ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ದೇಶದ್ರೋಹಿಗಳೆದುರು ಮಂಡಿಯೂರುವ ಅಸಹಾಯಕ ರಾಜಕಾರಣಿಗಳು !
ಬುರಹಾನ ವಾನಿ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪುವುದು ಆಕಸ್ಮಿಕ ವಾಗಿತ್ತು. ವಾನಿ ಈ ಚಕಮಕಿಯಲ್ಲಿ ಸಿಲುಕಿದ್ದಾನೆ ಎಂಬುದು ಸರಕಾರಕ್ಕೆ ಗೊತ್ತಿರಲಿಲ್ಲ, ಎಂದು ಜಮ್ಮೂ-ಕಾಶ್ಮೀರದ ಪಿಡಿಪಿ-ಭಾಜಪ ಸಂಮಿಶ್ರ ಸರಕಾರದ ಭಾಜಪದ ಉಪಮುಖ್ಯಮಂತ್ರಿ ಡಾ. ನಿರ್ಮಲ ಸಿಂಗ್ ನೀಡಿದ್ದಾರೆ.
೨. ಗೋಹತ್ಯೆ ಮೇಲೆ ರಾಷ್ಟ್ರಾದ್ಯಂತ ನಿಷೇಧ ಹೇರಬೇಕೆಂಬ
 ಬಹುಸಂಖ್ಯಾತ ಹಿಂದೂಗಳ ಅಪೇಕ್ಷೆ ಈಗಲಾದರೂ ಪೂರ್ಣವಾಗುವುದೇ ?
ಗೋಹತ್ಯೆಯನ್ನು ತಡೆಯಲು ಮುಂಬರುವ ೬ ತಿಂಗಳಲ್ಲಿ ಕಾನೂನನ್ನು ಸಿದ್ಧಗೊಳಿಸಬೇಕು, ಎಂದು ಹಿಮಾಚಲ ಪ್ರದೇಶದ ಉಚ್ಚನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ಈ ಹಿಂದೆ ಅಕ್ಟೋಬರ್ ೨೦೧೪ ರಲ್ಲಿ ನ್ಯಾಯಾಲಯವು ಹಿಮಾಚಲ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಹೇರಲು ಆದೇಶ ನೀಡಿತ್ತು.
೩. ಜಾತ್ಯತೀತತೆಯ ಡಂಗುರ ಸಾರುವ ಕಾಂಗ್ರೆಸ್ಸಿಗರ ಹಿಂದೂದ್ವೇಷ !
ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಸೃಷ್ಟಿಸಿದ ಕೇಸರಿ ಭಯೋತ್ಪಾದನೆಯ ಕಲ್ಪನೆಯು ಮಾಜಿ ಕೇಂದ್ರ ಗೃಹಮಂತ್ರಿ ಪಿ. ಚಿದಂಬರಮ್ ಇವರದ್ದಾಗಿ ತ್ತೆಂದು ಜಂಟಿ ಗುಪ್ತಚರ ಸಮಿತಿಯ ಮಾಜಿ ಮುಖ್ಯಸ್ಥರು ಮತ್ತು ಮಾಜಿ ರಾಷ್ಟ್ರೀಯ ಭದ್ರತಾ ಉಪಸಲಹೆಗಾರರಾದ ಎಸ್.ಡಿ. ಪ್ರಧಾನರು ನೀಡಿದ್ದಾರೆ.
೪. ಪಾಕ್‌ನಲ್ಲಿ ಅಸಹಾಯಕ ಅಲ್ಪಸಂಖ್ಯಾತ ಹಿಂದೂಗಳ ದುಃಸ್ಥಿತಿ !
ಪಾಕ್‌ನ ಸಿಂಧ್ ಪ್ರಾಂತದ ಘೋಟಕಿಯಲ್ಲಿ ಓರ್ವ ಹಿಂದೂ ವ್ಯಕ್ತಿಯು ಕುರಾನನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಸಂಭವಿಸಿದ ಕೋಮು ಗಲಭೆಯಲ್ಲಿ ಇಬ್ಬರು ಹಿಂದೂ ಯುವಕರ ಮೇಲೆ ಗುಂಡು ಹಾರಿಸಲಾಯಿತು. ಇದರಲ್ಲಿ ದೀವಾನ ಸತೀಶಕುಮಾರ ಮೃತಪಟ್ಟನು. ಈ ಘಟನೆಯ ನಂತರ ಸ್ಥಳೀಯ ಹಿಂದೂಗಳು ಸರಕಾರಕ್ಕೆ ರಕ್ಷಣೆ ಕೋರಿವೆ.
೫. ಉತ್ತರಪ್ರದೇಶವು ಎರಡನೇ ಕಾಶ್ಮೀರವಾಗುವುದನ್ನು ತಡೆಯಿರಿ !
ಉತ್ತರಪ್ರದೇಶದ ಅಲಿಗಡ ಜಿಲ್ಲೆಯ ಬಾಬರಿ ಮಂಡಿ ಈ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಅನೇಕ ಹಿಂದೂಗಳು ಈ ಹಿಂದೆ ಪಲಾಯನ ಮಾಡಿದ ನಂತರವೂ ಇನ್ನೂ ೧೦ ಕುಟುಂಬಗಳು ತಮ್ಮ ಸಂಪತ್ತನ್ನು ಮಾರಾಟ ಮಾಡಿ ಸ್ಥಳಾಂತರವಾಗಲು ನ್ಯಾಯದಂಡಾಧಿಕಾರಿ ಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ.
೬. ಅಮಾಯಕರ ಬಳಿ ಇರುವ ಪ್ರಚೋದನಾಕಾರಿ ಸಾಹಿತ್ಯಗಳತ್ತ ಆಝಮಿಯವರ ಸ್ಮಶಾನಮೌನ !
ಪ್ರಚೋದನಾಕಾರಿ ಸಾಹಿತ್ಯವು ಸಿಕ್ಕಿರುವುದರಿಂದ ಬಂಧಿತ ಐಸಿಸ್‌ನ ಸಂಶಯಿತ ಉಗ್ರರ ಕುರಿತು ಸಮಾಜವಾದಿ ಪಕ್ಷದ ಶಾಸಕ ಅಬು ಆಝಮಿ, ಐಸಿಸ್‌ನ ಸಂಶಯಿತರೆಂದು ಅನೇಕರನ್ನು ಬಂಧಿಸಲಾಗುತ್ತಿದೆ. ಇದರಲ್ಲಿ ಅಮಾಯಕರ ಮೇಲೆ ಕ್ರಮಕೈಗೊಳ್ಳಬಾರದು ಎಂದಿದ್ದಾರೆ.
೭. ದೇವಸ್ಥಾನಗಳಲ್ಲಿ ನಾಮಜಪ ಮಾಡಬೇಕು !
ದೇವರ ದರ್ಶನ ಪಡೆದ ನಂತರ ದೇವರ ಎದುರಿಗೆ ಕುಳಿತುಕೊಂಡು ಸ್ವಲ್ಪ ಸಮಯ ಆ ದೇವತೆಯ ನಾಮಜಪವನ್ನು ಮಾಡಬೇಕು. ಇದರಿಂದ ದೇವರಿಂದ ಪ್ರಕ್ಷೇಪಿತವಾಗುವ ಲಹರಿಗಳು ಕಾರ್ಯನಿರತವಾಗಿ ಜೀವಕ್ಕೆ ಲಾಭವಾಗುತ್ತದೆ. ನಮಗೆ ದೇವರ ಚೈತನ್ಯದ ಲಾಭವಾಗುವುದರಿಂದ ದೇವರ ಕೃಪಾದೃಷ್ಟಿಯನ್ನು ನಾವು ಬೇಗನೇ ಸಂಪಾದಿಸಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !