ಸನಾತನದ ಸ್ಥಾಪನೆಯ ಸಾಕ್ಷೀದಾರರಾಗಿರುವ ಸಾಧಕರಿಗೆ ಸೂಚನೆ !

ಈಗಿನ ಪೀಳಿಗೆಗೆ ಸನಾತನದ ಇತಿಹಾಸ ತಿಳಿಯಲು 
ಸನಾತನದ ಕಾರ್ಯಾರಂಭದ ಅನುಭವವನ್ನು ತಿಳಿಸಿರಿ !
ಸನಾತನದ ಕಾರ್ಯವನ್ನು ಸ್ಥಾಪಿಸಲು ಪ್ರಾರಂಭದ ಕೆಲವು ವರ್ಷಗಳಲ್ಲಿ ಸಾಧಕರು ಬಹಳ ಕಷ್ಟ ಪಟ್ಟಿದ್ದಾರೆ. ಕೆಲವು ಸಾಧಕರು ಸಮಾಜದ ಕೋಪವನ್ನು ಸಹ ಎದುರಿಸಬೇಕಾಯಿತು. ಕೆಲವು ಸಾಧಕರಿಗೆ ಒಳ್ಳೆಯ ಕಾರ್ಯವನ್ನು ಮಾಡುತ್ತಿರುವ ಕುರಿತು ಸಮಾಜದಿಂದ ಶ್ಲಾಘನೆಯೂ ದೊರೆಯಿತು. ಈಗ ಸಮಾಜಕ್ಕೆ ಸನಾತನದ ಕಾರ್ಯ, ಸಾಧಕರ ಕುರಿತು ತಿಳಿದಿದೆ. ಕಾರ್ಯದ ಪ್ರಾರಂಭದಲ್ಲಿ ಸಮಾಜಕ್ಕೆ ಸನಾತನ, ಸಾಧನೆ ಮತ್ತು ಗುರುಕೃಪಾಯೋಗಾನುಸಾರ ಸಾಧನೆ ಮುಂತಾದ ವಿಷಯಗಳು ತಿಳಿಯದೇ ಇದ್ದ ಕಾರಣ ಪ್ರಸಾರ ಮಾಡುವುದು, ಸಮಾಜವನ್ನು ಸನಾತನದ ಕಾರ್ಯದೊಂದಿಗೆ ಸಮಾವೇಶಗೊಳಿಸುವುದು ಮತ್ತು ಅವರ ಮನಸ್ಸಿನಲ್ಲಿ ಸನಾತನದ ಕುರಿತು ವಿಶ್ವಾಸ ನಿರ್ಮಾಣ ಮಾಡುವುದು ಇತ್ಯಾದಿ ಸೇವೆ ಮಾಡಲು ಅನೇಕ ಸಾಧಕರು ಕಷ್ಟಪಟ್ಟಿದ್ದಾರೆ.
ಸಾಧಕರ ಆ ಕಷ್ಟ, ಸಿಹಿ-ಕಹಿ ಅನುಭವ ಮತ್ತು ಅದರಿಂದ ಅವರಿಗೆ ದೊರೆತ ಆಧ್ಯಾತ್ಮಿಕ ಬೋಧನೆ ಸನಾತನದ ಇತಿಹಾಸವಾಗಿದೆ. ಈ ಇತಿಹಾಸದ ಸಾಕ್ಷೀದಾರರಾಗಿರುವ ಹಾಗೆಯೇ ಸನಾತನದ ಕಾರ್ಯಕ್ಕೆ ಅಡಿಪಾಯವನ್ನು ಹಾಕಿರುವ ಸಾಧಕರು ಸನಾತನದ ರಜತಮಹೋತ್ಸವದ ನಿಮಿತ್ತ ಅವರ ಅನುಭವಗಳನ್ನು ಬರೆದು ಕಳುಹಿಸಬೇಕು. ನಾವು ನಮ್ಮ ಇತಿಹಾಸವನ್ನು ಜೋಪಾನ ಮಾಡೋಣ. ಇದರಿಂದ ಮುಂದಿನ ಪೀಳಿಗೆಯವರಿಗೆ ಕಲಿಯಲು ಸಿಗುವುದು. ಹಾಗೆಯೇ ಈಗ ಪ್ರಸಾರ ಮಾಡುವುದು ಎಷ್ಟು ಸುಲಭವಾಗಿದೆಯೆನ್ನುವುದು ಅರಿವಾಗಿ ಈಶ್ವರನ ಬಗ್ಗೆ ಕೃತಜ್ಞತೆಯೂ ವೃದ್ಧಿಯಾಗುವುದು.
ಈ ಮೊದಲೇ ಇಂತಹ ಲೇಖನವನ್ನು ಬರೆದು ಕಳುಹಿಸಿರುವವರು ಪುನಃ ಅದೇ ಅಂಶಗಳನ್ನು ಬರೆದು ಕಳುಹಿಸಬಾರದು.
ಅನುಭವ/ಅನುಭೂತಿ ಕಳುಹಿಸಲು ವಿಳಾಸ
೨೪/ಬಿ, ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ.
ವಿ-ಅಂಚೆ ವಿಳಾಸ : sankalak.goa@gmail.com
ಸಂಪರ್ಕ ಸಂಖ್ಯೆ : ೯೪೦೪೯ ೫೬೦೭೪

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಸ್ಥಾಪನೆಯ ಸಾಕ್ಷೀದಾರರಾಗಿರುವ ಸಾಧಕರಿಗೆ ಸೂಚನೆ !