ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಪ್ರಗತಿಯು ವಿಹಂಗಮ ವೇಗದಲ್ಲಿ ಆಗಲೆಂದು ನಿರ್ಮಿಸಿದ ‘ಗುರುಕೃಪಾಯೋಗ’ !


. ಗುರುಕೃಪಾಯೋಗದ ಉಗಮ
ಪೂ. (ಡಾ.) ವಸಂತ ಬಾಳಾಜಿ ಆಠವಲೆ
ಕೃಪ್’ ಎಂಬ ಧಾತುವಿನಿಂದ ‘ಕೃಪಾ’ ಎಂಬ ಶಬ್ದವು ಬಂದಿದೆ. ‘ಕೃಪ್’ ಅಂದರೆ ದಯೆ ತೋರಿಸುವುದು ಹಾಗೂ ಕೃಪಾ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಸೇರುತ್ತದೆ, ಇದನ್ನೇ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ. ಅಧ್ಯಾತ್ಮದಲ್ಲಿ ಈಶ್ವರ ಪ್ರಾಪ್ತಿಗಾಗಿ, ಅಂದರೆ ಮೋಕ್ಷಪ್ರಾಪ್ತಿಗಾಗಿ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಧ್ಯಾನಯೋಗ, ಹಠ ಯೋಗ ಇತ್ಯಾದಿ ಹೀಗೆ ಹಲವಾರು ಯೋಗಮಾರ್ಗಗಳು, ಅಂದರೆ ಸಾಧನಾಮಾರ್ಗಗಳು ಲಭ್ಯವಿರುವಾಗ ಎಲ್ಲ ಮಾರ್ಗಗಳಿಗಿಂತಲೂ ಶೀಘ್ರಗತಿಯಲ್ಲಿ ಸಾಧಕರ ಪ್ರಗತಿಯಾಗಲೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮದೇ ಅನುಭವದಲ್ಲಿ ‘ಗುರುಕೃಪಾಯೋಗ’ವನ್ನು ನಿರ್ಮಿಸಿದರು.
ಸರ್ವಸಾಮಾನ್ಯ ಜನರಲ್ಲಿ ಹಾಗೂ ಬಹುತೇಕ ಸಾಧಕರಲ್ಲಿ ಭಕ್ತಿಮಾರ್ಗಕ್ಕೆ ಆವಶ್ಯಕವಿರುವ ಭಗವಂತನ ಮೇಲಿನ ನಿಸ್ಸೀಮ ಪ್ರೇಮ ಅಥವಾ ಜ್ಞಾನಮಾರ್ಗಕ್ಕಾಗಿ ಆವಶ್ಯಕವಿರುವ ವೈರಾಗ್ಯವೂ ಇರುವುದಿಲ್ಲ. ಇಂತಹ ಸಾಧಕರಿಗಾಗಿ ಹಾಗೂ ಎಲ್ಲರಿಗಾಗಿ ಕರ್ಮ, ಭಕ್ತಿ ಹಾಗೂ ಜ್ಞಾನ ಈ ಯೋಗಗಳ ಸುಯೋಗ್ಯ ಸಂಗಮವಿರುವ ‘ಗುರುಕೃಪಾಯೋಗ’ವನ್ನು ಪ.ಪೂ. ಡಾಕ್ಟರರು ನಿರ್ಮಿಸಿದರು. ಇದರಲ್ಲಿ ಕರ್ಮಯೋಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಹಾಗೂ ಅದಕ್ಕೆ ಭಕ್ತಿಯೋಗ ಹಾಗೂ ಜ್ಞಾನಯೋಗವನ್ನು ಜೋಡಿಸಲಾಗಿದೆ.
