ಕೇರಳ ರಾಜ್ಯದಲ್ಲಿ ದೇವಸ್ಥಾನಕ್ಕೆ ಹೋಗುವ ದಾರಿಯನ್ನೇ ಮುಚ್ಚಿದ ಮತಾಂಧರು !

ಸಾಮ್ಯವಾದಿಗಳ ರಾಜ್ಯದಲ್ಲಿ ಹಿಂದೂಗಳ ದಯನೀಯ ಸ್ಥಿತಿ !
ಮಲಪ್ಪುರಮ್ (ಕೇರಳ) : ಜಿಲ್ಲೆಯ ತಿರೂರ ತಾಲೂಕಿನಲ್ಲಿರುವ ಕಲ್ಪಕಾಂಚೇರಿಯ ೧ ಸಾವಿರ ವರ್ಷಗಳಷ್ಟು ಹಳೆಯ ಶಂಕರ ನಾರಾಯಣ ದೇವಸ್ಥಾನದ ಬಹುತೇಕ ಭೂಮಿಯನ್ನು ಒಬ್ಬ ಮತಾಂಧನು ಅತಿಕ್ರಮಣ ಮಾಡಿದ್ದು, ದೇವಸ್ಥಾನಕ್ಕೆ ಹೋಗುವ ದಾರಿಯನ್ನೇ ಮುಚ್ಚಿ, ಹಿಂದೂಗಳ ಧಾರ್ಮಿಕ ಅಧಿಕಾರದ ಮೇಲೆ ಆಕ್ರಮಣ ಮಾಡಿದ್ದಾನೆ.
೧. ಹಮಸ್ಕುಟ್ಟಿ ಎಂಬ ಮುಸಲ್ಮಾನನು ಈ ದೇವಸ್ಥಾನದ ಹತ್ತಿರ ವಾಸಿಸುತ್ತಿದ್ದನು. ದೇವಸ್ಥಾನದ ೩೪ ಸೆಂಟ ಭೂಮಿಯಲ್ಲಿ ೩೦ ಸೆಂಟ ಭೂಮಿಯನ್ನು ಅವನು ಅನಧಿಕೃತವಾಗಿ ಕಬಳಿಸಿದ್ದಾನೆ. ಈ ಸ್ಥಳ ದಲ್ಲಿ ಬೇಲಿಯನ್ನು ಹಾಕಿ ದೇವಸ್ಥಾನದ ದಾರಿಯನ್ನೇ ಮುಚ್ಚಿದ್ದಾನೆ. ಅವನಿಗೆ ಸ್ಥಳೀಯ ಮತಾಂಧರ ಬೆಂಬಲವೂ ದೊರಕಿದೆ.
೨. ಈ ವಿಷಯ ಹಿಂದೂ ಭೂಮಿ ಸಂರಕ್ಷಣ ವೇದಿ ಈ ಹಿಂದುತ್ವನಿಷ್ಠ ಸಂಘಟನೆಗೆ ತಿಳಿಯುತ್ತಲೇ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ. ರತ್ನಾಕರನ್ ಇವರು ತಕ್ಷಣವೇ ಘಟನಾಸ್ಥಳಕ್ಕೆ ಧಾವಿಸಿ ಪ್ರತ್ಯಕ್ಷವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ದರು. ಹಮಸ್ಕುಟ್ಟಿಗೆ ಮುಸ್ಲಿಂ ಲೀಗ ಹಾಗೂ ಇತರ ಜಿಹಾದಿ ಸಂಘಟನೆಗಳ ಬೆಂಬಲವೂ ಇದೆಯೆಂದು ಶ್ರೀ. ರತ್ನಾಕರನ್ ಇವರ ಗಮನಕ್ಕೆ ಬಂದಿತು.

