ಶ್ರೀಗುರುಗಳ ಮನಸ್ಸನ್ನು ಅರಿತುಕೊಂಡು, ಭಾವಪೂರ್ಣ ಸೇವೆಯನ್ನು ಮಾಡುವಾಗ ಈಶ್ವರೀ ಅನುಸಂಧಾನದಲ್ಲಿರುವ ಮತ್ತು ತಮ್ಮ ಸಹಜಭಾವದಿಂದ ಎಲ್ಲರನ್ನೂ ತಮ್ಮವರನ್ನಾಗಿಸಿಕೊಳ್ಳುವ ಪೂ. (ಸೌ.) ಅಂಜಲಿ ಗಾಡಗೀಳ !

ವಿವಿಧ ಪ್ರಶ್ನೆಗಳ ಮೂಲಕ ಪೂ. (ಸೌ.) ಅಂಜಲಿ ಗಾಡಗೀಳರ ಸಾಧನೆಯ
 ಪ್ರವಾಸವನ್ನು ಬಿಚ್ಚಿಟ್ಟ ಪೂ. (ಸೌ.) ಬಿಂದಾ ಸಿಂಗಬಾಳ (ಬಲಬದಿಯಲ್ಲಿ)
ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಗಾಗಿ ಅಖಂಡ ಕಾರ್ಯನಿರತವಾಗಿರುವ ಹಾಗೂ ಸಾಕ್ಷಾತ್ ಮಹರ್ಷಿಗಳು ಗೌರವಿಸಿದ ಸನಾತನದ ಪೂ. (ಸೌ.) ಅಂಜಲಿ ಗಾಡಗೀಳ ಮತ್ತು ಪೂ. (ಸೌ.) ಬಿಂದಾ ಸಿಂಗಬಾಳ ಇವರು ಜುಲೈ ೨೪ ರಂದು ಸದ್ಗುರು ಪದವಿಯಲ್ಲಿ ವಿರಾಜಮಾನರಾದರು. ಈ ಭಾವಸಮಾರಂಭದ ವೈಶಿಷ್ಟ್ಯವೆಂದರೆ ಅವರಿಬ್ಬರೂ ಪರಸ್ಪರರಿಗೆ ಪ್ರಶ್ನೆಗಳನ್ನು ಕೇಳಿ ಆ ಮೂಲಕ ತಮ್ಮತಮ್ಮ ಸಾಧನೆಯ ಪ್ರವಾಸವನ್ನು ಬಿಚ್ಚಿಟ್ಟರು. ಈ ಸಂಭಾಷಣೆಯಿಂದ ಸನಾತನದ ಸಂತರಲ್ಲಿರುವ ದುರ್ಲಭ ಮತ್ತು ಅಮೂಲ್ಯ ಗುಣಗಳನ್ನು ಅನುಭವಿಸುವ ಅವಕಾಶವು ಸಿಕ್ಕಿತು. ಸನಾತನದ ಎಲ್ಲ ಸಾಧಕರಿಗೆ ಈ ಅಮೂಲ್ಯ ಸಂತರತ್ನಗಳ ಗುಣವೈಶಿಷ್ಟ್ಯಗಳು ತಿಳಿಯಬೇಕೆಂದು ಈ ಸಾಧನೆಯ ಪ್ರವಾಸವನ್ನು ಲೇಖನದ ಮೂಲಕ ತೆರೆದಿಡಲಾಗಿದೆ. ಶ್ರೀಕೃಷ್ಣನು ಸನಾತನದ ಸಾಧಕರಿಗೆ ಇಂತಹ ಶ್ರೇಷ್ಠ ಸಂತರ ಸನ್ನಿಧಾನದಲ್ಲಿರುವ ಅವಕಾಶವನ್ನು ನೀಡಿದ್ದಕ್ಕಾಗಿ ಅವನ ಚರಣಗಳಲ್ಲಿ ಕೃತಜ್ಞತೆಗಳು !
ಈ ಲೇಖನದಲ್ಲಿ ಪೂ. (ಸೌ.) ಬಿಂದಾ ಸಿಂಗಬಾಳ ಇವರು ಪೂ.(ಸೌ.) ಅಂಜಲಿ ಗಾಡಗೀಳರಿಗೆ ಪ್ರಶ್ನೆಗಳನ್ನು ಕೇಳಿದಾಗ ಅವರು ಈಶ್ವರಪ್ರಾಪ್ತಿ ಎಂಬ ಏಕೈಕ ಧ್ಯೇಯದಿಂದ ಪ್ರೇರಣೆ ಪಡೆದು ತಳಮಳದಿಂದ ಮಾಡಿದ ಪ್ರಯತ್ನಗಳ ಬಗ್ಗೆ ಮಾಡಿದ ಮಾರ್ಗದರ್ಶನವನ್ನು ನೀಡಲಾಗಿದೆ.

೧. ಶಾರೀರಿಕ ಅಡಚಣೆಯು ದೇಹದ ಪ್ರಾರಬ್ಧ ಭೋಗವಾಗಿರುವುದರಿಂದ
 ಸಮಷ್ಟಿಗಾಗಿ ಅದನ್ನು ದುರ್ಲಕ್ಷಿಸಿ ಕ್ಷಮತೆ ಮೀರಿ ಗುರುಸೇವೆ ಮಾಡುವುದು !
ಪೂ. (ಸೌ.) ಬಿಂದಾ ಸಿಂಗಬಾಳ : ಮಹರ್ಷಿಗಳ ಆಜ್ಞೆಯಿಂದ ನೀವು ಅಧ್ಯಾತ್ಮಪ್ರಸಾರಕ್ಕಾಗಿ, ಹಾಗೆಯೇ ಸಾಧಕರ ರಕ್ಷಣೆಗಾಗಿ ಭಾರತದಾದ್ಯಂತ ಪ್ರವಾಸ ಮಾಡುತ್ತೀರಿ. ಇಷ್ಟೊಂದು ಶಾರೀರಿಕ ಅಡಚಣೆ (ಕಾಯಿಲೆ) ಹಾಗೂ ತೊಂದರೆಗಳಿರುವಾಗ ಇಷ್ಟೊಂದು ಕಠಿಣ ಪ್ರವಾಸವನ್ನು ಹೇಗೆ ಮಾಡುತ್ತೀರಿ?
ಪೂ. (ಸೌ.) ಅಂಜಲಿ ಗಾಡಗೀಳ : ಮೊಣಕಾಲುಗಳ ನೋವು ದೇಹಭೋಗವಾಗಿದೆ. ದೇಹದ ಭೋಗಗಳೆಂದರೆ ಪೂರ್ವಜನ್ಮದ ಪಾಪ ಗಳಾಗಿರುವುದರಿಂದ ಅವು ಎಲ್ಲಿ ಹೋದರೂ ಬಿಡುವುದಿಲ್ಲ. ಮನೆಯಲ್ಲಿ ಕುಳಿತುಕೊಂಡರೂ ಮೊಣಕಾಲುಗಳು ನೋಯಿಸುತ್ತವೆ. ಅದಕ್ಕಿಂತ ಆ ಸಮಯವನ್ನು ಗುರುಕಾರ್ಯಕ್ಕಾಗಿ ನೀಡಿದರೆ ನಾವು ಗುರುಗಳ ಕೃಪೆಗೆ ಪಾತ್ರರಾಗುತ್ತೇವೆ. ಮಹರ್ಷಿಗಳು ಏನೇನು ಹೇಳುತ್ತಿದ್ದಾರೆಯೋ, ಅದರಿಂದ ಸಾಧಕರ ರಕ್ಷಣೆಯಾಗುತ್ತಿದೆ. ಇದು ಮಹತ್ವದ್ದಾಗಿದೆ. ನಾವು ಮನೆಯಲ್ಲಿ ಕುಳಿತುಕೊಂಡರೆ ಮತ್ತು ಆ ಸಮಯದಲ್ಲಿ ೨-೩ ಸಾಧಕರಿಗೆ ಏನಾದರೂ ರೋಗಗಳು ಬಂದರೆ, ಅದು ಸಮಷ್ಟಿಗೆ ಹಾನಿಕರವಾಗುವುದು. ನಾವು ಸೇವೆಯನ್ನು ಮಾಡಿದರೆ, ಈಶ್ವರನು ನಮಗೆ ಸಹಾಯವನ್ನು ಮಾಡುವವನೇ ಇದ್ದಾನೆ. ಆದ್ದರಿಂದ ಮೊಣಕಾಲುಗಳು ನೋಯಿಸುವಾಗ, ಅದರ ಕಡೆಗೆ ಗಮನ ಹೋಗುವುದಿಲ್ಲ. ಮೊಣಕಾಲುಗಳು ಅದರಷ್ಟಕ್ಕೆ ನೋಯಿಸುತ್ತಿರುತ್ತವೆ.
೨. ೨ ತಿಂಗಳಲ್ಲಿ ಈಶ್ವರನು ಮಾಡಿಸಿಕೊಂಡ ಅಹಂ ನಿರ್ಮೂಲನ !
ಪೂ. (ಸೌ.) ಬಿಂದಾ ಸಿಂಗಬಾಳ : ನೀವು ಸುಖಸಾಗರ (ಫೋಂಡಾ) ಆಶ್ರಮಕ್ಕೆ ಬಂದಾಗ ಪ.ಪೂ. ಡಾಕ್ಟರರು ನಿಮಗೆ ನಿಮ್ಮ ಅಹಂನ ಪ್ರಮಾಣ ಹೆಚ್ಚಿದೆ, ಆದುದರಿಂದ ನೀವು ಅಹಂನಿರ್ಮೂಲನೆ ಮಾಡಿರಿ ಎಂದು ಹೇಳಿದ್ದರು. ಬಹಳಷ್ಟು ಸಾಧಕರಿಗೆ ಇದು ಕಠಿಣವಾಗುತ್ತದೆ ಅಥವಾ ಅವರಿಗೆ ಅಹಂ ನಿರ್ಮೂಲನೆಗಾಗಿ ಬಹಳ ಸಮಯ ಬೇಕಾಗುತ್ತದೆ. ನಿಮ್ಮ ವೈಶಿಷ್ಟ್ಯವೆಂದರೆ ನೀವು ಅದನ್ನು ತತ್ಪರತೆಯಿಂದ ಸ್ವೀಕರಿಸಿ ಪ್ರಯತ್ನ ಮಾಡಿದಿರಿ. ಅಷ್ಟು ಮಾತ್ರವಲ್ಲ, ಸ್ವಲ್ಪ ಸಮಯದಲ್ಲಿಯೇ ಈ ಹಂತವನ್ನು ಪೂರ್ಣಗೊಳಿಸಿ ಎಲ್ಲ ಸಾಧಕರಿಗೆ ಅಹಂ ನಿರ್ಮೂಲನೆ ಮಾಡಲು ಮಾರ್ಗದರ್ಶಕವಾಗುವಂತಹ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಎಂಬ ಸನಾತನದ ಗ್ರಂಥವನ್ನೂ ಬರೆದಿರಿ. ಇದು ಹೇಗೆ ಸಾಧ್ಯವಾಯಿತು ?
ಪೂ.(ಸೌ.) ಅಂಜಲಿ ಗಾಡಗೀಳ :
೨ ಅ. ಅಹಂನ ಪ್ರಮಾಣ ತೀವ್ರವಿದ್ದುದರಿಂದ ಮೊದಲು ಅಡುಗೆ ಮನೆಯಲ್ಲಿ ಸೇವೆ ಮಾಡಲು ಹೇಳುವುದು : ಮೊದಲು ಸುಖಸಾಗರ ದಲ್ಲಿರುವಾಗ ಪ.ಪೂ. ಡಾಕ್ಟರರು ನನ್ನ ಅಹಂ ಸಾಮಾನ್ಯ ವ್ಯಕ್ತಿಗಳಷ್ಟು, ಅಂದರೆ ಶೇ. ೩೦ ರಷ್ಟಿದೆ ಎಂದು ಹೇಳಿದ್ದರು. ಹಾಗೆಯೇ ನನ್ನ ಮುಖ ಮತ್ತು ನನ್ನ ಯಜಮಾನರಾದ ಶ್ರೀ. ಗಾಡಗೀಳ (ಈಗಿನ ಪೂ. ಡಾ. ಮುಕುಲ ಗಾಡಗೀಳ) ಇವರ ಮುಖವನ್ನು ತುಲನೆ ಮಾಡಿ, ನಿಮ್ಮ ಮುಖವೂ ಇವರ ಮುಖದಂತೆಯೇ ಆಗಬೇಕು. ಸಂಗೀತ ಸಾಧನೆಯನ್ನು ಮಾಡಬೇಕಾಗಿದ್ದರೆ, ಅಹಂ ಇರಬಾರದು ಎಂದು ಹೇಳಿದ್ದರು. ಅವರು ಅಹಂ ಕಡಿಮೆಗೊಳಿಸಲು ನನಗೆ ಅಡುಗೆ ಮನೆಯಲ್ಲಿ ಸೇವೆಯನ್ನು ಮಾಡಲು ಹೇಳಿದ್ದರು.
೨ ಆ. ಪರಿಸ್ಥಿತಿಯ ಒತ್ತಡವನ್ನು ತೆಗೆದುಕೊಳ್ಳದೇ ಹೇಳಿದ್ದನ್ನು ಸ್ವೀಕರಿಸಿ ಅದನ್ನು ಹೆಚ್ಚು ಚೆನ್ನಾಗಿ ಮಾಡಲು ಪ್ರಯತ್ನವಾಗುವುದು : ನಾನು ಈ ಬದಲಾವಣೆಯನ್ನು ತಕ್ಷಣ ಸ್ವೀಕರಿಸಿದೆನು. ಅದರಿಂದ ನನಗೆ ಸ್ವಲ್ಪವೂ ಒತ್ತಡವಾಗಲಿಲ್ಲ. ನನಗೆ ಏನು ಹೇಳಿದ್ದಾರೆಯೋ ಅದನ್ನು ಆಜ್ಞಾಪಾಲನೆ ಎಂದು ಒಳ್ಳೆಯ ರೀತಿಯಿಂದ ಹೇಗೆ ಮಾಡಬಹುದು ಎಂಬುದರ ಕಡೆಗೆ ಗಮನ ಹರಿಸಿದೆ. ಕೇವಲ ಸೇವೆಯನ್ನಷ್ಟೇ ಮಾಡದೇ ಸೇವೆಯಲ್ಲಿ ಆಗಿರುವ ನನ್ನ ತಪ್ಪುಗಳು ಇತರ ಸಾಧಕರಿಂದಲೂ ಆಗಬಾರದೆಂದು ನಾನು ಆ ಎಲ್ಲ ತಪ್ಪುಗಳನ್ನು ಸಾಧಕರಿಗೆ ಹೇಳುತ್ತಿದ್ದೆ. ಇದರಿಂದಲೂ ಸಮಷ್ಟಿ ಪ್ರಸಾರವಾಯಿತು. ಆಗ ಇಂದಿನ ಹಾಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಇರಲಿಲ್ಲ. ಪ್ರತಿಯೊಬ್ಬ ಸಾಧಕರಿಗೆ ನಾನು ನಿಮ್ಮಿಂದ ಇನ್ನೂ ಹೇಗೆ ಕಲಿಯಬಹುದು, ನನಗೆ ಸಾಧನೆಯಲ್ಲಿ ಸಹಾಯ ಮಾಡಿರಿ, ಎಂದು ಹೇಳಿ ಪ್ರಯತ್ನಿಸಿದೆನು.
