ವಾಚಕವೃದ್ಧಿ ಅಭಿಯಾನದ ನಿಮಿತ್ತ... ಹಿಂದೂ ರಾಷ್ಟ್ರ ಸ್ಥಾಪನೆಗೆ ದೀಪಸ್ತಂಭವಾಗಿರುವ ‘ಸನಾತನ ಪ್ರಭಾತ’ ಪತ್ರಿಕೆಗೆ ವಾಚಕರಾಗಲು ಆಪ್ತರಿಗೆ ಪ್ರೇರಣೆ ನೀಡಿರಿ !

ಪತ್ರಿಕೋದ್ಯಮವೆಂದರೆ ಸಮಾಜ, ರಾಷ್ಟ್ರ ಹಾಗೂ ಧರ್ಮಕ್ಕಾಗಿ ಸಮರ್ಪಿತ ವೃತ್ತಿಯಿಂದ ಮಾಡುವ ತಪಶ್ಚರ್ಯವಾಗಿದೆ, ಎಂಬ ಸಂದೇಶವನ್ನುಲೋಕಮಾನ್ಯ ತಿಲಕರು ಪತ್ರಿಕೋದ್ಯಮದ ಮೂಲಕ ನೀಡಿದರು. ಇಂದು ಸಮಾಜದಲ್ಲಿ ರಾಷ್ಟ್ರನಿಷ್ಠೆ ಹಾಗೂ ಧರ್ಮಾಭಿಮಾನವು ಶೂನ್ಯವಾಗುತ್ತಿರುವಾಗ ಲೋಕಮಾನ್ಯರು ಹಾಕಿಕೊಟ್ಟ ಆದರ್ಶದಂತೆ ಪತ್ರಿಕೋದ್ಯಮ ಮಾಡುವ ಆವಶ್ಯಕತೆ ನಿರ್ಮಾಣವಾಗಿದೆ. ದುರ್ದೈವ ವೆಂದರೆ ಇಂದು ಪತ್ರಿಕೋದ್ಯಮವನ್ನು ಅರ್ಥಾರ್ಜನೆಗಾಗಿ ಮಾಡಲಾಗು ತ್ತಿದೆ. ಈ ಪರಿಸ್ಥಿತಿಯಲ್ಲಿಯೂ ಕಳೆದ ೧೮ ವರ್ಷಗಳಿಂದ ನಿಯತಕಾಲಿಕೆ ಸನಾತನ ಪ್ರಭಾತವು ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಅವ್ಯಾಹತವಾಗಿ ಕಾರ್ಯ ಮಾಡುತ್ತಿದೆ.
೧. ರಾಷ್ಟ್ರ ಹಾಗೂ ಧರ್ಮ ರಕ್ಷಣೆಗಾಗಿ ಕಾರ್ಯನಿರತವಾಗಿರುವ ಸನಾತನ ಪ್ರಭಾತದ ವೈಶಿಷ್ಟ್ಯಗಳು !
ಸನಾತನ ಪ್ರಭಾತವು ಕೇವಲ ನಿಯತಕಾಲಿಕೆ ಮಾತ್ರವಲ್ಲ, ಧರ್ಮದ ಪಾಲಕನಾಗಿದೆ, ಧರ್ಮಶಿಕ್ಷಣವನ್ನು ನೀಡುವ ಧರ್ಮಗುರು, ಸಮಾಜಸುಧಾರಣೆ ಮಾಡುವ ಲೋಕನಾಯಕ ಹಾಗೂ ರಾಷ್ಟ್ರರಕ್ಷಣೆಗಾಗಿ ಶಬ್ದಗಳ ಶಸ್ತ್ರವನ್ನು ಧರಿಸಿರುವ ಕ್ರಾಂತಿಕಾರಿಯಾಗಿದ್ದಾನೆ !

೧ ಅ. ಧರ್ಮಶಿಕ್ಷಣ ಹಾಗೂ ಸಾಧನೆ : ಹಬ, ಉತ್ಸವ, ಧಾರ್ಮಿಕ ಕೃತಿ ಇತ್ಯಾದಿ ವಿಷಯಗಳಲ್ಲಿ ಧರ್ಮಶಿಕ್ಷಣ ಹಾಗೂ ಈಶ್ವರಪ್ರಾಪ್ತಿಗಾಗಿ ಸರಿಯಾದ ಸಾಧನೆ ಎಂದು ಏನು ಮಾಡಬೇಕು, ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಮಾರ್ಗದರ್ಶನ !
