ಈ ಕೃತಘ್ನತೆಗೆ ಏನೆನ್ನಬೇಕು ?

ಕಾಶ್ಮೀರದಲ್ಲಿ ಉಗ್ರ ಬುರ್ಹಾನ ವಾನಿಯ ಹತ್ಯೆಯಾಯಿತು, ಅಂದಿ ನಿಂದ ಅಂದರೆ ಕಳೆದ ಒಂದುವರೆ ತಿಂಗಳಿಂದ ಆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರವನ್ನು ತಡೆಯಲು ಭದ್ರತಾ ದಳದ ಸೈನಿಕರು ಮತ್ತು ಪೊಲೀಸರು ತಮ್ಮ ಸೇವೆಯಲ್ಲಿ ಮಗ್ನರಾಗಿದ್ದಾರೆ. ಹಿಂಸಾಚಾರದಲ್ಲಿ ೬೦ ಕ್ಕಿಂತಲೂ ಹೆಚ್ಚು ಆಂದೋಲನಕಾರರು ಸಾವನ್ನಪ್ಪಿದರು ಹಾಗೂ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಈ ಆಂದೋಲನಕಾರರು ಬುರ್ಹಾನ ವಾನಿಯ ಬೆಂಬಲಿಗರಾಗಿದ್ದಾರೆಂದು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆಯಿಲ್ಲ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಈ ಆಂದೋಲನಕಾರರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಹೋಗಿದ್ದರು. ಸಾವಿಗೀಡಾದ ಉಗ್ರನು ಭದ್ರತಾ ದಳದವರು ಮಾಡಿದ ಕಾರ್ಯಾಚರಣೆಯಿಂದ ಸಾವಿಗೀಡಾಗಿದ್ದಾನೆ ಹಾಗೂ ಅವನ ಸಮರ್ಥಕರು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಆರಂಭಿಸಿದ್ದಾರೆ. ಈ ಚಿತ್ರಣವು ಸ್ಪಷ್ಟವಾಗಿರುವಾಗ ಕಾಂಗ್ರೆಸ್ ಪಕ್ಷಕ್ಕೆ ಈ ಆಂದೋಲನಕಾರರ ವಿಷಯದಲ್ಲಿ ಸಹಾನುಭೂತಿ ಅನಿಸಿತು ಹಾಗೂ ಅದರ ನಾಯಕ ಗಾಯಗೊಂಡವರನ್ನು ಭೇಟಿಯಾಗಲು ಆಸ್ಪತ್ರೆಗೆ ಹೋದರು. ರಾಜ್ಯದಲ್ಲಿ ಒಂದುವರೆ ತಿಂಗಳ ವರೆಗೆ ನಿರಂತರ ನಡೆಯುತ್ತಿರುವ ಹಿಂಸಾಚಾರವನ್ನು ಜಗತ್ತಿನಾದ್ಯಂತ ಜನರು ವೀಕ್ಷಿಸಿದರು. ಜನರಿಗೆ ನೀಡುವ ಈ ಕಿರುಕುಳವು ಯಾರಿಗೂ ಇಷ್ಟವಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಜನರ ವಿರುದ್ಧ ಹೋದರು ಹಾಗೂ ತಮ್ಮ ಕೃತಿಯಿಂದ ಅವರು ಜನರ ಕೋಪಕ್ಕೆ ತುತ್ತಾದರು. ಮಣಿಶಂಕರ ಅಯ್ಯರ್ ಆಸ್ಪತ್ರೆಗೆ ಹೋದರೂ ಅಲ್ಲಿ ಅವರನ್ನು ಯಾರೂ ಸ್ವಾಗತಿಸಲಿಲ್ಲ. ಅಲ್ಲಿ ಅವರು ಅವಮಾನಕಾರಿ ಶಬ್ದವನ್ನೇ ಕೇಳಬೇಕಾಯಿತು. ಗೋ ಇಂಡಿಯಾ ಗೋ ಬ್ಯಾಕ್ ಎಂಬ ಅವಮಾನಕಾರಿ ಶಬ್ದವನ್ನು