ಸನಾತನವು ಪ್ರಾರಂಭಿಸಿದ ರಾಷ್ಟ್ರಹಿತದ ಕಾರ್ಯಕ್ರಮಗಳು

ಸದ್ಗುರು (ಕು.) ಅನುರಾಧಾ ವಾಡೇಕರ
ಸನಾತನವು ೧೦-೧೫ ವರ್ಷಗಳ ಹಿಂದೆಯೇ ದೂರದೃಷ್ಟಿಯಿಂದ ಸ್ವಸಂರಕ್ಷಣಾ ತರಬೇತಿ, ಪ್ರಥಮೋಪಚಾರ ತರಬೇತಿ, ಆಪತ್ಕಾಲೀನ ಸಹಾಯದ ತರಬೇತಿವರ್ಗ ಹಾಗೂ ಅಗ್ನಿಶಾಮಕ ತರಬೇತಿವರ್ಗ ಮುಂತಾದ ರಾಷ್ಟ್ರಹಿತ ಕಾರ್ಯಕ್ರಮಗಳನ್ನು ಆರಂಭಿಸಿದೆ. ಈ ವಿಷಯದಲ್ಲಿ ಸನಾತನದ ವತಿಯಿಂದ ವಿವಿಧ ಗ್ರಂಥಗಳು ಸಹ ಪ್ರಕಾಶಿತಗೊಂಡಿವೆ. ಈಗಲೂ ಸನಾತನದ ಸಾಧಕರು ಇತರ ಸಂಘಟನೆಗಳ ವತಿಯಿಂದ ನಡೆಸುವ ವಿವಿಧ ರಾಷ್ಟ್ರಹಿತದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
ಸಂಕಲನ : ಸದ್ಗುರು (ಕು.) ಅನುರಾಧಾ ವಾಡೇಕರ, ಪ್ರಚಾರಸೇವಕರು, ಸನಾತನ ಸಂಸ್ಥೆ


. ಪ್ರಥಮೋಪಚಾರ ತರಬೇತಿವರ್ಗ
ಪ್ರಥಮೋಪಚಾರ ತರಬೇತಿವರ್ಗದ ಪ್ರಾತ್ಯಕ್ಷಿಕೆ
ಯಾವುದೇ ವ್ಯಕ್ತಿಗೆ ಅಪಘಾತವಾದಾಗ, ಅಕಸ್ಮಿಕವಾಗಿ ತೊಂದರೆಗೊಳಗಾದರೆ ಅಥವಾ ವ್ಯಕ್ತಿಯ ಮೇಲೆ ಅಕಸ್ಮಿಕವಾಗಿ ಆಪತ್ತು ಬಂದೆರಗಿದರೆ ಅವನಿಗೆ ಸಹಾಯ ಮಾಡುವುದು ಮತ್ತು ಆ ವ್ಯಕ್ತಿಯ ಪ್ರಾಣವನ್ನು ರಕ್ಷಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೇ ಆಗಿದೆ ಹಾಗೂ ಇದು ಸಮಾಜಋಣವನ್ನು ತೀರಿಸುವ ಒಂದು ಭಾಗವೇ ಆಗಿದೆ. ಈ ದೃಷ್ಟಿಯಿಂದ ಸಂಸ್ಥೆಯ ವತಿಯಿಂದ ಅನೇಕ ಸ್ಥಳಗಳಲ್ಲಿ ಪ್ರಥಮೋಪಚಾರ ತರಬೇತಿವರ್ಗವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅಕಸ್ಮಿಕವಾಗಿ ತೊಂದರೆಗೊಳಗಾದ ವ್ಯಕ್ತಿಗೆ ಪ್ರಥಮೋಪಚಾರ ಹೇಗೆ ಮಾಡುವುದು ಮತ್ತು ಹೇಗೆ ಪರೀಕ್ಷಿಸಬೇಕು, ಎನ್ನುವುದನ್ನು ಕಲಿಸುವುದರ ಜೊತೆಗೆ ವಿವಿಧ ರೀತಿಯ ಗಾಯಗಳು ಮತ್ತು ಆಪತ್ತುಗಳ ಕುರಿತು ಸವಿಸ್ತಾರವಾಗಿ ಮಾಹಿತಿಯನ್ನು ನೀಡಲಾಗುತ್ತದೆ. ಹಾಗೆಯೇ ಯಾವ ತೊಂದರೆಗೆ ಯಾವ ರೀತಿಯ ಪ್ರಥಮೋಪಚಾರ ನೀಡಬೇಕೆನ್ನುವುದನ್ನು ಸನಾತನವು ಕೃತಿಯ ಮೂಲಕ ಮಾಡಿ ಕಲಿಸುತ್ತದೆ. ಈ ವಿಷಯದಲ್ಲಿ ಇತ್ತೀಚೆಗಷ್ಟೇ ಜುಲೈ ೨೦೧೬ ರಲ್ಲಿ ‘ಪ್ರಥಮೋಪಚಾರ ತರಬೇತಿ’ ಈ ಸನಾತನದ ಗ್ರಂಥವನ್ನು ಪ್ರಕಾಶಿಸಿದೆ.