೨ ಇ. ಈಶ್ವರಪ್ರಾಪ್ತಿಯ ಧ್ಯೇಯಕ್ಕಾಗಿ ಪ್ರಯತ್ನ ಮಾಡಿದ್ದರಿಂದ ಅಹಂ-ನಿರ್ಮೂಲನೆಯಿಂದ ಆನಂದ ಲಭಿಸುವುದು ಮತ್ತು ಅಹಂ ಶೇ. ೩೦ ರಿಂದ ಶೇ. ೧೦ ಕ್ಕೆ ಬರುವುದು : ನನ್ನನ್ನು ಅಹಂ ಕಡಿಮೆಗೊಳಿಸಲು ಅಡುಗೆ ಮನೆಗೆ ಕಳುಹಿಸಿದ್ದಾರೆ, ಎಂಬುದನ್ನೇ ನಾನು ಮರೆತಿದ್ದ್. ಗುರುಗಳು ಯಾವಾಗ ನನ್ನನ್ನು ಅದರಿಂದ ಹೊರಗೆ ತೆಗೆದರು ಎಂಬುದು ನನಗೆ ತಿಳಿಯಲೇ ಇಲ್ಲ. ೨ ತಿಂಗಳುಗಳಲ್ಲಿ ಪ.ಪೂ. ಡಾಕ್ಟರರು ನನಗೆ, ‘ನಿಮ್ಮ ಅಹಂ ಶೇ. ೧೦ ಆಗಿದೆ’ ಎಂದು ಹೇಳಿದರು. ನಿಜವಾಗಿ ನಾನು ಇದರ ಅಪೇಕ್ಷೆಯನ್ನೂ ಮಾಡಿರಲಿಲ್ಲ. ಕೇವಲ ಈಶ್ವರಪ್ರಾಪ್ತಿಯ ಮೂಲ ಧ್ಯೇಯದ ಅರಿವಿದ್ದುದರಿಂದ ಆನಂದ ಸಿಗುತ್ತಾ ಹೋಯಿತು.
೩. ಶೇ. ೧೦೦ ರಷ್ಟು ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯಾಗಬೇಕೆಂದು ಪ್ರಯತ್ನಿಸುವುದು !
ಪೂ. (ಸೌ.) ಬಿಂದಾ ಸಿಂಗಬಾಳ : ನಿಮಗೆ ಈಶ್ವರನಿಂದ ಜ್ಞಾನ ಸಿಗುತ್ತದೆ. ಜ್ಞಾನಪ್ರಾಪ್ತಿಯ ಸೇವೆ ನಿಮ್ಮಿಂದ ಅಖಂಡವಾಗಿ ನಡೆಯುತ್ತಿದೆ. ಇಂದು ಸಹ ಸಮಷ್ಟಿಗಾಗಿ ಆವಶ್ಯಕವಿರುವ ದೈವೀ ಪ್ರವಾಸ ನಡೆಯುತ್ತಿದ್ದರೂ, ಜ್ಞಾನದ ವಿಷಯದಲ್ಲಿನ ಸಾವಿರಾರು ಪ್ರಶ್ನೆಗಳು ಬಾಕಿ ಇವೆ. ಈಶ್ವರನಿಂದ ಬರುವ ಈ ಅತ್ಯುಚ್ಚ ಜ್ಞಾನದಿಂದ ಸಮಾಜದಲ್ಲಿರುವ ಜಿಜ್ಞಾಸುಗಳಿಗೂ ಲಾಭವಾಗುತ್ತಿದೆ. ಇಷ್ಟೊಂದು ಕಾರ್ಯವನ್ನು ಮಾಡಿಯೂ ನಿಮಗೆ ಇದರ ಬಗ್ಗೆ ಸ್ವಲ್ಪವೂ ಅಹಂ ಇಲ್ಲ. ಈ ಸ್ಥಿತಿಯನ್ನು ಹೇಗೆ ಸಾಧ್ಯಗೊಳಿಸಿದಿರಿ ?
ಪೂ.(ಸೌ.) ಅಂಜಲಿ ಗಾಡಗೀಳ :
೩ ಅ. ಈಶ್ವರನೇ ಮಾಡಿಸಿಕೊಳ್ಳುತ್ತಿದ್ದಾನೆ, ಎಂಬ ಭಾವದಿಂದ ಸೇವೆ ಯಾಗುವುದು : ಈಶ್ವರನೇ ಜ್ಞಾನವನ್ನು ನೀಡುತ್ತಿದ್ದಾನೆ ಮತ್ತು ಅವನೇ ಮಾಡಿಸಿಕೊಳ್ಳುವವನಿದ್ದಾನೆ, ಎಂಬ ಒಂದೇ ವಿಚಾರ ಮನಸ್ಸಿನಲ್ಲಿರುತ್ತದೆ. ಆದ್ದರಿಂದ ಈ ಸೇವೆಯಿಂದ ತೊಂದರೆಯಾಗಬಹುದೇ ? ಜ್ಞಾನದ ಶಬ್ದಗ ಳಿಂದ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಬಹುದೇ ?, ಎಂಬ ಬಗ್ಗೆ ಯಾವತ್ತೂ ವಿಚಾರ ಬರಲಿಲ್ಲ. ಈಶ್ವರ ಮತ್ತು ನಾವು ಇಷ್ಟೇ ವಿಶ್ವವನ್ನು ನೋಡಲು ಈಶ್ವರನು ಕಲಿಸಿದ್ದಾನೆ. ಅದರಿಂದ ನನಗೆ ಉಪಾಯಕ್ಕೆ ಕುಳಿತುಕೊಳ್ಳುವ ಅವಶ್ಯಕತೆಯೂ ನಿರ್ಮಾಣವಾಗಲಿಲ್ಲ.
೩ ಆ. ಸೇವೆಯು ಶೇ. ೧೦೦ ರಷ್ಟು ಪರಿಪೂರ್ಣವಾಗಲು ಹಂತಹಂತ ವಾಗಿ ಪ್ರಯತ್ನಿಸುವುದು : ಜ್ಞಾನದ ಸೇವೆ ಪರಿಪೂರ್ಣವಾಗಲು ಪ್ರಯತ್ನಿಸು ವಾಗ ಮೊದಲು ವ್ಯಾಕರಣವನ್ನು ಕಲಿಯಲು ಪ್ರಯತ್ನಿಸಿದೆ. ಅದಕ್ಕೂ ಮೊದಲು ಜ್ಞಾನದಲ್ಲಿನ ಯಾವುದೇ ವಿಚಾರ ಬಿಟ್ಟುಹೋಗಬಾರದೆಂದು ಕೇವಲ ವೇಗವಾಗಿ ಬೆರಳಚ್ಚು ಆಗುತ್ತಿತ್ತು. ಸೇವೆಯಲ್ಲಿನ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗಬೇಕೆಂದು ವ್ಯಾಕರಣವನ್ನು ಸುಧಾರಿಸುವ ವೇಗವನ್ನು ಹೆಚ್ಚಿಸಿದೆ. ಅದರಿಂದ ಕಡತವನ್ನು ತಪಾಸಣೆ ಮಾಡುವ ನನ್ನ ಸಮಯ ಉಳಿತಾಯವಾಯಿತು. ಅನಂತರ ಕಡತಗಳಿಗೆ ಉಪಶೀರ್ಷಿಕೆ ನೀಡಲು ಕಲಿತೆ. ನಂತರ ಬೆರಳಚ್ಚು ಮಾಡುವಾಗಲೇ ಉಪಶೀರ್ಷಿಕೆಯನ್ನು ನೀಡುವುದನ್ನು ಕಲಿತು ಅದನ್ನು ಶೇ. ೧೦೦ ರಷ್ಟು ಪರಿಪೂರ್ಣ ಹೇಗೆ ಮಾಡಬಹುದು, ಎಂಬುದಕ್ಕಾಗಿ ಪ್ರಯತ್ನಿಸಿದೆ. ಕಡತವನ್ನು ಪರಿಪೂರ್ಣ ಗೊಳಿಸುವುದೆಂದರೆ, ಅದರಲ್ಲಿ ಇತರರಿಗೆ ಸುಧಾರಣೆ ಮಾಡಲು ಏನೂ ಉಳಿಯಬಾರದು, ಎಂಬ ವಿಚಾರ ಮನಸ್ಸಿನಲ್ಲಿರುತ್ತಿತ್ತು.
೩ ಇ. ಸೇವೆ ಭಾವಪೂರ್ಣವಾಗಲು ಪ್ರಯತ್ನವಾಗುವುದು ಹಾಗೂ ಮಾಡಿದ ಸೇವೆಯಲ್ಲಿನ ಅಹಂ ನಾಶವಾಗಲು ಪ್ರಾರ್ಥನೆ ಮಾಡುವುದು : ಭಾವದ ಸ್ತರದಲ್ಲಿ ಸೇವೆಯನ್ನು ಮಾಡಲು ಪ್ರಯತ್ನಿಸಿದೆ; ಏಕೆಂದರೆ ಶಿಷ್ಯ ಗುರುಗಳಿಗೆ ಏನಾದರೂ ಅರ್ಪಣೆ ಮಾಡುತ್ತಿರುತ್ತಾನೆ. ಜ್ಞಾನವನ್ನು ಅರ್ಪಣೆ ಮಾಡುವಾಗ ಅದು ಭಕ್ತಿಸಹಿತವೇ ಇರಬೇಕಾಗುತ್ತದೆ. ಆದ್ದರಿಂದ ಕಡತ ಪೂರ್ಣವಾದ ನಂತರ ಧರ್ಮಗ್ರಂಥದಲ್ಲಿರುವಂತೆ ನಾನು ಮಾನಸಿಕವಾಗಿ ಆ ಕಡತವನ್ನು ಪ.ಪೂ. ಡಾಕ್ಟರರ ಚರಣಗಳಲ್ಲಿ ಇಡುತ್ತಿದ್ದ. ಪ್ರತಿಯೊಂದು ಶಬ್ದದಲ್ಲಿ ಅವರ ರೂಪವನ್ನೇ ನೋಡಿ ಅವರ ಮಾನಸ ಆರತಿ ಮಾಡುತ್ತಿದ್ದೆ. ಅದೇ ರೀತಿ ಲೇಖನದಲ್ಲಿ ಏನಾದರೂ ತಪ್ಪುಗಳಾಗಿದ್ದರೆ, ನನ್ನನ್ನು ಕ್ಷಮಿಸಿರಿ. ಯಾವುದಾದರೊಂದು ಶಬ್ದ ಅಹಂಯುಕ್ತವಾಗಿದ್ದರೆ ಆ ಅಹಂಅನ್ನು ನೀವು ಅಲ್ಲಿಯೇ ನಾಶಗೊಳಿಸಿರಿ. ಸೇವೆಯಿಂದ ನನಗೆ ಶೇ. ೧೦೦ ಚೈತನ್ಯ ಸಿಗಲಿ, ಎಂದು ಪ್ರಾರ್ಥನೆ ಮಾಡುತ್ತಿದ್ದ್.