ಕೇಳಬೇಕಾಯಿತು. ಕೊಲೆಗಾರರೊಂದಿಗೆ ಹಸ್ತಲಾಘವ ಮಾಡಲು ನಮಗೆ ಇಚ್ಛೆಯಿಲ್ಲ, ಎಂದು ಆಸ್ಪತ್ರೆಯ ಹಾಸಿಗೆಯಲ್ಲಿ ಬಿದ್ದಿರುವ ಗಲಭೆಕೋರ ಗಾಯಾಳುಗಳು ಹೇಳುತ್ತಿದ್ದರು. ಈ ಗಲಭೆಕೋರರ ಮಾನಸಿಕತೆ ಹೇಗಿದೆಯೆಂಬುದು ಅದರಿಂದ ಸ್ಪಷ್ಟವಾಯಿತು. ಕಾಶ್ಮೀರದ ಹೊರಗಿನ ಆದರೆ ದೇಶದ ವ್ಯಕ್ತಿಗೇ ಅವರು ಇಂಡಿಯನ್ ಎಂದು ಹೇಳುತ್ತಾರೆ ಹಾಗೂ ಕಾಂಗ್ರೆಸ್ಸಿಗರನ್ನು ಕೊಲೆಗಾರರೆಂದು ಉಲ್ಲೇಖಿಸುತ್ತಾರೆ. ಇಂತಹ ದ್ವೇಷ ಅವರ ಮನಸ್ಸಿನಲ್ಲಿ ಹೇಗೆ ಬಂತು ? ಕಾಂಗ್ರೆಸ್ಸಿನ ಆಡಳಿತವಿರುವಾಗ ಕಾಶ್ಮೀರ ರಾಜ್ಯದ ಜನರಿಗೆ ಸದಾ ಮೃದು ನಿಲುವು ಸಿಕ್ಕಿದೆ. ಕಾಶ್ಮೀರಿ ಜನರ ವಿಷಯದ ನಿಲುವು ಸೌಮ್ಯವಾಗಿರುವುದರಿಂದ ಕಾಶ್ಮೀರದ ಸಮಸ್ಯೆ ದಿನಕಳೆದಂತೆ ಜಟಿಲವಾಗುತ್ತಾ ಹೋಯಿತು, ಎಂಬ ಜಾಗತಿಕ ನಿಷ್ಕರ್ಷವು ಅದರಿಂದ ಬೆಳಕಿಗೆ ಬಂದಿದೆ. ಕಾಂಗ್ರೆಸ್ಸಿನ ಈ ನಿಲುವು ಅವರ ಮೇಲೆ ಹೇಗೆ ತಿರುಗಿಬಿದ್ದಿದೆ, ಎಂಬುದನ್ನು ಈ ಉದಾಹರಣೆ ತೋರಿಸುತ್ತದೆ. ಇಂದು ಕಾಶ್ಮೀರಿಗಳು ಕಾಂಗ್ರೆಸ್ಸಿಗರನ್ನು ಕೊಲೆಗಾರರೆಂದು ಹೀಯಾಳಿಸುತ್ತಿದ್ದಾರೆ. ಇದರ ಅರ್ಥ ಅವರಿಗೆ ಭಾರತ ದೇಶದ ವಿಷಯದಲ್ಲಿ ಆತ್ಮೀಯ ಭಾವನೆ ಇಲ್ಲವೋ ಅಥವಾ ಭಾರತೀಯ ನಾಗರಿಕತ್ವದ ಅರಿವಿಲ್ಲವೋ ? ಇದರ ಹಿಂದಿನ ಕಾರಣ ಏನಿರಬಹುದು ? ಸ್ವಾತಂತ್ರ್ಯದ ಕ್ಷಣದಿಂದ ಅವರನ್ನು ಯಾರೂ ಮುಖ್ಯ ಪ್ರವಾಹದಲ್ಲಿ ತರಲು ಪ್ರಯತ್ನಿಸಲಿಲ್ಲ ಅಥವಾ ಅವರಿಗೆ ದೇಶದ ನಾಗರಿಕರಾಗಿರುವಾಗ ಹೇಗೆ ವರ್ತಿಸಬೇಕೆಂಬ ವಿಷಯದಲ್ಲಿ ಕರ್ತವ್ಯದ ಅರಿವು ಮೂಡಿಸಲಿಲ್ಲ. ದೇಶದ ಸ್ವಾತಂತ್ರ್ಯದ ನಂತರ ದೇಶ ದಲ್ಲಿ ಪ್ರಥಮಬಾರಿ ಆಡಳಿತ ನಡೆಸಿದ ಪಕ್ಷ ಕಾಂಗ್ರೆಸ್ ಆಗಿತ್ತು. ಅದರ ನಂತರವೂ ಎಷ್ಟೋ ವರ್ಷ ಈ ಪಕ್ಷ ನಿರಂತರ ದೇಶದಲ್ಲಿ ಆಡಳಿತ ನಡೆಸಿದೆ. ಆದ್ದರಿಂದ ಅದೇ ದೇಶದ ನಿಜವಾದ ರಕ್ಷಕ, ಎಂಬ ಒಂದು ವಿಚಾರಧಾರೆ ನಿರ್ಮಾಣವಾಯಿತು. ಕಾಶ್ಮೀರದ ಜನರನ್ನು ಮುಖ್ಯ ಪ್ರವಾಹದಿಂದ ದೂರ
ವಿಟ್ಟಿರುವುದರ ಪರಿಣಾಮ ಇಂದು ಕಾಂಗ್ರೆಸ್ ಪಕ್ಷವೇ ಅನುಭವಿಸಬೇಕಾಗಿದೆ.
