ಐದನೇಯ ಹಿಂದೂ ಅಧಿವೇಶನದ ಸಮಾರೋಪ !

ರಾಮನಾಥಿ, ಗೋವಾದಲ್ಲಿ ಏರ್ಪಡಿಸಲಾಗಿದ್ದ ಐದನೇ ಅಖಿಲ ಭಾರತೀಯ ಹಿಂದೂ ಅಧಿವೇಶನವು ದಿನಾಂಕ ೨೫ ಜೂನ್ ೨೦೧೬ ರಂದು ಮುಕ್ತಾಯಗೊಂಡಿತು. ದೇಶವಿದೇಶದ ಹಿಂದುತ್ವನಿಷ್ಠರು ಒಂದು ವಾರದಕಾಲ ಒಂದೆಡೆ ಸೇರಿದರು ಹಾಗೂ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು. ಇದರಿಂದ ಜಗತ್ತಿನಾದ್ಯಂತ ವಾಸಿಸುತ್ತಿರುವ ಹಿಂದೂಗಳ ಪರಿಸ್ಥಿತಿಯ ಅರಿವಾಯಿತು. ಹಿಂದೂಗಳ ಮೇಲಾಗುತ್ತಿರುವ ಆಘಾತ ಮತ್ತು ಅದರ ತೀವ್ರತೆ ಹಾಗೂ ಅದನ್ನು ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಈ ಅಧಿವೇಶನದ ನಿಮಿತ್ತ ಹಿಂದೂಗಳು ಸಂಘಟಿತರಾಗಿರುವುದರ ಕುರಿತು ಉತ್ತಮ ಪ್ರಾತ್ಯಕ್ಷಿಕೆಯಾಯಿತು. ಕಳೆದ ನಾಲ್ಕು ವರ್ಷಗಳಿಂದ ಈ ಅಧಿವೇಶನವನ್ನು ನಡೆಸಲಾಗುತ್ತಿದ್ದು, ಹಿಂದೂಗಳ  ಸಂಘಟನೆಗೆ ಇದು ಸಾಕ್ಷಿಯಾಗಿದೆ. ದೇಶದಲ್ಲಿ ಹಿಂದೂಗಳನ್ನು ಚಿಂತೆಯಿಂದ ಮುಕ್ತಗೊಳಿಸಲು ಸಾಕಷ್ಟು ಕಾರ್ಯವನ್ನು ಮಾಡಬೇಕಾಗಿದೆ. ಅದಕ್ಕಾಗಿ  ಕ್ರಿಯಾಶೀಲರಾಗಬೇಕಾಗಿದೆ. ಅಧಿವೇಶನದಲ್ಲಿ ಭಾಗವಹಿಸಿದ ಅನೇಕ ಹಿಂದುತ್ವನಿಷ್ಠರು  ಈಗಾಗಲೇ ಕ್ರಮಕೈಗೊಳ್ಳುತ್ತಿದ್ದು, ಈ ಕುರಿತು ಅವರು ತಾವು ಕೈಗೊಂಡಿರುವ ಪ್ರಯತ್ನಗಳನ್ನು ಈ ಅಧಿವೇಶನದಲ್ಲಿ  ವಿವರಿಸಿದರು. ಇತರ ಹಿಂದೂ ಸಂಘಟನೆಗಳಿಗೂ ಅವರ ಕ್ರಮಗಳಿಂದ ಖಂಡಿತವಾಗಿಯೂ ಪ್ರೋತ್ಸಾಹ ದೊರೆಯಲಿದೆ. ಅಧಿವೇಶನದಲ್ಲಿ ಭಾಗವಹಿಸಿದ್ದ ಸುಮಾರು ೪೦೦ ಹಿಂದುತ್ವನಿಷ್ಠರಲ್ಲಿ ಶೇ. ೭೦ ರಷ್ಟು ಹಿಂದುತ್ವನಿಷ್ಠರು ೩೦ ರಿಂದ ೩೫ ವರ್ಷ ವಯಸ್ಸಿನವರಾಗಿದ್ದಾರೆ. ಅಧಿವೇಶನದ ಯಶಸ್ಸಿನ ಮಹತ್ವವು ಇದರಲ್ಲಿಯೇ ಅಡಗಿದೆ. ಹಿಂದೂ ರಾಷ್ಟ್ರದ ಅರ್ಥಾತ್ ಸನಾತನ ಧರ್ಮರಾಜ್ಯದ ಸ್ಥಾಪನೆಯ ಉತ್ತಮ ಅಡಿಪಾಯವು ಇದರಿಂದಲೇ ಆಗುತ್ತಿದೆ.
