ಬರಗಾಲದ ಕಾರಣವನ್ನು ಮುಂದೆಮಾಡಿ ಧರ್ಮವಿರೋಧಿ ರೂಢಿಯನ್ನು ಬೆಂಬಲಿಸುವವರಿಗೆ ಧರ್ಮಾಚರಣೆಯ ಮಹತ್ವ ತಿಳಿಸಿ !

ಶ್ರೀ. ನಾಗೇಶ ಗಾಡೆ
ಪ್ರತಿವರ್ಷದಂತೆ ಕೆಲವು ಧರ್ಮದ್ರೋಹಿ ಸಂಘಟನೆಗಳು ಟ್ಯಾಂಕರ್ಗಳಲ್ಲಿ ವಿಸರ್ಜನೆ ಮಾಡುವ ಅಥವಾ ಮಹಾರಾಷ್ಟ್ರದಲ್ಲಿ ಮೂರ್ತಿದಾನ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಬಹುದು. ಪ್ರತಿವರ್ಷದ ತುಲನೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ, ನದಿ, ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿಲ್ಲ. ಶ್ರೀಗಣೇಶಮೂರ್ತಿಗಳ ವಿಸರ್ಜನೆಯ ಅವಧಿಯಲ್ಲಿ ನದಿ, ಕೆರೆಗಳಲ್ಲಿ ಸಾಕಷ್ಟು ನೀರಿಲ್ಲ. ಆದುದರಿಂದ ಮೂರ್ತಿಯ ವಿಸರ್ಜನೆ ಮಾಡುವುದು ಬೇಡ, ಮೂರ್ತಿದಾನ ಮಾಡಿ ಅಥವಾ ಟ್ಯಾಂಕರ್‌ನಲ್ಲಿ ವಿಸರ್ಜಿಸಿ, ಎಂದು ಧರ್ಮದ್ರೋಹಿಗಳು ಒತ್ತಾಯಿಸಬಹುದು. ಧರ್ಮಶಾಸ್ತ್ರವು ತಿಳಿಯದ ಗಣೇಶಭಕ್ತರಿಗೂ ಈ ಕರೆ ಮೂರ್ತಿದಾನ ಮಾಡಲು ಪ್ರೋತ್ಸಾಹಿಸಲಿದೆ.

ಆಪತ್ಕಾಲದಲ್ಲೂ ಧರ್ಮಶಾಸ್ತ್ರಕ್ಕನುಸಾರ ಆಚರಣೆ ಮಾಡುವ ಆವಶ್ಯಕತೆಯಿದ್ದು, ಇದರ ಕಾರಣಗಳು ಮುಂದಿನಂತಿವೆ.
. ಹಿಂದೂಗಳು ಧರ್ಮವನ್ನು
ಪಾಲಿಸಿದರೆ ಮಾತ್ರ, ರಾಷ್ಟ್ರದ ಮೇಲಿನ ವಿಪತ್ತುಗಳ ನಿವಾರಣೆಯಾಗುವುದು !
ಅತಿವೃಷ್ಟಿಃ ಅನಾವೃಷ್ಟಿಃ ಶಲಭಾ ಮೂಷಕಾಃ ಶುಕಾಃ
ಸ್ವಚಕ್ರಂ ಪರಚಕ್ರಂ ಚ ಸಪ್ತೈತಾ ಈತಯಃ ಸ್ಮೃತಾಃ - ಕೌಶಿಕಪದ್ಧತಿ
ಅರ್ಥ : (ರಾಜನು ಅಧರ್ಮಿಯಾಗಿದ್ದರೆ, ಪ್ರಜೆಗಳೂ ಅಧರ್ಮಿಗಳಾಗುತ್ತಾರೆ. ಇಬ್ಬರೂ ಧರ್ಮಪಾಲಿಸದಿರುವುದರಿಂದ) ಅತಿವೃಷ್ಟಿ (ಪ್ರವಾಹ), ಅನಾವೃಷ್ಟಿ (ಬರಗಾಲ), ಕೀಟಗಳ ಹಾವಳಿ, ಇಲಿಗಳ ಕಾಟ, ಗಿಳಿಗಳ ಉಪದ್ರವ, ಒಳ ಜಗಳ ಮತ್ತು ಶತ್ರುವಿನ ದಾಳಿ ಹೀಗೆ ಏಳು ವಿಧದ ಸಂಕಟಗಳು ರಾಷ್ಟ್ರದಲ್ಲಿ ಉದ್ಭವಿಸುತ್ತದೆ. ತಾತ್ಪರ್ಯವೆಂದರೆ, ಪ್ರಜೆ ಮತ್ತು ರಾಜ ಇಬ್ಬರೂ ಧರ್ಮಪಾಲನೆ ಮತ್ತು ಸಾಧನೆ ಮಾಡುವವರಾಗಿರಬೇಕು. ಆಗ ಮಾತ್ರ ಆಪತ್ಕಾಲದ ತೀವ್ರತೆಯು ಕಡಿಮೆಯಾಗಲು ಅಥವಾ ಆಪತ್ಕಾಲ ವನ್ನು ಸಹಿಸಲು ಸಾಧ್ಯವಾಗುವುದು. ಸದ್ಯ ನಿರ್ಮಾಣ ವಾಗಿರುವ ಬರಗಾಲವು ರಾಜಕಾರಣಿಗಳು ಮತ್ತು ಪ್ರಜೆಗಳ ಅಧರ್ಮಾಚರಣೆಯ ಫಲವಾಗಿದೆ. ಅದ ರಲ್ಲಿ ಮೂರ್ತಿದಾನ ಮಾಡುವಂತಹ ಅಧರ್ಮಿ ಪದ್ಧತಿಯ ಆಚರಣೆ ಮಾಡಿದರೆ ಇನ್ನಷ್ಟು ವಿಪತ್ತ್ತುಗಳಿಗೆ ಆಮಂತ್ರಣ ನೀಡಿದಂತಾಗುವುದು. ಇದರ ಇನ್ನೊಂದು ಅರ್ಥ, ಧರ್ಮಪಾಲನೆ ಮಾಡಿದರೆ ಮಾತ್ರ ಬರಗಾಲ ನಿವಾರಣೆಯಾಗಲು ಸಾಧ್ಯ ಎಂದಾಗುತ್ತದೆ.
. ಗಣೇಶಮೂರ್ತಿಯ ವಿಸರ್ಜನೆಯಿಂದ ಜಲಾಶಯಗಳು ಶುದ್ಧವಾಗುವವು !
ಶ್ರೀ ಗಣೇಶಮೂರ್ತಿಯ ವಿಸರ್ಜನೆ ಮಾಡುವು ದರಿಂದ ಜಲಾಶಯಗಳಲ್ಲಿ ಪ್ರದೂಷಣೆಯಾಗುತ್ತದೆ, ಎಂದು ಧರ್ಮದ್ರೋಹಿಗಳು ಬೊಬ್ಬೆ ಹೊಡೆಯುತ್ತಾರೆ. ಧರ್ಮಶಾಸ್ತ್ರಕ್ಕನುಸಾರ ಗಣೇಶಮೂರ್ತಿಗಳ ವಿಸರ್ಜನೆ
ಮಾಡುವುದರಿಂದ ಗಣೇಶತತ್ತ್ವದ ಪವಿತ್ರಕಗಳು ನೀರಿನಲ್ಲಿ ಸೇರುವುದರಿಂದ ಜಲಾಶಯದ ನೀರು ಪವಿತ್ರವಾಗುತ್ತದೆ.
. ಪ್ರತಿಕೂಲ ಪರಿಸ್ಥಿತಿಯಲ್ಲೂ ಧರ್ಮಾಚರಣೆಯನ್ನು ಹೇಗೆ
ಕಟ್ಟುನಿಟ್ಟಾಗಿ ಪಾಲಿಸುತ್ತಾರೆಂಬುದನ್ನು ಮುಸಲ್ಮಾನರಿಂದ ಕಲಿಯಿರಿ !
ಮುಸಲ್ಮಾನರು ಅವರ ಧರ್ಮದಲ್ಲಿ ಹೇಳಿದ ಪ್ರತಿಯೊಂದನ್ನು, ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತೀವ್ರ ಬೇಸಿಗೆ ಯಲ್ಲೂ ಮುಸಲ್ಮಾನರು ಉಗಳು ನುಂಗದಂತೆ ರೋಜಾ ಪಾಲಿಸುತ್ತಾರೆ. ಹಿಂದೂಗಳು ಮಾತ್ರ ತಮ್ಮ ಸಣ್ಣ ಸಣ್ಣ ಕಷ್ಟಗಳಿಂದ ಪಾರಾಗಲು ಧರ್ಮಶಾಸ್ತ್ರವನ್ನು ಪಾಲಿಸುವುದಿಲ್ಲ. ಗಣೇಶಮೂರ್ತಿಗಳ ವಿಸರ್ಜನೆ ಮಾಡಲು ಹರಿಯುವ ನೀರಿನ ಜಲಸ್ತ್ರೋತಗಳು ಬರಗಾಲದಿಂದಾಗಿ ಸಮೀಪದಲ್ಲಿ ಲಭ್ಯವಿಲ್ಲದಿದ್ದಾಗ ಮೂರ್ತಿದಾನ ಅಥವಾ ಟ್ಯಾಂಕರ್‌ನಲ್ಲಿ ವಿಸರ್ಜಿಸು ವಂತಹ ಅಧರ್ಮಿ ಕೃತ್ಯಗಳನ್ನು ಮಾಡುತ್ತಾರೆ; ಆದರೆ ಧರ್ಮಪಾಲನೆಯನ್ನು ಆಗ್ರಹಿಸಿ ವರ್ಷಕ್ಕೊಮ್ಮೆ ಯಾದರೂ ಸ್ವಲ್ಪ ದೂರ ಹೋಗಿ ಹರಿಯುವ ನೀರಿನಲ್ಲಿ ಮೂರ್ತಿವಿಸರ್ಜನೆ ಮಾಡಲು ಕಷ್ಟಪಡುವುದಿಲ್ಲ. ಇಂತಹ ಹಿಂದೂಗಳಿಗೆ ಸಂಕಟದಲ್ಲಿರುವಾಗ ಧರ್ಮವು (ಈಶ್ವರನು) ಅವರ ರಕ್ಷಣೆಯಾದರೂ ಏಕೆ ಮಾಡಬೇಕು ?
. ಮೂರ್ತಿಯನ್ನು ಹರಿಯುವ ನೀರಿನಲ್ಲಿ
ವಿಸರ್ಜನೆ ಮಾಡಿದರೆ ಮಾತ್ರ, ಶ್ರೀಗಣೇಶ ಪೂಜೆಯ ಆಧ್ಯಾತ್ಮಿಕ ಲಾಭವಾಗುವುದು !
ಧರ್ಮಶಾಸ್ತ್ರಕ್ಕನುಸಾರ ಶ್ರೀ ಗಣೇಶಚತುರ್ಥಿ ಯಂದು ಪೂಜೆ ಮಾಡಿದ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡುವುದು, ಆ ಪೂಜೆಯ ಕೊನೆಯ ವಿಧಿಯಾಗಿರುತ್ತದೆ. ಯಾವ ರೀತಿ ವೈದ್ಯರು ಹೇಳಿದ ಪ್ರಕಾರ ಔಷಧಿಗಳನ್ನು ತೆಗೆದುಕೊಂಡರೆ ಮಾತ್ರ ರೋಗವು ಗುಣವಾಗುತ್ತದೆಯೋ ಹಾಗೆಯೇ ಗಣೇಶಪೂಜೆಯಲ್ಲಿ ವಿಸರ್ಜನೆಯ ವಿಧಿಯನ್ನು ಧರ್ಮಶಾಸ್ತ್ರದಂತೆ ಹರಿಯುವ ನೀರಿನಲ್ಲಿ ಮಾಡಿದರೆ ಮಾತ್ರ ಅದರ ಆಧ್ಯಾತ್ಮಿಕ ಲಾಭವಾಗುತ್ತದೆ.
- ಶ್ರೀ. ನಾಗೇಶ ಗಾಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬..೨೦೧೫)

ಸಾಧಕರಿಗೆ ಸೂಚನೆ
ಜಲಾಶಯಗಳ ಪ್ರದೂಷಣೆ ಅಥವಾ ಬರಗಾಲದಿಂದಾಗಿ ಹರಿಯುವ ನೀರಿನ ಸಮಸ್ಯೆಯ ಕಾರಣ ಕೊಟ್ಟು ಧರ್ಮವಿರೋಧಿಗಳು ಮೂರ್ತಿದಾನ ಪದ್ಧತಿಯನ್ನು ಬೆಂಬಲಿಸುತ್ತಿದ್ದರೆ ಅಥವಾ ಈ ಕುರಿತು ಯಾರಾದರೂ ಪ್ರಶ್ನಿಸಿದರೆ ಮೇಲಿನಂತೆ ಅದಕ್ಕೆ ಉತ್ತರ ನೀಡಿರಿ !No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬರಗಾಲದ ಕಾರಣವನ್ನು ಮುಂದೆಮಾಡಿ ಧರ್ಮವಿರೋಧಿ ರೂಢಿಯನ್ನು ಬೆಂಬಲಿಸುವವರಿಗೆ ಧರ್ಮಾಚರಣೆಯ ಮಹತ್ವ ತಿಳಿಸಿ !