. ಆಪತ್ಕಾಲದಲ್ಲಿ ಸಹಾಯಕವಾಗುವ ತರಬೇತಿವರ್ಗ
ಆಪತ್ಕಾಲೀನ ಸಹಾಯ ತರಬೇತಿ 
ವರ್ಗದಲ್ಲಿ ಸಹಭಾಗಿಯಾದ ಪ್ರಶಿಕ್ಷಣಾರ್ಥಿಗಳು
ನೆರೆಹಾವಳಿ, ಬಿರುಗಾಳಿ, ಭೂಕಂಪ, ಜ್ವಾಲಾಮುಖಿ ಮುಂತಾದ ನೈಸರ್ಗಿಕ ವಿಪತ್ತುಗಳು ಹಾಗೂ ಯುದ್ಧಸದೃಶ ಪರಿಸ್ಥಿತಿಯಲ್ಲಿ ಅಥವಾ ಅರಾಜಕತೆ ಎದುರಾದಾಗಲೂ ಮಾನವನ ಜೀವನವು ಆಪತ್ತಿಗೆ ಸಿಲುಕ ಬಹುದು. ದೇಶದ ಸಮಾಜವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿದೆ. ರಾಷ್ಟ್ರರಕ್ಷಣೆ, ಅರ್ಥವ್ಯವಸ್ಥೆ, ಯುದ್ಧಗಳಂತಹ ಸ್ಫೋಟಕ ಪರಿಸ್ಥಿತಿಯಲ್ಲಿ ದೇಶದ್ರೋಹಿ ಕೃತ್ಯಗಳು ಹೆಚ್ಚುತ್ತಿರುವುದು ಮುಂತಾದ ದೊಡ್ಡ ಘಟನೆಗಳು ಮುಂಬರುವ ಕಾಲಾವಧಿಯಲ್ಲಿ ಮಾನವನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಕಾಲದಲ್ಲಿ ಒಂದು ವೇಳೆ ನಮ್ಮ ಮೇಲೆ ಯಾವುದಾದರೂ ಆಪತ್ತು ಬಂದೆರಗಿದರೆ, ಆ ಸಂದರ್ಭದಲ್ಲಿ ಅದನ್ನು ಎದುರಿಸಲು ನಮಗೆ ಸರಕಾರದ ಸಹಾಯ ಅಥವಾ ಆವಶ್ಯಕವಿರುವ ವೈದ್ಯಕೀಯ ಸೌಲಭ್ಯ ಮತ್ತು ಇತರ ಸಹಾಯ, ಸಾಧನಾಸಾಮಾಗ್ರಿಗಳು ಎಷ್ಟರ ಮಟ್ಟಿಗೆ ದೊರೆಯಬಹುದು ? ಈ ದೃಷ್ಟಿದಿಂದ ಸನಾತನವು ‘ಆಪತ್ಕಾಲೀನ ಸಹಾಯಕ ತರಬೇತಿವರ್ಗ ಶಿಬಿರವನ್ನು ಆಯೋಜಿಸುತ್ತದೆ. ಈ ತರಬೇತಿವರ್ಗದಲ್ಲಿ ಮಾನವನಿಗೆ ಎದುರಾಗ ಬಹುದಾದ ಬೇರೆ ಬೇರೆ ಆಪತ್ತುಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡುವುದರ ಜೊತೆಗೆ ಪ್ರತಿಯೊಂದು ಆಪತ್ತಿನಲ್ಲಿಯೂ ಸಹಾಯವನ್ನು ಹೇಗೆ ಮಾಡಬೇಕು ಎನ್ನುವುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿ ಮಾರ್ಗದರ್ಶನ ಮಾಡಲಾಗುತ್ತದೆ. ೨೦೧೩ ರಲ್ಲಿ ಉತ್ತರಾಖಂಡದಲ್ಲಿ ಉಂಟಾದ ಮಹಾಪ್ರಳಯ, ೨೦೧೫ ರಲ್ಲಿ ನೇಪಾಳದಲ್ಲಾದ ಭೂಕಂಪ, ಇಂತಹ ಆಪತ್ತಿನಲ್ಲಿ ಇತರ ಸಮವಿಚಾರಿ ಸಂಘಟನೆಗಳೊಂದಿಗೆ ಸನಾತನದ ಸಾಧಕರೂ ಸಹಾಯ ಕಾರ್ಯದಲ್ಲಿ ಭಾಗವಹಿಸಿದ್ದರು.
. ಅಗ್ನಿಶಾಮಕ ತರಬೇತಿವರ್ಗ
ಅಗ್ನಿಶಾಮಕ
 ಪ್ರಾತ್ಯಕ್ಷಿಕೆ ತೋರಿಸುತ್ತಿರುವ ಪ್ರಶಿಕ್ಷಕ
ಅಲ್ಪಾವಧಿಯಲ್ಲಿಯೇ ಪ್ರಚಂಡ ಜೀವ ಹಾಗೂ ಧನಹಾನಿ ಮಾಡುವ ಅಗ್ನಿಪ್ರಳಯದಿಂದ ಪಾರಾಗುವುದು, ಆದರೆ ಇಂತಹ ಆಪತ್ತು ಎಂದೂ ಉದ್ಭವಿಸಬಾರದೆಂದು ಎಚ್ಚರಿಕೆ ಯನ್ನು ವಹಿಸಿ ಸೂಕ್ತ ಕ್ರಮವನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಸ್ವಾತಂತ್ರ್ಯದ ನಂತರದ ಶಾಲೆಯ ಅಥವಾ ಮಹಾವಿದ್ಯಾಲಯದ ಶೈಕ್ಷಣಿಕ ಪಠ್ಯಪುಸ್ತಕಗಳಲ್ಲಿ ಇಂತಹ ಯಾವುದೇ ವಿಷಯಗಳ ಬಗ್ಗೆ ಅಥವಾ ಇತರ ಆಪತ್ತುಗಳು ಎದುರಾದಾಗ ಜನರು ಹೇಗೆ ವರ್ತಿಸಬೇಕು ಎಂಬುದನ್ನು ನಾಗರಿಕರಿಗೆ ಕಲಿಸಲಿಲ್ಲ. ಈ ಜ್ಞಾನದ ಅಭಾವದಿಂದಾಗಿಯೇ ಜನಸಾಮಾನ್ಯರು ಇಂತಹ ಆಪತ್ತುಗಳು ಎದುರಾದಾಗ ಧೈರ್ಯ ಕಳೆದುಕೊಂಡು ಏನೂ ತೋಚದಂತೆ ವರ್ತಿಸುತ್ತಾರೆ. ಸನಾತನದ ವತಿಯಿಂದ ಆಯೋಜಿಸ ಲಾಗುವ ಅಗ್ನಿಶಾಮಕ ತರಬೇತಿವರ್ಗದಲ್ಲಿ ಇಂತಹ ಆಪತ್ತುಗಳನ್ನು ಧೈರ್ಯದಿಂದ ಹಾಗೆಯೇ ಸರಿಯಾದ ಕ್ರಮದಲ್ಲಿ ಎದುರಿಸುವುದನ್ನು ಕಲಿಸಲಾಗುತ್ತದೆ. ಈ ತರಬೇತಿವರ್ಗದಲ್ಲಿ ಬೆಂಕಿ ಹತ್ತುವ ಹಾಗೂ ಅದು ಹರಡುವ ವಿವಿಧ ಕಾರಣಗಳನ್ನು ತಿಳಿಸಲಾಗುತ್ತದೆ. ಬೆಂಕಿ ನೋಡಿದ ತಕ್ಷಣ ಮೊದಲು ಯಾವ ಕ್ರಮಕೈಗೊಳ್ಳಬೇಕು ಎಂದು ಕಲಿಸಲಾಗುತ್ತದೆ. ಬೆಂಕಿ ನಂದಿಸುವ ಬೇರೆ ಬೇರೆ ಪದ್ಧತಿಗಳು, ಇದಕ್ಕಾಗಿ ಆವಶ್ಯಕವಿರುವ ವಿವಿಧ ಮಾಧ್ಯಮಗಳೂ ಹಾಗೂ ಅವುಗಳನ್ನು ಉಪಯೋಗಿಸುವ ಪದ್ಧತಿ, ಬೆಂಕಿನಂದಿಸುವ ವಿವಿಧ ಪ್ರಕಾರಗಳನ್ನು ಅಯೋಗ್ಯವಾಗಿ ಉಪಯೋಗಿಸುವುದರಿಂದಾಗುವ ದುಷ್ಪರಿಣಾಮ ಗಳು ಮುಂತಾದವುಗಳ ಕುರಿತು ಸವಿಸ್ತಾರವಾಗಿ ಮಾರ್ಗದರ್ಶನವನ್ನು ಮಾಡಲಾಗುತ್ತದೆ. ಬೆಂಕಿಹತ್ತಿದಾಗ ಬೆಂಕಿ ನಂದಿಸುವುದು ಮತ್ತು ಸುರಕ್ಷತೆಯ ಉಪಾಯ ಕ್ರಮವನ್ನು ಹೇಗೆ ಆಯೋಜಿಸಬೇಕು. ಎನ್ನುವುದನ್ನು ಈ ತರಬೇತಿವರ್ಗದಲ್ಲಿ ಪ್ರಾಯೋಗಿಕವಾಗಿಯೂ ಕಲಿಸಲಾಗುತ್ತದೆ. ಈ ವಿಷಯದ ಕುರಿತು ಸನಾತನವು ‘ಅಗ್ನಿಶಾಮಕ ತರಬೇತಿ’ ಹೆಸರಿನ ಗ್ರಂಥವನ್ನು ೨೦೦೪ ರಲ್ಲಿಯೇ ಪ್ರಕಟಸಿದೆ.
. ರಾಷ್ಟ್ರಧ್ವಜದ ಅಪಮಾನವನ್ನು ತಡೆಯಿರಿ ಚಳುವಳಿ
ದೇಶದ ಗೌರವದ ಸಂಕೇತವಾಗಿರುವ ರಾಷ್ಟ್ರಧ್ವಜದ ಅಪಮಾನವನ್ನು ತಡೆಗಟ್ಟಲು ಸನಾತನವು ಮುಂದಾಳತ್ವ ವಹಿಸಿ ಪ್ರಯತ್ನಿಸಿದೆ. ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನದಂದು ಹಾಗೂ ಜನವರಿ ೨೬ ರ ಗಣರಾಜ್ಯೋತ್ಸವದಂದು ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟವಾಗುತ್ತದೆ. ಆದರೆ ಮರುದಿನ ಆ ರಾಷ್ಟ್ರಧ್ವಗಳು ಕಸದಲ್ಲಿ ಅಥವಾ ಎಲ್ಲಿಯಾದರೂ ಚರಂಡಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ಹೀಗಾಗಬಾರದೆಂದು ಸನಾತನವು ಸಮವಿಚಾರಿ ಸಂಘಟನೆಗಳೊಂದಿಗೆ ಸೇರಿ ಅನೇಕ ವರ್ಷಗಳಿಂದ ‘ರಾಷ್ಟ್ರ ಧ್ವಜದ ಅಪಮಾನವನ್ನು ತಡೆಗಟ್ಟಿರಿ’ ಅಭಿಯಾನವನ್ನು ನಡೆಸುತ್ತಿದೆ. ರಾಷ್ಟ್ರಧ್ವಜದ ಅಪಮಾನವನ್ನು ತಡೆಗಟ್ಟಲು ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡುವುದು, ಸರಕಾರಕ್ಕೆ ಮನವಿಯನ್ನು ಸಲ್ಲಿಸುವುದು, ಅಂಗಡಿಯವರಿಗೆ ಪ್ಲಾಸ್ಟಿಕ್ ರಾಷ್ಟ್ರಧ್ವಜ ಗಳನ್ನು ಮಾರಾಟ ಮಾಡದಂತೆ ಬೋಧನೆ ಮಾಡುವುದು, ಹಾಗೆಯೇ ಮರು ದಿನ ರಸ್ತೆಯ ಮೇಲೆ ಬಿದ್ದಿರುವ ರಾಷ್ಟ್ರಧ್ವಜವನ್ನು ಒಂದೆಡೆ ಸೇರಿಸಿ ಅವುಗಳನ್ನು ವಿಸರ್ಜಿಸುವುದು ಈ ರೀತಿಯ ಕಾರ್ಯವನ್ನು ಸನಾತನವು ಈ ಸಂದರ್ಭದಲ್ಲಿ ಮಾಡುತ್ತದೆ.
No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನವು ಪ್ರಾರಂಭಿಸಿದ ರಾಷ್ಟ್ರಹಿತದ ಕಾರ್ಯಕ್ರಮಗಳು