ಮರುಳಾಗಿಸುವ ಸಮಾಜಘಾತಕ ಜಾಹೀರಾತುಗಳು !

ವಿಪ್ಲವ ಠಾಕೂರ್ ಮತ್ತು ರೇಣುಕಾ ಚೌಧರಿ ಈ ಇಬ್ಬರು ಕಾಂಗ್ರೆಸ್ಸಿನ ಮಹಿಳಾ ಸಂಸದರು ಇತ್ತೀಚೆಗಷ್ಟೇ ರಾಜ್ಯ ಸಭೆಯಲ್ಲಿ ಚರ್ಮವನ್ನು ಬೆಳ್ಳಗೆ ಮಾಡಲು ಉಪಯೋಗಿಸುವ ಕ್ರೀಮ್‌ನ ಜಾಹೀರಾತುಗಳ ವಿಷಯವನ್ನೆತ್ತಿದರು. ಇಂತಹ ಜಾಹೀರಾತುಗಳು ಮಹಿಳೆಯರಲ್ಲಿ ಕೀಳರಿಮೆಯನ್ನುಂಟು ಮಾಡುತ್ತದೆ, ಆದ್ದರಿಂದ ಇಂತಹ ಜಾಹೀರಾತುಗಳು ಮತ್ತು ಉತ್ಪಾದನೆಗಳ ಮೇಲೆ ನಿರ್ಬಂಧ ಹೇರಬೇಕೆಂದು ಅವರು ಹೇಳಿದರು. ಜೀವನದಲ್ಲಿ ಯಶಸ್ವಿಯಾಗಲು ಬಣ್ಣ ಅಲ್ಲ, ಬುದ್ಧಿಯ ಅವಶ್ಯಕತೆಯಿದೆ ಎಂದು ಸಂಸದೆ ರೇಣುಕಾ ಚೌಧರಿ ಹೇಳಿದರು, ಓಬಾಮಾ ಮತ್ತು ಅವರ ಪತ್ನಿ ಅದಕ್ಕೆ ಉತ್ತಮವಾದ ಉದಾಹರಣೆಯಾಗಿದ್ದಾರೆ. ಇಂತಹ ಜಾಹೀರಾತುಗಳಿಂದ ಮಹಿಳೆಯರ ಗೌರವದ ಬಗ್ಗೆ ವಿಚಾರವಾಗುವುದಿಲ್ಲ ಎಂದು ಅತ್ಯಂತ ಯೋಗ್ಯವಾದ ವಿಷಯವನ್ನು ಅವರು ಎತ್ತಿ ಹಿಡಿದರು.
ಈ ಹಿಂದೆಯೂ ಅನೇಕ ಮಹಿಳಾ ಸಂಸದರು ೭ ದಿನಗಳಲ್ಲಿ ಚರ್ಮ ಬೆಳ್ಳಗೆ ಮಾಡುವ ಕ್ರೀಮ್‌ನ ವಿರುದ್ಧ ಧ್ವನಿಯೆತ್ತಿದ್ದರು. ಸ್ತ್ರೀಯರು ಬೆಳ್ಳಗಿರುವ ಅವಶ್ಯಕತೆಯಿದೆ, ಇದರ ಅರ್ಥ ಮಹಿಳೆಯರತ್ತ ಸ್ತ್ರೀಯೆಂದು ನೋಡಲಾಗುತ್ತದೆ, ಎಂಬುದಾಗುತ್ತದೆ. ಸ್ತ್ರೀವಾದಿ ಸಂಘಟನೆಗಳಿಗೆ ಇದು ಗಮನಕ್ಕೆ ಬರುವುದಿಲ್ಲವೇಕೆ ? ಈಗ ಪುರುಷರಿಗಾಗಿಯೂ ಇಂತಹ ಜಾಹೀರಾತುಗಳಿರುತ್ತವೆ. ಭಾರತವು ಭಾರೀ ವೇಗದಿಂದ ಅಂತರರಾಷ್ಟ್ರೀಕರಣವಾಗುತ್ತಿದೆ. ಭಾರತವನ್ನು ಅತೀ ದೊಡ್ಡ ಮಾರುಕಟ್ಟೆಯೆಂದು ತಿಳಿಯುವ ಪ್ರಾಕ್ಟರ್ ಎಂಡ್ ಗ್ಯಾಂಬಲ್‌ನಂತಹ ಅನೇಕ ಅಂತರರಾಷ್ಟ್ರೀಯ ಕಂಪನಿಗಳು ಕೇವಲ ಭಾರತದ ಸ್ಥಳೀಯ ಉದ್ಯೋಗಗಳನ್ನು ಮುಚ್ಚಿದ್ದಲ್ಲದೇ, ಅವರು ಸಂಯಮಿ ಮತ್ತು ಮಿತವ್ಯಯ ಮಾಡುವ ಭಾರತೀಯರನ್ನು ಭೋಗವಾದಿಗಳನ್ನಾಗಿ ಮಾಡಿ ಅವರ ಜೀವನದ ಧ್ಯೇಯವು ಮೋಜು ಮಾಡುತ್ತಾ ಜೀವಿಸುವುದು ಹಾಗೂ ಅದಕ್ಕಾಗಿ ಏನು ಬೇಕಾದರೂ ಮಾಡಿ ಹಣ ಸಂಪಾದನೆ ಮಾಡುವುದು, ಎಂಬ ಹೀನಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಪ್ರತಿದಿನ ಅನೇಕ ಮಾಧ್ಯಮಗಳಿಂದ ಅವರ ಮನಸ್ಸು ಮತ್ತು ಬುದ್ಧಿಯ ಮೇಲೆ ಆಘಾತ ಮಾಡುವ ಜಾಹೀರಾತುಗಳು ಅದರ ಮಾಧ್ಯಮಗಳಾಗಿವೆ. ನಮ್ಮಕಿವಿಗಳಿಗೆ-ಕಣ್ಣುಗಳಿಗೆ ಪದೇ ಪದೇ ಅಪ್ಪಳಿಸುವ ಈ ಜಾಹೀರಾತುಗಳೆಂದರೆ ಮಾನವನನ್ನು ಅವನತಿಯತ್ತ ಒಯ್ಯುವ ಬಂಡವಾಳಶಾಹಿಗಳ ಮಾರುಕಟ್ಟೆ ಸಂಸ್ಕೃತಿಯ ಫಲಶೃತಿಯಾಗಿವೆ, ಎಂಬುದನ್ನು ಗಮನದಲ್ಲಿಡಬೇಕು. ದೇಶದ ವಿಕಾಸಕ್ಕಾಗಿ ನಾವು ನಮ್ಮ ಮಾರುಕಟ್ಟೆಯನ್ನು ಅಂತರರಾಷ್ಟ್ರೀಯ ಕಂಪನಿಗಳಿಗೆ ತೆರೆದುಕೊಟ್ಟರೆ, ಅವರ ಉತ್ಪಾದನೆಗಳಿಗೆ ಸಂಬಂಧಪಟ್ಟ ಅವರ ಜಾಹೀರಾತುಗಳು ನಿಜವಾಗಿಯೂ ಭಾರತೀಯರ ಜೀವನಶೈಲಿಯ ಮೇಲೆ ಭವಿಷ್ಯದಲ್ಲಿ ಎಷ್ಟು ದೂರಗಾಮಿ ದುಷ್ಪರಿಣಾಮ ಮಾಡುತ್ತವೆ, ಎಂಬುದನ್ನೂ ಜಾಗರೂಕತೆಯಿಂದ ನೋಡುವುದು ಹಾಗೂ ಅವರನ್ನು ತಡೆಯುವುದೂ ದೇಶದ ವಿಕಾಸದ ಭಾಗವಲ್ಲವೇನು?
ಜಾಹೀರಾತುಗಳ ದುಷ್ಪರಿಣಾಮವನ್ನು ತಿಳಿದುಕೊಳ್ಳಿ !

ಅನೇಕ ಜಾಹೀರಾತುಗಳು ಗ್ರಾಹಕರಿಗೆ ಹಣ ಮತ್ತು ಗುಣಮಟ್ಟ ಇವೆರಡಲ್ಲಿಯೂ ಮೋಸ ಮಾಡುತ್ತವೆ. ಅಷ್ಟು ಮಾತ್ರವಲ್ಲ, ಅವುಗಳು ಹಾನಿಕರವಾಗಿರುತ್ತವೆ, ಎಂದು ಅರಿವಾಗಿರುವುದರಿಂದ ಆ ಕಂಪನಿಗಳ ವಿರುದ್ಧ ಖಟ್ಲೆ ದಾಖಲಿಸಲಾಗಿದೆ. ಜಾನ್ಸನ್ ಎಂಡ್ ಜಾನ್ಸನ್ ಈ ಕಂಪನಿಯ ಸಣ್ಣ ಮಕ್ಕಳ ಉತ್ಪಾದನೆಗಳ ಜಾಹೀರಾತಿನ ಮೇಲೆ ಆ ಉತ್ಪಾದನೆ ಹಾನಿಕಾರಿಯಾಗಿದೆಯೆಂದು ಅಮೇರಿಕಾದಲ್ಲಿ ಖಟ್ಲೆ ದಾಖಲಿಸಲಾಗಿತ್ತು. ನಂತರ ಅವರು ಅಪಾಯಕಾರಿ ಘಟಕವನ್ನು ತೆಗೆದುಹಾಕಿದ್ದೇವೆ, ಎಂದು ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಮಾತ್ರ ಅದನ್ನು ಮುಚ್ಚುಮರೆಯಿಲ್ಲದೆ ಸಾರಾಸಗಟಾಗಿ ಉಪಯೋಗಿಸಲಾಗುತ್ತಿದೆ. ವಿದೇಶದಲ್ಲಿ ನಿರ್ಬಂಧ ಹೇರಿದ ಮಾತ್ರೆಗಳು ಭಾರತದಲ್ಲಿ ಬೃಹತ್ಪ್ರಮಾಣದಲ್ಲಿ ಜಾಹೀರಾತು ಆಗಿರುವುದರಿಂದ ಸಹಜವಾಗಿ ಮಾರಾಟವಾಗುತ್ತಿವೆ. ಶೀತ-ಜ್ವರ-ತಲೆನೋವು, ಪಿತ್ತ ಇತ್ಯಾದಿಗಳಿಗೆ ನಿಯಮಿತವಾಗಿ ತೆಗೆದುಕೊಳ್ಳುವ ೨೯ ಮಾತ್ರೆಗಳು ಹಾನಿಕಾರಿಯಾಗಿರುವುದರಿಂದ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ. ಪ್ಯಾರೆಸಿಟಮಲ್, ಅಸ್ಪ್ರಿನ್ ಇಂತಹ ಮಾತ್ರೆಗಳ ಮೇಲೆ ವಿದೇಶದಲ್ಲಿನ ಅಭ್ಯಾಸಕರು ಸಂಶೋಧನೆ ಮಾಡಿ ಅವುಗಳ ದುಷ್ಪರಿಣಾಮ ವನ್ನು ಹೇಳುತ್ತಿರುವ ಮಾಹಿತಿ ಸಂಕೇತಸ್ಥಳದಲ್ಲಿ ಉಪಲಬ್ಧವಿದೆ. ಶಕ್ತಿ ವರ್ಧಕ ಚೂರ್ಣವನ್ನು ನೀಡುವ ಒಂದು ಕಂಪನಿಯು ಅದು ಎತ್ತರವನ್ನು ಹೆಚ್ಚಿಸುತ್ತದೆ, ಎಂದು ಜಾಹೀರಾತು ನೀಡಿದೆ. ಅದು ಎತ್ತರವನ್ನು ಹೆಚ್ಚಿಸಲು ಪೂರಕವಾಗಿರಲೂಬಹುದು; ಆದರೆ ಆ ಜಾಹೀರಾತು ತೋರಿಸುವುದರ ಅರ್ಥ ಆ ಚೂರ್ಣವನ್ನು ಸೇವಿಸುವುದರಿಂದ ಎತ್ತರ ಹೆಚ್ಚಾಗುವುದು, ಎಂದಾಗುವುದಿಲ್ಲ. ಅದರಿಂದ ಸುಂದರವಾಗಿ ಕಾಣಬೇಕು ಹಾಗೂ ಅದಕ್ಕಾಗಿ ಎತ್ತರ ಹೆಚ್ಚಾಗಬೇಕೆಂಬ ಭೋಗವಾದಿ ವಿಚಾರಸರಣಿಯನ್ನೂ ಭಾರತೀಯರ ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ. ಹೀಗೆಯೇ ಹೆಚ್ಚು ಕಡಿಮೆ ಪ್ರತಿಯೊಂದು ಜಾಹೀರಾತಿನಿಂದ ಗಮನಕ್ಕೆ ಬರುತ್ತದೆ. ತೂಕ ಹೆಚ್ಚಿಸುವ ಹಾಗೂ ತೂಕ ಕಡಿಮೆಗೊಳಿಸುವ ಸಲುವಾಗಿ ನಿರ್ಮಾಣ ಮಾಡಿದ ಕೆಲವು ಔಷಧಗಳ ಮೇಲೆ ಭಾರತದಲ್ಲಿ ನಿಬರ್ಂಧವಿದೆ. ಪದಾರ್ಥಗಳು ಕೆಡದಂತೆ ಉಪಯೋಗಿಸುವ ಮತ್ತು ಝಟ್‌ಪಟ್ ಸಿದ್ಧವಾಗುವ ಖಾದ್ಯಪದಾರ್ಥಗಳಲ್ಲಿ ಉಪಯೋಗಿಸುವ ಘಟಕಗಳು ಶರೀರಕ್ಕೆ ಅಪಾಯವಾಗಿರುತ್ತವೆ, ಎಂಬುದು ಅವುಗಳ ಆಕರ್ಷಕ ಜಾಹೀರಾತುಗಳಿಂದ ಧಾವಂತದ ಜೀವನ ನಡೆಸುವ ಗ್ರಾಹಕರಿಗೆ ಅರಿವಾಗುವುದಿಲ್ಲ. ಗುಟ್ಖಾದ ಜಾಹೀರಾತು ಮಾಡುವ ಸುಪ್ರಸಿದ್ಧ ನಟರಿಗೆ ನೋಟೀಸು ಕಳುಹಿಸಲಾಗಿತ್ತು. ಹಿಂದೆ ಒಂದು ಬಾಡಿ ಸ್ಪ್ರೆಯ ಉತ್ಪಾದನೆಯ ಜಾಹೀರಾತಿನಲ್ಲಿ ಹೇಗೆ ತೋರಿಸಲಾಗಿತ್ತೆಂದರೆ, ವಿವಾಹದ ರಾತ್ರಿ ಮದುಮಗಳು ಎದುರಿನ ಕಿಟಿಕಿಯಿಂದ ಬರುವ ಸುಗಂಧದಿಂದ ಆಕರ್ಷಿತಳಾಗಿ ಅಲ್ಲಿರುವ ಪುರುಷನ ಕಡೆಗೆ ಹೋಗುತ್ತಾಳೆ, ಇಷ್ಟು ಹೀನ ಮಟ್ಟದ ವಿಚಾರಸರಣಿ ಭಾರತೀಯ ಸಂಸ್ಕೃತಿಯಲ್ಲಿ ಅಂತು ಇಲ್ಲವೇ ಇಲ್ಲ; ವಿದೇಶದಲ್ಲಿನ ಪ್ರಜ್ಞಾವಂತ ಜನರಿಗೂ ಇದು ರುಚಿಸಲಿಕ್ಕಿಲ್ಲ. ಸದ್ಯ ರೆಡ್ ಲೇಬಲ್ ಚಹಾದ ಒಂದು ಜಾಹೀರಾತ್‌ನಲ್ಲಿ ಹೇಗೆ ತೋರಿಸಲಾಗಿದೆಯೆಂದರೆ, ಒಂದು ಮನೆಗೆ ಬೀಗ ಹಾಕಿರುವುದರಿಂದ ಹೊರಗೆ ನಿಂತಿರುವ ಹಿಂದೂ ದಂಪತಿಗಳು ಪಕ್ಕದ ಮನೆಯ ಮುಸಲ್ಮಾನ ಸ್ತ್ರೀಯ ಮನೆಗೆ ಹೋಗಲು ಮೊದಲು ಇಚ್ಛಿಸದಿದ್ದರೂ ಚಹಾದ ಸುಗಂಧದಿಂದ ಅಲ್ಲಿಗೆ ಹೋಗುತ್ತಾರೆ ಹಾಗೂ ಪುನಃ ಪುನಃ ಕೇಳಿ ಚಹಾ ತೆಗೆದುಕೊಳ್ಳುತ್ತಾರೆ. ಸರ್ವಧರ್ಮಸಮಭಾವದ ಪ್ರಭಾವವನ್ನು ಈ ಜಾಹೀರಾತುದಾರನು ಬಹಳ ಚಾತುರ್ಯದಿಂದ ಉಪಯೋಗಿಸಿದ್ದಾನೆ. ನೂರು ವರ್ಷಗಳ ಹಿಂದೆ ಹಿಂದೂಗಳಿಗೆ ಹೀಗೆ ಅನ್ನ ತಿನ್ನಲು ಕೊಟ್ಟು ಜಾತಿಗೆಡಿಸುವುದು ಅಂದರೆ ಮತಾಂತರಗೊಳಿಸುವಂತಹ ಸಂಕಲ್ಪನೆ ಸ್ಪಷ್ಟವಾಗಿತ್ತು; ಆದರೆ ಹಿಂದೂಗಳ ಎಲ್ಲ ದೃಢ ನಿಷ್ಠೆ ಈಗ (ಆಧುನಿಕತೆಯ ಹೆಸರಿನಲ್ಲಿ) ಅಳಿಸಿ ಹೋಗಿರುವುದರಿಂದ ಹಿಂದೂಗಳು ತಮ್ಮ ಧರ್ಮದ ಗೌರವವನ್ನು ಬಿಟ್ಟಿರುವುದರಿಂದ ಹಿಂದೂಗಳಿಗೆ ಈ ಜಾಹೀರಾತಿನಲ್ಲಿ ಅನೇಕ ವಿಧಗಳಲ್ಲಿ ತಮ್ಮ ಅವಮಾನವಾಗುತ್ತಿದೆಯೆಂಬುದು ಅರಿವಾಗು ವುದೇ ಇಲ್ಲ. ಎಷ್ಟೊ ಜಾಹೀರಾತುಗಳಲ್ಲಿ ಹಿಂದೂಗಳ ದೇವತೆ, ಋಷಿ, ಪರಂಪರೆಗಳ ಅವಮಾನ ಮಾಡಲಾಗುತ್ತದೆ, ಅವರನ್ನು ಚೇಷ್ಟೆಯ ವಿಷಯವನ್ನಾಗಿ ಮಾಡಲಾಗುತ್ತದೆ. ಆದರೂ ಹಿಂದೂಗಳಿಗೆ ಅದರಿಂದ ಏನೂ ಅನಿಸುವುದಿಲ್ಲ. ದೂರಚಿತ್ರವಾಹಿನಿಯಲ್ಲಿನ ಜಾಹೀರಾತುಗಳು ಮತ್ತು ಮಾಲಿಕೆಗಳಲ್ಲಿನ ಅಶ್ಲೀಲತೆಯಿಂದ ವಿದ್ಯಾರ್ಥಿಗಳ ಶರೀರದ ಮೇಲೆ ಪರಿಣಾಮವಾಗುತ್ತಿದೆ, ಎಂದು ನಾಗಪುರ ವಿಭಾಗೀಯಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾಡಿ ಜಾಹೀರಾತಿಗಾಗಿ ಸೆನ್ಸಾರ್ ಬೋರ್ಡ್‌ನ ಬೇಡಿಕೆ ಮಾಡಲಾಗಿದೆ. ನಾಗರಿಕರೇ, ಅದಕ್ಕೂ ಮೊದಲು ಪ್ರತಿಯೊಬ್ಬರೂ ತಮ್ಮ ಮನಸ್ಸಿನ ಸೆನ್ಸಾರ್ ಜಾಗೃತಗೊಳಿಸಿ ಯೋಗ್ಯಾ ಯೋಗ್ಯತೆಯ ವ್ಯತ್ಯಾಸವನ್ನು ತಿಳಿದುಕೊಳ್ಳವುದು ಅವಶ್ಯಕವಾಗಿದೆ!

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮರುಳಾಗಿಸುವ ಸಮಾಜಘಾತಕ ಜಾಹೀರಾತುಗಳು !