ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಜಗತ್ತಿನಾದ್ಯಂತ ಅಸುರಕ್ಷಿತ ಹಿಂದೂಗಳ ದೇವಸ್ಥಾನಗಳು !
ಮಲೇಷ್ಯಾದಲ್ಲಿ ದೇವಸ್ಥಾನಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಘಟನೆಗಳ ನಂತರ ಈಗ ಮೆಕ್ಸಿಕೊ ದೇಶದ ಹಿದಾಲ್ಗೊ ರಾಜ್ಯದ ಒಂದು ದೇವಸ್ಥಾನದ ಮೇಲೆ ಕೆಲವು ಮತಾಂಧರು ಇತ್ತೀಚೆಗೆ ದಾಳಿ ನಡೆಸಿದರು. ಈ ದಾಳಿಯಲ್ಲಿ ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಕಿತ್ತೊಗೆಯಲಾಯಿತು.
೨. ಡಾ. ಝಾಕೀರ್ ನಾಯಿಕರ ಮೇಲೆ ಈಗಲಾದರೂ ಕ್ರಮ ಕೈಗೊಳ್ಳಲಾಗುವುದೋ ?
ವಿವಿಧ ಆರೋಪಗಳಿಂದ ಬಂಧನದಲ್ಲಿರುವ ೫೫ ಜಿಹಾದಿ ಉಗ್ರರು ಡಾ. ಝಾಕೀರ್ ನಾಯಿಕ್ ಇವರಿಂದ ಪ್ರೇರಿತರಾಗಿದ್ದಾರೆಂದು ಹೇಳಿದ್ದಾರೆ. ಈ ಉಗ್ರರು ಸಿಮಿ, ಲಷ್ಕರ್- ಎ-ತೊಯಬಾ, ಇಂಡಿಯನ್ ಮುಜಾಹಿದ್ದೀನ್, ಇಸ್ಲಾಮಿಕ್ ಸ್ಟೇಟ್‌ಗಳಂತಹ ಸಂಘಟನೆಗಳಿಗಾಗಿ ಕೆಲಸ ಮಾಡುವಾಗ ಬಂಧಿಸಲ್ಪಟ್ಟಿದ್ದರು.

೩. ಸಂತರ ಅವಮಾನ ಮಾಡುವ ಪ್ರಸಾರ ಮಾಧ್ಯಮಗಳ ಹಿಂದೂ ದ್ವೇಷವನ್ನು ಗಮನದಲ್ಲಿಡಿರಿ !
ಸ್ವಾಮಿ ನಿತ್ಯಾನಂದರ ವಿರುದ್ಧ ೨೦೧೦ ರಲ್ಲಿ ಓರ್ವ ಮಹಿಳೆಯು ದಾಖಲಿಸಿದ ಬಲಾತ್ಕಾರದ ಆರೋಪವು ಅವರನ್ನು ಅವಮಾನಿಸುವ ಉದ್ದೇಶದಿಂದ ಮಾಡಲಾಗಿತ್ತು, ಎಂಬ ತೀರ್ಪು ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದೆ; ಆದರೆ ೨೦೧೦ ರಲ್ಲಿ ಸ್ವಾಮಿಯವರ ಅವಮಾನ ಮಾಡಿದ ಪ್ರಸಾರಮಾಧ್ಯಮಗಳು ಮಾತ್ರ ಈಗ ಸುಮ್ಮನಿವೆ.
೪. ಹಿಂದೂಸಂಘಟನೆಗಳ ಆವಿಷ್ಕಾರದಿಂದ ಸನಾತನಕ್ಕೆ ಭಾರಿ ಬೆಂಬಲ !
ಪಶ್ಚಿಮ ಮಹಾರಾಷ್ಟ್ರದ ೧೫೦ ಕ್ಕಿಂತ ಹೆಚ್ಚು ಸಂಘಟನೆಗಳು ಆಗಸ್ಟ್ ೪ ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಒಂದು ಸಮ್ಮೇಳನದಲ್ಲಿ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಸನಾತನ ಸಂಸ್ಥೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿವೆ. ಸನಾತನಕ್ಕೆ ಕೊಡುತ್ತಿರುವ ತೊಂದರೆಯು ನಿಲ್ಲದಿದ್ದರೆ ಹಿಂದುತ್ವನಿಷ್ಠ ಸಂಘಟನೆಗಳು ಸಂಘರ್ಷದ ಭೂಮಿಕೆಯನ್ನು ತೆಗೆದುಕೊಳ್ಳುವರು, ಎಂಬ ನಿರ್ಧಾರವನ್ನೂ ಇಲ್ಲಿ ಮಾಡಲಾಯಿತು.
