ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !

ಕ್ಷಮೆ
‘ಕ್ಷಮೆ ಅಮೂಲ್ಯವಿದೆ. ಕ್ಷಮೆಯೆಂಬ ಶಸ್ತ್ರವು ವಿಶಿಷ್ಟ ರೀತಿಯಲ್ಲಿ ಬಲಶಾಲಿಯಾಗಿದೆ. ಕ್ಷಮೆಗೆ ಖಡ್ಗದ ಚೂಪನ್ನು ಮೊಂಡಾಗಿಸುವ ಕ್ಷಮತೆಯಿದೆ. ಕ್ಷಮಾಶೀಲನಿಗೆ ಎಲ್ಲವೂ ಸಹಜವಾಗಿ ಸಾಧ್ಯವಾಗುತ್ತದೆ. ಕ್ಷಮಾಶೀಲ ಮನುಷ್ಯನ ಬಲ, ತೇಜಸ್ಸು ಹೆಚ್ಚಾಗುತ್ತಲೇ ಇರುತ್ತದೆ. ಅಪರಾಧಿಯನ್ನು ಶಿಕ್ಷಿಸುವ ಕ್ಷಮತೆಯಿದ್ದರೂ ಯಾರು ಹಾಗೆ ಮಾಡುವುದಿಲ್ಲವೋ, ಅವನು ಕ್ಷಮಾಶೀಲನಾಗಿದ್ದಾನೆ. ಕ್ಷಮಾಶೀಲನಾಗುವುದು ದುರ್ಬಲರ ಕೆಲಸವಲ್ಲ. ಶಕ್ತಿಶಾಲಿಯು ಮಾತ್ರ ಕ್ಷಮಾಶೀಲನಾಗಲು ಸಾಧ್ಯ. ಕ್ಷಮಾಶೀಲ ಮನುಷ್ಯನನ್ನು ಅಹಂಕಾರಿ ಮನುಷ್ಯರು ದುರ್ಬಲರೆಂದುಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಹೇಳು ವುದಾದರೆ ಅಹಂಕಾರಿಗಳೇ ದುರ್ಬಲರಾಗಿರುತ್ತಾರೆ. ಕ್ಷಮೆ ಎಂಬುದು ‘ಶಕ್ತಿ’ಯನ್ನು ಕಾರಣವಿಲ್ಲದೆ ವ್ಯರ್ಥಗೊಳಿಸುವು ದಿಲ್ಲ. ಕೋಪಿಷ್ಠರು ದುರ್ಬಲರಾಗಿರುತ್ತಾರೆ, ಹಾಗೂ ಕ್ಷಮಾ ಶೀಲರು ಶಕ್ತಿವಂತರಾಗಿರುತ್ತಾರೆ.

ಒಂದು ಊರಿನ ಗಡಿಯಿಂದ ಓರ್ವ ಸಂತರು ಹೋಗುತ್ತಿರುತ್ತಾರೆ. ಆ ಊರಿನ ಗಡಿಯಲ್ಲಿ ಜನರು ಓರ್ವ ಸ್ತ್ರೀಗೆ ತೊಂದರೆ ನೀಡುತ್ತಿದ್ದರು. ಆ ಸಂತರು ಅವರನ್ನು ವಿಚಾರಿಸಿದಾಗ ಅದಕ್ಕೆ ಅವರು ‘ಈ ಹೆಂಗಸು ವ್ಯಭಿಚಾರಿಯಾಗಿದ್ದಾಳೆ. ಇವಳು ಊರಿಗೆ ಕಳಂಕವಾಗಿದ್ದಾಳೆ, ಧರ್ಮಶಾಸ್ತ್ರವು, ‘ಅವಳನ್ನು ಕಲ್ಲಿನಿಂದ ಚುಚ್ಚಿ ಕೊಂದು ಹಾಕಿ’ ಎಂದು ಹೇಳುತ್ತದೆ. ಆದರೆ ನೀವು ‘ಪಾಪಿಯನ್ನು ಕ್ಷಮಿಸಿ’, ಎಂದು ಹೇಳುತ್ತೀರಿ. ಹಾಗಾದರೆ ನೀವು ಹೇಳುವುದು ಸರಿಯೇ ಅಥವಾ ಧರ್ಮಶಾಸ್ತ್ರವು ಹೇಳುವುದು ಸರಿಯೇ ? ಕ್ಷಮಿಸಿದರೆ ಧರ್ಮಶಾಸ್ತ್ರವು ಹೇಳುವುದು ಸುಳ್ಳಾಗುತ್ತದೆ. ಕಲ್ಲಿನಿಂದ ಚುಚ್ಚಿ ಕೊಲ್ಲಲು ಸಮ್ಮತಿಸಿದರೆ ನಿಮ್ಮ ವಚನ ಸುಳ್ಳಾಗುತ್ತದೆ. ನಮಗೆ ನಿರ್ಣಯ ನೀಡಿ’ ಎಂದು ಹೇಳಿದರು. ಆಗ ಸಂತರಿಗೆ ಬಹಳ ಗೊಂದಲವಾಗುತ್ತದೆ. ಅವಳನ್ನು ಕಲ್ಲಿನಿಂದ ಚುಚ್ಚಿ ಕೊಲ್ಲುವ ಅನುಮತಿ ನೀಡಿದರೆ, ಕ್ಷಮೆಗೆ ಅರ್ಥವೇ ಉಳಿಯುವುದಿಲ್ಲ. ಆಗ ‘ಮಹಾಪಾಪಿಯನ್ನು ಕೂಡ ಕ್ಷಮಿಸಿ’, ಎಂದು ಧರ್ಮಶಾಸ್ತ್ರವು ಹೇಳುತ್ತದೆ ಹಾಗಾದರೆ ಅದೇನು ? ಆ ಸತ್ಪುರುಷರು ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡುತ್ತಾರೆ, ಅಂತರ್ಮುಖರಾಗಿ ತೀರ್ಮಾನ ನೀಡುತ್ತಾರೆ, ‘ಶಾಸ್ತ್ರವೂ ಸತ್ಯ, ನನ್ನ ವಚನ ಸಹ ಸತ್ಯವೇ ಆಗಿದೆ. ಎರಡರಲ್ಲೂ ಅಂತರವಿಲ್ಲ, ವಿರೋಧ ಸಹ ಇಲ್ಲ. ಯಾರ ಅಂತಃಕರಣಕ್ಕೆ ಎಂದೂ ವ್ಯಭಿಚಾರದ ಸ್ಪರ್ಶವಾಗಿಲ್ಲವೋ, ಅವರು ಮಾತ್ರ ಈ ವೇಶ್ಯೆಯನ್ನು ಕಲ್ಲಿನಿಂದ ಹೊಡೆಯಿರಿ. ಅವರಿಗೆ ಮಾತ್ರ ಈ ಸ್ತ್ರೀಯನ್ನು ಕಲ್ಲಿನಿಂದ ಹೊಡೆಯುವ ಅಧಿಕಾರವಿದೆ, ಯಾರು ಶರೀರದಿಂದ ಮಾತ್ರವಲ್ಲ, ಮನಸ್ಸಿನಿಂದ ಸಹ ವ್ಯಭಿಚಾರ ನಡೆಸಲಿಲ್ಲವೋ ಅವರು ಮಾತ್ರ ಸಂದೇಹವಿಲ್ಲದೆ ಈ ಸ್ತ್ರೀಯನ್ನು ಕಲ್ಲಿನಿಂದ ಚುಚ್ಚಿ ಕೊಂದು ಬಿಡಿ’ ಎಂದು ಹೇಳಿದರು. ಆಗ ಮುಂದೆ ಬಂದವರೆಲ್ಲರೂ ಹಿಂದಕ್ಕೆ ಸರಿದರು. ನಿಧಾನವಾಗಿ ಎಲ್ಲರೂ ಅಲ್ಲಿಂದ ಹೋಗಿಬಿಟ್ಟರು. ಉಳಿದವಳು ಕೇವಲ ಆ ವ್ಯಭಿಚಾರಿಣಿ ಮಾತ್ರ. ಅವಳು ಸಂತರ ಕಾಲಿಗೆರಗಿದಳು. ಅವರ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದಳು ಹಾಗೂ ‘ಇವರೆಲ್ಲರೂ ಪಾಪಿಗಳಾಗಿದ್ದರು. ಅವರಿಗೆ ‘ನಾನು ಪಾಪಿಯಲ್ಲ’ ಎಂದು ಹೇಳಲು ಆಗುತ್ತಿತ್ತು. ನೀವು ಪರಮ ಪವಿತ್ರರಾಗಿರುವಿರಿ. ನಾನು ಅಪರಾಧಿಯಾಗಿದ್ದೇನೆ. ನನಗೆ ‘ನನ್ನನ್ನು ಕ್ಷಮಿಸಿ’ ಎಂದು ಕೇಳುವ ಅಧಿಕಾರ ಸಹ ಇಲ್ಲ. ನಿಮ್ಮ ಬಳಿ ನಾನು ಕ್ಷಮೆಯಾಚನೆ ಮಾಡುತ್ತಿಲ್ಲ. ಅವರಿಂದ ಕ್ಷಮೆಯ ಅಪೇಕ್ಷೆಯಿತ್ತು; ಆದರೆ ನಿಮ್ಮಲ್ಲಿ ಹೇಗೆ ಕ್ಷಮೆ ಯಾಚಿಸಲಿ ? ನನ್ನನ್ನು ಕೊಂದು ಬಿಡಿ. ನಿಮ್ಮ ಪವಿತ್ರ ಕೈಗಳಿಂದ ನನ್ನ ಈ ಪಾಪಿ ಶರೀರವನ್ನು ನಾಶ ಮಾಡಿ ಬಿಡಿ’ ಎಂದು ಹೇಳಿದಳು. ಆ ಸಂತರು ಮತ್ತೆ ಕಣ್ಣು ಮುಚ್ಚಿಕೊಂಡರು. ಒಂದು ಕ್ಷಣ ಧ್ಯಾನ ಮಾಡಿ ‘ನನಗೆ ನಿನ್ನನ್ನು ಶಿಕ್ಷಿಸುವ ಅಧಿಕಾರವೆಲ್ಲಿದೆ ? ನಾನು ನಿನ್ನ ಪಾಲನಕರ್ತನಲ್ಲ. ನಾನು ನಿನಗೆ ಹೇಗೆ ಶಿಕ್ಷೆ ವಿಧಿಸಲಿ ? ನನಗೇನಿದೆ ಅಧಿಕಾರ ? ಆ ಅಧಿಕಾರ ಪರಮಾತ್ಮನದ್ದಾಗಿದೆ’ ಎಂದರು. ಇದು ಕ್ಷಮೆ ! ಯಾರು ಸತತವಾಗಿ ತಮ್ಮ ದೋಷಗಳನ್ನು ನೋಡುತ್ತಾರೋ, ಅವರು ಮಾತ್ರ ಕ್ಷಮಾಶೀಲನಾಗಿರಲು ಸಾಧ್ಯ. ಇಂದ್ರಿಯ ಹಾಗೂ ವಿಷಯದ ಸಂಪರ್ಕ ಉಂಟಾದರೆ, ಆಸಕ್ತಿ ಬಂದರೆ, ಆಗ ಪಾಪ ನಡೆಯುತ್ತದೆ. ತನ್ನ ದೋಷಗಳನ್ನು ತಿಳಿದುಕೊಂಡವನು ಮಾತ್ರ ಕ್ಷಮಾಶೀಲನಾಗಿರಲು ಸಾಧ್ಯ. ತನ್ನ ದೋಷಗಳನ್ನು ತಿಳಿದುಕೊಳ್ಳುವುದೇ ಶಕ್ತಿಯಾಗಿದೆ. ಶಕ್ತಿವಂತನೇ ತನ್ನ ದೋಷಗಳನ್ನು ತಿಳಿಯಲು ಸಾಧ್ಯ. ಅವನೇ ನಿರಹಂಕಾರಿಯಾಗಲು ಸಾಧ್ಯ. ಅವನೇ ಕ್ಷಮಾಶೀಲನಾಗಬಹುದು.’

- ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಜೂನ್ ೨೦೧೦)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !