ಸಹಾಯ ಮಾಡುವ ಶ್ರೀಕೃಷ್ಣನು ಪ್ರತೀಕ್ಷಣ ಜೊತೆಗಿರುವಾಗ ಅವನಿಂದ ಸಹಾಯ ಪಡೆಯದೇ ಒಂದು ಕಠಿಣ ಪ್ರಸಂಗದಲ್ಲಿ ಆಚೆ-ಈಚೆ ಧಾವಿಸುತ್ತಿರುವುದರ ಅರಿವಾಗುವುದು

ಸೌ. ಉಮಾ ರವಿಚಂದ್ರನ್
೧. ಚಿತ್ರವನ್ನು ಬಿಡಿಸಲು ಕಾರಣವಾಗಿರುವ ಪ್ರಸಂಗ ಮತ್ತು ಚಿತ್ರದ ಭಾವಾರ್ಥ ! ೧ ಅ. ಮಗಳು ತುಂಬ ಮಾನಸಿಕ ಒತ್ತಡದಲ್ಲಿರು ವಾಗ ಅವಳು ಸಾಧಕಿಯನ್ನು ಅವಲಂಬಿಸದೆ ಭಗವಾನ ಶ್ರೀಕೃಷ್ಣನನ್ನು ಅವಲಂಬಿಸಿ ರಬೇಕೆಂದು ಅರಿವಾಗುವುದು : ‘ಈ ಹಿಂದೆ ನನ್ನ ಎರಡನೆಯ ಮಗಳು ತುಂಬ ಮಾನಸಿಕ ಒತ್ತಡದಲ್ಲಿದ್ದಳು. ಅವಳು ಆ ಸ್ಥಿತಿಯಿಂದ ಹೊರಗೆ ಬರಲು ಸಂಪೂರ್ಣ ನನ್ನನ್ನು ಅವಲಂಬಿಸಿದ್ದಳು. ಅವಳಿಗೆ ಸಹಾಯ ಮಾಡಲು ನಾನು ಎಲ್ಲ ರೀತಿಯಿಂದ ಪ್ರಯತ್ನಿಸುತ್ತಿದ್ದ್. ಅವಳನ್ನು ಈ ಸ್ಥಿತಿಯಿಂದ ಹೊರಗೆ ತರುವ ಕ್ಷಮತೆ ನನ್ನಲ್ಲಿ ಇಲ್ಲದೆ ಸಂಪೂರ್ಣ ಶರಣಾಗತಿಯನ್ನು ಸ್ವೀಕರಿಸಿದಾಗ ಕೇವಲ ಭಗವಾನ್ ಶ್ರೀಕೃಷ್ಣನೇ ಅವಳಿಗೆ ಸಹಾಯ ಮಾಡಬಹುದು, ಎಂಬುದು ಒಂದು ಕಠಿಣ ಪ್ರಸಂಗದಲ್ಲಿ ನಮ್ಮಿಬ್ಬರಿಗೂ ಅರಿವಾಯಿತು. ಆಗ ನನಗೆ ‘ನಾನು ಅವಳಿಗೆ ಸಹಾಯ ಮಾಡಬಹುದು ಹಾಗೂ ಅದು ನನ್ನಿಂದ ಸಾಧ್ಯವಿದೆ’, ಎಂಬುದು ನನ್ನ ಅಹಂ ಆಗಿದೆಯೆಂಬುದರ ಅರಿವಾಯಿತು.

೧ ಆ. ಚಿತ್ರದ ಭಾವಾರ್ಥ !
ಒತ್ತಡ ಮಿತಿಮೀರಿದಾಗ ಸಾಂತ್ವನಕ್ಕಾಗಿ ಅವಳು ಅರಿವಿಲ್ಲದೆಯೇ ನನ್ನ ಸೆರಗನ್ನು ಗಟ್ಟಿಯಾಗಿ ಹಿಡಿಯು ತ್ತಿದ್ದಳು; ಆದರೆ ಅವಳಿಗೆ ಯಾವಾಗಲೂ ಸಹಾಯ ಮಾಡುವವನು ಭಗವಾನ ಶ್ರೀಕೃಷ್ಣನೇ ಆಗಿದ್ದನು ಎಂಬುದು ಈಗ ಅವಳಿಗೆ ಅರಿವಾಯಿತು. ಅವಳ ಹಿಂದೆ ಬಾಲರೂಪದ ಭಗವಾನ ಶ್ರೀಕೃಷ್ಣ ಅವಳನ್ನು ಕರೆಯುತ್ತಿದ್ದಾನೆ. ಅವಳ ಗಮನವನ್ನು ಸೆಳೆಯಲು ಅವನು ಮನಮೋಹಕ ರೂಪ ಧಾರಣೆ ಮಾಡಿದ್ದಾನೆ.
೨. ಅಜ್ಞಾನಿ ಜೀವಗಳಿಗೆ ಸಿಕ್ಕಿದ ಬೋಧನೆಯಿಂದ ಪಶ್ಚಾತ್ತಾಪವಾಗಿ ಅವರು ಮಾಯೆಯಿಂದ ಹೊರಗೆ ಬರಬೇಕೆಂದು, ಪರಮಾತ್ಮ ಆತುರತೆಯಿಂದ ದಾರಿ ನೋಡುತ್ತಿರುವುದು : ಈ ಮೇಲಿನ ಅನುಭೂತಿಯಿಂದ ನನಗೆ ಒಂದು ಸುಪ್ರಸಿದ್ಧ ಗಾದೆಯ ನೆನಪಾಯಿತು. ನಾವೆಲ್ಲರೂ ಕಳೆದುಹೋಗಿರುವ ಹಾಗೂ ರಸ್ತೆಯಲ್ಲಿ ಧೂಳು ತಿನ್ನುತ್ತಾ ಬಿದ್ದಿರುವ ವಜ್ರದ ಉಂಗುರದಂತೆ ಇದ್ದೇವೆ. ಉಂಗುರವು ತನ್ನ ಒಡೆಯನ ಬಗ್ಗೆ ಅಜ್ಞಾನಿಯಾಗಿರುತ್ತದೆ. ಅದು ತನ್ನ ಒಡೆಯನನ್ನು ಹುಡುಕಲು ಸ್ವಲ್ಪವೂ ಪ್ರಯತ್ನಿಸದೆ ಸುಮ್ಮನೆ ಹೊಲಸಿನಲ್ಲಿ ಬಿದ್ದಿರುತ್ತದೆ; ಆದರೆ ಒಡೆಯನ ಮನಸ್ಸು ಮಾತ್ರ ಆ ವಜ್ರದ ಉಂಗುರವು ಪುನಃ ಹೇಗೆ ‘ಕೈಗೆ ಸಿಗಬಹುದು’, ಎಂಬ ಚಿಂತೆಯಲ್ಲಿರುತ್ತದೆ. ಈ ವಜ್ರದ ಉಂಗುರ ದಂತೆಯೇ ‘ನಮ್ಮ ನಿಜವಾದ ಸ್ವಾಮಿ ಪರಮಾತ್ಮನಾಗಿದ್ದಾನೆ’, ಎಂಬ ಅರಿವು ಇಲ್ಲದ ನಾವು ಭೌತಿಕ ವಿಷಯಸ್ವರೂಪದ ಧೂಳಿನಲ್ಲಿ ಹೊರಳಾಡು ತ್ತಿದ್ದೇವೆ. ಅವನು ಮಾತ್ರ ನಿರಂತರ ನಮ್ಮ ನೆನಪು ಮಾಡುತ್ತಾ ಇರುತ್ತಾನೆ ಹಾಗೂ ನಾವು ಯಾವಾಗ ಅವನನ್ನು ಕರೆಯುತ್ತೇವೆ, ಎಂದು ಆತುರತೆಯಿಂದ ನೋಡುತ್ತಿರುತ್ತಾನೆ.’ - ಸೌ. ಉಮಾ ರವಿಚಂದ್ರನ್, ಚೆನ್ನೈ (೪.೧೧.೨೦೧೩) 

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಹಾಯ ಮಾಡುವ ಶ್ರೀಕೃಷ್ಣನು ಪ್ರತೀಕ್ಷಣ ಜೊತೆಗಿರುವಾಗ ಅವನಿಂದ ಸಹಾಯ ಪಡೆಯದೇ ಒಂದು ಕಠಿಣ ಪ್ರಸಂಗದಲ್ಲಿ ಆಚೆ-ಈಚೆ ಧಾವಿಸುತ್ತಿರುವುದರ ಅರಿವಾಗುವುದು