ವಾಚಕವೃದ್ಧಿ ಅಭಿಯಾನದ ನಿಮಿತ್ತ...

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !
ನಮ್ಮ ಅಂತರಂಗದಲ್ಲಿರುವ ರಾಷ್ಟ್ರ ಮತ್ತು ಧರ್ಮಪ್ರೇಮದ ಜ್ಯೋತಿಯನ್ನು ಪ್ರಜ್ವಲಿತಗೊಳಿಸುವ ನಿಯತಕಾಲಿಕೆ ಸನಾತನ ಪ್ರಭಾತವನ್ನು ಅನೇಕ ಜಿಜ್ಞಾಸುಗಳ ವರೆಗೆ ತಲುಪಿಸಲು
ಶ್ರೀ. ದಿನೇಶ ಎಮ್.ಪಿ. ಯವರ ಆದರ್ಶವನ್ನು ಮುಂದಿಟ್ಟು ಪ್ರಯತ್ನಿಸಿರಿ !
ಮಂಗಳೂರಿನ ಶ್ರೀ. ದಿನೇಶ ಎಮ್. ಪಿ.ಯವರು ಓರ್ವ ಉದ್ಯಮಿಯಾಗಿದ್ದಾರೆ. ಕಳೆದ ೪ ವರ್ಷ ಗಳಿಂದ ಅವರು ಸನಾತನ ಸಂಸ್ಥೆಯ ಕಾರ್ಯದಲ್ಲಿ ಸಕ್ರಿಯವಾಗಿ ಸಹಭಾಗಿಯಾಗುತ್ತಿದ್ದಾರೆ. ಅವರು ಕೆಲವು ದಿನಗಳ ಹಿಂದೆ ತಮ್ಮ ವ್ಯವಹಾರವನ್ನು ನಡೆಸಿಕೊಂಡು ಸಾಪ್ತಾಹಿಕ ಸನಾತನ ಪ್ರಭಾತದ ೧ ಸಾವಿರ ಚಂದಾದಾರರನ್ನಾಗಿಸುವ ಧ್ಯೇಯವನ್ನು ಇಟ್ಟುಕೊಂಡಿದ್ದಾರೆ.
ಅವರಲ್ಲಿಗೆ ಬರುವ ಪ್ರತಿಯೊಬ್ಬ ಗ್ರಾಹಕರಿಗೆ ಅವರು ನಿಯತಕಾಲಿಕೆಯ ಮಹತ್ವವನ್ನು ಅಭ್ಯಾಸಪೂರ್ಣ ರೀತಿಯಲ್ಲಿ ಹೇಳಿ ವಾಚಕರಾಗಲು
ವಿನಂತಿಸುತ್ತಾರೆ. ಈ ರೀತಿಯಾಗಿ ಅವರಿಂದ ನಿರಂತರ ಪ್ರಯತ್ನ ನಡೆಯುತ್ತಿದ್ದು ಇದುವರೆಗೆ ಅವರು ೩೦೦ ಜನರನ್ನು ವಾಚಕರಾಗಲು ಉದ್ಯುಕ್ತ ಗೊಳಿಸಿದ್ದಾರೆ. ಅವರಲ್ಲಿರುವ ತಳಮಳದಿಂದಾಗಿ ಈ ಧ್ಯೇಯವನ್ನು ಅವರು ಬೇಗನೆ ಪೂರ್ಣಗೊಳಿಸುವರು ಎಂಬುದರಲ್ಲಿ ಸಂದೇಹವೇ ಇಲ್ಲ !
ಎಲ್ಲೆಡೆಯ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಕೃತಿಶೀಲ ಧರ್ಮಾಭಿಮಾನಿಗಳೆಲ್ಲರೂ ಶ್ರೀ. ದಿನೇಶ ಎಮ್.ಪಿ.ಯವರಂತೆ ಹೆಚ್ಚೆಚ್ಚು ಜನರ ವರೆಗೆ ಈ ನಿಯತಕಾಲಿಕೆಯನ್ನು ತಲುಪಿಸುವ ಧ್ಯೇಯ ವನ್ನಿಟ್ಟು ಪ್ರಯತ್ನಿಸಬೇಕು. ತಮ್ಮ ಆಪ್ತರು, ಸ್ನೇಹಿತರು ಮತ್ತು ಪರಿಚಿತರನ್ನೂ ಈ ನಿಯತಕಾಲಿಕೆಯ ವಾಚಕರ ನ್ನಾಗಿಸಲು ಪ್ರವೃತ್ತಗೊಳಿಸಿರಿ !’ - ಸದ್ಗುರು (ಸೌ). ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಾಚಕವೃದ್ಧಿ ಅಭಿಯಾನದ ನಿಮಿತ್ತ...