ಸ್ವತಃ ಕೃತಜ್ಞತೆಯ ಭಾವದಲ್ಲಿದ್ದು ಇತರರಿಗೂ ಪ್ರೇರಣೆ ನೀಡಿ ಆ ಭಾವದಲ್ಲಿರಲು ಕಲಿಸುವ ಸನಾತನದ ಸಂತರಾದ ಪೂ. ಪಾತ್ರೀಕರ್‌ಕಾಕಾ !

ಪೂ. ಅಶೋಕ ಪಾತ್ರೀಕರ್
ಕು. ಸರ್ವಮಂಗಲಾ ಮೇದಿ
೧. ಆಶ್ರಮದ ಮಹಾಪ್ರಸಾದದಲ್ಲಿ ರುಚಿಕರ ಪದಾರ್ಥಗಳು ಇರುವುದನ್ನು ನೋಡಿ ಪೂ. ಪಾತ್ರೀಕರ್ ಕಾಕಾರವರ ಕಣ್ಣಲ್ಲಿ ಕೃತಜ್ಞತೆಯಿಂದ ನೀರು ಬರು ವುದು ಮತ್ತು ಅನಂತರ ಪ್ರತಿಸಲ ಊಟ ದಲ್ಲಿ ವಿಶೇಷ ಪದಾರ್ಥ ಇದ್ದಾಗ ಪೂ. ಪಾತ್ರೀಕರ್‌ಕಾಕಾರವರ ಕೃತಜ್ಞತೆಯ ಭಾವಾಶ್ರುಗಳಿಂದ ತುಂಬಿದ ಕಣ್ಣುಗಳ ನೆನಪಾಗುವುದು : ಒಂದು ದಿನ ರಾಮನಾಥಿ ಆಶ್ರಮದಲ್ಲಿ ಮಧ್ಯಾಹ್ನದ ಮಹಾಪ್ರಸಾದಕ್ಕೆ ಪೂರಿ ಭಾಜಿ ಮತ್ತು ಪಾಯಸ ಮುಂತಾದ ರುಚಿಕರ ಪದಾರ್ಥಗಳಿದ್ದವು. ಆ ದಿನ ಭೋಜನ ಮಾಡುವಾಗ ನಾನು ಪೂ. ಪಾತ್ರೀಕರ್‌ಕಾಕಾರವರ ಪಕ್ಕದಲ್ಲಿ ಮಹಾಪ್ರಸಾದಕ್ಕೆ ಕುಳಿತಿದ್ದೆನು. ತಟ್ಟೆಯಲ್ಲಿನ ಎಲ್ಲ ಪದಾರ್ಥಗಳನ್ನು ನೋಡಿ ಅವರು, ‘ನಮ್ಮ ಮನೆಯಲ್ಲಿ ಕೂಡ ಇಷ್ಟೊಂದು ಪದಾರ್ಥಗಳು ಅದುಸಹ ಸರಿಯಾದ ಸಮಯಕ್ಕೆ, ನಮಗೆ ತಿನ್ನಲು ಸಿಗುವುದಿಲ್ಲ; ಆದರೆ ಇಲ್ಲಿ ಗುರುಗಳು ಸಮಯಕ್ಕೆ ಸರಿಯಾಗಿ ಎಲ್ಲ ಪಕ್ವಾನ್ನಗಳನ್ನು ಕೊಡುತ್ತಿದ್ದಾರೆ’ ಎಂದರು. ಆ ಸಮಯದಲ್ಲಿ ಅವರ ಕಣ್ಣಲ್ಲಿ ನೀರು ಬಂತು. ಅಂದಿನಿಂದ ಆಶ್ರಮದ ಭೋಜನದಲ್ಲಿ ಹೀಗೆ ಏನಾದರೂ ವಿಶೇಷ ಪದಾರ್ಥವಿದ್ದರೆ ನನಗೆ ಪೂ. ಕಾಕಾರವರ ಕೃತಜ್ಞತೆಯ ಭಾವಾಶ್ರುಗಳಿಂದ ತುಂಬಿದ ಕಣ್ಣುಗಳ ನೆನಪಾಗುತ್ತದೆ ಮತ್ತು ನನ್ನಲ್ಲೂ ಕೃತಜ್ಞತಾ ಭಾವ ಜಾಗೃತವಾಗುತ್ತದೆ.

೨. ಪೂ. ಪಾತ್ರೀಕರ್‌ಕಾಕಾರವರ ಪ್ರೇರಣೆಯಿಂದಲೇ ಕೃತಜ್ಞತೆ ವ್ಯಕ್ತಪಡಿಸುವ ಸಂಸ್ಕಾರವಾಗಿರುವಂತೆ ಅರಿವಾಗುವುದು : ನಂತರ ಯಾವಾಗೆಲ್ಲ ಇಂತಹ ಪ್ರಸಂಗ ಬಂದಾಗ ನಾನು ಪೂ. ಕಾಕಾರವರಿಗೆ, ‘ಇವತ್ತು ನಿಮಗೆ ಕೃತಜ್ಞತೆ ಅನಿಸಿರಬೇಕು ಅಲ್ಲವೇ ?’, ಎಂದು ಕೇಳುತ್ತೇನೋ, ಆಗ ಅವರು ನನ್ನನ್ನೇ ಪ್ರಶಂಸಿಸಿ,‘ ನೋಡಿ, ಈ ಸಾಧಕಿಯು ಕೃತಜ್ಞತಾಭಾವದಿಂದ ಪ್ರಸಾದ ಸ್ವೀಕಾರ ಮಾಡುತ್ತಾಳೆ ಆದರೆ ನಾವು ಮಾತ್ರ ಹಾಗೆಯೇ ಸ್ವೀಕರಿಸುತ್ತೇವೆ’ ಎಂದು ಹೇಳುತ್ತಾರೆ. ಆ ಸಮಯದಲ್ಲಿ ‘ಅವರ ಪ್ರೇರಣೆಯಿಂದಲೇ ಕೃತಜ್ಞತೆ ವ್ಯಕ್ತಪಡಿಸುವ ಸಂಸ್ಕಾರವು ನನ್ನ ಮೇಲೆ ಆಗಿದೆ’, ಎಂಬುದರ ಅರಿವು ನನಗಾಯಿತು.
೩. ‘ಎಲ್ಲರಿಗೂ ಮಾವಿನಹಣ್ಣಿನ ರಸ ದೊರೆತು ಆನಂದ ಪಡೆಯುತ್ತಿರು ವುದನ್ನು ನೋಡಿ ಸ್ವತಃ ಅದನ್ನು ತೆಗೆದು ಕೊಳ್ಳದೆ ಇದ್ದರೂ, ಕೃತಜ್ಞತೆಯೇ ಕೃತಜ್ಞತೆ ಅನಿಸಬೇಕು’, ಎಂದು ಪೂ. ಪಾತ್ರೀಕರ್‌ಕಾಕಾರವರು ಹೇಳುವುದು ಮತ್ತು ಅವರಲ್ಲಿರುವ ವ್ಯಾಪಕತೆ ಮತ್ತು ಗುರುಗಳ ಬಗ್ಗೆ ಇರುವ ಕೃತಜ್ಞತೆಯ ಭಾವ ಕಂಡು ನನ್ನಲ್ಲಿರುವ ಸಂಕುಚಿತತನದ ಅರಿವಾಗುವುದು : ಒಮ್ಮೆ ಎಲ್ಲ ಸಾಧಕರಿಗಾಗಿ ಮಾವಿನಹಣ್ಣಿನ ರಸ ಮಾಡಿದ್ದರು. ಆ ಸಮಯದಲ್ಲಿ ಅವರು ನನ್ನನ್ನು ಕರೆದು ಕೇಳಿದರು, ‘ಇಂದು ಗುರುಗಳು ಮಾವಿನಹಣ್ಣಿನ ರಸದ ಔತಣ ನೀಡಿದ್ದಾರೆ. ನಿನಗೆ ತುಂಬಾ ಕೃತಜ್ಞತೆ ಅನಿಸಿರಬೇಕು ಅಲ್ಲವೇ ?’ ಎಂದರು, ಆಗ ನಾನು ‘ಇಲ್ಲ, ಇವತ್ತು ನಾನು ಕೇವಲ ಮಜ್ಜಿಗೆ ತೆಗೆದುಕೊಳ್ಳುವವಳಿದ್ದೇನೆ; ಆದ್ದರಿಂದ ಮಾವಿನ ಹಣ್ಣಿನ ರಸ ತೆಗೆದುಕೊಳ್ಳುವುದಿಲ್ಲ’, ಎಂದು ಅವರಿಗೆ ಹೇಳಿದೆನು. ಆಗ ಅವರು, ‘ಅರೆ, ಇವತ್ತು ಎಲ್ಲ ಸಾಧಕರಿಗೆ ಮಾವಿನ ಹಣ್ಣಿನ ರಸ ಸಿಗುತ್ತಿದೆ. ಆದ್ದರಿಂದ ಎಲ್ಲರಿಗೂ ಆನಂದ ಸಿಕ್ಕಿತು; ಆದುದರಿಂದ ಕೃತಜ್ಞತೆಯೇ ಕೃತಜ್ಞತೆ ಅನಿಸಬೇಕು’ ಎಂದರು. ಆಗ ‘ನನಗೆ ನನ್ನಲ್ಲಿನ ಸಂಕುಚಿತತನದ ಅರಿವಾಯಿತು ಹಾಗೂ ಸಂತರಲ್ಲಿ ಎಷ್ಟು ವ್ಯಾಪಕತೆ ಇರುತ್ತದೆ’ ಎಂಬುದು ಗಮನಕ್ಕೆ ಬಂತು. ಈ ಪ್ರಸಂಗದಲ್ಲಿ ನನಗೆ ಪೂ. ಪಾತ್ರೀಕರ್‌ಕಾಕಾರವರಿಂದ ‘ಗುರುಗಳ ಬಗ್ಗೆ ಕೃತಜ್ಞತೆಯ ಭಾವ’ ಮತ್ತು ‘ಇತರರ ಆನಂದದಲ್ಲಿ ನಾವೂ ಆನಂದದಿಂದ ಸಹಭಾಗಿಯಾಗುವುದು’, ಎಂಬ ಗುಣ ಕಲಿಯಲು ಸಿಕ್ಕಿತು.
‘ಹೇ ಗುರುದೇವಾ, ಸಂತರಂತೆ ನನ್ನೊಳಗೂ ಕೃತಜ್ಞತೆಯ ಭಾವ ಹೆಚ್ಚಾಗಲಿ’, ಎಂದು ನಿಮ್ಮ ಚರಣಗಳಲ್ಲಿ ಪ್ರಾರ್ಥನೆ !’
- ಕು. ಸರ್ವಮಂಗಲಾ ಮೇದಿ, ಸನಾತನ ಆಶ್ರಮ, ರಾಮನಾಥಿ, ಗೋವಾ.( ೩೦.೬.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ವತಃ ಕೃತಜ್ಞತೆಯ ಭಾವದಲ್ಲಿದ್ದು ಇತರರಿಗೂ ಪ್ರೇರಣೆ ನೀಡಿ ಆ ಭಾವದಲ್ಲಿರಲು ಕಲಿಸುವ ಸನಾತನದ ಸಂತರಾದ ಪೂ. ಪಾತ್ರೀಕರ್‌ಕಾಕಾ !