೫. ಜಿಹಾದ್ ಕಲಿಸುವ ೨೦ ಮಸೀದಿಗಳಿಗೆ ಬೀಗ ಜಡಿದ ಫ್ರಾನ್ಸ್ !
ಜಿಹಾದಿನ ಪ್ರಸಾರ ಮಾಡಿದ ಕಾರಣದಿಂದ ಫ್ರಾನ್ಸ್‌ನ ೨೦ ಮಸೀದಿ ಮತ್ತು ಪ್ರಾರ್ಥನಾ ಸ್ಥಳಗಳನ್ನು ಬಂದ್ ಮಾಡಿದ್ದಾರೆ. ಇದಕ್ಕೆ ಬಾಂಗ್ಲಾ ದೇಶಿ ಲೇಖಕಿ ತಸ್ಲೀಮಾ ನನ್ತ್ರೀವರು, ಇಂತಹ ನಿರ್ಣಯ ಇತರ ದೇಶಗಳು ಯಾವಾಗ ತೆಗೆದುಕೊಳ್ಳುವವು? ಎಂಬ ಪ್ರಶ್ನೆ ಕೇಳಿದ್ದಾರೆ.
೬. ಜಿಹಾದಿಗಳಿಂದ ಹಿಂದೂಗಳಿಗೆ ಕಾಶ್ಮೀರ ಬಿಡಲು ಪುನಃ ಬೆದರಿಕೆ !
ಲಷ್ಕರ್-ಎ-ಇಸ್ಲಾಮ್ ಈ ಸಂಘಟನೆಯು, ಹಿಂದೂಗಳು ಕಾಶ್ಮೀರ ಕಣಿವೆಯಿಂದ ಹೋಗಬೇಕು ಇಲ್ಲದಿದ್ದಲ್ಲಿ ಸಾಯಲು ಸಿದ್ಧರಾಗಬೇಕು, ಎಂಬ ವಿಷಯವಿರುವ ಕರಪತ್ರವನ್ನು ಅಂಟಿಸಿದೆ. ಇದರಲ್ಲಿ ಮುಂದೆ, ನೀವು ನಿಮ್ಮ ಸಂರಕ್ಷಣೆಯನ್ನು-ಎರಡು-ಮೂರು ಪಟ್ಟು ಮಾಡಿ; ಆದರೂ ನೀವು ಸಾಯಲು ಸಿದ್ಧರಾಗಿರಿ ! ಎಂದು ಹೇಳಲಾಗಿದೆ.
೭. ಹಿಂದೂಗಳೇ, ಧರ್ಮದ ಮಹತ್ವವನ್ನು ಅರಿತುಕೊಳ್ಳಿ !

ಹಿಂದೂ ಧರ್ಮದಲ್ಲಿ ಜನ್ಮದಿಂದ ಮೃತ್ಯು ಈ ಕಾಲಾವಧಿಯಲ್ಲಿ ನಡೆಯುವ ವಿವಾಹ, ವಾಸ್ತುಶಾಂತಿ ಇತ್ಯಾದಿ ವಿಧಿ, ಅದೇ ರೀತಿ ಮೃತ್ಯುವಿನ ನಂತರ ಮಾಡಲಾಗುವ ಶ್ರಾದ್ಧದ ವಿಧಿ, ಪೂಜೆ, ಯಜ್ಞಯಾಗ ಇತ್ಯಾದಿ ಉಪಾಸನಾಪದ್ಧತಿ ಇವೆಲ್ಲ ಈಶ್ವರಪ್ರಾಪ್ತಿಗಾಗಿ ಪೂರಕವಾಗಿವೆ. ವಿಜ್ಞಾನದ ಒಂದಾದರೂ ಪ್ರಯೋಗ ಈಶ್ವರನ ಪ್ರಾಪ್ತಿ ಮಾಡಿಸಿಕೊಡುವುದೇ ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !