ಸಾಧಕರೇ, ತುರ್ತು ಸೇವೆಗಳಿಂದಾಗಿ ವ್ಯಷ್ಟಿ ಸಾಧನೆಯ ಪ್ರಯತ್ನ ಕಡಿಮೆಯಾದರೆ ಒತ್ತಡ ಮಾಡಿಕೊಳ್ಳದೇ ದೊರೆತ ಸೇವೆಯನ್ನು ಭಾವಪೂರ್ಣವಾಗಿ ಮತ್ತು ಪರಿಪೂರ್ಣವಾಗಿ ಮಾಡಿರಿ !

ಗುರುಪೂರ್ಣಿಮೆ, ಹಿಂದೂ ಧರ್ಮಜಾಗೃತಿ ಸಭೆ, ಹಿಂದೂ ಅಧಿವೇಶನ ಮುಂತಾದ ಕಾರ್ಯಕ್ರಮಗಳ ಸಮಯದಲ್ಲಿ ಸಾಧಕರಿಗೆ ಹೆಚ್ಚು ಸೇವೆ ಇರುತ್ತದೆ ಮತ್ತು ಅದನ್ನು ತಕ್ಷಣ ಪೂರ್ಣ ಮಾಡುವುದು ಅನಿವಾರ್ಯವಾಗಿರುತ್ತದೆ. ಆದುದರಿಂದ ಇಂತಹ ಸಮಯದಲ್ಲಿ ಕೆಲವು ಸಾಧಕರಿಂದ ಸ್ವಯಂಸೂಚನೆ, ಸ್ವಭಾವದೋಷ, ಅಹಂ ಪಟ್ಟಿ ಬರೆಯುವುದು ಮುಂತಾದ ವ್ಯಷ್ಟಿ ಸಾಧನೆಯ ಪ್ರಯತ್ನಗಳಾಗುವುದಿಲ್ಲ. ಇದರಿಂದಾಗಿ ಅವರಿಗೆ ಒತ್ತಡವಾಗುತ್ತದೆ ಅಥವಾ ನಕಾರಾತ್ಮಕ ವಿಚಾರಗಳಿಂದಾಗಿ ನಿರಾಶೆಯಾಗುತ್ತದೆ. ಸೇವೆಯ ಮೇಲೆ ಇದರ ವಿಪರೀತ ಪರಿಣಾಮವಾಗಿ, ತಪ್ಪುಗಳಾಗಿ ಸೇವೆಯ ಫಲನಿಷ್ಪತ್ತಿ ಕಡಿಮೆಯಾಗುತ್ತದೆ.

ಸಾಧಕರು ಮಹತ್ವದ ಮತ್ತು ತುರ್ತು ಸೇವೆಗಳ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮಾಡಿ ದೊರೆತ ಸೇವೆಯನ್ನು ಪರಿಪೂರ್ಣವಾಗಿ ಮತ್ತು ಭಾವಪೂರ್ಣ ವಾಗಿ ಮಾಡುವ ಕಡೆಗೆ ಹೆಚ್ಚು ಗಮನ ನೀಡಬೇಕು. ವಿಶೇಷವೇನೂ ಇಲ್ಲದ ಸಮಯದಲ್ಲಿ ವರ್ಷವಿಡೀ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮನಃಪೂರ್ವಕ ಮತ್ತು ತಳಮಳದಿಂದ ಹೇಗೆ ಮಾಡಬಹುದು ಎಂಬು ದರ ಕಡೆಗೆ ಗಮನ ನೀಡಬೇಕು.
ಸಾಧಕರೇ, ‘ಆನಂದಪ್ರಾಪ್ತಿ ಮಾಡಿಕೊಳ್ಳುವುದು ಸಾಧನೆಯ ಮೂಲ ಉದ್ದೇಶವಾಗಿದೆ’, ಇದನ್ನು ಗಮನದಲ್ಲಿಟ್ಟುಕೊಂಡು ನಿರಾಶೆ ಅಥವಾ ಒತ್ತಡವಾಗುತ್ತಿದ್ದಲ್ಲಿ ಆ ಸ್ಥಿತಿಯಲ್ಲಿರುವುದರ ಬದಲು ಜವಾಬ್ದಾರ ಸಾಧಕರೊಂದಿಗೆ ಚರ್ಚಿಸಿ ತಕ್ಷಣ ಆ ಸ್ಥಿತಿಯಿಂದ ಹೊರಗೆ ಬರಬೇಕು !
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ತುರ್ತು ಸೇವೆಗಳಿಂದಾಗಿ ವ್ಯಷ್ಟಿ ಸಾಧನೆಯ ಪ್ರಯತ್ನ ಕಡಿಮೆಯಾದರೆ ಒತ್ತಡ ಮಾಡಿಕೊಳ್ಳದೇ ದೊರೆತ ಸೇವೆಯನ್ನು ಭಾವಪೂರ್ಣವಾಗಿ ಮತ್ತು ಪರಿಪೂರ್ಣವಾಗಿ ಮಾಡಿರಿ !