. ಗುರುಕೃಪಾಯೋಗಾನುಸಾರ ಸಾಧನೆಯ ಹಂತಗಳು
ಕುಲದೇವಿಯ ಉಪಾಸನೆ ಹಾಗೂ ನಾಮಜಪ, ಅತೃಪ್ತರಾಗಿರುವ ಪೂರ್ವಜರ ಲಿಂಗದೇಹದ ತೊಂದರೆಗಳಿಂದ ರಕ್ಷಣೆಯಾಗಲು ದತ್ತನ ನಾಮಜಪ, ಸತ್ಸಂಗ, ಸತ್ಸೇವೆ (ಸರ್ವೋತ್ತಮ ಸತ್ಸೇವೆ ಅಂದರೆ ಗುರುತತ್ತ್ವದ ಸೇವೆ, ಅಂದರೆ ಅಧ್ಯಾತ್ಮಪ್ರಚಾರ), ತನು-ಮನ-ಧನವನ್ನು ಸತ್‌ಗಾಗಿ ತ್ಯಾಗ ಮಾಡುವುದು, ಪ್ರೀತಿ, ಸ್ವಭಾವದೋಷ - ನಿರ್ಮೂಲನೆ, ಅಹಂ-ನಿರ್ಮೂಲನೆ ಹಾಗೂ ಭಾವಜಾಗೃತಿ, ಇದು ಗುರುಕೃಪಾಯೋಗದ ಸಾಧನೆಯ ಹಂತಗಳಾಗಿದೆ. ಅದರಲ್ಲಿ ‘ಸತ್ಸೇವೆ’ಯು ಸಮಷ್ಟಿ ಸಾಧನೆಯ ಅಂತರ್ಗತ ಬರುತ್ತದೆ ಹಾಗೂ ಅನ್ಯ ವಿಷಯಗಳು ವ್ಯಷ್ಟಿ ಸಾಧನೆಯ ಅಂತರ್ಗತ ಬರುತ್ತದೆ.
. ಪರಾತ್ಪರ ಗುರು ಡಾ. ಆಠವಲೆಯವರು
ಸ್ವಭಾವದೋಷ, ಅಹಂ ನಿರ್ಮೂಲನೆ ಹಾಗೂ ಭಾವಜಾಗೃತಿಯ ಪ್ರಯತ್ನಗಳಿಗೆ ಹೊಸ ದಿಕ್ಕು ನೀಡುವುದು
ಕುಲಾಚಾರ, ನಾಮಜಪ, ಸತ್ಸಂಗ ಹಾಗೂ ತ್ಯಾಗ ಎಂಬ ವ್ಯಷ್ಟಿ ಸಾಧನೆಯ ಅಂಶಗಳು ರೂಢಿಯಲ್ಲಿದೆ. ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಸರಿಯಾಗಿ ಆಗುವ ದೃಷ್ಟಿಯಿಂದ ಸ್ವಭಾವದೋಷ, ಅಹಂ-ನಿರ್ಮೂಲನೆ ಹಾಗೂ ಗುಣಸಂವರ್ಧನೆಯಾಗಲು ಸಾಧನೆ ಮಾಡುವುದು ಎಲ್ಲಕ್ಕಿಂತ ಮಹತ್ವದ್ದಾಗಿದೆ. ಆದ್ದರಿಂದ ಸಾಧಕರಲ್ಲಿರುವ ರಜ-ತಮ ಗುಣಗಳು ಕಡಿಮೆಯಾಗಿ ಸತ್ತ್ವಗುಣ ಹೆಚ್ಚಾಗುತ್ತದೆ; ಆದ್ದರಿಂದ ಈ ಪ್ರಕ್ರಿಯೆಯು ಎಲ್ಲ ಮಾರ್ಗಗಳಿಂದ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಮಾಡುವ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಲು ಉಪಯೋಗವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿಯೊಬ್ಬ ಸಾಧಕನೂ ತನ್ನ ತಪ್ಪುಗಳ ವಿಷಯದಲ್ಲಿ ಸ್ವಯಂಸೂಚನೆ ನೀಡುವುದು, ತಪ್ಪನ್ನು ಎಲ್ಲರ ಮುಂದೆ ಒಪ್ಪಿಕೊಂಡು ಫಲಕದಲ್ಲಿ ಬರೆಯುವುದು, ಪ್ರತಿದಿನ ತನ್ನ ಸಾಧನೆಯ ವರದಿಯನ್ನು ಬರೆಯುವುದು ಇತ್ಯಾದಿ ಹೊಸ ಮಾರ್ಗವನ್ನು ಹುಡುಕಿ ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಹಾಗೂ ಭಾವಜಾಗೃತಿಯ ಪ್ರಯತ್ನ ಗಳಿಗೆ ಹೊಸ ದಿಕ್ಕು ನೀಡಿದ್ದಾರೆ. ಇದರಿಂದ ಸಾಧಕರ ಸಾಧನೆಯಲ್ಲಿ ಶೀಘ್ರ ವಾಗಿ ಪ್ರಗತಿಯಾಗುತ್ತಿದೆ.
. ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ
ಗುರುಕೃಪಾಯೋಗದಲ್ಲಿ ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆಯನ್ನು ಸಹ ಹೇಳಲಾಗಿದೆ. ಸಾಧನೆಯಲ್ಲಿ ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮಹತ್ವವಿದೆ ಹಾಗೂ ಸಮಷ್ಟಿಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ. ವ್ಯಷ್ಟಿ ಸಾಧನೆಯೆಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನಗಳು ಹಾಗೂ ಸಮಷ್ಟಿ ಸಾಧನೆಯೆಂದರೆ ಸಮಾಜ ಮತ್ತು ರಾಷ್ಟ್ರದ ಉನ್ನತಿಗಾಗಿ ಹಾಗೂ ಸನಾತನ ಧರ್ಮದ ಪ್ರಚಾರಕ್ಕಾಗಿ ಪ್ರಯತ್ನಿಸುವುದಾಗಿದೆ.
. ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮ 
ಪ್ರಚಾರದಂತಹ ಸಮಷ್ಟಿ ಸಾಧನೆ ಮಾಡುವ ಮಹತ್ವವನ್ನು ದೃಢವಾಗಿ ಪ್ರತಿಪಾದಿಸುವುದು
ಈಗ ದೇಶವು ರಜ-ತಮದ ಪ್ರದೂಷಣೆ, ಧರ್ಮಹಾನಿ, ಭಯೋತ್ಪಾದನೆ, ಅರಾಜಕತೆಯ ಕಡೆ ವಾಲುತ್ತಿರುವುದು ಇತ್ಯಾದಿಗಳಿಂದ ಸಾಧನೆಗಾಗಿ ಆಪತ್ಕಾಲ ನಡೆಯುತ್ತಿದೆ. ಆಪತ್ಕಾಲದಲ್ಲಿ ಕೇವಲ ವ್ಯಷ್ಟಿ ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು ತುಂಬಾ ಕಠಿಣವಿರುವುದರಿಂದ ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆ ಮಾಡುವುದು ಸಹ ಮಹತ್ವದ್ದಾಗಿದೆ. ಇಂದಿನವರೆಗೆ ಎಷ್ಟೋ ಸಂತರು ಹಾಗೂ ಗುರುಗಳು ಸಮಷ್ಟಿ ಸಾಧನೆಯ ಕಡೆ ನಿರ್ಲಕ್ಷ್ಯ ಮಾಡಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಎಲ್ಲ ಜನರೆದುರು ಸಮಷ್ಟಿ ಸಾಧನೆಯ ಮಹತ್ವವನ್ನು ದೃಢವಾಗಿ ಮಂಡಿಸಿದರು. ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆ ಯನ್ನು ಮಾಡುವುದು ಮಾತ್ರವಲ್ಲ, ‘ವ್ಯಷ್ಟಿ ಸಾಧನೆಗಿಂತ ಸಮಷ್ಟಿ ಸಾಧನೆ ಮಾಡುವುದಕ್ಕೆ ಏಕೆ ಅಷ್ಟು ಮಹತ್ವವಿದೆ’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಸ್ಪಷ್ಟವಾಗಿ ಹೇಳಿದ್ದಾರೆ. ಪರಾತ್ಪರ ಗುರು ಡಾ. ಆಠವಲೆ ಯವರ ಉಪದೇಶಕ್ಕನುಸಾರ ಅಧ್ಯಾತ್ಮ ಪ್ರಸಾರವೇ ಸಮಷ್ಟಿ ಸಾಧನೆಗಾಗಿ ಅತ್ಯಂತ ಶ್ರೇಷ್ಠ ಸೇವೆಯಾಗಿದೆ; ಏಕೆಂದರೆ ಅದರಿಂದ ತನ್ನೊಂದಿಗೆ ಸಮಾಜದ ಅಧ್ಯಾತ್ಮಿಕ ಉನ್ನತಿಯಾಗಿ ವಾತಾವರಣವೆಲ್ಲ ಸಾತ್ತ್ವಿಕವಾಗಿ ಅಧ್ಯಾತ್ಮಕ್ಕೆ ಪೂರಕ ವಾತಾವರಣ ನಿರ್ಮಾಣವಾಗುವುದು.
