ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ೨,೨೨೮ ಪೊಲೀಸರು ಹಾಗೂ ೧,೧೦೦ ಕ್ಕಿಂತ ಹೆಚ್ಚು ಕೇಂದ್ರೀಯ ಮೀಸಲು ಪಡೆಯ ಸೈನಿಕರಿಗೆ ಗಾಯ !

ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವಿರಾರು ಪೊಲೀಸರು ಮತ್ತು ಸೈನಿಕರು ಗಾಯಗೊಳ್ಳುವಂತೆ ಮಾಡುವ ಭಾರತವು ಶತ್ರುಗಳು ಆಕ್ರಮಣ ಮಾಡಿದ ಸಮಯದಲ್ಲಿ ಹೇಗೆ ಎದುರಿಸಬಲ್ಲದು ?
ಬುರ್ಹಾನ್ ವಾನಿಯನ್ನು ಬೆಂಬಲಿಸಿ ದೇಶದ್ರೋಹಿಗಳು ಮಾಡಿದ ಹಿಂಸಾಚಾರದ ಪ್ರಕರಣದಲ್ಲಿ ಗಾಯಗೊಂಡ ಪೊಲೀಸರು ಹಾಗೂ ಸೈನಿಕರ ಬಗ್ಗೆ ಮಾಧ್ಯಮಗಳ ನಿರ್ಲಕ್ಷ್ಯ
ಶ್ರೀನಗರ : ಸೇನೆಯು ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಹತ್ಯೆಗೈದ ಬಳಿಕ ಕಾಶ್ಮೀರದಲ್ಲಿ ಬೃಹತ್ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ಹಿಂಸಾಚಾರದಲ್ಲಿ ಅನೇಕ ಕಾಶ್ಮೀರಿಗಳು ಗಾಯ ಗೊಂಡಿರುವುದಾಗಿ ಹೇಳಲಾಗುತ್ತಿದೆ ಆದರೆ ಅವರ ಕಲ್ಲೆಸೆತದಿಂದ ಜಮ್ಮೂ ಕಾಶ್ಮೀರದ ಪೊಲೀಸರು ಹಾಗೂ ಗಡಿ ಭದ್ರತಾ ದಳದ ಸೈನಿಕರೂ ಗಾಯಗೊಂಡಿದ್ದಾರೆ ಎನ್ನುವುದನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜಕಾರಣ ಹಾಗೂ ಬೃಹತ್ಪ್ರಮಾಣದಲ್ಲಿ ಆಂದೋಲನಕಾರರ ವಿರೋಧದಿಂದಾಗಿ ಸೈನಿಕರಿಗೆ ವೈದ್ಯಕೀಯ ಉಪಚಾರವನ್ನು ಒದಗಿಸುವಲ್ಲಿಯೂ ಅಡೆತಡೆಗಳು ಎದುರಾಗುತ್ತಿದೆ. ಈ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ೨ ಸಾವಿರ ೨೫೯ ಅಂದೋಲನಕಾರರು ಗಾಯ ಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಆದರೆ ಅವರೊಂದಿಗೆ ೨ ಸಾವಿರ ೨೨೮ ಪೊಲೀಸರು ಹಾಗೂ ೧ ಸಾವಿರದ ೧೦೦ ಕ್ಕಿಂತ ಅಧಿಕ ಕೇಂದ್ರೀಯ ಮೀಸಲು ಪಡೆಯ ಸೈನಿಕರು ಸಹ ಗಾಯಗೊಂಡಿದ್ದಾರೆ. ಈಗಲೂ ಗಂಭೀರವಾಗಿ ಗಾಯಗೊಂಡಿರುವ ಕೇಂದ್ರೀಯ ಮೀಸಲು ಪಡೆಯ ೧೨ ಸೈನಿಕರು ಹಾಗೂ ೮ ಪೊಲೀಸರ ಚಿಕಿತ್ಸೆ ನಡೆಯುತ್ತಿದೆ. ಹೆಚ್ಚಿನ ಸೈನಿಕರು ಕಲ್ಲೆಸೆತ ಹಾಗೂ ಗ್ರೆನೇಡ್ ಆಕ್ರಮಣದಿಂದಾಗಿ ಗಾಯ ಗೊಂಡಿದ್ದಾರೆ. (ಇಂದು ಕಲ್ಲು ಹಾಗೂ ಗ್ರೆನೇಡಗಳಿಂದ ಆಕ್ರಮಣ ಮಾಡುವ ಕಾಶ್ಮೀರಿ ಮತಾಂಧರು ನಾಳೆ ಸೈನಿಕರ ಮೇಲೆ ಗುಂಡು ಹಾರಿಸಲೂ ಹಿಂಜರಿಯಲಾರರು ಎನ್ನುವುದನ್ನು ಅರಿತು ಸಮಯವಿರುವಾಗಲೇ ಎಚ್ಚೆತ್ತು ಅವರನ್ನು ಹದ್ದುಬಸ್ತಿನಲ್ಲಿಡಬೇಕು. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ೨,೨೨೮ ಪೊಲೀಸರು ಹಾಗೂ ೧,೧೦೦ ಕ್ಕಿಂತ ಹೆಚ್ಚು ಕೇಂದ್ರೀಯ ಮೀಸಲು ಪಡೆಯ ಸೈನಿಕರಿಗೆ ಗಾಯ !