ನೇಪಾಳದಲ್ಲಿರುವ ಹಿಂದೂಗಳಿಗೆ ಅವರು ಕಳೆದುಕೊಂಡಿರುವ ಹಿಂದೂರಾಷ್ಟ್ರವೆನ್ನುವ  ಪದವಿಯನ್ನು ಮತ್ತೆ ಪಡೆಯಬೇಕಾಗಿದೆ. ಹಿಂದೂ ರಾಷ್ಟ್ರವು ಆ ದೇಶದ ನೈಜ ಗುರುತಾಗಿತ್ತು. ಅದನ್ನು ಮರಳಿ ಪಡೆಯಲು ಅವಶ್ಯಕವಿರುವ ಹೋರಾಟವನ್ನು ನಡೆಸುವುದು ಮತ್ತು ಅದಕ್ಕೆ ಭಾರತ ಸರಕಾರವು  ಸಹಾಯ ಮಾಡಬೇಕೆನ್ನುವುದು ನೇಪಾಳಿ ಹಿಂದೂಗಳ ಅಪೇಕ್ಷೆಯಾಗಿದ್ದು, ಅವರು ಅಪೇಕ್ಷೆಯಿಂದ ಭಾರತ ದೇಶದ ಕೇಂದ್ರಸರಕಾರದೆಡೆಗೆ ದೃಷ್ಟಿ ನೆಟ್ಟಿದ್ದಾರೆ. ಭಾರತ ಸರಕಾರಕ್ಕೆ ನೇಪಾಳಿ ಜನತೆಯ ಹತಾಶೆಯನ್ನು ದೂರಗೊಳಿಸುವ ಇಚ್ಛಾಶಕ್ತಿಯು ಇದೆಯೆಂದು ಅರಿವಾದರೂ, ನೇಪಾಳಿಗಳಿಗೆ ಸಾವಿರ ಆನೆ ಬಲಬಂದಂತಾಗುವುದು. ಶ್ರೀಲಂಕಾದ ಹಿಂದೂಗಳು ಸಹ ಅಲ್ಲಿಯ ದೌರ್ಜನ್ಯಗಳಿಂದ ಕಂಗೆಟ್ಟಿದ್ದಾರೆ. ಅವರೂ ಭಾರತದೆಡೆಗೆ  ನೆರವಿನ ಕುರಿತು ಆಸೆಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಇಂದಿನ ವಿದ್ಯಮಾನ ಪರಿಸ್ಥಿತಿಯಲ್ಲಿ ಭಾರತ ಸರಕಾರಕ್ಕೆ ಇದನ್ನು ಸಮರ್ಥವಾಗಿ ನಿಭಾಯಿಸಬೇಕಾದ ಬಹುದೊಡ್ಡ ಜವಾಬ್ದಾರಿಯಿದೆ. ಹೊರದೇಶದಲ್ಲಿರುವ ಹಿಂದೂಗಳು ಮತ್ತು ಅವರ ಸಂಘಟನೆಗಳು ಸಾಮೂಹಿಕ ಮಟ್ಟದಲ್ಲಿ ಅವರಿಗೆ ಆಗುತ್ತಿರುವ ವೇದನೆಯಿಂದ ಮುಕ್ತಿ ದೊರಕಿಸುವಂತೆ ಭಾರತ ದೆಡೆಗೆ ಯಾಚಿಸುತ್ತಿದ್ದಾರೆ. ಇದರಿಂದ ಭಾರತ ಸರಕಾರಕ್ಕೆ ಈ ಕುರಿತು ವಿಚಾರ ಮಾಡದೇ ಗತ್ಯಂತರವಿಲ್ಲವಾಗಿದೆ. ಜಾಗತಿಕ ಮಟ್ಟದಲ್ಲಿ ಈಗ ಭಾರತ ಸರಕಾರದ ಮಹತ್ವವು ವೃದ್ಧಿಸಿದೆ. ನೇಪಾಳ ಮತ್ತು ಶ್ರೀಲಂಕಾ ದೇಶದಲ್ಲಿರುವ ಹಿಂದೂಗಳ ಸಹಾಯಕ್ಕೆ ಭಾರತ ಸರಕಾರ ಮುಂದಾದರೆ ಖಂಡಿತವಾಗಿಯೂ ಜಗತ್ತಿನಲ್ಲಿ ಭಾರತದ ಗೌರವ ಇಮ್ಮಡಿಗೊಳ್ಳುವುದಲ್ಲದೇ, ಹೇಗೆ ಭಾರತದ ಹೆಸರು ಅಭಿವೃದ್ಧಿಯ ಕಾರಣದಿಂದ ಮುಂಚೂಣಿಯಲ್ಲಿದೆಯೋ, ಅದಕ್ಕೆ ಮತ್ತಷ್ಟು  ಸಹಕಾರಿಯಾಗುವುದು.  