ದೂರ್ವೆ ಮತ್ತು ಕೆಂಪು ಹೂವನ್ನು ಹೇಗೆ ಅರ್ಪಿಸಬೇಕು ?


ದೂರ್ವೆಗಳನ್ನು ವಿಷಮ ಸಂಖ್ಯೆಯಲ್ಲಿ (ಕಡಿಮೆ ಪಕ್ಷ ಮೂರು, ಐದು, ಏಳು ಅಥವಾ ಇಪ್ಪತ್ತೊಂದು ಇತ್ಯಾದಿ) ಅರ್ಪಿಸಬೇಕು.
ದೂರ್ವೆಯ ಗರಿಗಳು ಸಹ ವಿಷಮ ಸಂಖ್ಯೆಯಲ್ಲಿರಬೇಕು.
ಎಳೆಯ ದೂರ್ವೆಯ ಗೊಂಚಲುಗಳನ್ನು ನೀರಿನಲ್ಲಿ ಮುಳುಗಿಸಿ.
ಅರ್ಪಿಸುವಾಗ ಗಣೇಶನ ಮುಖವನ್ನು ಬಿಟ್ಟು ಸಂಪೂರ್ಣ ಮೂರ್ತಿಯು ಮುಚ್ಚುವಂತೆ ಅರ್ಪಿಸಬೇಕು.
ದಾಸವಾಳ ಅಥವಾ ಇತರ ಕೆಂಪು ಹೂವುಗಳನ್ನು ಅರ್ಪಿಸುವಾಗ ತೊಟ್ಟು ಶ್ರೀ ಗಣೇಶನ
ಚರಣಗಳ ಕಡೆಗೆ, ಹೂವಿನ ಎಸಳುಗಳ ಭಾಗವು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು.


ಶ್ರೀ ಗಣೇಶನ ಪೂಜೆ ಮಾಡುವಾಗ ಮಾಡಬೇಕಾಗಿರುವ ಪ್ರಾರ್ಥನೆ
. ಹೇ ಶ್ರೀ ಗಜಾನನಾ, ಈ ಪೂಜಾವಿಧಿಯ ಮೂಲಕ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ನಿರ್ಮಾಣವಾಗಲಿ. . ಈ ಪೂಜಾವಿಧಿಯಿಂದ ಪ್ರಕ್ಷೇಪಿತವಾಗುವ ಚೈತನ್ಯವನ್ನು ನಿನ್ನ ಕೃಪೆಯಿಂದ ನನಗೆ ಗ್ರಹಿಸಲು ಸಾಧ್ಯವಾಗಲಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೂರ್ವೆ ಮತ್ತು ಕೆಂಪು ಹೂವನ್ನು ಹೇಗೆ ಅರ್ಪಿಸಬೇಕು ?