ಝಾಕೀರ್ ನಾಯಿಕ್ ಆಗೆ ಬಡೋ...!

ಶ್ರೀ. ಭಾವೂ ತೋರ್ಸೆಕರ್
ಮುಂಬಯಿಯ ಹಿರಿಯ ಪತ್ರಕರ್ತರಾದ ಶ್ರೀ. ಭಾವೂ ತೋರ್ಸೆಕರ್ ಇವರ http://jagatapahara.blogspot.in/ ಎಂಬ ಬ್ಲಾಗ್‌ನಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರದ ಬಗ್ಗೆ ಮುಂದಿನ ಲೇಖನ ಪ್ರಕಟವಾಗಿದೆ. ಈ ಲೇಖವು ಕುಚೇಷ್ಟೆ ಶೈಲಿಯಲ್ಲಿದ್ದು ಪುರೋಗಾಮಿ ಗಳ ಬಣ್ಣ ಬಯಲುಗೊಳಿಸುವಂತದ್ದಾಗಿದೆ. ನಮ್ಮ ವಾಚಕರಿಗಾಗಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
೧. ಸನಾತನ ಸಂಸ್ಥೆಯ ಹಿಂದೆ ಬೀಳುವವರು ಕಾಶ್ಮೀರದ ಹಿಂಸಾಚಾರದ ವಿಷಯದಲ್ಲಿ ಮಾತ್ರ ಮೌನ ವಹಿಸಿರುವುದು ಮನಸ್ಸಿಗೆ ಚುಚ್ಚುವಂತಿದೆ !
ಮಾಲೆಗಾಂವ್ ಸ್ಫೋಟ ಅಥವಾ ಅಂತಹದ್ದೇನಾ ದರೂ ಘಟಿಸಿದರೆ, ಎದ್ದುಬಿದ್ದು ಸನಾತನದ ಹಿಂದೆ ಬೀಳುವವರ ಮೌನವು ಇಂದು ಅನೇಕರಿಗೆ ಚುಚ್ಚು ತ್ತಿದೆ. ಹೀಗೆ ಯಾರಿಗೆ ಚುಚ್ಚುತ್ತಿದೆಯೋ, ಅವರು ಬುದ್ಧಿವಂತರಾಗಿಲ್ಲ, ಇದು ಅದರ ಹಿಂದಿನ ಕಾರಣವಾಗಿದೆ. ನೀವು ಬುದ್ಧಿಜೀವಿಗಳಾಗಿದ್ದರೆ, ನಿಮಗೆ ಇಂತಹ ಪ್ರಶ್ನೆ ಬೀಳುವುದಿಲ್ಲ.
ಸತ್ಯದಿಂದ ದೂರವಾದರೆ ಬುದ್ಧಿಜೀವಿಗಳು ತಯಾರಾಗುತ್ತಾರೆ. ಆದುದರಿಂದಲೇ ಪಾನ್ಸರೆ-ದಾಭೋಳಕರರ ಹತ್ಯೆ ಯಾದ ಕೂಡಲೇ ಸನಾತನವನ್ನು ನಿಷೇಧಿಸಲು ಕೋಲಾಹಲವೆಬ್ಬಿಸುವವರಿಗೆ, ಢಾಕಾ ಹತ್ಯಾಕಾಂಡ ಅಥವಾ ಕಾಶ್ಮೀರದಲ್ಲಿ ಗಲಭೆ ಭುಗಿಲೆದ್ದಾಗ ಗಾಢ ನಿದ್ರೆ ಬಿದ್ದಿರುತ್ತದೆ. ಕೆಲವು ವರ್ಷಗಳ ಹಿಂದೆ ಅಂದಿನ ಪ್ರಧಾನಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಇವರು ತಮ್ಮ ನಿದ್ರಾನಾಶದ ಬಗ್ಗೆ ಹೇಳಿದ್ದು ಯಾರಿಗಾದರೂ ನೆನಪಿದೆಯೇ ? ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ಒಬ್ಬ ಮುಸಲ್ಮಾನ ಯುವಕನು ಸ್ಫೋಟಕಗಳಿಂದ ತುಂಬಿದ ಜೀಪನ್ನು ಸ್ಫೋಟಿಸಲು ಪ್ರಯತ್ನಿಸಿದ್ದನು. ಆಗ ಜಗತ್ತಿನಾದ್ಯಂತ ಹಾಹಾಕಾರವೆದ್ದಿತ್ತು. ಅವನ ಮೂಲವನ್ನು ಹುಡುಕು ವಾಗ ಅವನು ಭಾರತೀಯನಾಗಿದ್ದಾನೆ ಎಂದು ಸ್ಪಷ್ಟವಾಯಿತು; ಆದರೆ ಅದರಿಂದ ಸಿಂಗ್ ಇವರ ನಿದ್ರೆ ಭಂಗವಾಗಲಿಲ್ಲ. ಅದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ವಿಮಾನ ನಿಲ್ದಾಣದಿಂದ ತನ್ನ ದೇಶಕ್ಕೆ (ಭಾಗ್ಯನಗರಕ್ಕೆ) ಹೊರಟಿರುವ ಒಬ್ಬ ಭಾರತೀಯ ಮುಸಲ್ಮಾನ ಯುವ ವೈದ್ಯನನ್ನು ಅಲ್ಲಿನ ಪೊಲೀಸರು ಸಂಶಯಿತನೆಂದು ವಶಪಡಿಸಿಕೊಂಡಿದ್ದರು. ಅವನಿಗೂ ಗ್ಲಾಸ್ಗೋದ ರಕ್ತಪಾತಕ್ಕೂ ಸಂಬಂಧವಿದೆಯೆಂದು ಸಂಶಯವಿತ್ತು. ಅವನ ಬಂಧನದಿಂದ ಅಂದಿನ ಭಾರತದ ಪ್ರಧಾನಮಂತ್ರಿಗಳಿಗೆ ನಿದ್ರಾನಾಶದ ರೋಗ ಬಂದಿತ್ತು. ನಾನು ಇಡೀ ರಾತ್ರಿ ಮಲಗಲಿಲ್ಲ, ಎಂದು ಅವರು ಬಹಿರಂಗವಾಗಿ ಹೇಳಿದ್ದರು; ಆದರೆ ಭಾರತದ ಗಡಿಯಲ್ಲಿ ಒಬ್ಬ ಸೈನಿಕನ ರುಂಡವನ್ನು ಕತ್ತರಿಸಿ ಅದನ್ನು ಪಾಕಿಸ್ತಾನಕ್ಕೆ ಒಯ್ದಾಗ ಡಾ. ಸಿಂಗ್ ಗಾಢ ನಿದ್ರೆ ಯಲ್ಲಿದ್ದರು. ಅದರ ಬಗ್ಗೆ ಒಂದು ಶಬ್ದವನ್ನೂ ಮಾತನಾಡಬೇಕೆಂದು ಅವರಿಗೆ ಅನಿಸಲಿಲ್ಲ. ಇಂತಹ ಡಾ. ಮನಮೋಹನ ಸಿಂಗ್‌ರನ್ನು ಬುದ್ಧಿಜೀವಿಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವಾಗ ಗಾಢ ವಾಗಿ ಮಲಗಬೇಕು ಮತ್ತು ಯಾವಾಗ ನಿದ್ರಾನಾಶದ ಬೊಬ್ಬೆ ಹೊಡೆಯಬೇಕು ಎಂಬುದನ್ನು ಪುರೋಗಾಮಿ ಬುದ್ಧಿಜೀವಿಗಳು ನಿರ್ಧರಿಸಿರುತ್ತಾರೆ. ಆದುದರಿಂದ ಈಗ ಝಾಕೀರ ನಾಯಿಕ್ ಅಥವಾ ಕಾಶ್ಮೀರದಲ್ಲಿ ಏನಾದರೂ ಭೀಕರ ಘಟನೆ ನಡೆದಾಗ ನೆಮ್ಮದಿಯಿಂದ ಮಲಗುವ ಸಮಯವಲ್ಲವೇ ?
೨. ಜಗತ್ತಿಗೆ ಜಿಹಾದ್‌ನಿಂದಲ್ಲ, ಪುರೋಗಾಮಿಗಳ ಕಲ್ಪನೆಯ ಹಿಂದುತ್ವದಿಂದ ಭೀಕರ ಅಪಾಯವಿದೆ !
ಝಾಕೀರ್ ನಾಯಿಕ್ ಇವರು ತಮ್ಮ ಭಾಷಣದಿಂದ ಅನೇಕರ ಬುದ್ಧಿಭ್ರಷ್ಟ ಮಾಡಿದ್ದಾರೆ. ಅದರಿಂದ ಅನೇಕ ಜನರು ಸಂಪೂರ್ಣ ಜಗತ್ತಿನಲ್ಲಿ ಇಸ್ಲಾಂನ ಧ್ವಜವನ್ನು ಹಾರಿಸಲು ಪ್ರವೃತ್ತರಾಗಿದ್ದಾರೆ, ಆದರೆ ಹೆದರುವ ಆವಶ್ಯಕತೆಯಿಲ್ಲ. ಏಕೆಂದರೆ ಜಗತ್ತಿಗೆ ಜಿಹಾದ್ ಅಥವಾ ಹಿಂಸಾಚಾರಿ ಹತ್ಯಾಕಾಂಡದ ಅಪಾಯ ಸ್ವಲ್ಪವೂ ಇಲ್ಲ, ಬದಲಾಗಿ ಪುರೋಗಾಮಿ ಗಳ ಕಲ್ಪನೆಯ ಹಿಂದುತ್ವದಿಂದ ಭೀಕರ ಅಪಾಯವಿದೆ. ಕಾಶ್ಮೀರ ಅಥವಾ ನಾಯಿಕ್ ಇವರ ಉದ್ಯೋಗದಲ್ಲಿ ಎಲ್ಲಿಯೂ ಹಿಂದುತ್ವದ ಉಲ್ಲೇಖವಿಲ್ಲದಿದ್ದರೆ, ಬುದ್ಧಿಜೀವಿಗಳು ಚಿಂತೆಗೀಡಾಗುವ ಯಾವ ಕಾರಣವೂ ಇಲ್ಲ; ಆದರೆ ಕನ್ಹಯ್ಯಕುಮಾರ ಅಥವಾ ಉಮರ ಖಾಲೀದ ಭಾರತವನ್ನು ತುಂಡುತುಂಡು ಮಾಡುವ ಘೋಷಣೆಗಳನ್ನು ಕೂಗಿದರೆಂದು ಅವರನ್ನು ಬಂಧಿಸಿ ದಾಗ ಅದು ಅವರಿಗೆ ಚಿಂತೆಯ ವಿಷಯವಾಗುತ್ತದೆ. ದೇಶ ಉಳಿಯದಿದ್ದರೂ ನಡೆದೀತು; ಆದರೆ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಸುರಕ್ಷಿತವಾಗಿರಬೇಕು; ಆದರೆ ದೇಶವೇ ಉಳಿಯದಿದ್ದರೆ ಅಲ್ಲಿ ಯಾವುದೇ ಸ್ವಾತಂತ್ರ್ಯದ ಕಲ್ಪನೆಯೇ ಹಾಸ್ಯಾಸ್ಪದವಲ್ಲವೇ ?
ಯಾರಿಗೆ ಇಂತಹ ಹುರುಳಿಲ್ಲದ ಪ್ರಶ್ನೆಗಳು ಬೀಳುತ್ತವೆಯೋ, ಅವರಿಗೆ ಮೂರ್ಖರೆಂದು ಹೇಳಲಾಗುತ್ತದೆ; ಏಕೆಂದರೆ ಅವರಿಗೆ ಬುದ್ಧಿಯ ಕಲ್ಪನೆಯ ರಭಸವನ್ನು ಎಂದಿಗೂ ಅನುಭವಿಸಲು ಬಂದಿರುವುದಿಲ್ಲ. ಹಾಗಾದರೆ ಇಂದು ಭಾರತೀಯ ಪುರೋಗಾಮಿ ಬುದ್ಧಿಜೀವಿಗಳ ಮೌನವೇಕೆ ? ಇಂತಹ ಮಕ್ಕಳಂತಹ ಪ್ರಶ್ನೆಗಳನ್ನು ಕೇಳುವುದನ್ನು ಪರಿಗಣಿಸುವುದು ಬೇಡವೇ ? ತದ್ವಿರುದ್ಧ ಇಂದು ಅದೇ ಪುರೋಗಾಮಿ ವಿಚಾರವಂತರು ಝಾಕೀರ್ ನಾಯಿಕ್ ಇವರ ಬಹಿರಂಗ ಸಮರ್ಥನೆಗಾಗಿ ಏಕೆ ಮುಂದೆ 
ಬಂದಿಲ್ಲ ? ಇಂತಹ ಪ್ರಶ್ನೆಯನ್ನು ಅವರಿಗೆ ಕೇಳಬೇಕು. ಯಾರು ಭಾರತದ ತುಂಡುತುಂಡು ಮಾಡುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ನಂಬಿದ್ದಾರೆಯೋ, ಅವರು ಝಾಕೀರ್ ನಾಯಿಕ್ ಇವರ ವಕಾಲತ್ತನ್ನೇ ಮಾಡ ಬೇಕಲ್ಲವೇ ? ಸ್ವಲ್ಪ ತಡೆಹಿಡಿಯರಿ ! ಬೇಗನೇ ಅನೇಕ ಪುರೋಗಾಮಿ ಸಂಸ್ಥೆಗಳು ಮತ್ತು ಪುರಸ್ಕಾರ ವಾಪಸಿಯ ಮುಂದಾಳುಗಳು ಅದಕ್ಕಾಗಿ ಮೈದಾನಕ್ಕೆ ಬರುವರು. ‘ಝಾಕೀರ್ ನಾಯಿಕ್, ಆಗೆ ಬಡೋ, ಹಮ್ ತುಮ್ಹಾರೆ ಸಾಥ್ ಹೈಂ’, ಇಂತಹ ಘೋಷಣೆಗಳನ್ನು ನೀಡುತ್ತಾ ಮುಂದೆ ಬಂದು ನಿಮ್ಮ ಬಾಯಿ ಮುಚ್ಚಿಸುವರು; ಏಕೆಂದರೆ ಕಾಶ್ಮೀರದಲ್ಲಿ ಜನರು ಸತ್ತರೂ ಅಥವಾ ಅವರನ್ನು ಕೊಂದು ಹಾಕಿದರೂ ಏನೂ ಆಗುವುದಿಲ್ಲ. ಹಿಂದುತ್ವದ ಹೆಸರಿನ ಕಾಲ್ಪನಿಕ ಅಪಾಯ ಮಾತ್ರ ನಿರ್ಮಾಣವಾಗಬಾರದು. ದೇಶವನ್ನು ಈ ಪೆಡಂಭೂತ ದಿಂದ ಸುರಕ್ಷಿತವಾಗಿಡುವುದು ಆವಶ್ಯಕವಾಗಿದೆ ಎಂಬುದು ಪುರೋಗಾಮಿಗಳ ಪ್ರಯತ್ನವಾಗಿದೆ.
೩. ಝಾಕೀರ್ ನಾಯಿಕ್ ಅಥವಾ ಕಾಶ್ಮೀರದ ಗಲಭೆಕೋರರು ಹಿಂದುತ್ವವಾದಿಗಳಲ್ಲ, 
ಹಾಗಾಗಿ ಅವರ ವಿರುದ್ಧ ಮಾತನಾಡುವುದು ಪುರೋಗಾಮಿ ಬುದ್ಧಿವಾದಕ್ಕೆ ಹೊಂದಾಣಿಕೆಯಾಗುವುದಿಲ್ಲ
ಯಾವುದೇ ಮನುಷ್ಯನಿಗೆ ಪ್ರೇಮ ಅಥವಾ ದ್ವೇಷ ಈ ಎರಡು ವಿಷಯಗಳು ಪ್ರೇರಣೆಯನ್ನು ನೀಡುತ್ತವೆ. ಪ್ರೇಮದಲ್ಲಿ ಸಿಲುಕಿಕೊಂಡ ಮನುಷ್ಯನು ಏನನ್ನೂ ಮಾಡಲು ಸಿದ್ಧನಿರುತ್ತಾನೆ. ಅದೇ ರೀತಿ ದ್ವೇಷದಲ್ಲಿ ಸಿಲುಕಿದ ಮನುಷ್ಯನು ಯಾವುದೇ ಹಂತಕ್ಕೆ ಹೋಗಬಹುದು, ಭಾರತೀಯ ಪುರೋಗಾಮಿಗಳು ಹಿಂದೂ ಶಬ್ದದ ದ್ವೇಷಕ್ಕೆ ಬಲಿಯಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ. ಆದುದರಿಂದ ಝಾಕೀರ್ ನಾಯಿಕ್ ಅಥವಾ ಕಾಶ್ಮೀರದ ಗಲಭೆಕೋರರು ಹಿಂದುತ್ವದ ವಿರುದ್ಧವಿದ್ದರೆ ಅವರು ತಾವಾಗಿಯೇ ಪುರೋಗಾಮಿಗಳಾಗುತ್ತಾರೆ. ಸಹಜವಾಗಿಯೇ ಇಲ್ಲಿನ ಪುರೋಗಾಮಿಗಳು ಅವರ ಬೆಂಬಲಕ್ಕೆ ಮುಂದೆ ಬಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಅದರಲ್ಲಿ ವ್ಯತ್ಯಾಸವಿಷ್ಟೇ, ಅವರ ವಿರುದ್ಧ ಮಾತನಾಡುವವರು ಗಡಿಬಿಡಿಯಿಂದ ಮತ್ತು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾರೆ. ಪುರೋಗಾಮಿಗಳು ಜನ್ಮದಿಂದಲೇ ಬುದ್ಧಿಜೀವಿಗಳಾಗಿರುವುದರಿಂದ ತೊಟ್ಟಿಲಿನಲ್ಲಿಯೂ ಅಳುವುದಕ್ಕಿಂತ ಯುಕ್ತಿವಾದವನ್ನೇ ಮಾಡುವವ ರಾಗಿರುತ್ತಾರೆ. ಅಪರಾಧವಿದ್ದರೆ, ಪುರಾವೆ ನೀಡಿ ಅಪರಾಧವನ್ನು ಸಿದ್ಧಪಡಿಸಿರಿ ಮತ್ತು ನೇಣುಗಂಬ ಕ್ಕೇರಿಸಿ, ಎಂಬುದು ಅವರ ಯುಕ್ತಿವಾದವಾಗಿರುತ್ತದೆ. ಎಷ್ಟು ವಾಸ್ತವಿಕವೆನಿಸುವ 
ಯುಕ್ತಿವಾದವಾಗಿದೆಯಲ್ಲ ? ಆದರೆ ಆರೋಪಿ ಹಿಂದುತ್ವವಾದಿಯಾಗಿದ್ದರೆ, ಈ ಯುಕ್ತಿವಾದ ಅವಾಸ್ತವವಾಗುತ್ತದೆ. ಆಗ ಪುರಾವೆ ಅಥವಾ ಅದು ನ್ಯಾಯಾಲಯದಲ್ಲಿ ಸಿದ್ಧವಾಗುವ ಅವಶ್ಯಕತೆಯೇ ಇರುವುದಿಲ್ಲ. ತಕ್ಷಣ ಅವನನ್ನು ಬಂಧಿಸಬೇಕೆಂಬ ಬೇಡಿಕೆ ಆರಂಭವಾಗುತ್ತದೆ. ಇದಕ್ಕೆ ಪುರೋಗಾಮಿ ಬುದ್ಧಿವಾದವೆಂದು ಹೇಳುತ್ತಾರೆ. ಅದರಲ್ಲಿ ಝಾಕೀರ್ ನಾಯಿಕ್ ಅಥವಾ ಕಾಶ್ಮೀರದ ಗಲಭೆಕೋರರು ಹಿಂದುತ್ವವಾದಿಗಳು ಆಗಿರದಿದ್ದರೆ, ಅವರ ವಿರುದ್ಧ ಹೇಗೆ ಮಾತನಾಡುವುದು ? ಈ ಜನರೇ ಕರ್ನಲ್ ಪುರೋಹಿತ ಅಥವಾ ಸಾಧ್ವಿ ಪ್ರಜ್ಞಾಸಿಂಗ್ ಇವರ ಉದಾಹರಣೆಯನ್ನು ನೀಡುತ್ತಿರುತ್ತಾರೆ; ಆದರೆ ೮ ವರ್ಷಗಳ ನಂತರವೂ ಅವರ ವಿರುದ್ಧ ಒಂದೂ ಪುರಾವೆ ತರದೇ ಇರುವಾಗ ಅವರು ಮೌನ ದಿಂದಿರುತ್ತಾರೆ. ಅವರನ್ನೂ ಪುರಾವೆಯಿಲ್ಲದೆ ಏಕೆ ಬಂಧನದಲ್ಲಿಡಲಾಯಿತು ? ಎಂಬ ಒಂದು ಶಬ್ದವನ್ನೂ ಯಾವುದೇ ಪುರೋಗಾಮಿಯಿಂದ ಎಲ್ಲಿಯಾದರೂ ಕೇಳಿದ್ದೀರಾ ? ಆದರೆ ಝಾಕೀರ್ ನಾಯಿಕನನ್ನು ಮುಟ್ಟುವ ಮೊದಲು ಯೋಗ್ಯ ಪುರಾವೆಗಳ ಆವಶ್ಯಕತೆ ಇರುತ್ತದೆ.
೪. ಪುರೋಗಾಮಿಗಳ ನಿಯಮಕ್ಕನುಸಾರ ಯಾವುದರಲ್ಲಿಯೂ 
ಹಿಂದೂ ಶಬ್ದ ಬಂದರೆ, ಅದು ತಾನಾಗಿಯೇ ಅಪರಾಧವಾಗುತ್ತದೆ !
ಇಂದು ಹಿಂದೂ ಆಗಿರುವುದು ಅಥವಾ ಹಿಂದೂ ಆಚರಣೆಗಳನ್ನು ಪಾಲಿಸುವುದು ಅನಧಿಕೃತವಾಗಿ ಮೂರ್ಖತನವೆಂದು ನಂಬಲಾಗಿದೆ. ಆದ್ದರಿಂದ ಯಾವುದರಲ್ಲಿಯೂ ಹಿಂದೂ ಶಬ್ದ ಬಂದರೆ, ತನ್ನಿಂತಾನೇ ಅಪರಾಧವಾಗುತ್ತದೆ. ಅದಕ್ಕಾಗಿ ಯಾವುದೇ ಪುರಾವೆ ಗಳ ಅಥವಾ ಖಟ್ಲೆಯ ಆವಶ್ಯಕತೆಯಿರುವುದಿಲ್ಲ. ತದ್ವಿರುದ್ಧ ಯಾವುದರಲ್ಲಿ ಹಿಂದೂ ಎಂದು ಏನೂ ಇರುವುದಿಲ್ಲವೋ, ಅದು ತನ್ನಿಂತಾನೇ ನಿರ್ದೋಷಿ ಯಾಗುತ್ತದೆ. ಈ ಹೊಸ ನಿಷ್ಕರ್ಷ ಹಾಗೂ ಬುದ್ಧಿವಾದ ವನ್ನು ಗಮನದಲ್ಲಿಟ್ಟುಕೊಂಡರೆ ಝಾಕೀರ್ ನಾಯಿಕ್ ಇವರ ಯಾವ ಅಪರಾಧ ಬಾಕಿ ಉಳಿಯುತ್ತದೆ  ಹೇಳಿ ? ಅವನ್ಯಾರೋ ಬುರ್ಹಾನ ವಾನಿ ಹಿಂಸೆಯನ್ನು ಮಾಡುತ್ತಿರಬಹುದು ಹಾಗೂ ನಿರಪರಾಧಿಗಳ ಜೀವ ತೆಗೆದುಕೊಳ್ಳುತ್ತಿರಬಹುದು; ಆದರೆ ಅವನು ಹಿಂದುತ್ವದ ಧ್ವಜವನ್ನು ಹೆಗಲಮೇಲೆ ಎತ್ತಿಕೊಂಡಿಲ್ಲವಲ್ಲ ? ಅವನು ಹಿಂದೂ ಅಲ್ಲವಲ್ಲ ? ಅವನು ಹಿಂದೂ ಧರ್ಮದ ಹೆಸರಿನಲ್ಲಿ ಯಾರ ಕತ್ತನ್ನೂ ಹಿಸುಕಲಿಲ್ಲವಲ್ಲ ? ಹೀಗಿರುವಾಗ ಅವನ ಯಾವುದೇ ಕೃತಿಯನ್ನು ಅಪರಾಧವೆಂದು ಹೇಗೆ ಒಪ್ಪಿಕೊಳ್ಳುವುದು ? ಝಾಕೀರ್ ನಾಯಿಕ್ ಹಿಂದೂಗಳ ಗ್ರಂಥ ಅಥವಾ ಆಚರಣೆಗಳನ್ನು ಹೀಯಾಳಿಸುತ್ತಾನೆ, ಆದ್ದರಿಂದ ಅವನು ತನ್ನಿಂತಾನೇ ಪುರೋಗಾಮಿ ಆಗುತ್ತಾನಲ್ಲವೇ ? ಇದನ್ನು ತಿಳಿದು ಕೊಂಡರೆ ನಮ್ಮ ದೇಶದಲ್ಲಿ ಇಂದಿನ ಬುದ್ಧಿವಾದ ಎಂದರೇನು ತಿಳಿಯುವುದು. ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಬೈಯ್ಯಲಾಗುತ್ತದೆ ಹಾಗೂ ಸಂಘದ ಮೇಲೆ ಏಕೆ ಪ್ರಹಾರ ಮಾಡಲಾಗುತ್ತದೆ, ಎಂಬುದು ಅರಿವಾಗಬಹುದು. ಇದು ದಿನದಲ್ಲಿ ೫ ಬಾರಿ ಪ್ರಾರ್ಥನೆ ಮಾಡಿದಂತೆ, ಈ ಪುರೋಗಾಮಿಗಳ ನಂಬಿಕೆಯಾಗಿದೆ. ಹಿಂದೂಗಳ ಹತ್ಯೆ ಮಾಡುವುದು ಜಿಹಾದಿಗಳ ಮೂಲಭೂತ ಹಕ್ಕೆಂದು ತಿಳಿಯು ವುದು. ಕಲ್ಪನೆಯ ವಿಶ್ವದಲ್ಲಿ ರಮಿಸುವಾಗ ಎಲ್ಲ ವಿಷಯಗಳು ಸಹಜವಾಗಿ ಸರಾಗವಾಗಿ ನಡೆಯು ತ್ತವೆ. ವಿವೇಕಬುದ್ಧಿಯನ್ನು ಒತ್ತೆಯಿಡುವ ಸ್ವಲ್ಪ ಧೈರ್ಯ ನಿಮ್ಮಲ್ಲಿ ಬೇಕು. ಹಾಗೆ ಮಾಡಿದರೆ ನೀವು ಬುದ್ಧಿಜೀವಿಯಾಗುವಿರಿ ಹಾಗೂ ಎದೆ ಉಬ್ಬಿಸಿ ‘ಝಾಕೀರ್ ನಾಯಿಕ್ ಆಗೆ ಬಡೋ, ಬುರ್ಹಾನ ವಾನಿ ಆಗೆ ಬಡೋ...’ ಎಂದು ನೀವು ಸಹ ಗರ್ಜಿಸುವಿರಿ,!
- ಶ್ರೀ. ಭಾವೂ ತೋರ್ಸೆಕರ್, ಹಿರಿಯ ಪತ್ರಕರ್ತರು, ಮುಂಬಯಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಝಾಕೀರ್ ನಾಯಿಕ್ ಆಗೆ ಬಡೋ...!