ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

ಫಲಕ ಪ್ರಸಿದ್ಧಿಗಾಗಿ

೧. ಹಿಂದುತ್ವನಿಷ್ಠರ ಹತ್ಯೆಯ ಪ್ರಯತ್ನಗಳಿಗೆ ಸಹಿಷ್ಣುತೆ ಎನ್ನಬೇಕೇ?
ಭಾಗ್ಯನಗರ (ಹೈದ್ರಾಬಾದ್)ದಿಂದ ಬಂಧಿಸಲ್ಪಟ್ಟ ಐಸಿಸ್‌ನ ೫ ಉಗ್ರವಾದಿಗಳು ಇಲ್ಲಿನ ಭಾಜಪದ ಶಾಸಕರಾದ ಟಿ. ರಾಜಾಸಿಂಗ್ ಇವರ ಹತ್ಯೆ ಮಾಡಲಿದ್ದರು. ರಾಜಾಸಿಂಗ್ ಇವರು ಪ್ರತಿವರ್ಷ ರಾಮನವಮಿಗೆ ಲಕ್ಷಗಟ್ಟಲೆ ಹಿಂದೂಗಳ ಮೆರವಣಿಗೆ ತೆಗೆಯುತ್ತಾರೆ ಹಾಗೂ ಗೋರಕ್ಷಣೆ ಮಾಡುತ್ತಾರೆ, ಅದಕ್ಕಾಗಿ ಅವರ ಹತ್ಯೆ ಮಾಡಲು ಪ್ರಯತ್ನಿಸಲಾಯಿತು.

೨. ಹಿಂದೂಗಳೇ, ಮುಸಲ್ಮಾನರಿಂದ ಧರ್ಮಪ್ರೇಮವನ್ನು ಕಲಿಯಿರಿ !
ಚೀನಾ ಸರಕಾರ ಮುಸಲ್ಮಾನರಿಗೆ ರೋಜಾ ಆಚರಿಸಲು ನಿರ್ಬಂಧ ಹೇರಿದ್ದನ್ನು ಖಂಡಿಸಿ ಉತ್ತರಪ್ರದೇಶದ ಬರೇಲಿಯಲ್ಲಿನ ಮುಸಲ್ಮಾನರು ಚೀನೀ ವಸ್ತುಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಅಷ್ಟು ಮಾತ್ರವಲ್ಲ, ಕೆಲವು ಸಂಘಟನೆಗಳು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಮನವಿಪತ್ರ ಕಳುಹಿಸಿ ಚೀನಾ ಸರಕಾರದೊಂದಿಗೆ ಚರ್ಚಿಸಬೇಕೆಂದು ವಿನಂತಿಸಿವೆ.

೩. ಹಿಂದೂಗಳೇ, ಬಾಂಗ್ಲಾದೇಶದ ಹಿಂದೂಗಳ
ನರಸಂಹಾರವನ್ನು ತಡೆಯಲು ಸರಕಾರದ ಮೇಲೆ ಒತ್ತಡ ತನ್ನಿ !
ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದು ಈಗ ಇನ್ನೋರ್ವ ಹಿಂದೂ ಪುರೋಹಿತನನ್ನು ಹತ್ಯೆಗೊಳಿಸಲಾಗಿದೆ. ಜೈನೈದಾಹ ಜಿಲ್ಲೆಯ ಒಂದು ದೇವಸ್ಥಾನದಲ್ಲಿಯೇ ಶ್ಯಾಮನೋಂದ ದಾಸ ಎಂಬ ೪೫ ವರ್ಷದ ಪುರೋಹಿತರ ಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಲಾಗಿದೆ.

೪. ಉಗ್ರರಿಗೆ ಧರ್ಮ ಇರುತ್ತದೆ, ಎಂಬುದನ್ನು ಇನ್ನಾದರೂ
ಢೋಂಗಿ ಪುರೋಗಾಮಿಗಳು ಒಪ್ಪಿಕೊಳ್ಳುವರೇ?
 ರಾಷ್ಟ್ರೀಯ ತನಿಖಾ ದಳದವರು ಭಾಗ್ಯನಗರದಿಂದ ಬಂಧಿಸಿದ ೫ ಉಗ್ರವಾದಿಗಳು ಗಲಭೆಯೆಬ್ಬಿಸಲು ಸುಪ್ರಸಿದ್ಧ ಭಾಗ್ಯಲಕ್ಷ್ಮೀ ದೇವಸ್ಥಾನದಲ್ಲಿ ಗೋಮಾಂಸವನ್ನು ಎಸೆಯುವವರಿದ್ದರು. ಇದನ್ನು ರಂಜಾನ್ ತಿಂಗಳಲ್ಲೇ ಮಾಡುವುದು ಅವರ ಯೋಜನೆಯಾಗಿತ್ತು.

೫. ಕೇಂದ್ರಸರಕಾರ ಬಾಂಗ್ಲಾದೇಶದಲ್ಲಿ ಹಿಂದೂಗಳ
ರಕ್ಷಣೆಗಾಗಿ ಏನಾದರೂ ಮಾಡುವುದೇ ?
ಬಾಂಗ್ಲಾದೇಶದಲ್ಲಿ ರೌಝಾನ್ ಚಿತಗಾವ್‌ನಲ್ಲಿ ಜಿಹಾದಿ ಉಗ್ರವಾದಿಗಳು ಹಿಂದೂ ಆಯುರ್ವೇದ ವೈದ್ಯರಾಗಿದ್ದ ಸುಲಾಲ ಚೌಧರಿ ಇವರ ರುಂಡವನ್ನು ಹಾರಿಸಿ ಜೂನ್ ೨೫ ರಂದು ಬರ್ಬರ ಹತ್ಯೆ ಮಾಡಿದರು. ಆಯುರ್ವೇದ ಉಪಚಾರ ಪದ್ಧತಿ ಇಸ್ಲಾಂ ವಿರೋಧಿ ಆಗಿದೆಯೆಂಬ ಕಾರಣಕ್ಕಾಗಿ ಈ ಹತ್ಯೆ ಮಾಡಲಾಗಿದೆ.

೬. ಹಾಲು ಮಾತ್ರವಲ್ಲ, ಚಿನ್ನವನ್ನು ಕೊಡುವ
ಹಸುಗಳನ್ನು ಸರಕಾರ ಯಾವಾಗ ರಕ್ಷಿಸುವುದು ?
ಗೀರ್ ಜಾತಿಯ ದೇಶಿ ಹಸುವಿನ ೧ ಲೀಟರ್ ಗೋಮೂತ್ರದಿಂದ ೩ ರಿಂದ ೧೦ ಮಿಲಿಗ್ರಾಮ್‌ವರೆಗೆ ಚಿನ್ನ ಸಿಗುತ್ತದೆಯೆಂದು ಗುಜರಾತ್ ರಾಜ್ಯದ ಜುನಾಗಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಿ.ಎ. ಗೊಲಕಿಯಾ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ, ಅದರಲ್ಲಿ ೩೮೮ ವಿಧದ ಔಷಧಿ ಗುಣಗಳೂ ಕಂಡುಬಂದಿವೆ.

೭. ಹಿಂದೂಗಳಲ್ಲಿ ಇಂತಹ ನಿರ್ಭಯತೆ
ಎಂದು ನಿರ್ಮಾಣವಾಗುವುದು ?
ಭಾಗ್ಯನಗರ (ಹೈದ್ರಾಬಾದ್)ದ ಭಾಜಪ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಶ್ರೀ. ರಾಜಾಸಿಂಗ್ ಠಾಕುರ್ ಇವರು ಐಸಿಸ್ ಉಗ್ರರಿಗೆ ಸವಾಲೆಸಗುತ್ತಾ, ‘ನನ್ನ ಮೇಲೆ ದಾಳಿ ಮಾಡಿ ತೋರಿಸಿ !’ ಎಂದಿದ್ದಾರೆ. ಐಸಿಸ್ ಅವರ ಕೊಲೆ ಮಾಡಲು ಸಂಚು ರೂಪಿಸಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !