ಪ್ರಧಾನಮಂತ್ರಿ ಮೋದಿಯವರು ಗೋರಕ್ಷಕರ ವಿಷಯದಲ್ಲಿ ನೀಡಿದ ಹೇಳಿಕೆ ಪ್ರಕರಣ

ಭಾಜಪ ೨೦೧೯ ರ ಚುನಾವಣೆಯ ಸಮಯದಲ್ಲಿ ಇದರ ಬೆಲೆ ತೆರಬೇಕಾಗುತ್ತದೆ !
- ವಿ.ಹಿಂ.ಪ.ನ ಎಚ್ಚರಿಕೆ
ನವ ದೆಹಲಿ : ಪ್ರಧಾನಿಯವರು ಗೋರಕ್ಷಕರ ಬಗ್ಗೆ ನೀಡಿದ ಹೇಳಿಕೆಯು ಗೋರಕ್ಷಕರಿಗೆ ಅವಮಾನ ಕಾರಿಯಾಗಿದೆ, ಇದರಿಂದ ಅವರ ಭಾವನೆಗೆ ಧಕ್ಕೆ ಯಾಗಿದೆ. ಭಾಜಪವು ೨೦೧೯ ರ ಚುನಾವಣೆಯಲ್ಲಿ ಈ ಹೇಳಿಕೆಗಾಗಿ ಬೆಲೆ ತೆರಬೇಕಾಗುತ್ತದೆ, ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಸಿದೆ. ಇದೇ ವೇಳೆ ಭಾರತಾದ್ಯಂತ ಗೋ ಹತ್ಯೆಯನ್ನು ನಿಷೇಧಿಸಬೇಕು ಎಂಬ ಬೇಡಿಕೆಯು ವಿ.ಹಿಂ.ಪ.ನ ಗುಜರಾತ್ ಬ್ರಜ ಭಾಗದಲ್ಲಿನ ಉಪಾಧ್ಯಕ್ಷರಾದ ಸುನೀಲ ಪರಾಶರರವರು ಒಂದು ಪತ್ರಿಕಾಪ್ರಕಟಣೆ ಮೂಲಕ ತಿಳಿಸುವ ಜೊತೆಗೆ ದೇಶದಲ್ಲಿ ಪ್ರತಿವರ್ಷ ೧ ಲಕ್ಷ ಗೋವುಗಳನ್ನು ಕೊಲ್ಲುವ ಕಸಾಯಿಗಳಿಗೆ ಗೂಂಡಾ ಎಂದು ಹೇಳುವುದಿಲ್ಲ. ಅದರೆ ಗೀತಾ ರಾಮಭೈಯ್ಯಾರಂತಹ ಗೋರಕ್ಷಕರಿಗೆ ಗೂಂಡಾ ಎಂದು ಹೇಳಲಾಗುತ್ತದೆ. (ಕೆಲವು ವರ್ಷಗಳ ಹಿಂದೆ ರಾಮಭೈಯ್ಯಾ ಇವರನ್ನು ಕರ್ಣಾವತಿಯಲ್ಲಿ ಹತ್ಯೆ ಮಾಡಲಾಗಿದೆ) ಇದರಿಂದಲೇ ನಿಮ್ಮ(ಭಾಜಪ) ಭೂಮಿಕೆಯಲ್ಲಾದ ಬದಲಾವಣೆ ಕಾಣುತ್ತಿದೆ. ಆದರೆ ಹಿಂದೂಗಳಿಗೆ ಇದು ಅರ್ಥ ಆಗಲಿಲ್ಲ. ಗೋವು ಪ್ಲಾಸ್ಟಿಕ್ ತಿನ್ನುತ್ತದೆ, ಇದರ ಬಗ್ಗೆ ಭಾಜಪ ಸರಕಾರದ ಮುಖ್ಯಮಂತ್ರಿಗಳು ಏನು ಮಾಡಿದ್ದಾರೆ ? ಶೇ. ೮೦ ರಷ್ಟು ಗೋರಕ್ಷಕರು ನಕಲಿಯಾಗಿದ್ದರೆ, ನಿಮ್ಮ ಗುಜರಾತಿನಲ್ಲಿ ೧೦ ವರ್ಷದ ಮುಖ್ಯಮಂತ್ರಿಯ ಕಾಲಾವಧಿಯಲ್ಲಿ ಕಾನೂನಿನ ಅಡಿಯಲ್ಲಿ ಎಷ್ಟು ಜನರಿಗೆ ಶಿಕ್ಷೆಯನ್ನು ಕೊಟ್ಟಿದ್ದೀರಿ ? ಗೋರಕ್ಷಣೆಗಾಗಿ ಕಾನೂನು ಏಕೆ ತರುತ್ತಿಲ್ಲ ?

ಹಿಂದೂ ಮಹಾಸಭಾವು ಪ್ರಧಾನಿಗೆ ನೋಟೀಸನ್ನು ಕಳುಹಿಸಲಿದೆ !
ಹಿಂದೂ ಮಹಾಸಭಾದ ಚಕ್ರಪಾಣಿ ಇವರು ಪ್ರಧಾನಿಯವರನ್ನು ಪ್ರಶ್ನಿಸುತ್ತಾ ಮೋದಿಯವರು ಯಾವ ಆಧಾರದಲ್ಲಿ ಶೇ. ೮೦ ರಷ್ಟು ಗೋರಕ್ಷಕರು ಸಮಾಜಕಂಟಕರೆಂದು ನಿರ್ಧರಿಸಿದರು ? ಮೋದಿಯ ವರು ಈ ರೀತಿಯ ಬೇಜವಾಬ್ದಾರಿಯುತ ಹೇಳಿಕೆ ಯನ್ನು ಕೊಡಬಾರದು.ಅವರ ಈ ಹೇಳಿಕೆಗಾಗಿ ಅವರಿಗೆ ನೋಟೀಸ್ ಕಳುಹಿಸು ವೆವು ಎಂದು ಹೇಳಿದರು. ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಚಂದ್ರಪ್ರಕಾಶ ಕೌಷಿಕ ಇವರು ಮಾತನಾಡುತ್ತಾ, ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಯೋಗ್ಯರಿಲ್ಲ. ಯಾವ ರೀತಿ ೨೦೦೪ ರಲ್ಲಿ ವಾಜಪೇಯಿ ಸೋತಿದ್ದರೋ ಅದೇ ರೀತಿ ಮೋದಿ ಯವರೂ ಸೋಲುನ್ನುತ್ತಾರೆ.
 ಮೋದಿಯವರು ಖಸಾಯಿಗಳಿಗೂ ಗೋವನ್ನು ಹತ್ಯೆ ಮಾಡಲು ಬಿಡಿವುದಿಲ್ಲ ಎಂದು ಹೇಳಬೇಕು ! - ಬಜರಂಗ ದಳ 
ಬಜರಂಗ ದಳದ ಸಂಯೋಜಕರಾದ ದೇವಿಸಿಂಗ ಸೊಂಧಿಯಾ ಇವರು ಮಾತನಾಡುತ್ತಾ ಬಜರಂಗ ದಳವು ಕಳೆದ ೨೫ ವರ್ಷಗಳಿಂದ ಗೋರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ. ಬಜರಂಗ ದಳದ ನಿಜವಾದ ಕಾರ್ಯಕರ್ತರು ಎಂದೂ ಹಫ್ತಾವಸೂಲು ಮಾಡಿಲ್ಲ ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಆದರೆ ಮೋದಿಯವರು ಕಾನೂನನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾತಾಡುವಾಗ, ಅವರು ಗೋವುಗಳನ್ನು ಹತ್ಯೆ ಮಾಡುವ ಕಸಾಯಿಗಳಿಗೂ ಗೋವನ್ನು ಹತ್ಯೆಮಾಡಲು ಅನುಮತಿ ನೀಡುವುದಿಲ್ಲ, ಎಂದೂ ಹೇಳಬೇಕು.
ಪ್ರಧಾನಿ ಹೇಳಿಕೆಗೆ ರಾ.ಸ್ವಂ.ಸಂಘದಿಂದ ಬೆಂಬಲ !

ಮೋದಿಯವರು ಗೋರಕ್ಷಣೆಯ ಹೆಸರಿನಲ್ಲಿ ಹಿಂಸೆ ಮಾಡುವವರು ಹಾಗೂ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ಸಮಾಜಕಂಟಕರನ್ನು ಬಯಲಿಗೆಳೆ ಯುತ್ತಿದ್ದಾರೆ. ಕೆಲವು ಅವಕಾಶವಾದಿಗಳ ನಿಂದನೀಯ ಕೃತ್ಯಗಳನ್ನು ನಿಜವಾದ ಅರ್ಥದಲ್ಲಿ ಗೋಸೇವೆಯನ್ನು ಮಾಡುವವರೊಂದಿಗೆ ಜೋಡಿಸಬಾರದು ಎಂಬುದನ್ನು ಹೇಳುವ ಮೂಲಕ ಮೋದಿಯವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರಧಾನಮಂತ್ರಿ ಮೋದಿಯವರು ಗೋರಕ್ಷಕರ ವಿಷಯದಲ್ಲಿ ನೀಡಿದ ಹೇಳಿಕೆ ಪ್ರಕರಣ