ರಾಜಸ್ಥಾನ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ರಾಮಾಯಣಗಳ ಸಮಾವೇಶ !

ಜಯಪೂರ : ರಾಜಸ್ಥಾನ ವಿಶ್ವವಿದ್ಯಾಲಯ ದೊಂದಿಗೆ ಸಮಾವೇಶ ಗೊಂಡಿರುವ ವಾಣಿಜ್ಯ ಮತ್ತು ವ್ಯವಸ್ಥಾಪನ ಶಾಖೆಗಳ ಪದವಿಪೂರ್ವ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆ ಹಾಗೂ ರಾಮಾಯಣಗಳನ್ನು ಸೇರಿಸಲಾಗಿದೆ. (ರಾಜಸ್ಥಾನ ವಿಶ್ವವಿದ್ಯಾಲಯದ ನಿರ್ಣಯವು ಅಭಿನಂದನೀಯ - ಸಂಪಾದಕರು) ಹಾಗೆಯೇ ದರ್ಶನಶಾಸ್ತ್ರದ ಪಠ್ಯಕ್ರಮದಲ್ಲಿ ವಿದೇಶಿ ಲೇಖಕ ರಾಬರ್ಟ ಒವೆನ ಹಾಗೂ ಜೇಮ್ಸ ಬರ್ನಹ್ಯಾಂ ಇವರ ಬದಲಾಗಿ ಮೋಹನದಾಸ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ಪುಸ್ತಕಗಳಿಂದ ವಿಚಾರಸರಣಿಗಳನ್ನು ಮಂಡಿಸಲಾಗುತ್ತಿದೆ.
ರಾಜಸ್ಥಾನ ವಿಶ್ವವಿದ್ಯಾಲಯದ ಪಠ್ಯ ಪುಸ್ತಕದ ಸಂಶೋಧನ ಮಂಡಳಿಯ ಅಧ್ಯಕ್ಷ ರಾದ ನವೀನ ಮಾಥುರ ಇವರು ಈ ಸಂದರ್ಭದಲ್ಲಿ ಕುರುಕ್ಷೇತ್ರದ ರಣಾಂಗಣದಲ್ಲಿ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಅರ್ಜುನನಿಗೆ ಉಪದೇಶಿಸಿದನು. ಈ ಉಪದೇಶವು ಇಂದಿನ ಕಾಲದಲ್ಲಿಯೂ ಅಷ್ಟೇ ಮಹತ್ವದ್ದಾಗಿದೆ. ಇದರಿಂದ ಕಷ್ಟವನ್ನು ಎದುರಿಸುವ ಸಿದ್ಧತೆ, ಜವಾಬ್ದಾರಿಯ ಅರಿವು, ಮುಖಂಡತ್ವದ ಅರಿವು ಮುಂತಾದ ಅನೇಕ ಗುಣಗಳನ್ನು ಕಲಿಯಬಹುದಾಗಿದೆ. ಸೋಲು-ಗೆಲುವು, ಆಶೆ-ನಿರಾಶೆಯ ಸಂದರ್ಭದಲ್ಲಿ ಬುದ್ಧಿಯು ಸ್ಥಿರವಾಗಿಟ್ಟುಕೊಳ್ಳಲು ಮಾರ್ಗದರ್ಶನ ದೊರಕುತ್ತದೆ. (ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಲು ವಿರೋಧಿಸುವವರು ಇದರಿಂದ ಏನಾದರೂ ಪಾಠ ಕಲಿಯುವರೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಜಸ್ಥಾನ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ರಾಮಾಯಣಗಳ ಸಮಾವೇಶ !