‘ಪಬ್ಲಿಕ್ ಟಿವಿ’ ಹಾಗೂ ಕನ್ನಡ ‘ಟಿವಿ ೯’ನ ಚರ್ಚಾಕೂಟದಲ್ಲಿ ರಣರಾಗಿಣಿ ಶಾಖೆಯ ಸಹಭಾಗ !

ಛಾಯಾಚಿತ್ರದಲ್ಲಿ ಎಡದಿಂದ ಸೌ. ಸುಕನ್ಯಾ ಶ್ರೀನಿವಾಸ, ಡಾ. ಸುಮಿತ್ರಾ ಅಯ್ಯಂಗಾರ,
ಮಧ್ಯದಲ್ಲಿ ಪಬ್ಲಿಕ್ ಟಿವಿಯ ನಿವೇದಕಿ, ರಣರಾಗಿಣಿಯ ಸೌ. ಸುಮಾ ಮಂಜೇಶ, ಕು. ಭವ್ಯಾ ಗೌಡ
ಬೆಂಗಳೂರು : ೨೪ ಜುಲೈಯಂದು ಬೆಂಗಳೂರಿನಲ್ಲಿ ‘ಪಬ್ಲಿಕ್ ಟಿವಿ’ ಈ ವಾರ್ತಾವಾಹಿನಿಯಲ್ಲಿ ದೇವಸ್ಥಾನವನ್ನು ಪ್ರವೇಶಿಸುವಾಗ ಮಹಿಳೆಯರು ಧರಿಸಬೇಕಾದ ಉಡುಪುಗಳ ಬಗ್ಗೆ ಆಯೋಜಿತ ಚರ್ಚಾಕೂಟದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಬೆಂಗಳೂರಿನ ಸಮನ್ವಯಕ ಕು. ಭವ್ಯಾ ಗೌಡ, ಅಂತಾರಾಷ್ಟ್ರೀಯ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷೆ ಡಾ.ಸುಮಿತ್ರಾ ಅಯ್ಯಂಗಾರ ಮತ್ತು ವೇದಾತ್ಮ ಸಂಸ್ಥೆಯ ಸಂಚಾಲಕಿ ಸೌ. ಸುಕನ್ಯಾರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಮಯದಲ್ಲಿ ರಣರಾಗಿಣಿ ಶಾಖೆಯ ಕಾರ್ಯಕರ್ತರು ದೇವಸ್ಥಾನವನ್ನು ಪ್ರವೇಶಿಸುವಾಗ ಭಾರತೀಯ ಉಡುಪುಗಳನ್ನು ಧರಿಸುವುದರ ಮಹತ್ವವನ್ನು ಅದೇರೀತಿ ಅದರ ಹಿಂದಿನ ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ದೇವಸ್ಥಾನವನ್ನು ಪ್ರವೇಶಿಸುವಾಗ ಭಾರತೀಯ ಉಡುಪನ್ನು ಧರಿಸಿ ಈಶ್ವರೀ ಕೃಪೆಯನ್ನು ಹೇಗೆ ಗ್ರಹಿಸಬಹುದು ಎಂಬ ವಿಷಯದಲ್ಲಿ ಮಾಹಿತಿಯನ್ನು ನೀಡಿದರು. ರಣರಾಗಿಣಿ ಶಾಖೆಯ ಕಾರ್ಯಕರ್ತರು ದೇವಸ್ಥಾನವನ್ನು ಪ್ರವೇಶಿಸುವಾಗ ಭಾರತೀಯ ಉಡುಪನ್ನು ಧರಿಸಬೇಕು ಎಂಬುದಕ್ಕಾಗಿ ನಿವೇದನೆಯನ್ನು ನೀಡುತ್ತಿರುವುದರ ಮಾಹಿತಿಯು ದೊರೆತ ನಂತರ ಅವರನ್ನು ಈ ಚರ್ಚಾಕೂಟಕ್ಕೆ ಆಮಂತ್ರಿಸಲಾಗಿತ್ತು.
ಇದೇ ವಿಷಯದಲ್ಲಿ ಕನ್ನಡ ‘ಟಿವಿ ೯’ ಈ ವಾರ್ತಾವಾಹಿನಿಯಲ್ಲಿ ಚರ್ಚಾಕೂಟದ ಆಯೋಜನೆಯನ್ನು ಮಾಡಲಾಗಿತ್ತು. ಈ ಸಮಯದಲ್ಲಿ ರಣರಾಗಿಣಿ ಶಾಖೆಯ ಸಮನ್ವಯಕಿ ಕು. ಭವ್ಯಾ ಗೌಡ ಇವರು ಮೇಲಿನ ಅಂಶಗಳನ್ನು ಮಂಡಿಸಿದರು. ಶ್ರೀ. ಸೋಮಯಾಜಿ ಗುರೂಜಿ, ಸೌ. ಅನುಪಮಾ ರೆಡ್ಡಿ ಮತ್ತು ಕು. ಪಲ್ಲವಿ ಆಯದೂರ ಇವರೂ ಚರ್ಚಾಕೂಟದಲ್ಲಿ ಪಾಲ್ಗೊಂಡಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಪಬ್ಲಿಕ್ ಟಿವಿ’ ಹಾಗೂ ಕನ್ನಡ ‘ಟಿವಿ ೯’ನ ಚರ್ಚಾಕೂಟದಲ್ಲಿ ರಣರಾಗಿಣಿ ಶಾಖೆಯ ಸಹಭಾಗ !