ಬಂಧನದಲ್ಲಿರುವ ೫೫ ಉಗ್ರರ ಹೇಳಿಕೆ !

ನಮಗೆ ಡಾ. ಝಾಕೀರ್ ನಾಯಿಕ್‌ರಿಂದಲೇ
ಉಗ್ರ ಚಟುವಟಿಕೆಗೆ ಪ್ರೇರಣೆ ! 
ದೇಶದ್ರೋಹಿ ಡಾ. ಝಾಕೀರ್ ನಾಯಿಕ್ ವಿರುದ್ಧ ೫೫ ಜನರಿಂದ ಸ್ಪಷ್ಟ 
ಪುರಾವೆಗಳು ದೊರೆತಿರುವಾಗ ಸರಕಾರ ತತ್ಪರತೆಯಿಂದ ಏಕೆ ಕಾರ್ಯಾಚರಣೆ ಮಾಡುವುದಿಲ್ಲ ?
ಮುಂಬಯಿ : ಉಗ್ರವಾದಿ ಚಟುವಟಿಕೆಯಲ್ಲಿ ವಿವಿಧ ಆರೋಪಗಳಲ್ಲಿ ಬಂಧಿಸಲ್ಪಟ್ಟ ೫೫ ಜನರು ಝಾಕೀರ್ ನಾಯಿಕ್ ಇವರಿಂದಾಗಿ ಪ್ರೇರಣೆ ಪಡೆದಿದ್ದೇವೆ, ಎಂದು ಹೇಳಿದ್ದಾರೆ. ಈ ಎಲ್ಲ ಆರೋಪಿಗಳು ಸಿಮಿ, ಲಷ್ಕರ್-ಎ-ತೊಯಬಾ, ಇಂಡಿಯನ್ ಮುಜಾಹಿದೀನ್ ಮತ್ತು ಐಸಿಸ್ ಈ ಸಂಘಟನೆಗಳಿಗಾಗಿ ಕಾರ್ಯ ಮಾಡುವಾಗ ಬಂಧಿಸಲ್ಪಟ್ಟಿದ್ದಾರೆ. ಇದರಲ್ಲಿ ೩ ಪೊಲೀಸರೂ ಇದ್ದಾರೆ. (ಇಂತಹ ಪೊಲೀಸರು ಇರುವ ಇಲಾಖೆಯು ಎಂದಾದರೂ ಉಗ್ರವಾದವನ್ನು ನಿರ್ನಾಮ ಮಾಡಬಹುದೇ ? - ಸಂಪಾದಕರು)
ಢಾಕಾ ಆಕ್ರಮಣದಲ್ಲಿ ಉಗ್ರವಾದಿಗಳು ಸಹ ಡಾ. ಝಾಕೀರ್ ನಾಯಿಕ್ ವಿಷಯದಲ್ಲಿ ಹೀಗೆಯೇ ಹೇಳಿದ್ದರು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಅವರ ವಿಚಾರಣೆಗೆ ಆದೇಶ ನೀಡಿದ್ದರು. ಅದಕ್ಕನುಸಾರ ಮುಂಬಯಿ ಪೊಲೀಸ್, ರಾಜ್ಯ ಉಗ್ರ ನಿಗ್ರಹ ದಳ, ಹಾಗೂ ಇತರ ಕೇಂದ್ರೀಯ ವಿಭಾಗಗಳು ಸಹ ಮಾಡಿದ ತನಿಖೆ ಯಿಂದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. (ಈಗ ಸನಾತನ ಸಂಸ್ಥೆಯ ವಿರುದ್ಧ ಮಾತನಾಡುವ ಜಾತ್ಯತೀತವಾದಿ ಗಳು ಬಾಯಿ ಮುಚ್ಚಿಕೊಂಡಿರುವುದೇಕೆ ? - ಸಂಪಾದಕರು)
೧. ‘ನಾನು ಮುಸಲ್ಮಾನ ಧರ್ಮಪ್ರಚಾರಕ ಡಾ. ಝಾಕೀರ್ ನಾಯಿಕ್ ಇವರ ಭಾಷಣದಿಂದ ಪ್ರಭಾವಿತನಾಗಿ ರಕ್ತಪಾತ ಚಟುವಟಿಕೆಗಳನ್ನು ಮಾಡಲು ಆರಂಭಿಸಿದೆ’, ಎಂಬ ಆಘಾತಕಾರಿ ಹೇಳಿಕೆಯನ್ನು ಐಸಿಸ್‌ನಲ್ಲಿ ಸೇರ್ಪಡೆಯಾಗಲು ಸಿರಿಯಾಗೆ ಹೋಗಿದ್ದ ಮಹಾರಾಷ್ಟ್ರದ ಕಲ್ಯಾಣದ ಆರಿಬ ಮಾಜೀದ್ ಕೇಂದ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದ್ದಾನೆ.
೨. ಡಾ. ಝಾಕೀರ್ ನಾಯಿಕ್ ವಿರುದ್ಧ ೩ ಅಪರಾಧಗಳು ದಾಖಲಾಗಿದ್ದು ಕೊಲ್ಹಾಪುರದಲ್ಲಿ ಒಂದು ಖಟ್ಲೆ ಬಾಕಿ ಇದೆ. ಉಗ್ರವಾದಿಗಳ ಹೇಳಿಕೆಯ ನಂತರ ತನಿಖಾ ದಳದವರು ಇನ್ನಷ್ಟು ಆಳವಾಗಿ ತನಿಖೆ ಆರಂಭಿಸಿದ್ದಾರೆ.

೩. ಎನ್‌ಐಎ ದಾಖಲಿಸಿದ ಆರೋಪಪತ್ರದಲ್ಲಿ ೧೪ ಇಸ್ಲಾಮಿಕ್ ಧರ್ಮಪ್ರಚಾರಕರನ್ನು ಉಲ್ಲೇಖಿಸಲಾಗಿದೆ. ಅವರು ಧರ್ಮಪ್ರಚಾರದ ಭಾಷಣದಲ್ಲಿ ಉಗ್ರವಾದಕ್ಕೆ ಪೂರಕ ವಾತಾವರಣ ನಿರ್ಮಿಸುತ್ತಿದ್ದಾರೆ. ಇವರು ಅಮೇರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರಿಯಾ ಮತ್ತು ಝಿಂಬಾಬ್ವೆ ಮೊದಲಾದ ದೇಶದವರಾಗಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಂಧನದಲ್ಲಿರುವ ೫೫ ಉಗ್ರರ ಹೇಳಿಕೆ !