ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ಸಂಭಾಜಿನಗರದ ಸಂತ ಏಕನಾಥ ಮಹಾರಾಜರ ೧೨ ನೇ ವಂಶಜರಾದ ಪ.ಪೂ. ಗಣೇಶ ಗೋಸಾವಿ ಮಹಾರಾಜರ ಚರಣಸ್ಪರ್ಶ !

.ಪೂ. ಗಣೇಶ ಗೋಸಾವಿ ಮಹಾರಾಜರಿಗೆ ಆರತಿ ಬೆಳಗುತ್ತಿರುವ
  ಸೌ. ಕಲ್ಯಾಣಿ ಶಹಾಣೆ ಮತ್ತು ವೇದಮೂರ್ತಿ ಕೇತನ ಶಹಾಣೆಗುರೂಜಿ. ಅವರ ಹಿಂದೆ (ಬಲಬದಿಗೆ) 
(ಸದ್ಗುರು) ಸೌ. ಬಿಂದಾ ಸಿಂಗಬಾಳ, (ಸದ್ಗುರು) ಸೌ. ಅಂಜಲಿ ಗಾಡಗೀಳ ಮತ್ತು ಇತರ ಸಾಧಕರು
ಸನಾತನ ಆಶ್ರಮ, ರಾಮನಾಥಿ : ಜುಲೈ ೨೬ ರಂದು ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಸಂಭಾಜಿನಗರದ ಸಂತ ಏಕನಾಥ ಮಹಾರಾಜರ ೧೨ ನೇ ವಂಶಜರಾದ ಪ.ಪೂ.ಗಣೇಶ ಗೋಸಾವಿ ಮಹಾರಾಜರ (೮೨ ವರ್ಷ) ಚರಣಸ್ಪರ್ಷವಾಯಿತು. ಸಾಕ್ಷಾತ್ ಮಹರ್ಷಿಗಳು ಭೂಲೋಕದ ವೈಕುಂಠವೆಂದು ಗೌರವಿಸಿದ ರಾಮನಾಥಿ ಆಶ್ರಮದಲ್ಲಿ ಪ.ಪೂ. ಗಣೇಶ ಗೋಸಾವಿ ಮಹಾರಾಜರ ರೂಪದಲ್ಲಿ ಸಂತ ಏಕನಾಥ ಮಹಾರಾಜರ ಚೈತನ್ಯವು ಅವತರಿಸಿತು.
ಈ ಸಂದರ್ಭದಲ್ಲಿ ಸನಾತನದ ಸಂತ ಪೂ.(ಸೌ.) ಬಿಂದಾ ಸಿಂಗಬಾಳ, ಪೂ. (ಸೌ.) ಅಂಜಲಿ ಗಾಡಗೀಳ ಮತ್ತು ಪೂ. ಡಾ. ಮುಕುಲ ಗಾಡಗೀಳ ಇವರು ಉಪಸ್ಥಿತ ರಿದ್ದರು. ಮಂಗಲಮಯ ಶಂಖನಾದ ಸಹಿತ ವೇದಮಂತ್ರಘೋಷದಲ್ಲಿ ಪ.ಪೂ. ಗಣೇಶ ಗೋಸಾವಿ ಮಹಾರಾಜರ ಪಾದಪೂಜೆ ಮಾಡಲಾಯಿತು. ಸನಾತನದ ಸಾಧಕ-ಪುರೋಹಿತ ಪಾಠಶಾಲೆಯ ಅಧ್ಯಾಪಕರಾದ ವೇದಮೂರ್ತಿ ಕೇತನ ಶಹಾಣೆಗುರೂಜಿ ಮತ್ತು ಅವರ ಧರ್ಮಪತ್ನಿ ಸೌ. ಕಲ್ಯಾಣಿ ಶಹಾಣೆ ಇವರು ಅವರ ಪಾದ ಪೂಜೆ ಮಾಡಿದರು. ವೇದಮೂರ್ತಿ ಕೇತನ ಶಹಾಣೆ ಗುರೂಜಿ ಇವರು ಪುಷ್ಪಹಾರ ಹಾಕಿ ಅವರನ್ನು ಸನ್ಮಾನಿಸಿದರು ಹಾಗೂ ಸೌ. ಕಲ್ಯಾಣಿ ಶಹಾಣೆ ಇವರು ಆರತಿ ಬೆಳಗಿದರು. .ಪೂ. ಗಣೇಶ ಗೋಸಾವಿ ಮಹಾರಾಜರ ಸ್ವಾಗತಕ್ಕಾಗಿ ಇಟ್ಟಿರುವ ಫಲಕದ ಮೂಲಕ ಆಶ್ರಮದ ಎಲ್ಲ ಸಾಧಕರು ಅವರ ಚರಣಗಳಲ್ಲಿ ಶಬ್ದರೂಪದ ಶರಣಾಗತ ಪುಷ್ಪಾಂಜಲಿ ಅರ್ಪಿಸಿದರು. ಈ ವೇಳೆ ಉಪಸ್ಥಿತ ಎಲ್ಲ ಸಂತರ ಮತ್ತು ಸಾಧಕರ ಭಾವ ಜಾಗೃತವಾಯಿತು.
.ಪೂ.ಗಣೇಶ ಗೋಸಾವಿ ಮಹಾರಾಜರಿಗೆ ರಾಮನಾಥಿಯ ಸನಾತನ ಆಶ್ರಮದಲ್ಲಿ ಸನ್ಮಾನ
ಈಗ ವಯಸ್ಸಾಯಿತು, ಇಲ್ಲದಿದ್ದರೆ ನಾನು ಸಹ ಕ್ಷಮತೆಮೀರಿ ಕಾರ್ಯ ಮಾಡುತ್ತಿದ್ದೆ !