೩. ಶ್ರೀ. ರತ್ನಾಕರನ್ ಇವರು ಜಿಲ್ಲಾಧಿಕಾರಿ, ಪೊಲೀಸ ಅಧೀಕ್ಷಕರು ಹಾಗೂ ಇತರ ಕಂದಾಯ
ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಪರಿಸ್ಥಿತಿಯನ್ನು ವಿವರಿಸಿದರು ಹಾಗೂ ಹಿಂದೂಗಳ ಧಾರ್ಮಿಕ ಅಧಿಕಾರವನ್ನು ಅತಿಕ್ರಮಿಸಿದಲ್ಲಿ ಮುಂದೆ ಎದುರಾಗುವ ಗಂಭೀರ ಪರಿಣಾಮಗಳಿಗೆ ಎಲ್ಲ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆಂದು ಎಚ್ಚರಿಕೆಯನ್ನು ನೀಡಿದರು.
೪. ಕೊನೆಗೆ ೧೬ ಜುಲೈ ೨೦೧೬ ರಂದು ಕಂದಾಯ ವಿಭಾಗದ ಅಧಿಕಾರಿಗಳು ಸ್ಥಳಿಯ ಮತಾಂಧರೊಂದಿಗೆ ಎಲ್ಲ ಸಂಬಂಧಪಟ್ಟವರ ಸಭೆಯನ್ನು ಕರೆದರು. ಆದರೆ ಮತಾಂಧನು ಸ್ಥಳೀಯ ಮಸೀದಿಯ ಆಡಳಿತ ಮಂಡಳಿಯ ಸಲಹೆಯನ್ನು ಪಡೆದು ಬಳಿಕ ತಿಳಿಸುತ್ತೇನೆಂದು ಹೇಳಿದನು. ಅದಕ್ಕೆ ಹಿಂದೂಗಳು ಈ ಪ್ರಕರಣದಲ್ಲಿ ಸ್ಥಳೀಯ ಮಸೀದಿಯ ಆಡಳಿತ ಮಂಡಳಿಯ ಸಂಬಂಧವೇನಿದೇ? ಎಂದು ಪ್ರಶ್ನಿಸಿದರು. ಕಂದಾಯ ವಿಭಾಗದ ಅಧಿಕಾರಿಗಳು ಹಿಂದೂಗಳಿಗೆ ೩೦ ದಿನ ದೇವಸ್ಥಾನಕ್ಕೆ ಹೋಗಲು ಹಾಗೂ ಪೂಜೆ ಕೈಂಕರ್ಯ ಕೈಕೊಳ್ಳಲು ಅನುಮತಿ ನೀಡಿ, ಅಂತಿಮ ನಿರ್ಣಯವನ್ನು ನಂತರ ನೀಡಲಾಗುವುದೆಂದು ತಿಳಿಸಿದರು.
೫. ಕೇರಳದಲ್ಲಿರುವ ದೇವಸ್ಥಾನಗಳ ಬಗ್ಗೆ ಹಿಂದೂಗಳು ಜಾಗೃತರಾಗಲು ಈ ಪ್ರಕರಣವು ಸಹಾಯಕವಾಗುವುದೆಂದು ಶ್ರೀ. ರತ್ನಾಕರನ್ ಇವರು ಉದ್ಗರಿಸಿದರು. (ಶ್ರೀ. ರತ್ನಾಕರನ್ ಇವರಂತಹ ಧರ್ಮಾಭಿಮಾನಿಗಳೇ ಹಿಂದೂಗಳಿಗೆ ಆಶಾಕಿರಣವಾಗಿದೆ - ಸಂಪಾದಕರು) ಅನೇಕ ದೇವಸ್ಥಾನಗಳಲ್ಲಿಯೂ ಇಂತಹ ಸಮಸ್ಯೆಗಳಿದ್ದು, ಹಿಂದೂಗಳು ಮತಾಂಧರಿಗೆ ಹೆದರಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಹಾಗೂ ತಮ್ಮ ಸ್ವಾಯುತ್ತ ಅಧಿಕಾರಕ್ಕೆ ಕಲ್ಲು ಹಾಕಿಕೊಳ್ಳುತ್ತಾರೆ ಎಂದೂ ಅವರು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೇರಳ ರಾಜ್ಯದಲ್ಲಿ ದೇವಸ್ಥಾನಕ್ಕೆ ಹೋಗುವ ದಾರಿಯನ್ನೇ ಮುಚ್ಚಿದ ಮತಾಂಧರು !