ಸಮಸ್ತ ರಾಷ್ಟ್ರಪ್ರೇಮಿಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಂದ ಆಝಾದ್ ಮೈದಾನದಲ್ಲಿ ಆಂದೋಲನ

ಹಿಂದೂ ಸಂತರ, ನೇತಾರರ ಮತ್ತು ಸಂಘಟನೆಗಳ 
ಮೇಲಿನ ಅನ್ಯಾಯವನ್ನು  ನಿಲ್ಲಿಸದಿದ್ದರೆ,  ರಾಜ್ಯದಾದ್ಯಂತ ಆಂದೋಲನ !
೮೫೦ ಕ್ಕಿಂತಲೂ ಹೆಚ್ಚು ಹಿಂದುತ್ವವಾದಿಗಳಿಂದ ಸರಕಾರಕ್ಕೆ ಎಚ್ಚರಿಕೆ
ಮುಂಬಯಿ : ಪೂಜ್ಯಪಾದ ಸಂತಶ್ರೀ ಆಸಾರಾಮಜೀ ಬಾಪೂ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಹಿಂದೂ ರಾಷ್ಟ್ರ ಸೇನೆಯ ಸಂಸ್ಥಾಪಕ-ಅಧ್ಯಕ್ಷ ಶ್ರೀ. ಧನಂಜಯ ದೇಸಾಯಿಯವರ ವಿರುದ್ಧ ಯಾವುದೇ ಸಾಕ್ಷಿ ಇಲ್ಲದಿರುವಾಗ ಅವರನ್ನು ಇದುವರೆಗೆ ಸೆರೆಮನೆಯಲ್ಲಿ ಇಡಲಾಗಿದೆ. ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಅನ್ಯಾಯಕಾರಿ ಬೇಡಿಕೆಗಳು ಕೇಳಿಬರುತ್ತಿವೆ. ಈ ಮೇಲಿನ ಎಲ್ಲರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಬೇಕು ಹಾಗೂ ಸನಾತನ ಸಂಸ್ಥೆಯ ತೇಜೋವಧೆಯನ್ನು ನಿಲ್ಲಿಸಿ ಸನಾತನದ ಅಮಾಯಕ ಸಾಧಕರಾದ ಶ್ರೀ. ಸಮೀರ ಗಾಯಕವಾಡ್ ಮತ್ತು ಡಾ. ವೀರೇಂದ್ರಸಿಂಗ್ ತಾವಡೆ ಇವರನ್ನು ತಕ್ಷಣ ಮುಕ್ತಗೊಳಿಸಬೇಕೆಂಬ ಬೇಡಿಕೆಗಾಗಿ ಇಲ್ಲಿನ ಸಮಸ್ತ ರಾಷ್ಟ್ರಪ್ರೇಮಿ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗಿ ಆಝಾದ್ ಮೈದಾನದಲ್ಲಿ ಜುಲೈ ೨೮ ರಂದು ಮಧ್ಯಾಹ್ನ ೨ ರಿಂದ ೫ ಈ ಅವಧಿಯಲ್ಲಿ ಆಂದೋಲನ ನಡೆಸಿದರು. ಹಿಂದೂ ಸಂತರ, ನೇತಾರರ ಮತ್ತು ಸಂಘಟನೆಗಳ ಮೇಲಿನ ಅನ್ಯಾಯಕಾರಿ ಕಾರ್ಯಾಚರಣೆ ನಿಲ್ಲದಿದ್ದರೆ, ಮಹಾರಾಷ್ಟ್ರದಲ್ಲಿ ಆಂದೋಲನದ ಸುನಾಮಿ ಆರಂಭವಾಗುವುದು, ಎಂದು ಸಂತರು ಮತ್ತು ಹಿಂದುತ್ವವಾದಿಗಳು ಈ ಆಂದೋಲನದ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಆಂದೋಲನಕ್ಕೆ ಧರ್ಮಪ್ರೇಮಿ ಸಂಘಟನೆಗಳ ಮತ್ತು ಹಿಂದುತ್ವವಾದಿಗಳಿಂದ ಉತ್ಸಾಹಪೂರಿತ ಪ್ರೋತ್ಸಾಹ ಲಭಿಸಿತು. ಜಯತು ಜಯತು ಹಿಂದೂ ರಾಷ್ಟ್ರಮ್, ಹರ ಹರ ಮಹಾದೇವ ಈ ಘೋಷಣೆಗಳಿಂದ ಆಝಾದ್ ಮೈದಾನದ ಪರಿಸರವೆಲ್ಲ ಕಂಪಿಸಿತು. ಆಂದೋಲನಕ್ಕೆ ೮೫೦ ಕ್ಕಿಂತಲೂ ಹೆಚ್ಚು ಹಿಂದುತ್ವನಿಷ್ಠರ ಉಪಸ್ಥಿತಿ ಯಿತ್ತು. ಸಾಧ್ವಿ ಪ್ರಜ್ಞಾಸಿಂಗ್ ಇವರ ಸಂಬಂಧಿಕರಾದ ಶ್ರೀ. ಭಗವಾನ ದಾಸ್, ಶ್ರೀ. ಧನಂಜಯ ದೇಸಾಯಿಯವರ ಸಹೋದರಿ ಸೌ. ರೂಪಾಲಿ ಮರಾಠೆ, ಭಾರತೀಯ ಯುವಾ ಶಕ್ತಿಯ ಮುಖ್ಯ ಸಲಹೆಗಾರ ಶ್ರೀ. ಅಂಶ ದೇಸಾಯಿ, ಹಿಂದೂ ರಾಷ್ಟ್ರ ಸೇನೆಯ ಶ್ರೀ. ಆದಿತ್ಯ ದೇಶಮುಖ, ಪ್ರಖರ ಹಿಂದುತ್ವನಿಷ್ಠರಾದ ಶ್ರೀ. ವಿಶಾಲ ಪಟನಿ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಸಚಿವ ನ್ಯಾಯವಾದಿ ಸಂಜೀವ ಪುನಾಳೆಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಂಘಟಕರಾದ ಶ್ರೀ. ಸುನಿಲ್ ಘನವಟ್, ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಮುಂತಾದ ಗಣ್ಯರು ಆಂದೋಲನದಲ್ಲಿ ಭಾಗವಹಿಸಿದ್ದರು.
ಆಂದೋಲನದಲ್ಲಿ ಭಾಗವಹಿಸಿದ ಸಂಘಟನೆಗಳು
ಹಿಂದೂ ಗೋವಂಶ ರಕ್ಷಾ ಸಮಿತಿ (ವಸಯಿ ತಾಲೂಕು); ಭಾರತೀಯ ಯುವಾ ಶಕ್ತಿ ; ವೀರ ಜೀಜಾಮಾತಾ ಪ್ರತಿಷ್ಠಾನ; ಹಿಂದೂ ರಾಷ್ಟ್ರ ಸೇನೆ; ರಾಯಗಡ ಸಂವರ್ಧನ ಪ್ರತಿಷ್ಠಾನ; ಸ್ವರಾಜ್ಯ ಯುವಾ ಪ್ರತಿಷ್ಠಾನ; ಹಿಂದೂ ಮಹಾಸಭೆ; ಹಿಂದೂ ರಾಷ್ಟ್ರ ಯುವಾ ಸೇನೆ; ಶ್ರೀಶಿವಪ್ರತಿಷ್ಠಾನ ಹಿಂದುಸ್ಥಾನ; ಹಿಂದೂ ರಾಷ್ಟ್ರ ಜನಜಾಗರಣ ಸಮಿತಿ; ಅಜಿಂಕ್ಯ ಮಾವಳಾ ಪ್ರತಿಷ್ಠಾನ; ಮಹಾರಾಣ ಪ್ರತಾಪ ಬೆಟಾಲಿಯನ್; ಶ್ರೀ ಶಿವಕಾರ್ಯ ಪ್ರತಿಷ್ಠಾನ; ಸ್ವರಾಜ್ಯ ಯುವಾ ಪ್ರತಿಷ್ಠಾನ; ಮಾತೃಭೂಮಿ ಪ್ರತಿಷ್ಠಾನ; ಪೂ. ಆಸಾರಾಮಬಾಪೂ ಭಕ್ತಿ ಪರಿವಾರ; ಶ್ರೀ. ಬಜರಂಗದಳ; ಬ್ಲಡ್ ಹೆಲ್ಪ್ ಹಿಂದುಸ್ಥಾನ; ರಾಷ್ಟ್ರೀಯ ನವಯುವಕ ಲೋಕಸೇವಾ ಸಂಘ; ದುರ್ಗಾವೀರ ಪ್ರತಿಷ್ಠಾನ; ಕರಣಿ ಸೇನಾ; ರಾಮ ಸೇನಾ; ನವತರುಣ ಮಿತ್ರಮಂಡಳ; ರಾಷ್ಟ್ರೀಯ ನವಯುವಕ ಲೋಕಸೇವಾ ಸಂಘ; ವಿಹಿಂಪ; ಅಖಿಲ ಭಾರತೀಯ ಬ್ರಾಹ್ಮಣ ಏಕತಾ ಮಂಚ; ವಾರಕರಿ ಸಂಪ್ರದಾಯ; ಸ್ವರಾಜ್ಯ ಹಿಂದೂ ಸೇವಾ; ಹಿಂದೂ ಮಹಾಸಭಾ ಯುವಾ ಇಕಾಯಿ; ರಾಷ್ಟ್ರವಾದಿ ಯುವಾ ವಾಹಿನಿ (ಅಯೋಧ್ಯಾ); ಹಿಂದೂ ಜನಜಾಗೃತಿ ಸಮಿತಿ; ಸನಾತನ ಸಂಸ್ಥೆ ಮತ್ತು ಅನೇಕ ಸಮವಿಚಾರಿ ಸಂಘಟನೆಗಳು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಮಸ್ತ ರಾಷ್ಟ್ರಪ್ರೇಮಿಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಂದ ಆಝಾದ್ ಮೈದಾನದಲ್ಲಿ ಆಂದೋಲನ