ನಿಯತಕಾಲಿಕೆಗಳ ವಾಚಕರಾಗಲು ಇಚ್ಛಿಸುವ ಜಿಜ್ಞಾಸುಗಳ ಸೌಲಭ್ಯಕ್ಕಾಗಿ ‘ಆನ್‌ಲೈನ್ ಚಂದಾದಾರ’ರಾಗುವ ಹೊಸ ಯೋಜನೆ ಆರಂಭ !

. ಸನಾತನ ಪ್ರಭಾತಕ್ಕೆ ವಾಚಕರಿಂದ ಅಪಾರ ಪ್ರೋತ್ಸಾಹ ಸಿಗುತ್ತಿರುವುದು : ಜನಸಾಮಾನ್ಯರಲ್ಲಿ ರಾಷ್ಟ್ರ ಹಾಗೂ ಧರ್ಮ ಪ್ರೇಮದ ಜ್ಯೋತಿ ಪ್ರಜ್ವಲಿಸ ಬೇಕೆಂಬ ಏಕೈಕ ಉದಾತ್ತ ಉದ್ದೇಶದಿಂದ ಸನಾತನ ಪ್ರಭಾತ ನಿಯತಕಾಲಿಕೆ ಕಾರ್ಯನಿರತವಾಗಿದೆ. ಕನ್ನಡ ಸಹಿತ ಮರಾಠಿ, ಹಿಂದಿ, ಆಂಗ್ಲ ಮತ್ತು ಗುಜರಾತಿ ಭಾಷೆಗಳಲ್ಲಿ ಪ್ರಕಟವಾಗುವ ಈ ನಿಯತಕಾಲಿಕೆಗಳಿಗೆ ವಾಚಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅನೇಕ ಜನರು ಚಂದಾದಾರರಾಗಲು ಇಚ್ಛಿಸುತ್ತಿರುವುದು ಕಂಡು ಬಂದಿದೆ; ಆದರೆ ಮನುಷ್ಯಬಲದ ಅಭಾವದಿಂದ ಸಾಧಕರು ಅವರಲ್ಲಿಗೆ ತಲುಪಲು ಸಾಧ್ಯವಾಗುವುದಿಲ್ಲ. 
. ಎಲ್ಲ ಜಿಜ್ಞಾಸುಗಳು ‘ಆನ್‌ಲೈನ್ ಚಂದಾದಾರ’ ರಾಗುವ ಹೊಸ ಸೌಲಭ್ಯದ ಲಾಭ ಪಡೆಯಬೇಕು ! : ಹೀಗೆ ಇಚ್ಛೆಯುಳ್ಳವರಿಗೆ ಸುಲಭದಲ್ಲಿ ಹಾಗೂ ಶೀಘ್ರದಲ್ಲಿ ನಿಯತಕಾಲಿಕೆಗಳ ಚಂದಾದಾರರಾಗಲು ಸಾಧ್ಯ ವಾಗಬೇಕೆಂದು ‘ಆನ್‌ಲೈನ್ ಚಂದಾದಾರರಾಗುವ ಹೊಸ ಯೋಜನೆಯನ್ನು ಇತ್ತೀಚೆಗಷ್ಟೇ ಆರಂಭಿಸ ಲಾಗಿದೆ. ಈ ಯೋಜನೆಯ ಮೂಲಕ ದೈನಿಕ ಸನಾತನ ಪ್ರಭಾತವನ್ನು ಬಿಟ್ಟು ಇತರ ನಿಯತಕಾಲಿಕೆಗಳ (ಸಾಪ್ತಾಹಿಕ, ಪಾಕ್ಷಿಕ ಮತ್ತು ಮಾಸಿಕ) ಚಂದಾದಾರರಾಗ ಬಹುದು.
www.sanatanprabhat.org/subscribe ಜಿಜ್ಞಾಸುಗಳು ಈ ಲಿಂಕ್‌ಗೆ ಭೇಟಿ ನೀಡಿ ಈ ಮೇಲಿನ ಯೋಜನೆಯ ಲಾಭ ಪಡೆಯಬಹುದು. ಇದರಿಂದ ರಾಷ್ಟ್ರ-ಧರ್ಮ ಕಾರ್ಯ ಮಾಡುವ ಸಾಧಕರ ಜಿಜ್ಞಾಸುಗಳನ್ನು ಭೇಟಿಯಾಗುವ ಸಮಯ ಉಳಿಯುವುದರೊಂದಿಗೆ ಜಿಜ್ಞಾಸುಗಳು ತಮ್ಮ ಅನುಕೂಲಕ್ಕನುಸಾರ ಆನ್‌ಲೈನ್ ಚಂದಾದಾರರ ಅರ್ಜಿ ತುಂಬಿಸಬಹುದು; ಅದರಿಂದ ಅವರಿಗೆ ಶೀಘ್ರದಲ್ಲಿ ಸಂಚಿಕೆಯನ್ನು ಆರಂಭಿಸಬಹುದು.
. ಆನ್‌ಲೈನ್ ನವೀಕರಣ ಮಾಡಬಹುದು : ಸಾಧಕರು ಮತ್ತು ವಾಚಕರು ತಮ್ಮ ಸಂಚಿಕೆಗಳ ನವೀಕರಣವನ್ನು ಈ ಜಾಲತಾಣದಲ್ಲಿ ಮಾಡಬಹುದು. ಇದರಿಂದ ಅವರನ್ನು ಸಂಪರ್ಕಿಸುವ ಸಾಧಕರ ಸಮಯವನ್ನು ರಾಷ್ಟ್ರ-ಧರ್ಮ ಕಾರ್ಯದ ಇತರ ಸೇವೆಗಾಗಿ ಉಪಯೋಗಿಸಬಹುದು.
. ಜಾಲತಾಣದ ಮೂಲಕ ಜಾಹೀರಾತು ನೀಡುವ ಸೌಲಭ್ಯವೂ ಇದೆ : ಜಾಹೀರಾತುದಾರರು ಜಾಲತಾಣದಲ್ಲಿ ನೀಡಿದ ಲಿಂಕ್‌ನಲ್ಲಿ ಸನಾತನ ಪ್ರಭಾತದ ಯಾವುದೇ ನಿಯತಕಾಲಿಕೆಗೆ (ದೈನಿಕದ ೪ ಆವೃತ್ತಿಗಳ ಸಹಿತ) ಜಾಹೀರಾತು ನೀಡಬಹುದು. ಜಾಲತಾಣದಲ್ಲಿರುವ ‘ಆನ್‌ಲೈನ್ ಫಾರ್ಮ್’ ತುಂಬಿಸಿದರೆ ಸಂಬಂಧಪಟ್ಟ ಸಾಧಕರು ಮುಂದಿನ ಕಾರ್ಯಾಚರಣೆಗಾಗಿ ಅವರನ್ನು ಸಂಪರ್ಕಿಸುವರು.
ಹೆಚ್ಚೆಚ್ಚು ಜಿಜ್ಞಾಸುಗಳು ಮತ್ತು ವಾಚಕರು ಈ ಮೇಲಿನ ಸೌಲಭ್ಯಗಳ ಲಾಭ ಪಡೆಯಬೇಕು ಹಾಗೂ ತಮ್ಮ ಸ್ನೇಹಿತರು, ಸಂಬಂಧಿಕರಿಗೂ ಈ ವಿಷಯವನ್ನು ತಿಳಿಸಬೇಕು ! - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಿಯತಕಾಲಿಕೆಗಳ ವಾಚಕರಾಗಲು ಇಚ್ಛಿಸುವ ಜಿಜ್ಞಾಸುಗಳ ಸೌಲಭ್ಯಕ್ಕಾಗಿ ‘ಆನ್‌ಲೈನ್ ಚಂದಾದಾರ’ರಾಗುವ ಹೊಸ ಯೋಜನೆ ಆರಂಭ !