ಉತ್ತರಪ್ರದೇಶದಲ್ಲಿ ಭಾಜಪದ ಭಿತ್ತಿಪತ್ರದಲ್ಲಿ ನೆಹರೂಗೆ ಸ್ಥಾನ ಆದರೆ, ಡಾ. ಶ್ಯಾಮಪ್ರಸಾದ ಮುಖರ್ಜಿ ವರ್ಜ್ಯ !

ಗಾಂಧಿಯಷ್ಟೇ ನೆಹರೂ ಸಹ ತಪ್ಪು ಮಾಡಿ
ದೇಶವನ್ನು ವಿನಾಶದ ಕೂಪಕ್ಕೆ ತಳ್ಳಿರುವಾಗ ಅವರ ವೈಭವೀಕರಣವೇಕೆ ?
ಬಾರಾಂಬಕಿ (ಉತ್ತರಪ್ರದೇಶ) : ಇತ್ತೀಚೆಗೆ ನೆರವೇರಿದ ಸ್ವಾತಂತ್ರ್ಯದಿನ ನಿಮಿತ್ತ ಭಾಜಪ ಇಲ್ಲಿ ಆಯೋಜಿಸಿದ ತಿರಂಗಾ ಯಾತ್ರೆಯ ಭಿತ್ತಿಪತ್ರಗಳಲ್ಲಿ ಜವಾಹರಲಾಲ್ ನೆಹರೂಗೆ ಮುಖ್ಯ ಸ್ಥಾನ ನೀಡಿತ್ತು. ಆದ್ದರಿಂದ ಅನೇಕರ ಹುಬ್ಬು ಮೇಲೇ ರಿತ್ತು. ಆದ್ದರಿಂದ ಈಗ ಭಾಜಪಕ್ಕೆ ಮೋಹನದಾಸ ಗಾಂಧಿ ನಂತರ ನೆಹರೂ ಆದರ್ಶ ನಾಯಕರಾಗಿ ದ್ದಾರೆಯೇ ? ಎಂಬ ಪ್ರಶ್ನೆ ವಿಚಾರಿಸಲಾಗುತ್ತಿದೆ.
ಈ ಭಿತ್ತಿಪತ್ರದಲ್ಲಿ ಲಾಲಬಹಾದ್ದೂರ್ ಶಾಸ್ತ್ರಿಗೂ ಸ್ಥಾನ ನೀಡಲಾಗಿದೆ. ಆದರೆ ಭಾಜಪ ಯಾರ ಆದರ್ಶವನ್ನಿಟ್ಟುಕೊಂಡಿದೆಯೋ, ಆ ಡಾ. ಶ್ಯಾಮಪ್ರಸಾದ ಮುಖರ್ಜಿಯವರನ್ನು ಮಾತ್ರ ಭಿತ್ತಿಪತ್ರಗಳಿಂದ ದೂರವಿಡಲಾಗಿದೆ. ಭಾಜಪದಲ್ಲಿ ಯಾರೂ ಆದರ್ಶ ನಾಯಕರಿಲ್ಲದ ಕಾರಣ ಅವರಿಗೆ ಕಾಂಗ್ರೆಸ್ ನಾಯಕ ರನ್ನು ಬಿಟ್ಟರೆ ಪರ್ಯಾಯವಿಲ್ಲ, ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉತ್ತರಪ್ರದೇಶದಲ್ಲಿ ಭಾಜಪದ ಭಿತ್ತಿಪತ್ರದಲ್ಲಿ ನೆಹರೂಗೆ ಸ್ಥಾನ ಆದರೆ, ಡಾ. ಶ್ಯಾಮಪ್ರಸಾದ ಮುಖರ್ಜಿ ವರ್ಜ್ಯ !