ಸನಾತನದ ಧರ್ಮಕಾರ್ಯದ ರಜತ ಮಹೋತ್ಸವದ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ
ಸನಾತನದ ಸ್ಥಾಪನೆಯ ಹಿಂದಿನ ಉದ್ದೇಶವು ಸಫಲವಾಗುವುದು !
೧೯೯೧ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ ಆರಂಭವಾದ ಸನಾತನದ ಬೀಜರೂಪಿ ಕಾರ್ಯವು ಇಂದು ವಟವೃಕ್ಷವಾಗಿ ರೂಪಾಂತರಗೊಂಡಿದೆ. ಅಧ್ಯಾತ್ಮದ ಪ್ರಸಾರ ಮಾಡುವುದು, ಸನಾತನದ ಸ್ಥಾಪನೆಯ ಹಿಂದಿನ ಉದ್ದೇಶವಾಗಿತ್ತು. ಇಂದು ಧರ್ಮಶಿಕ್ಷಣ ನೀಡುವ ಸತ್ಸಂಗ, ಧ್ವನಿಚಿತ್ರ-ಮುದ್ರಿಕೆಗಳು, ಫಲಕ ಪ್ರದರ್ಶನ ಮತ್ತು ಜಾಲತಾಣಗಳ ಮೂಲಕ ನಡೆಯುತ್ತಿರುವ ಅಧ್ಯಾತ್ಮ ಪ್ರಸಾರ, ಅಧ್ಯಾತ್ಮಕ್ಕೆ ಸಂಬಂಧಿತ ೨೯೦ ಗ್ರಂಥಗಳ ನಿರ್ಮಿತಿ ಮತ್ತು ೧೫ ಭಾಷೆಗಳಲ್ಲಿ ಅದರ ಪ್ರಕಾಶನ, ಸಾಧಕ-ಪುರೋಹಿತ ಪಾಠಶಾಲೆಯ ಮೂಲಕ ನಡೆಯುತ್ತಿರುವ ಸಾತ್ತ್ವಿಕ ಪುರೋಹಿತರ ನಿರ್ಮಾಣ, ಅದೇ ರೀತಿ ದೇಶ-ವಿದೇಶಗಳಲ್ಲಿ ೧೫ ಸಾವಿರಕ್ಕಿಂತಲೂ ಅಧಿಕ ಸಾಧಕರು ಅಧ್ಯಾತ್ಮದ ಸಿದ್ಧಾಂತ ಕಲಿತು ಸಾಧನೆ ಮಾಡುವುದು, ಇದು ಈ ಕಾರ್ಯದ ದೃಶ್ಯಸ್ವರೂಪವಾಗಿದೆ.
ಇಂದಿನವರೆಗೆ ಈ ಎಲ್ಲ ಕಾರ್ಯಗಳು ಸಂತರ ಆಶೀರ್ವಾದದಿಂದಲೇ ನಡೆಯಿತು. ಬಾಹ್ಯರೂಪದಲ್ಲಿ ಕಾಣಿಸುವ ಈ ಕಾರ್ಯ ಮತ್ತು ಸೂಕ್ಷ್ಮದಿಂದ ನಡೆಯುವ ಕಾರ್ಯ ಬೇರೆ ಬೇರೆಯೇ ಆಗಿರುತ್ತದೆ. ಸನಾತನದ ಕಾರ್ಯ ಮೂಲತಃ ಜ್ಞಾನಶಕ್ತಿ ಯದ್ದಾಗಿದ್ದು ಅದರ ಮಹತ್ವ ಅಧಿಕವಾಗಿದೆ. ಬರುವ ೨೫ ವರ್ಷಗಳಲ್ಲಿ ಜಗತ್ತಿನಾದ್ಯಂತ ಪ್ರಸ್ಥಾಪಿತವಾಗಲಿರುವ ಸನಾತನ (ಹಿಂದೂ) ಧರ್ಮಕ್ಕೆ ಸನಾತನದ ಜ್ಞಾನಶಕ್ತಿಯ ಕಾರ್ಯವು ಬಹುಮುಖ್ಯ ಪಾತ್ರ ವಹಿಸಲಿದೆ. ಸಾಧಕರ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಯು ಸನಾತನದ ಕಾರ್ಯದ ಕೇಂದ್ರಬಿಂದುವಾಗಿದೆ. ಸನಾತನದ ಕಾರ್ಯದ ೨೫ ವರ್ಷಗಳ ಮೌಲ್ಯಮಾಪನ ಮಾಡುವಾಗ ಇದರ ಕಾರ್ಯ ಎಷ್ಟು ಹೆಚ್ಚಾಯಿತು ಎಂಬುದಕ್ಕಿಂತ ಎಷ್ಟು ಸಾಧಕರ ಆಧ್ಯಾತ್ಮಿಕ ಉನ್ನತಿಯಾಯಿತು ಎಂಬುದು ಸನಾತನದ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ೨೫ ವರ್ಷಗಳಲ್ಲಿ ಸನಾತನದ ೬೮ ಸಾಧಕರು ಸಂತರಾಗುವುದು ಮತ್ತು ೯೨೭ ಸಾಧಕರದ್ದು ಸಂತತ್ವದೆಡೆಗೆ ಮಾರ್ಗಕ್ರಮಣವಾಗುವುದು, ಇದು ಸನಾತನದ ಗುರುಕೃಪಾಯೋಗದ ಸಾಧನೆಯ ಬೋಧನೆ ಸಾರ್ಥಕವಾಗಿರುವುದರ ರಶೀದಿಯಾಗಿದೆ.
- (ಪರಾತ್ಪರ ಗುರು) ಡಾ. ಆಠವಲೆ
ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ ಮುಂಬರುವ ಕೆಲವೇ ವರ್ಷಗಳಲ್ಲಿ ಸನಾತನದ ಸ್ಥಾಪನೆಯ ಹಿಂದಿನ ಉದ್ದೇಶವು ಪೂರ್ಣತಃ ಸಫಲವಾಗುವುದು, ಎಂಬುದರಲ್ಲಿ ಏನೂ ಸಂದೇಹವಿಲ್ಲ. ಸನಾತನಕ್ಕೆ ಬಂದಿರುವ ಪ್ರತಿಯೊಬ್ಬರ ಆಧ್ಯಾತ್ಮಿಕ ಉನ್ನತಿಯಾಗಲಿ ಮತ್ತು ಅಖಿಲ ಮನುಕುಲದ ವರೆಗೆ ಆಧ್ಯಾತ್ಮದ ಬೋಧನೆಯು ತಲುಪಲಿ, ಎಂದು ಸನಾತನದ ಕಾರ್ಯದ ರಜತ ಮಹೋತ್ಸವ ವರ್ಷದ ನಿಮಿತ್ತ ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ. - (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಧರ್ಮಕಾರ್ಯದ ರಜತ ಮಹೋತ್ಸವದ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