. ಗುರುಕೃಪಾಯೋಗಾನುಸಾರ ಸಾಧನೆ
 ಮಾಡುವುದರಿಂದ ವಿಹಂಗಮ ವೇಗದಲ್ಲಿ ಸಾಧಕರ ಪ್ರಗತಿಯಾಗುತ್ತಿರುವುದು
ಗುರುಕೃಪಾಯೋಗವು ವಿಹಂಗಮ ಸಾಧನಾಮಾರ್ಗವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರು ಅದಕ್ಕನುಸಾರವಾಗಿ ಸಾಧಕರಿಂದ ಸಾಧನೆ ಮಾಡಿಸಿಕೊಂಡು ೧೯೯೭ ರಿಂದ ಜುಲೈ ೨೦೧೬ ರ ವರೆಗೆ ಗುರುಕೃಪಾಯೋಗಕ್ಕನುಸಾರ ಸಾಧನೆ ಮಾಡಿ ೬೮ ಸಾಧಕರು ಸಂತ ಪದವಿ ತಲುಪಿದ್ದಾರೆ ಹಾಗೂ ೯೨೭ ಸಾಧಕರು ಶೇ. ೬೦ ಕ್ಕಿಂತ ಹೆಚ್ಚು ಮಟ್ಟವನ್ನು ತಲುಪಿದ್ದು ಅವರು ಸಂತತ್ವದ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಸಾಧನಾಮಾರ್ಗವನ್ನು ವಿದೇಶದ ಜಿಜ್ಞಾಸುಗಳು ಸಹ ಆಚರಣೆ ಮಾಡು ತ್ತಿದ್ದು ತಮ್ಮ ಜೀವನವನ್ನು ಉದ್ದಾರ ಮಾಡಿಕೊಳ್ಳುತ್ತಿದ್ದಾರೆ.
. ಗುರುಕೃಪಾಯೋಗಕ್ಕನುಸಾರ ಸಾಧನೆಯ ಕೆಲವು ವೈಶಿಷ್ಟ್ಯಗಳು !
. ಕಂಡದ್ದು ಕರ್ತವ್ಯ, ನಡೆಯವುದು ಕರ್ಮ ಹಾಗೂ ಅನುಭವಿಸುವುದು ಪ್ರಾರಬ್ಧ !
. ವ್ಯವಹಾರದಲ್ಲಿ ಪ್ರತಿಯೊಬ್ಬರೂ ತಮ್ಮ ಕೃತಿಗಳನ್ನು ಆಧ್ಯಾತ್ಮೀಕರಣ ಮಾಡುವುದು
. ಅಧ್ಯಾತ್ಮದಲ್ಲಿ ಮಾರ್ಗದರ್ಶಕರ ಆಜ್ಞಾಪಾಲನೆ ಮಾಡುವುದು
. ವ್ಯವಹಾರದಲ್ಲಿ ನಿತ್ಯ ಕೃತಿಗಳಿಗೆ ಸಾಧನೆಯ ದಿಕ್ಕು ನೀಡುವುದು
- ಕೈ. ಪೂ. (ಡಾ.) ವಸಂತ ಬಾಳಾಜಿ ಆಠವಲೆ (ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಪ್ರಗತಿಯು ವಿಹಂಗಮ ವೇಗದಲ್ಲಿ ಆಗಲೆಂದು ನಿರ್ಮಿಸಿದ ‘ಗುರುಕೃಪಾಯೋಗ’ !