೧ ಆ. ಸಂತರು ಹಾಗೂ ಹಿಂದುತ್ವವಾದಿಗಳಿಗೆ ಮಹತ್ವ : ರಾಜಕಾರಣಿ ಗಳಿಗಲ್ಲ, ಮನುಕುಲಕ್ಕೆ ಚಿರಂತನ ಆನಂದ ನೀಡುವ ಸಂತರು ಹಾಗೂ ಧರ್ಮರಕ್ಷಣೆ ಮಾಡುವ ಹಿಂದುತ್ವನಿಷ್ಠರಿಗೆ ಹೆಚ್ಚು ಮಹತ್ವ !
೧ ಇ. ವ್ಯಾಪಕ ಜನಜಾಗೃತಿ : ಕೇವಲ ಅಗ್ರಲೇಖಗಳ ಮಾಧ್ಯಮದಿಂದ ಮಾತ್ರವಲ್ಲ, ಪ್ರತಿಯೊಂದು ಘಟನೆಯಿಂದ ವಾಚಕರಿಗೆ ಸರಿಯಾದ ದೃಷ್ಟಿ ಕೋನ ಸಿಗಲಿ, ಎಂಬುದಕ್ಕಾಗಿ ವಾರ್ತೆಗೆ ಸಂಪಾದಕೀಯ ದೃಷ್ಟಿಕೋನ !
೧ ಈ. ಧರ್ಮದ್ರೋಹಿ ವಿಚಾರಗಳ ಖಂಡನೆ : ಧರ್ಮದ್ರೋಹಿ ಹಾಗೂ ಹಿಂದೂದ್ವೇಷಿಗಳು ಹಿಂದೂ ಧರ್ಮ, ಧರ್ಮಗ್ರಂಥ, ದೇವತೆಗಳು, ರಾಷ್ಟ್ರಪುರುಷರು ಮುಂತಾದವರ ಮೇಲೆ ಮಾಡಿದ ಟೀಕೆಗೆ ಸುಸ್ಪಷ್ಟ ಹಾಗೂ ಆಧಾರಸಹಿತ ಖಂಡನೆ !
೧ ಉ. ಹಿಂದೂ ರಾಷ್ಟ್ರ-ಸ್ಥಾಪನೆ : ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಾಜದಲ್ಲಿ ವೈಚಾರಿಕ ಸಿದ್ಧತೆ ನಿರ್ಮಾಣವಾಗಲಿ, ಎಂಬುದಕ್ಕಾಗಿ ನಿಯತಕಾಲಿಕೆಯೊಂದಿಗೆ ವಾಚಕ ಸಭೆಯ ಮೂಲಕ ಪ್ರಯತ್ನ !
೧ ಊ. ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜದ ಅಮೋಘ ಸಂಗಮ ! : ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜವು ಸನಾತನ ಪ್ರಭಾತದ ಬೋಧನೆಯ ಸಾರಾಂಶವಾಗಿದೆ ಹಾಗೂ ಧರ್ಮಾಧಿಷ್ಠಿತ ಹಿಂದೂ - ರಾಷ್ಟ್ರ ಸ್ಥಾಪನೆಯ ಅಡಿಪಾಯವಾಗಿದೆ. ಬ್ರಾಹ್ಮತೇಜದಿಂದ ಹಿಂದೂ ಸಮಾಜವು ನೀತಿವಂತ, ಧರ್ಮನಿಷ್ಠ ಹಾಗೂ ಆತ್ಮಬಲಸಂಪನ್ನವಾಗು ವುದು ಹಾಗೂ ಕ್ಷಾತ್ರತೇಜದಿಂದ ಹಿಂದೂಗಳ ಮೇಲೆ ಅನ್ಯಾಯ ಹಾಗೂ ರಾಷ್ಟ್ರವನ್ನು ಅಧೋಗತಿಗೆ ಕರೆದೊಯ್ಯುತ್ತಿರುವ ವ್ಯವಸ್ಥೆಯ ವಿರುದ್ಧ ಹೋರಾಡಲು ಬಲ ಸಿಗುತ್ತದೆ.
೨. ಸನಾತನ ಪ್ರಭಾತಕ್ಕಾಗಿ ವಾಚಕರನ್ನಾಗಿಸುವುದು
ಹಾಗೂ ಪ್ರಾಯೋಜಕರನ್ನಾಗಿ ಮಾಡುವುದು, ಇದು ಧರ್ಮಪ್ರಚಾರವೇ ಆಗಿರುವುದು !
ರಾಷ್ಟ್ರದ ಪುನರ್‌ರಚನೆಯ ಕಾರ್ಯಕ್ಕೆ ವೇಗ ಸಿಗಲೆಂದು ಸನಾತನ ಪ್ರಭಾತವನ್ನು ಹೆಚ್ಚು ಹೆಚ್ಚು ಹಿಂದೂಗಳ ವರೆಗೆ ತಲುಪಿಸುವ ಸಲುವಾಗಿ ವಾಚಕವೃದ್ಧಿ ಅಭಿಯಾನ ನಡೆಸಲಾಗುವುದು. ಈ ಅಭಿಯಾನಕ್ಕಾಗಿ ತಮ್ಮ ಯೋಗದಾನ ನೀಡಲು ಹಿಂದೂ ರಾಷ್ಟ್ರ ಸ್ಥಾಪನೆಯ ವೈಚಾರಿಕ ಚಳುವಳಿಯನ್ನು ಬಲಪಡಿಸಲಾಗುವುದು.
ಸನಾತನ ಪ್ರಭಾತದ ಅರ್ಪಣೆ ಮೌಲ್ಯ ವಿಷಯದ (ಚಂದಾ ವಿಷಯದ) ಮಾಹಿತಿಯನ್ನು ಈ ಕೆಳಗೆ ನೀಡುತ್ತಿದ್ದೇವೆ.

ಬಂಧು ಬಳಗದವರಿಗೆ , ಮಿತ್ರವರ್ಗಕ್ಕೆ, ಪರಿಚಿತ ಹಿಂದುತ್ವವಾದಿ ಗಳಿಗೆ ಅದೇ ರೀತಿ ವಾಚನಾಲಯಗಳಿಗೆ, ಸಾರ್ವಜನಿಕ ಮಂಡಳಿಗಳು, ದೇವಾಲಯಗಳಲ್ಲಿ ಹೀಗೆ ಅಲ್ಲಲ್ಲಿ ಸನಾತನ ಪ್ರಭಾತದ ಬಗ್ಗೆ ಮಾಹಿತಿ ನೀಡಿರಿ ಹಾಗೂ ಅವರನ್ನು ಈ ನಿಯತಕಾಲಿಕೆಗಳ ವಾಚಕರನ್ನಾಗಿಸಲು ಪ್ರವೃತ್ತಗೊಳಿಸಿ ಧರ್ಮಕಾರ್ಯದಲ್ಲಿ ಭಾಗವಹಿಸಿರಿ ! ಈ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ ತಮ್ಮ ಜಿಲ್ಲೆಯಲ್ಲಿನ ಸ್ಥಳೀಯ ಸಾಧಕ ರನ್ನು ಸಂಪರ್ಕಿಸಿರಿ.
ಸನಾತನ ಪ್ರಭಾತದಲ್ಲಿರುವ ಚೈತನ್ಯದ ಜ್ಯೋತಿಯಿಂದ ಆಪ್ತರ ಅಂತರಂಗದಲ್ಲಿರುವ ರಾಷ್ಟ್ರ ಹಾಗೂ ಧರ್ಮ ಪ್ರೇಮದ ಜ್ಯೋತಿಯನ್ನು ಜ್ವಲಂತವಾಗಿರಿಸಲು ಪ್ರಯತ್ನಿಸಿರಿ !
ಟಿಪ್ಪಣಿ : ನಿಯತಕಾಲಿಕೆಗಳ (ದೈನಿಕವನ್ನು ಬಿಟ್ಟು ಇತರ) ವಾಚಕರ ನ್ನಾಗಿ ಮಾಡಲು ಹಾಗೂ ನವೀಕರಣಗೊಳಿಸಲು http://sanatanprabhat.org/subscribe/ ಸಾಲನ್ನು ಒತ್ತಿ ಅರ್ಜಿಯನ್ನು ತುಂಬಿಸಿ ದರೆ ಸಂಚಿಕೆ ಪ್ರಾರಂಭಿಸಲು ಸುಲಭವಾಗುವುದು.


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಾಚಕವೃದ್ಧಿ ಅಭಿಯಾನದ ನಿಮಿತ್ತ... ಹಿಂದೂ ರಾಷ್ಟ್ರ ಸ್ಥಾಪನೆಗೆ ದೀಪಸ್ತಂಭವಾಗಿರುವ ‘ಸನಾತನ ಪ್ರಭಾತ’ ಪತ್ರಿಕೆಗೆ ವಾಚಕರಾಗಲು ಆಪ್ತರಿಗೆ ಪ್ರೇರಣೆ ನೀಡಿರಿ !