೪. ಸತತವಾಗಿ ಈಶ್ವರೀ ಅನುಸಂಧಾನದಲ್ಲಿರುವುದು ಮತ್ತು ಸಕಾರಾತ್ಮಕ ವಿಚಾರಗಳನ್ನು ಮಾಡುವುದು ಆವಶ್ಯಕವಾಗಿದೆ !
ಪೂ.(ಸೌ.) ಬಿಂದಾ ಸಿಂಗಬಾಳ : ನೀವು ಸುಖಸಾಗರ ಆಶ್ರಮ ದಲ್ಲಿರುವಾಗ ನಿಮಗೆ ಆಧ್ಯಾತ್ಮಿಕ ತೊಂದರೆ ಇದೆಯೆಂದು ಹೇಳಿದ್ದರು; ಆದರೆ ಅದಕ್ಕೆ ಯಾವುದೇ ಉಪಾಯವನ್ನು ಹೇಳಲಿಲ್ಲ. ಈಗ ಸಹ ಶಾರೀರಿಕ ತೊಂದರೆಗಳು ಆಗುತ್ತಿದ್ದರೂ ವೈದ್ಯರಲ್ಲಿಗೆ ಹೋಗಿ ಉಪಚಾರ ಮಾಡಿಸಬೇಕೆಂದು ನಿಮಗೆ ಅನಿಸುವುದಿಲ್ಲ. ಇದರ ಕಾರಣವೇನು ?
ಪೂ. (ಸೌ.) ಅಂಜಲಿ ಗಾಡಗೀಳ :
೪ ಅ. ಭಗವಂತನ ಅನುಸಂಧಾನದಲ್ಲಿರುವುದರಿಂದ ಉಪಾಯಗಳ ಅವಶ್ಯಕತೆ ಅನಿಸುವುದಿಲ್ಲ : ನಮ್ಮ ವಿಚಾರ ತೊಂದರೆಯಾಗಬಹುದು ಎಂಬ ದಿಶೆಯಲ್ಲಿದ್ದರೆ, ನಮಗೆ ಒತ್ತಡವಾಗುತ್ತದೆ; ಆದರೆ ದೇವರ ಜಗತ್ತು ಸಂಕಟ ನಿವಾರಣೆ ಮಾಡುವುದಾಗಿರುವುದರಿಂದ ಅವನ ಸ್ಮರಣೆ ಯನ್ನು ಮಾಡಿದರೆ, ತೊಂದರೆಗಳು ತನ್ನಿಂತಾನೇ ದೂರವಾಗುತ್ತವೆ. ಆದ್ದರಿಂದ ನಕಾರಾತ್ಮಕ ವಿಚಾರಗಳಲ್ಲಿ ಸಿಲುಕದೆ ನಿರಂತರವಾಗಿ ಸಕಾರಾತ್ಮಕ ವಿಚಾರಗಳನ್ನು ಮಾಡಬೇಕು. ಹಾಗೆಯೇ ಭಗವಂತನ ಅನುಸಂಧಾನ ದಲ್ಲಿದ್ದರೆ, ಉಪಾಯಗಳ ಆವಶ್ಯಕತೆಯಿರುವುದಿಲ್ಲ. ಆಕ್ರಮಣಗಳು ತಾವಾಗಿಯೇ ದೂರ ಹೋಗುತ್ತವೆ. ಹೀಗಾದರೆ ನಮಗೆ ಪ್ರತಿದಿನವೂ ಗುರುಪೂರ್ಣಿಮೆಯೇ ಆಗಿರುತ್ತದೆ.
೪ ಆ. ಒಂದು ಭೀಕರ ಅಪಘಾತದಿಂದ ಈಶ್ವರನೇ ರಕ್ಷಿಸುವುದು ಮತ್ತು ಓರ್ವ ಸಂತರು ಸಮಾಧಾನ ಹೇಳಿದ ನಂತರ ದೇವರ ಮೇಲಿನ ಶ್ರದ್ಧೆ ಹೆಚ್ಚಾಗುವುದು : ಒಮ್ಮೆ ಪಿತೃಪಕ್ಷ ಆರಂಭವಾಗುವ ಮೊದಲು ಒಂದು ನಗರದಲ್ಲಿ ಪ್ರಯಾಣಿಸುವಾಗ ನಮ್ಮ ವಾಹನಕ್ಕೆ ಅಪಘಾತವಾಯಿತು. ರಾತ್ರಿ ಒಂದುವರೆ ಗಂಟೆಗೆ ಒಂದು ಟೆಂಪೋ ನಮ್ಮ ವಾಹನಕ್ಕೆ ಒರೆಸಿಕೊಂಡು ಹೋಯಿತು. ಅದರಲ್ಲಿ ಇಬ್ಬರು ಸಾಧಕರು ಸಾಯುವ ಸಾಧ್ಯತೆಯಿತ್ತು; ಆದರೆ ದೇವರ ಕೃಪೆಯಿಂದ ಏನೂ ಆಗಲಿಲ್ಲ. ಪಿತೃಪಕ್ಷದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಮುಂದೆ ಪ್ರವಾಸವನ್ನು ಮುಂದುವರಿಸಬೇಕೋ ಅಥವಾ ಬೇಡವೇ, ಎಂಬುದನ್ನು ನಾವು ಓರ್ವ ಸಂತರಿಗೆ ಸಂಚಾರಿವಾಣಿ ಕರೆ ಮಾಡಿ ಕೇಳಿದೆವು. ಅವರು, ಇಷ್ಟು ದೊಡ್ಡ ಅಪಘಾತದಲ್ಲಿಯೂ ಈಶ್ವರನು ರಕ್ಷಣೆ ಮಾಡಿದನು. ಅಮಾವಾಸ್ಯೆ ಅಥವಾ ಹುಣ್ಣಿಮೆಯಿದ್ದರೂ ದೇವರ ಕೃಪೆಯಿದೆ ಎಂದು ಹೇಳಿದರು. ಅವರ ಮಾತುಗಳಿಂದ ನಮಗೆ ಸಮಾಧಾನವಾಯಿತು. ಅಂದಿನಿಂದ ಈಶ್ವರ ಜೊತೆಗಿದ್ದಾನೆ, ಎಂಬ ಶ್ರದ್ಧೆಯಿಂದ ಸೇವೆಯನ್ನು ಮಾಡುತ್ತಾ ಹೋದೆನು ಮತ್ತು ರಾತ್ರಿ ತಮೋಗುಣಿಯಾಗಿರದೆ ರಾತ್ರಿ ಮತ್ತು ಹಗಲು ಸಮಾನವೇ ಆಗಿವೆ ಎಂಬ ಭಾವವಿದ್ದರೆ ಅದಕ್ಕೆ ಕಾಲದ ಯಾವುದೇ ಬಂಧನವಿರುವುದಿಲ್ಲವೆಂಬುದು ಅರಿವಾಯಿತು. ತೊಂದರೆ ಯಿಂದ ರಕ್ಷಣೆಯಾಗಲು ಸತರ್ಕತೆಯೆಂದು ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳ ಸಮಯದಲ್ಲಿ ಸಾಧನೆಯನ್ನು ಹೆಚ್ಚಿಸಬೇಕೆಂಬುದೂ ಅರಿವಾಯಿತು.
೫. ನಿರಪೇಕ್ಷ ಪ್ರೀತಿ ಎಂಬ ಗುಣದಿಂದಲೇ ಸಂತರನ್ನು ಸಹ ತಮ್ಮವರನ್ನಾಗಿಸುವ ಪೂ. (ಸೌ.) ಗಾಡಗೀಳಕಾಕೂ !
ಪೂ. (ಸೌ.) ಬಿಂದಾ ಸಿಂಗಬಾಳ : ಎಲ್ಲ ಸಂತರ ಮನಸ್ಸನ್ನು ಗೆದ್ದು ಸಾಧಕರ ರಕ್ಷಣೆಯಾಗಬೇಕೆಂದು, ಹಾಗೆಯೇ ಹಿಂದೂ ರಾಷ್ಟ್ರದ (ಸನಾತನ ಧರ್ಮರಾಜ್ಯದ) ಸ್ಥಾಪನೆಯು ಆದಷ್ಟು ಬೇಗನೇ ಆಗಬೇಕೆಂದು ನೀವು ಇತರ ಸಂಪ್ರದಾಯಗಳಲ್ಲಿನ ಸಂತರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯುತ್ತೀರಿ. ಆ ಎಲ್ಲ ಸಂತರೂ ಆತ್ಮೀಯತೆಯಿಂದ ನಿಮ್ಮನ್ನು ವಿಚಾರಿಸುತ್ತಿರುತ್ತಾರೆ. ಪ.ಪೂ. ಕರ್ವೇಗುರೂಜಿ, ಪ.ಪೂ. ಆಬಾ ಉಪಾಧ್ಯೆ ಯವರಿಗೆ ನಿಮ್ಮ ಬಗ್ಗೆ ಹೇಳುವಾಗ ಅವರಿಗೆ ಭಾವಾಶ್ರು ಬರುತ್ತವೆ. ಸಾಧಕರನ್ನು ಜೋಡಿಸಿಟ್ಟುಕೊಳ್ಳುವುದು ಸುಲಭವಾಗಿರುತ್ತದೆ; ಆದರೆ ಹೊರಗಿನ ಸಂತರ ಕಾರ್ಯಮಾಡುವ ಶೈಲಿ ಭಿನ್ನವಾಗಿದ್ದರೂ ಅವರು ಪ್ರೀತಿಯ ದಾರದಿಂದ ಸನಾತನದೊಂದಿಗೆ ಜೋಡಿಸಲ್ಪಡುತ್ತಾರೆ, ಅದು ಕೇವಲ ನಿಮ್ಮಿಂದಾಗಿಯೇ ! ನೀವು ಎಲ್ಲರಿಗೂ ಇಷ್ಟು ಪ್ರೇಮವನ್ನು ಹೇಗೆ ಕೊಡುತ್ತೀರಿ ?
ಪೂ. (ಸೌ.) ಅಂಜಲಿ ಗಾಡಗೀಳ :
೫ ಅ. ಸಂತರಲ್ಲಿ ಗುರುರೂಪವನ್ನು ನೋಡುವುದು ಮತ್ತು ಕ್ಷಮತೆ ಮೀರಿ ಅವರ ಸೇವೆಯನ್ನು ಮಾಡುವುದು : ಇತರ ಸಂತರೊಂದಿಗೆ ಮಾತನಾಡುವಾಗ ನಾನು ಅವರಲ್ಲಿ ಗುರುಗಳ ರೂಪವನ್ನು ನೋಡಿ ಅವರ ಕೃಪೆಯನ್ನು ಸಂಪಾದಿಸಲು ಹೆಚ್ಚೆಚ್ಚು ಕ್ಷಮತೆ ಮೀರಿ ಸೇವೆಯನ್ನು ಮಾಡಲು ಪ್ರಯತ್ನಿಸುತ್ತೇನೆ. ಸೇವೆಯನ್ನು ಮಾಡುವಾಗ ಸಾಧಕರಿಗೆ ಅವರ ಆಶೀರ್ವಾದ ಸಿಗಬೇಕೆಂದು ಪ್ರಾರ್ಥನೆ ಮಾಡುತ್ತೇನೆ ಹಾಗೂ ಸಂತರಿಗೆ ಏನು ಅಪೇಕ್ಷಿತವಿದೆ, ಎಂಬುದನ್ನು ಗುರುತಿಸಿ ಜೀವವನ್ನು ಪಣಕ್ಕಿಟ್ಟು ಸೇವೆಯನ್ನು ಮಾಡಲು ನಾನು ಪ್ರಯತ್ನಿಸುತ್ತೇನೆ.
೫ ಆ. ಕುಟುಂಬಭಾವನೆಯಿಂದ ಮತ್ತು ಆತ್ಮೀಯತೆಯಿಂದ ಸಂತ ರೊಂದಿಗೆ ಮಾತನಾಡಿ ಸಹಜಧರ್ಮವನ್ನು ಪಾಲಿಸುವುದು : ಅವರಿಂದ ಹೇಗೆ ಕಲಿಯಬಹುದು ? ಸಮಷ್ಟಿಗೆ ಅವರಿಂದ ಹೇಗೆ ಲಾಭವಾಗಬಹುದು ?, ಎಂಬ ವಿಚಾರವೇ ಮನಸ್ಸಿನಲ್ಲಿರುತ್ತದೆ. ನಾವು ತಂದೆ-ತಾಯಿಯರ ಸೇವೆಯನ್ನು ಹೇಗೆ ಪ್ರೇಮದಿಂದ ಮಾಡುತ್ತೇವೆಯೋ, ಹಾಗೆಯೇ ಅವರ ಸೇವೆಯನ್ನು ಪ್ರೇಮದಿಂದ ಮಾಡುತ್ತೇನೆ. ಅದೇ ರೀತಿ ನಡುನಡುವೆ ಅವರ ಕುಟುಂಬದವರ ಬಗ್ಗೆ ವಿಚಾರಿಸಿಕೊಳ್ಳುತ್ತೇನೆ. ಕುಟುಂಬದೊಂದಿಗೆ ಆತ್ಮೀಯತೆ ಇರುವುದರಿಂದ ನಾವು ಇತರರಿಗೆ ಚಹಾ-ತಿಂಡಿಯನ್ನು ವಿಚಾರಿಸುತ್ತೇವೆ, ಇದು ನಮ್ಮ ಸಹಜ ಧರ್ಮವಾಗಿದೆ. ಅದೇ ರೀತಿಯಲ್ಲಿ ಸಂಬಂಧವನ್ನು ಉಳಿಸಲು ಪ್ರಯತ್ನಿಸುತ್ತೇನೆ. ಭಗವಂತನ ಪ್ರೇಮವನ್ನು ಗಳಿಸಲು ಆತುರರಾಗಿರುವುದು ಮತ್ತು ಸಿಕ್ಕಿದ ಪ್ರೇಮವನ್ನು ಎಲ್ಲ ಸಾಧಕರಿಗೆ ಕೊಡುವುದು, ಇದು ಪ್ರೇಮದ ಕೊಡು-ಕೊಳ್ಳುವಿಕೆಯೆಂದರೆ ಸಾಧನೆಯಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀಗುರುಗಳ ಮನಸ್ಸನ್ನು ಅರಿತುಕೊಂಡು, ಭಾವಪೂರ್ಣ ಸೇವೆಯನ್ನು ಮಾಡುವಾಗ ಈಶ್ವರೀ ಅನುಸಂಧಾನದಲ್ಲಿರುವ ಮತ್ತು ತಮ್ಮ ಸಹಜಭಾವದಿಂದ ಎಲ್ಲರನ್ನೂ ತಮ್ಮವರನ್ನಾಗಿಸಿಕೊಳ್ಳುವ ಪೂ. (ಸೌ.) ಅಂಜಲಿ ಗಾಡಗೀಳ !