ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.

ಎರಡನೇ ವಿಚಾರದಂತೆ ಮಲ-ಮೂತ್ರ ವಿಸರ್ಜನೆಯ ದಿಕ್ಕು ಮತ್ತು ಕಾಲ
ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮಲವನ್ನು ಮತ್ತು ಉತ್ತರಕ್ಕೆ ಮುಖ ಮಾಡಿ ಮೂತ್ರ ವಿಸರ್ಜನೆಯನ್ನು ಮಾಡಬೇಕು.
ಪ್ರಾಂಡಮುಖೋನ್ನಾನಿ ಭುಂಜೀತ್ತೋಚ್ಚರೆ ದ್ದಕ್ಷಿಣಾಮುಖಃ ಉದಂಡಮುಖೋ ಮೂತ್ರಂ ಕುರ್ಯಾತ್ಪ್ರಾ ಪ್ರತ್ಯಕ್ಪಾದಾವನೆಜನಮಿತಿ ॥
- ಆಪಸ್ತಂಬಧರ್ಮಸೂತ್ರ, ಪ್ರಶ್ನೆ ೧, ಪಟಲ ೧೧, ಕಾಂಡಿಕ ೩೧, ಅಂಶ ೧
ಅರ್ಥ : ಪೂರ್ವಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು, ದಕ್ಷಿಣಕ್ಕೆ ಮುಖ ಮಾಡಿ ಮಲವನ್ನು ಮತ್ತು ಉತ್ತರಕ್ಕೆ ಮುಖ ಮಾಡಿ ಮೂತ್ರವನ್ನು ವಿಸರ್ಜಿಸಬೇಕು ಮತ್ತು ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದುಕೊಳ್ಳಬೇಕು.
ದಕ್ಷಿಣಕ್ಕೆ ಮುಖ ಮಾಡಿ ಮಲವನ್ನು ಮತ್ತು
ಉತ್ತರಕ್ಕೆ ಮುಖ ಮಾಡಿ ಮೂತ್ರವನ್ನು ವಿಸರ್ಜಿಸುವುದರ ಹಿಂದಿನ ಶಾಸ್ತ್ರ
ಧರ್ಮಾಚಾರದಂತೆ ಆಯಾ ದಿಕ್ಕಿಗೆ ಆಯಾ ವಾಯುಮಂಡಲದಲ್ಲಿ ಆಯಾ ಕೃತಿಗಳನ್ನು ಮಾಡು ವುದರಿಂದ ವಾಯುಮಂಡಲದ ಸ್ವಾಸ್ಥ್ಯವು ಹಾಳಾಗದೇ ಬ್ರಹ್ಮಾಂಡದಲ್ಲಿನ ಆಯಾ ಶಕ್ತಿರೂಪಿ ಗತಿಲಹರಿಗಳಲ್ಲಿ ಯೋಗ್ಯ ಸಮತೋಲನವನ್ನು ಕಾಪಾಡಬಹುದು.
ಅ. ಮಲ ವಿಸರ್ಜನೆ : ದಕ್ಷಿಣ ದಿಕ್ಕು ಅಶುಭ ಕರ್ಮಗಳನ್ನು ಸಮಾವೇಶ ಮಾಡಿಕೊಳ್ಳುವಂತಹ ದ್ದಾಗಿದೆ. ಮಲವು ಜಡತ್ವದರ್ಶಕ ಮತ್ತು ಅಶುಭಕ್ಕೆ ಸಂಬಂಧಿಸಿರುವುದರಿಂದ ಅದನ್ನು ಯಮಲಹರಿಯುಕ್ತ ಮತ್ತು ಜಡತ್ವದೊಂದಿಗೆ ಸಂಬಂಧಿಸಿದ ವಾಯು ಮಂಡಲದಲ್ಲಿ ವಿಸರ್ಜಿಸುವುದರಿಂದ, ವಾಯು ಮಂಡಲದಲ್ಲಿನ ಆಯಾ ಸ್ತರದಲ್ಲಿನ ಶಕ್ತಿಲಹರಿಗಳ ಭ್ರಮಣಾತ್ಮಕ ಸಮತೋಲನವು ಕೆಡುವುದಿಲ್ಲ.
ಆ. ಮೂತ್ರ ವಿಸರ್ಜನೆ : ಉತ್ತರ ದಿಕ್ಕು ಅಶುಭ ಕರ್ಮಗಳನ್ನು ಲಯ ಮಾಡುವಂತಹದ್ದಾಗಿದೆ. ಮೂತ್ರವು ರಜ-ತಮಾತ್ಮಕ ಲಹರಿಗಳ ಸಂಕ್ರಮಣ ವಾಗಿದ್ದು, ಮಲಕ್ಕಿಂತಲೂ ಹೆಚ್ಚು ಸೂಕ್ಷ ಮತ್ತು ಸಂವೇದನಾಶೀಲವಾಗಿರುವುದರಿಂದ ಅದು ವಾಯು ಮಂಡಲದಲ್ಲಿ ತನ್ನ ಪರಿಣಾಮವನ್ನು ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಆದುದರಿಂದ ಗುರುಧಾರಣೆಗೆ ಪೂರಕ ವಾಗಿರುವಂತಹ ಅಂದರೆ ಎಲ್ಲವನ್ನೂ ತನ್ನವರೆಂದು ತನ್ನಲ್ಲಿ ಆಕರ್ಷಿಸಿಕೊಂಡು ಲಯ ಮಾಡುವ ಉತ್ತರ ದಿಕ್ಕಿನೆಡೆಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಆಯಾ ದಿಕ್ಕಿಗೆ ಮುಖ ಮಾಡಿ ಆಯಾ ಲಹರಿಗಳ ಸ್ಪರ್ಶದ ಸ್ತರದಲ್ಲಿ ಆಯಾ ಕರ್ಮಗಳನ್ನು ಮಾಡುವುದರಿಂದ ಪಾಪದ ಪರಿಮಾರ್ಜನೆ ಮತ್ತು ಪುಣ್ಯಪ್ರಾಪ್ತಿಯಾಗಲು ಸಹಾಯವಾಗುತ್ತದೆ.
 - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ, ೨.೬.೨೦೦೭, ಮಧ್ಯಾಹ್ನ ೧.೫೯) ಕೆಳಗೆ ಕುಳಿತುಕೊಂಡು ಮಲಮೂತ್ರ ವಿಸರ್ಜನೆ ಮಾಡಬೇಕು
ಅ. ಕೆಳಗೆ ಕುಳಿತುಕೊಂಡು ಮಲಮೂತ್ರ ವಿಸರ್ಜನೆ ಮಾಡುವುದರ ಹಿಂದಿನ ಶಾಸ್ತ್ರ
೧. ಕೆಳಗೆ ಕುಳಿತುಕೊಳ್ಳುವುದರಿಂದ (ಭಾರತೀಯ ಪದ್ಧತಿಯಂತೆ) ನಿರ್ಮಾಣವಾಗುವ ಮುದ್ರೆಯಿಂದಾಗಿ ಗುದನಾಳದಲ್ಲಿನ ಕೆಳಗಿನ ದಿಕ್ಕಿನಲ್ಲಿ ಹರಿಯುವ ನಿರುಪಯುಕ್ತ ಉತ್ಸರ್ಜಕ ವಾಯುವು ಕಾರ್ಯ ನಿರತವಾಗಿ ದೇಹದಲ್ಲಿ ಕೆಳಗಿನ ದಿಕ್ಕಿನಲ್ಲಿ ಹರಿಯುವ ಪ್ರವಾಹದ ಬಲದಿಂದ, ದೇಹದಲ್ಲಿರುವ ಮಲ ಮೂತ್ರಾದಿ ನಿರುಪಯುಕ್ತ ಘಟಕಗಳನ್ನು ಕೂಡಲೇ ಹೊರಗಿನ ದಿಕ್ಕಿಗೆ ತಳ್ಳಿ ಗುದನಾಳವನ್ನು ಸ್ವಚ್ಛ ಮಾಡಲು ಸಾಧ್ಯವಾಗುತ್ತದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೧೦.೨೦೦೭, ಬೆಳಗ್ಗೆ ೯.೪೬)
೨. ಶೌಚವನ್ನು ಮಾಡುವಾಗ ನಿರ್ಮಾಣವಾಗುವ ದೇಹದ ವಿಶಿಷ್ಟ ರಚನೆಯಿಂದ ದೇಹದಲ್ಲಿನ ಉಪಪಂಚ ಪ್ರಾಣಗಳು ಕಾರ್ಯನಿರತವಾಗಿ ತೊಂದರೆದಾಯಕ ವಾಯುವು ಮಲಮೂತ್ರಗಳ ಮಾರ್ಗದಿಂದ ಹೊರಬಿದ್ದು ದೇಹದಲ್ಲಿನ ಕಪ್ಪು ಶಕ್ತಿಯು (ತ್ರಾಸದಾಯಕ ಶಕ್ತಿ) ನಾಶವಾಗುತ್ತದೆ : ‘ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗಿರುವ ಶೌಚಪದ್ಧತಿಯಿಂದಾಗಿ ಜೀವದ ದೇಹದಲ್ಲಿ ನಿರ್ಮಾಣವಾಗಿರುವ ತ್ರಾಸದಾಯಕ ಘಟಕಗಳು ಶೇ. ೩೦ ರಷ್ಟು ವಿಘಟನೆಯಾಗಲು ಸಹಾಯವಾಗುತ್ತದೆ. ಶೌಚವನ್ನು ಮಾಡುವಾಗ ನಿರ್ಮಾಣವಾಗುವ ದೇಹದ ವಿಶಿಷ್ಟ ರಚನೆಯಿಂದಾಗಿ ದೇಹದಲ್ಲಿರುವ ಉಪಪಂಚಪ್ರಾಣಗಳು ಕಾರ್ಯ ನಿರತವಾಗಿ ತೊಂದರೆದಾಯಕ ವಾಯುವು ಮಲ ಮೂತ್ರಗಳ ಮಾರ್ಗದಿಂದ ಹೊರಬೀಳುತ್ತದೆ. ಅದೇ ರೀತಿ ದೇಹದಲ್ಲಿರುವ ಸೂಕ್ಷ ಚಕ್ರಾಕಾರವಾಗಿ ತಿರುಗಲು ಪ್ರಾರಂಭವಾಗುತ್ತದೆ. ಇದರಿಂದ ಜೀವದ ದೇಹದಲ್ಲಿರುವ ತ್ರಾಸದಾಯಕ ಶಕ್ತಿಯು ನಾಶವಾಗುತ್ತದೆ.’ - ‘ಓರ್ವ ಜ್ಞಾನಿ’ (ಶ್ರೀ. ನಿಷಾದ ದೇಶಮುಖ ಇವರು ಓರ್ವ ಜ್ಞಾನಿ ಈ ಅಂಕಿತ ನಾಮದಿಂದ ಲೇಖನ ಬರೆಯುತ್ತಾರೆ, ೧೯.೬.೨೦೦೭, ಮಧ್ಯಾಹ್ನ ೩.೫೧)
ಆ. ಪುರುಷರು ನಿಂತುಕೊಂಡು ಮೂತ್ರ ವಿಸರ್ಜನೆ (ಮೂತ್ರಪುರಿಷೋತ್ಸರ್ಗ) ಮಾಡಬಾರದು
ಆ ೧. ಪುರುಷರು ನಿಂತುಕೊಂಡು ಮೂತ್ರ 
ವಿಸರ್ಜನೆಯನ್ನು ಮಾಡಬಾರದು. ಇದರ ಹಿಂದಿನ ಶಾಸ್ತ್ರ
ಅ. ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುವುದರಿಂದ ನಿರ್ಮಾಣವಾಗುವ ಮುದ್ರೆಯಿಂದ ದೇಹದಲ್ಲಿರುವ ರಜ-ತಮಾತ್ಮಕ ಇಂಧನವು ನಿಧಾನ ವಾಗಿ ಕಾಲುಗಳ ಕಡೆಗೆ ಹೋಗಿ ಘನೀಕೃತವಾಗಲು ಪ್ರಾರಂಭವಾಗುತ್ತದೆ. ಇದರಿಂದ ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಸ್ಪಂದನಗಳು ಪಾದ ಗಳ ಮೂಲಕ ಕೂಡಲೇ ದೇಹದಲ್ಲಿ ಸೇರಿಕೊಳ್ಳುತ್ತವೆ.
ಆ. ನಿಂತುಕೊಂಡು ಮೂತ್ರವಿಸರ್ಜನೆ ಮಾಡು ವುದರಿಂದ ನೆಲದ ಮೇಲಾಗುವ ಮೂತ್ರದ ಧಾರೆಯ ಆಘಾತದಿಂದ ನೆಲದ ಮೇಲಿನ ಭಾಗ ದಲ್ಲಿರುವ ತ್ರಾಸದಾಯಕ ಶಕ್ತಿಯ ಪ್ರವಾಹವು ಜಾಗೃತವಾಗಿ ಸಂಪೂರ್ಣ ದೇಹವು ರಜ-ತಮದಿಂದ ತುಂಬಿಕೊಳ್ಳುತ್ತದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)
೫. ಮೂತ್ರ ಮತ್ತು ಶೌಚವಿಧಿಯನ್ನು ಮಾಡುವಾಗ ವೌನವನ್ನು ಪಾಲಿಸಬೇಕು

ಅ. ಶಾಸ್ತ್ರ : ‘ವೌನದಿಂದ ಜೀವದ ಮಧ್ಯಮಾ ವಾಣಿಯು ಜಾಗೃತವಾಗುವುದರಿಂದ ಜೀವದ ಅಂತರ್ಮುಖತೆಯಲ್ಲಿ ಹೆಚ್ಚಳವಾಗುತ್ತದೆ. ಇದರಿಂದ ಜೀವದ ಶರೀರದ ಸುತ್ತಲೂ ನಿರ್ಮಾಣವಾಗಿರುವ ಸಂರಕ್ಷಣಾ ಕವಚವು ಹೆಚ್ಚು ಸಮಯ ಉಳಿಯಲು ಸಾಧ್ಯವಾಗುತ್ತದೆ. ಇದರಿಂದ ಮೂತ್ರ ಮತ್ತು ಶೌಚವಿಧಿಯಂತಹ ರಜ-ತಮಾತ್ಮಕ ಕೃತಿಯನ್ನು ಮಾಡುವಾಗ ವಾಯುಮಂಡಲದಿಂದಾಗುವ ಕೆಟ್ಟ ಶಕ್ತಿಗಳ ಹಲ್ಲೆಯಿಂದ ಜೀವದ ರಕ್ಷಣೆಯಾಗುತ್ತದೆ.’ - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ, ೧೧.೧೨.೨೦೦೭ ಮಧ್ಯಾಹ್ನ ೨.೧೯)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣ ನೀಡುವ ಮಾಲಿಕೆ !