- .ಪೂ. ಗಣೇಶ ಗೋಸಾವಿ ಮಹಾರಾಜರು
.ಪೂ. ಗಣೇಶ ಗೋಸಾವಿ ಮಹಾರಾಜರನ್ನು 
 (ಬಲಬದಿಯಲ್ಲಿ) ಸನ್ಮಾನಿಸುತ್ತಿರುವಾಗ ಪೂ. ಡಾ. ಮುಕುಲ ಗಾಡಗೀಳ
.ಪೂ. ಗಣೇಶ ಗೋಸಾವಿ ಮಹಾರಾಜರು ಭಾವಪೂರ್ಣ ಅಭಂಗ ವನ್ನು ಹೇಳಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರೊಂದಿಗಿನ ಭೇಟಿಯ ಭಾವನೆಯನ್ನು ತಮ್ಮ ವಾಣಿಯಲ್ಲಿ ವ್ಯಕ್ತಪಡಿಸಿದರು. ಅನಂತರ ಅವರು ನನಗೆ ಸನಾತನದ ಪರಿಚಯ ತಡವಾಗಿ ಆಯಿತು. ಈಗ ನನಗೆ ವಯಸ್ಸೂ ಆಗಿದೆ. ಇಲ್ಲದಿದ್ದರೆ ನಾನು ಪರಿಶ್ರಮವಹಿಸಿ ಕಾರ್ಯ ಮಾಡುತ್ತಿದ್ದ್, ಎಂದು ಅವರು ಧರ್ಮಕಾರ್ಯದ ವಿಷಯದಲ್ಲಿ ತಳಮಳ ವ್ಯಕ್ತಪಡಿಸಿದರು. .ಪೂ. ಗಣೇಶ ಗೋಸಾವಿ ಮಹಾರಾಜರು ಜುಲೈ ೨೬ ರಂದು ಅವರ ಕೆಲವು ಆಪ್ತರೊಂದಿಗೆ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯರೊಂದಿಗೆ ಚರ್ಚಿಸುವಾಗ ಅವರು, ಸನಾತನದ ಕಾರ್ಯ ಅನೇಕ ವರ್ಷಗಳಿಂದ ನಡೆದಿದೆ. ತೀವ್ರ ತಳಮಳದಿಂದ ಕಾರ್ಯ ಮಾಡುವ ಅನೇಕ ಜನರನ್ನು ನೀವು ನಿರ್ಮಿಸಿದ್ದೀರಿ. ನಿಮ್ಮ ಕಾರ್ಯ ಶೀಘ್ರಾತಿಶೀಘ್ರ ಪೂರ್ಣಗೊಳ್ಳುವ ಸಲುವಾಗಿ ನಾನು ಸಂತ ಏಕನಾಥ ಮಹಾರಾಜರಲ್ಲಿ ಆಶೀರ್ವಾದ ನೀಡಬೇಕೆಂದು ಪ್ರಾರ್ಥನೆ ಮಾಡಿದ್ದೇನೆ, ಎಂದರು.
ನಿಮ್ಮ ಭೇಟಿಯಿಂದ ನನಗೆ ನನ್ನ ಗುರುಗಳ ಸ್ಥಿತಿ ಯನ್ನು ಅನುಭವಿಸಲು ಸಿಕ್ಕಿತು, ಎಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಪ.ಪೂ. ಗೋಸಾವಿ ಮಹಾರಾಜರಿಗೆ ಹೇಳಿದರು.
ಪರಾತ್ಪರ ಗುರು ಡಾ.ಜಯಂತ ಆಠವಲೆಯವರು ಭಗವಂತನ ಅವತಾರ ಆಗಿದ್ದಾರೆ !
- ಸೌ. ರೋಹಿಣಿ ರಮೇಶ ದೇಶಪಾಂಡೆ
ಇಂದು ಭ್ರಷ್ಟಾಚಾರ, ದೌರ್ಜನ್ಯ ಬಹಳ ಹೆಚ್ಚಾಗಿದೆ. ಆದ್ದರಿಂದ ಇದು ಎಲ್ಲಿಯಾದರೂ ನಿಲ್ಲಬೇಕು ಹಾಗೂ ಅದಕ್ಕಾಗಿ ಭಗವಂತ ಅವತರಿಸಬೇಕು, ಎಂದು ನನಗೆ ಅನಿಸುತ್ತದೆ. ನಾನು ಆಶ್ರಮದಲ್ಲಿ ನಡೆಯುವ ಕಾರ್ಯ ವನ್ನು ನೋಡಿದಾಗ ನನಗೆ ಆ ಅವತಾರವು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಕಾಣಿಸಿತು, ಎಂದು ಪ.ಪೂ. ಮಹಾರಾಜರೊಂದಿಗೆ ಬಂದಿರುವ ಸೌ. ರೋಹಿಣಿ ರಮೇಶ ದೇಶಪಾಂಡೆ ಇವರು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ರಾಮನಾಥಿ (ಗೋವಾ) ಆಶ್ರಮಕ್ಕೆ ಸಂಭಾಜಿನಗರದ ಸಂತ ಏಕನಾಥ ಮಹಾರಾಜರ ೧೨ ನೇ ವಂಶಜರಾದ ಪ.ಪೂ. ಗಣೇಶ ಗೋಸಾವಿ ಮಹಾರಾಜರ ಚರಣಸ್ಪರ್ಶ !