ದಿಶಾಹೀನತೆ !
ಕಾಶ್ಮೀರದಲ್ಲಿ ಗಾಯಗೊಂಡ ಆಂದೋಲನಕಾರರನ್ನು ಭೇಟಿಯಾಗಲು ಮಣಿಶಂಕರ ಅಯ್ಯರ್ ಹೋಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ದೆಹಲಿಯ ಬಾಟ್ಲಾ ಹೌಸ್ ಪ್ರಕರಣದಲ್ಲಿ ಉಗ್ರರು ಸಾವನ್ನಪ್ಪಿದಾಗ ಆ ಉಗ್ರರ ಸಂಬಂಧಿಕರನ್ನು ಭೇಟಿಯಾಗಲು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮತ್ತು ಇನ್ನೊಬ್ಬ ಮುಖಂಡರು ಹೋಗಿದ್ದರು. ಉಗ್ರರ ಸಂಬಂಧಿಕರು ಮತ್ತು ಉಗ್ರರ ಬೆಂಬಲಿಗರನ್ನು ಸಾಂತ್ವನಗೊಳಿಸಲು ಕಾಂಗ್ರೆಸ್ಸಿನ ನಾಯಕರು ಹೋಗುತ್ತಾರೆ, ಇತರ ಯಾವುದೇ ಪಕ್ಷದ ನಾಯಕರು ಹೋಗುವುದಿಲ್ಲ, ಎಂಬ ವ್ಯತ್ಯಾಸವು ಜನರಿಗೆ ಅರಿವಾಗದೆ ಇರದು.
ಉಗ್ರರಿಗೆ ಬೆಂಬಲ ಸಿಗುವುದು ಈ ದೇಶದಲ್ಲಿ ಮಾತ್ರ ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಮನುಷ್ಯನ ಅಧಿಕಾರವು ಎಷ್ಟು ಮುಕ್ತವಾಗಿರುತ್ತದೆ ಹಾಗೂ ಮನುಷ್ಯನಿಗೆ ಅದರಿಂದ ಎಷ್ಟು ಸಮಾಧಾನ ಸಿಗುತ್ತದೆ, ಅದನ್ನು ನೋಡುವಾಗ ಪ್ರಜಾಪ್ರಭುತ್ವದ ಈ ಕೊರತೆಯ ಕಡೆಗೂ ಗಮನ ಹೋಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರರ್ಥಕವೆಂದು ಕರೆಯುತ್ತಾರೆ. ಕಾಂಗ್ರೆಸ್ಸಿನ ನಾಯಕರು ವಿವಾದಿತ ಪ್ರಕರಣಗಳಲ್ಲಿ ಮುಂದಿರುತ್ತಾರೆ, ಎಂಬುದನ್ನು ಗಮನಿಸಿದರೆ ಅದರ ಹಿಂದಿನ ಅವರ ನಿಲುವೇನಿರುತ್ತದೆ ? ಎಂಬ ವಿಷಯದಲ್ಲಿ ಜನರಲ್ಲಿ ಚರ್ಚೆಗಳು ಆರಂಭವಾಗುತ್ತದೆ. ದೇಶದಲ್ಲಿ ನಡೆಯುತ್ತಿರುವ ಉಗ್ರವಾದದ ವಿಷಯವು ದೇಶದ ಮೂಲಕ್ಕೇ ಕೊಡಲಿಯೇಟು ಹಾಕುತ್ತದೆ. ದೇಶದ ಸರಕಾರ ಈ ಉಗ್ರವಾದವನ್ನು ನಿರ್ನಾಮಗೊಳಿಸಲು ಪ್ರಯತ್ನಿಸುತ್ತಿರುವಾಗ ಆ ಉಗ್ರವಾದಿ ಪ್ರವೃತ್ತಿಗೇ ಪೋಷಕವಾಗುವ ಸಹಾನುಭೂತಿಯನ್ನು ತೋರಿಸುವ ಕೃತಿ ಮಾಡುವುದು ಯಾವ ವಿಚಾರಸರಣಿಗೆ ಹೋಲು ತ್ತದೆ ? ವಿಪಕ್ಷವೆಂದರೆ ಆಡಳಿತ ಪಕ್ಷದ ಧೋರಣೆಗಳನ್ನು ವಿರೋಧಿಸು ವುದೋ ಅಥವಾ ಅಸ್ತಿತ್ವಕ್ಕೇ ಕುತ್ತು ತರುವುದೋ ?
