀ ಸಖದೇವ
ಪೂ. ಅಜ್ಜಿಯವರ ಮಗಳಾದ ಕು. ರಾಜಶ್ರೀಯವರು ಕಳೆದ ೪ ವರ್ಷಗಳಿಂದ ಹಗಲೂ-ರಾತ್ರಿ ಪೂ.(ಸೌ). ಸಖದೇವ ಅಜ್ಜಿಯವರ ಸೇವೆಯನ್ನು ಮಗಳೆಂದು ಮಾಡದೇ ಗುರುಸೇವೆಯೆಂದು ತಿಳಿದು ಮಾಡಿದರು.  
ಪೂ. ಅಜ್ಜಿಯವರ ದೇಹತ್ಯಾಗವಾದಾಗಲೂ ರಾಜಶ್ರೀಯವರು ಆ ಪ್ರಸಂಗವನ್ನು  ಈಶ್ವರೇಚ್ಛೆಯೆಂದು ತಿಳಿದು ನೋಡಿದರು. ಆದ್ದರಿಂದ ಅವರು ಆ ಪರಿಸ್ಥಿತಿಯಲ್ಲಿಯೂ ಎಂದಿನಂತೆ ಸಂತೋಷದಿಂದಿದ್ದರು. ಈ ರೀತಿ ಮಾಡಿ ಕು. ರಾಜಶ್ರೀಯವರು ಎಲ್ಲ ಸಾಧಕರೆದುರಿಗೆ ಒಂದು ಆದರ್ಶವನ್ನಿಟ್ಟಿದ್ದಾರೆ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ೨೦ ನೇ ಸಂತರಾದ ಪೂ. (ಸೌ) ಆಶಾಲತಾ ಸಖದೇವಅಜ್ಜಿಯವರ ದೇಹತ್ಯಾಗ