ಶ್ರೀಕೃಷ್ಣಜನ್ಮಾಷ್ಟಮಿ (೨೪.೮.೨೦೧೬)

 ಮೊಸರು ಕುಡಿಕೆ (ಆಗಸ್ಟ್ ೨೫)
..................................................

ಶ್ರೀಕೃಷ್ಣಜನ್ಮಾಷ್ಟಮಿ ವ್ರತ
ಈ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನ ಗೊಳಿಸುತ್ತಾರೆ. ಈ ವ್ರತವನ್ನು ಮಕ್ಕಳು, ಯುವಕರು, ವೃದ್ಧರು, ಸ್ತ್ರೀ-ಪುರುಷರು ಎಲ್ಲರೂ ಮಾಡಬಹುದು. ಪಾಪನಾಶ, ಸೌಖ್ಯ ವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ ಫಲವಾಗಿದೆ.
ಶ್ರೀಕೃಷ್ಣಜನ್ಮಾಷ್ಟಮಿಯ ವ್ರತಕ್ಕೆ ಸಂಬಂಧಿಸಿದ ಉಪವಾಸ
ಈ ದಿನ ದಿನವಿಡೀ ಉಪವಾಸವನ್ನು ಮಾಡ ಲಾಗುತ್ತದೆ. ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ.

ಶ್ರೀಕೃಷ್ಣಜನ್ಮಾಷ್ಟಮಿಯ ಪೂಜಾವಿಧಿ
ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದನು. ಆದುದರಿಂದ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಪೂಜೆಯನ್ನು ಆರಂಭಿಸಲಾಗುತ್ತದೆ. ‘ಭಗವಾನ ಶ್ರೀಕೃಷ್ಣನ ಜನ್ಮವಾಗಿದೆ’ ಎಂಬ ಧಾರಣೆಯಿಂದ ಪೂಜೆ ಯನ್ನು ಮಾಡಬೇಕು.
ಪೂಜೆಯ ತಯಾರಿ ಹಾಗೂ ಪದ್ಧತಿ
೧. ಪೂಜೆಗೆ ಮಣೆಯ ಮೇಲೆ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಇಡಿರಿ.
೨. ಅನಂತರ ಶ್ರೀಕೃಷ್ಣನ ಮೂರ್ತಿಗೆ ಚಂದನ ತಿಲಕವನ್ನು ಹಚ್ಚಿರಿ.
೩. ಅನಂತರ ಪುಷ್ಪವನ್ನು ಅರ್ಪಿಸಿರಿ.
೪. ಸಾಧ್ಯವಿದ್ದಲ್ಲಿ ಕೃಷ್ಣಕಮಲವನ್ನು ಅರ್ಪಿಸಿರಿ.
೫. ಈಗ ಶ್ರೀ ಕೃಷ್ಣನಿಗೆ ತುಳಸಿ ಅರ್ಪಿಸಿರಿ.
೬. ಸಾಧ್ಯವಿದ್ದಲ್ಲಿ ತುಳಸಿಯ ಮಾಲೆಯನ್ನು ಅರ್ಪಿಸಿರಿ.
೭. ಈಗ ಊದುಬತ್ತಿಯನ್ನು ತೋರಿಸಿರಿ. ಎರಡು ಊದುಬತ್ತಿಗಳನ್ನು ತೆಗೆದುಕೊಂಡು
ದಕ್ಷಿಣಾವರ್ತದಲ್ಲಿ ಮೂರುಬಾರಿ ಸುತ್ತಿಸಿ.
೮. ಈಗ ದೀಪವನ್ನು ತೋರಿಸಿ.

೯. ಈಗ ಮೊಸರವಲಕ್ಕಿಯ ನೈವೇದ್ಯ ಅರ್ಪಿಸಿರಿ.(PHOTO)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀಕೃಷ್ಣಜನ್ಮಾಷ್ಟಮಿ (೨೪.೮.೨೦೧೬)