ಪ್ರಧಾನಿ ಮೋದಿಯವರು ಚುನಾವಣೆಯ ಪ್ರಚಾರದ ಸಮಯದಲ್ಲಿ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಆಶ್ವಾಸನೆ ನೀಡಿದ್ದರು. ಅನಂತರ ಕೆಲವು ಘಟನೆಗಳು ಘಟಿಸಿದವು, ಆಗ ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವವನ್ನು ತಾನೇ ಅಳಿಸುತ್ತಿದೆ, ಎಂದು ಜನರು ಹೇಳಲು ಆರಂಭಿಸಿದರು. ಮಣಿಶಂಕರ ಅಯ್ಯರ್ ಕಾಶ್ಮೀರದಲ್ಲಿ ಆಸ್ಪತ್ರೆಗೆ ಹೋಗಿ ಗಾಯಗೊಂಡ ಉಗ್ರರ ಬೆಂಬಲಿಗರನ್ನು ಭೇಟಿಯಾಗಲು ಪ್ರಯತ್ನಿಸಿದ ಈ ಘಟನೆಯನ್ನು ಜನರು ಅಷ್ಟು ಬೇಗ ಮರೆಯಬಹುದೆಂದು ಯಾರಿಗೂ ಅನಿಸುವುದಿಲ್ಲ. ಈಗ ಪ್ರಶ್ನೆ ಉಳಿಯುವುದು ಗೋ ಇಂಡಿಯಾ ಗೋ ಬ್ಯಾಕ್ ಈ ಘೋಷಣೆ ಯದ್ದು ! ಮಣಿಶಂಕರ ಅಯ್ಯರ್ ಆಸ್ಪತ್ರೆಗೆ ಹೋದಾಗ ಹಾಸಿಗೆಯಲ್ಲಿದ್ದ ಗಾಯಾಳುಗಳು ಈ ಘೋಷಣೆಯನ್ನು ನೀಡಿದರು. ಉಂಡಮನೆಗೆ ಎರಡು ಬಗೆಯುವುದು ಹೀಗೊಂದು ಗಾದೆ ಮಾತಿದೆ. ಯಾರಿಗಾದರೂ ಕೃತಘ್ನತೆಯನ್ನು ವ್ಯಕ್ತಪಡಿಸಲು ಅದನ್ನು ಉಪಯೋಗಿಸಲಾಗುತ್ತದೆ. ಭಾರತದಲ್ಲಿಯೇ ವಾಸಿಸುವುದು, ಭಾರತಭೂಮಿಯ ಉದರದಿಂದ ಉತ್ಪನ್ನವಾಗುವ ಅನ್ನವನ್ನು ತಿನ್ನುವುದು ಮತ್ತು ದೇಶವನ್ನು ಅಂದರೆ ಭಾರತವನ್ನೇ ಅವಮಾನಗೊಳಿಸುವುದು, ಇದಕ್ಕೆ ಕೃತಘ್ನತೆಯ ಹೊರತು ಬೇರೆ ಸಭ್ಯ ಶಬ್ದವಿದೆಯೇ ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಈ ಕೃತಘ್ನತೆಗೆ ಏನೆನ್ನಬೇಕು ?