ಹಿಂದೂ ಯುವತಿಯರ ಮೇಲಾಗುತ್ತಿರುವ ಅತ್ಯಾಚಾರ, ಗೋಹತ್ಯೆ, ಶಿಕ್ಷಣ ಪದ್ಧತಿಯಲ್ಲಿರುವ ತಪ್ಪು ಕ್ರಮಗಳು ಇಂತಹ ಅನೇಕ ಸಮಸ್ಯೆಗಳ ಮೇಲೆ ಹಿಂದುತ್ವನಿಷ್ಠರು ತಮ್ಮ ಅನುಭವವನ್ನು ಮಂಡಿಸಿದರು. ಧರ್ಮಾಂಧ ಜಿಹಾದಿಗಳ ಸಂಕಟವನ್ನು ನೋಡುತ್ತಾ ಸುಮ್ಮನಿರುವುದಕ್ಕಿಂತ, ತಮ್ಮ ಸ್ವಸಂರಕ್ಷಣೆಗೆ ಸಜ್ಜಾಗಿರುವುದು ಅತ್ಯಂತ ಸುಲಭ ಹಾಗೂ ಉಪಯುಕ್ತವೆನ್ನುವ ಅಭಿಪ್ರಾಯವನ್ನು ಅಧಿವೇಶನದಲ್ಲಿ ಭಾಗವಹಿಸಿದ್ದ ಅನೇಕ ಜನರು ವ್ಯಕ್ತಪಡಿಸಿದರು. ಪಕ್ಕದ ಬಾಂಗ್ಲಾದೇಶದಲ್ಲಿ ಏನು ಜರುಗುತ್ತಿದೆ? ಅಲ್ಲಿ ವಾಸಿಸುತ್ತಿರುವ ಹಿಂದೂಗಳನ್ನು ಹೆಕ್ಕಿಹೆಕ್ಕಿ ದಾಳಿ ಮಾಡುತ್ತಿದ್ದಾರೆ. ಹಿಂದೂಗಳ ಹತ್ಯೆ ಮಾಡುವುದು ಅಥವಾ ಗಾಯಗೊಳಿಸುವುದೇ ಅವರ ಉದ್ದೇಶವಾಗಿದೆ. ಹಿಂದೂಗಳಿಗೆ ಅಲ್ಲಿ ವಾಸಿಸುವ ಅಧಿಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯ ಸರಕಾರವು ಎಂಟು ಸಾವಿರ ಭಯೋತ್ಪಾದಕರನ್ನು ಬಂಧಿಸಿ ರುವುದಾಗಿ ಘೋಷಿಸಿದೆ. ಆದರೂ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ಕಡಿಮೆಯಾಗಿಲ್ಲ. ಒಟ್ಟಾರೆ ಭಾರತದಲ್ಲಾಗಲಿ ಅಥವಾ ಹೊರ ದೇಶದಲ್ಲಿಯಾಗಲಿ ಸರಕಾರವು ಕೈಗೊಳ್ಳುವ ಕ್ರಮಗಳು ಪರಿಣಾಮಕಾರಿ ರೀತಿಯಲ್ಲಿ ಫಲಪ್ರದವಾಗುತ್ತಿಲ್ಲ. ಆದುದರಿಂದ ಪ್ರತಿಯೊಬ್ಬ ಹಿಂದೂ ಸಹ ತನ್ನ ಸ್ವಸಂರಕ್ಷಣೆಗಾಗಿ ಸಜ್ಜಾಗದೇ ಬೇರೆ ಮಾರ್ಗವಿಲ್ಲವಾಗಿದೆ.  ಅಧಿವೇಶನದ ಒಟ್ಟಾರೆ ಫಲಿತಾಂಶವೆಂದರೆ ಹಿಂದೂಗಳ ಗಾಯಕ್ಕೆ ಮುಲಾಮನ್ನು ಹಚ್ಚಲು ಯಾರಾದರೂ ಇರುವರೆಂದು ಅರಿವಾಗುತ್ತದೆ.
ಯುವಕರ ಸಹಭಾಗಿತ್ವ
ಮುಖ್ಯ ವಿಷಯದ ಕುರಿತು ಇಷ್ಟು ಅರಿವಾದ ಬಳಿಕ ವಿಷಯವನ್ನು ಮುಂದಕ್ಕೊಯ್ಯುವ ಸಿದ್ಧತೆಯೂ ಈ ಅಧಿವೇಶನದಿಂದಲೇ ಆಗುತ್ತಿದೆ ಯೆನ್ನುವುದು ಗಮನಕ್ಕೆ ಬರುತ್ತದೆ. ಅಧಿವೇಶನದಲ್ಲಿ ಭಾಗವಹಿಸಿದ ೩೦ ರಿಂದ ೩೫ ವರ್ಷ ವಯಸ್ಸಿನ ಯುವವರ್ಗವು ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನದ ನಿಜವಾದ ಶಕ್ತಿಯಾಗಿದೆ. ಹಾಗೆ ನೋಡಿದರೆ ವ್ಯವಹಾರಿಕ ದೃಷ್ಟಿಯಿಂದ ೩೦ ರಿಂದ ೩೫ ವರ್ಷ ವಯಸ್ಸಿನ ಯುವ ವರ್ಗದವರ ಕರ್ತವ್ಯವನ್ನು ನಿಭಾಯಿಸುವ ಕಾಲಾವಧಿಯಾಗಿರುತ್ತದೆ. ಈ ಅಧಿವೇಶನವನ್ನು ಗಮನಿಸಿದಲ್ಲಿ ಅರ್ಥಾತ್ ಅವರು ಅದನ್ನು ಧಿಕ್ಕರಿಸಿದರು ಹಾಗೂ ಆದರ್ಶ ರಾಜ್ಯವನ್ನು ಸ್ಥಾಪಿಸುವ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು ಹಾಗೂ ಯುವಕರು ಈ ಕರ್ತವ್ಯವನ್ನು ‘ಹರ ಹರ ಮಹಾದೇವ’ ಎಂದು ಘೋಷಿಸುತ್ತ ಸ್ವೀಕರಿಸಿದರು ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ವಿಷಯದಲ್ಲಿ ಸಕ್ರಿಯರಾಗುವ  ಪ್ರತಿಜ್ಞೆಯನ್ನು ಕೈಕೊಂಡರು. ಆ ಕ್ಷಣವು ಹೃದಯಸ್ಪರ್ಷಿಯಾಗಿತ್ತು. ‘ಹರ ಹರ ಮಹಾದೇವ’ ಎನ್ನುವ ಜಯಘೋಷವು ಅವರಿಗೆ ದೈವೀ ಶಕ್ತಿಯನ್ನು ಒದಗಿಸುತ್ತಿರುವಂತೆ ಭಾಸವಾಗುತ್ತಿತ್ತು. ಈ ಯುವಕರೇ ಸಂತ ರಾಮದಾಸಸ್ವಾಮಿಯವರ ಸಾಮರ್ಥ್ಯವಾಗಿದ್ದಾರೆ ಅವರ ವಚನವಾದ ಚಳುವಳಿಗೆ ಭಗವಂತನ ಅಧಿಷ್ಠಾನವಿರಬೇಕೆಂಬುದನ್ನು ಯುವಕರು ಚೆನ್ನಾಗಿಯೆ ಅರಿತಿದ್ದಾರೆ ಎಂದೆನಿಸಿತು. ಅಥವಾ ಇದು ಅವರ ಮೇಲಾಗಿರುವ ಒಳ್ಳೆಯ ಸಂಸ್ಕಾರವಾಗಿರಬಹುದು. ಛತ್ರಪತಿ ಶಿವಾಜಿ ಮಹಾರಾಜರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಮಾತೆ ಜಗದಂಬೆಯನ್ನು ಸ್ಮರಿಸದೇ ಅವರು ಎಲ್ಲಿಯೂ ಕಾರ್ಯವನ್ನು ಪ್ರಾರಂಭಿಸುತ್ತಿರಲಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯೆಂದರೆ ಸನಾತನ ಧರ್ಮರಾಜ್ಯದ ಸ್ಥಾಪನೆಯಾಗಿದ್ದು, ಈ ಕಾರ್ಯವನ್ನು ಮಾಡು ವಾಗಲೂ ಧರ್ಮನಿಷ್ಠರ ನಾಲಿಗೆಯಿಂದ ಆರಾಧ್ಯ ದೇವತೆಯ ಹೆಸರು ಇರುವುದು ಅತ್ಯಗತ್ಯವಾಗಿದೆ. ಅಧಿವೇಶನದಲ್ಲಿ ಭಾಗವಹಿಸಿದ ಹಿಂದುತ್ವನಿಷ್ಠರು ನಿಶ್ಚಯವಾಗಿಯೂ ಇದರಿಂದ ಪ್ರೇರೇಪಿತರಾಗಿದ್ದರು. ಹಿಂದೂ ರಾಷ್ಟ್ರದ ಸ್ಥಾಪನೆಯು ಮುಖ್ಯ
ಧ್ಯೇಯವಾಗಿದ್ದು, ಅದನ್ನು ಕಾರ್ಯಗತಗೊಳಿಸಲು ಎದುರಾಗುವ ಪ್ರತಿಯೊಂದು ಪ್ರಸಂಗವನ್ನು ಎದುರಿಸುವುದು ಮತ್ತು ಒಬ್ಬರಿಂದ ಮತ್ತೊಬ್ಬರು ಕಲಿಯಲು ಉತ್ಸುಕರಾಗಿರುವ ಮಾನಸಿಕತೆಯು ಗಮನಕ್ಕೆ ಬಂದಿತು. ಹಿಂದೂ ರಾಷ್ಟ್ರವೆಂದರೆ ಸನಾತನ ಧರ್ಮರಾಜ್ಯದ ಸ್ಥಾಪನೆ ಆಗಲಿದೆಯೆನ್ನುವುದೇ ಹಿಂದುತ್ವನಿಷ್ಠರ ದೃಢವಿಶ್ವಾಸವಿದೆ. ಅಲ್ಲಿಯವರೆಗೆ ಅಧಿವೇಶನದ ನಿಮಿತ್ತದಿಂದ ಒಂದೆಡೆ ಸೇರಬೇಕೆಂದು ಅವರು ನಿಶ್ಚಯಿಸಿದರು. ಇಂತಹ ಉದ್ದೇಶಗಳಿಂದ ಹಿಂದೂಗಳ ಬೃಹತ್ ಸಂಘಟನೆ ಯಾಗುವುದಲ್ಲದೇ ಹಿಂದೂಗಳು ಚಿಂತೆಯಿಂದ ಮುಕ್ತರಾಗುವರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಐದನೇಯ ಹಿಂದೂ ಅಧಿವೇಶನದ ಸಮಾರೋಪ !