ಗಣೇಶಭಕ್ತರೇ, ಧರ್ಮಶಾಸ್ತ್ರಕ್ಕನುಸಾರ ವರ್ತಿಸುವುದೇ, ನಿಜವಾದ ಧರ್ಮಾಚರಣೆ !

ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ 
ಪೂಜಿಸಬೇಕಾದ ಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ 
ತಯಾರಿಸಿಕೊಳ್ಳುವುದರ ಸಂದರ್ಭದಲ್ಲಿನ ಕೆಲವು ಅಡಚಣೆಗಳು ಮತ್ತು ಅವುಗಳ ಉತ್ತರಗಳು
. ಧರ್ಮಶಾಸ್ತ್ರಕ್ಕನುಸಾರ ಪೂಜಿಸಬೇಕಾದ ಜೇಡಿ ಮಣ್ಣಿನ ಮೂರ್ತಿಯು ದುಬಾರಿಯಾಗಿರುತ್ತದೆ : ಪ್ರತಿಯೊಂದು ಕುಟುಂಬ ದಲ್ಲಿ ಗಣೇಶೋತ್ಸವಕ್ಕಾಗಿ ಆಗುವ ಒಟ್ಟು ವೆಚ್ಚದಲ್ಲಿ (ಉದಾ. ಆಧುನಿಕ ಅಲಂಕಾರ, ಕುಟುಂಬ ದವರ ಬಟ್ಟೆಗಳ ಖರೀದಿ ಇತ್ಯಾದಿ) ಮೂರ್ತಿಯನ್ನು ಖರೀದಿಸಲು ಆಗುವ ವೆಚ್ಚವು ಅತ್ಯಲ್ಪವಾಗಿರುತ್ತದೆ. ಶ್ರೀ ಗಣೇಶನ ಪೂಜೆ ಮಾಡುವುದರ ಉದ್ದೇಶವು ಕುಟುಂಬದವರಿಗೆ ಮೂರ್ತಿಯಿಂದ ಗಣೇಶತತ್ತ್ವ ದೊರೆಯುವುದಾಗಿರುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಯಿಂದ ಈ ಲಾಭ ದೊರೆ ಯುವುದು ಸಾಧ್ಯವಿಲ್ಲ. ಗಣೇಶಭಕ್ತರೇ, ಮೂರ್ತಿಯ ಮೂಲ್ಯದ (ಹಣದ) ಪ್ರಶ್ನೆಯಿದ್ದಲ್ಲಿ ಚಿಕ್ಕ ಮೂರ್ತಿಯನ್ನು ಖರೀದಿಸಿರಿ; ಆದರೆ ತುಲನೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿ ಅಗ್ಗವಿದೆಯೆಂದು ಖರೀದಿಸುವ ಧರ್ಮಶಾಸ್ತ್ರ ವಿರೋಧಿ ವರ್ತನೆಯನ್ನು ಮಾಡಬೇಡಿರಿ.

. ಕೆಲವು ಮನೆಗಳಲ್ಲಿ ಮಕ್ಕಳ ಹಠಕ್ಕಾಗಿ (ಅಥವಾ ಪ್ರೀತಿಗಾಗಿ) ಪ್ರತಿವರ್ಷ ಬೇರೆಬೇರೆ ಅಶಾಸ್ತ್ರೀಯ ರೂಪದಲ್ಲಿನ ಮೂರ್ತಿಗಳನ್ನು ತರಲಾಗುತ್ತದೆ. ಮಕ್ಕಳ ಹಠವನ್ನು ಪೂರೈಸುವುದು ತಪ್ಪಾಗಿದೆ ಏನು ಎಂಬ ಪ್ರಶ್ನೆಯು ಪಾಲಕರಿಗೆ ಬೀಳುತ್ತದೆ ! : ಪ್ರತಿವರ್ಷ ವಿವಿಧ ವಿಧದ ಮೂರ್ತಿಗಳನ್ನು ತರಲು ಮೂರ್ತಿಯು ಆಟವಾಡುವ ಆಟಿಕೆಯಾಗಿಲ್ಲ. ಭಕ್ತಿಭಾವವನ್ನು ವೃದ್ಧಿಸಲು, ಈಶ್ವರೀ ಚೈತನ್ಯವನ್ನು ಗ್ರಹಿಸಲು ಶ್ರೀ ಗಣೇಶನ ಮೂರ್ತಿಯನ್ನು ಮನೆಯಲ್ಲಿ ತಂದು ಪೂಜಿಸುವುದಿರುತ್ತದೆ. ಧರ್ಮಶಾಸ್ತ್ರದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಬಾರದು. ತದ್ವಿರುದ್ಧ ಈ ನಿಮಿತ್ತದಿಂದ ಮಕ್ಕಳಿಗೆ ಉಪದೇಶ ಮಾಡಬೇಕು ಮತ್ತು ಅವರಿಗೆ ಧರ್ಮಶಿಕ್ಷಣ ನೀಡಬೇಕು.

ಶುಭಕಾರ್ಯದಲ್ಲಿ ಮೊದಲು ಗಣೇಶನ ಪೂಜೆ ಏಕೆ ?
ಶ್ರೀ ಗಣಪತಿಯು ದಿಕ್ಕುಗಳ ಅಧಿಪತಿಯಾಗಿದ್ದಾನೆ, ಅವನ ಪೂಜೆ ಮಾಡಿದರೆ ಅವನು ಎಲ್ಲ ದಿಕ್ಕುಗಳನ್ನು ಮುಕ್ತಗೊಳಿಸುತ್ತಾನೆ.
ದಿಕ್ಕುಗಳು ಮುಕ್ತವಾಗುವುದರಿಂದ ಪೂಜಾಸ್ಥಳಕ್ಕೆ ದೇವತೆಗಳು ಬರುತ್ತಾರೆ.
ಗಣಪತಿ ಅನಿಷ್ಟ ಶಕ್ತಿಗಳನ್ನು ತನ್ನ ಪಾಶದಿಂದ ಬಂಧಿಸುವುದರಿಂದ ಶುಭ ಕಾರ್ಯದಲ್ಲಿನ ವಿಘ್ನ ದೂರವಾಗುತ್ತದೆ.
ಗಣಪತಿಯು ಮಾನವನ ನಾದ ಭಾಷೆಯನ್ನು ದೇವತೆಗಳ ಪ್ರಕಾಶ ಭಾಷೆಗೆ ರೂಪಾಂತರಿಸುವುದರಿಂದ ನಾವು ಮಾಡಿದ ಪ್ರಾರ್ಥನೆಯು ಇಷ್ಟ ದೇವತೆಗಳವರೆಗೆ ಬೇಗನೆ ತಲುಪುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗಣೇಶಭಕ್ತರೇ, ಧರ್ಮಶಾಸ್ತ್ರಕ್ಕನುಸಾರ ವರ್ತಿಸುವುದೇ, ನಿಜವಾದ ಧರ್ಮಾಚರಣೆ !