ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !

ಸ್ವಾತಂತ್ರ್ಯವೀರ ಸಾವರಕರರ ಜೀವನವನ್ನು ನೆನಪಿಸುವ ಲೇಖನಮಾಲೆ !
ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾದ ಸನಾತನದ ಸಾಧಕರ ಹಾಗೂ ಅವರ ಕುಟುಂಬದವರ ಭೀಕರ ಅನುಭವ !
೨೦೦೯ ರಲ್ಲಿ ಮಡಗಾಂವ್‌ನಲ್ಲಿ ಒಂದು ವಾಹನದಲ್ಲಿ ಸ್ಫೋಟವಾಗಿ ಅದರಲ್ಲಿ ಸನಾತನ ಸಂಸ್ಥೆಯ ಇಬ್ಬರು ಸಾಧಕರು ಮೃತಪಟ್ಟರು. ಹೀಗಿದ್ದರೂ ಸನಾತನ ಸಂಸ್ಥೆಯ ಅಪಕೀರ್ತಿಯನ್ನು ಮಾಡಲು ಕಾಂಗ್ರೆಸ್ಸಿನ ತಾಳಕ್ಕನುಸಾರ ಕುಣಿಯುವ ಸೂತ್ರದ ಗೊಂಬೆಗಳಂತೆ ಆರಕ್ಷಕರು ಮತ್ತು ಪ್ರಸಾರಮಾಧ್ಯಮಗಳು ಯಾವುದೇ ಮುನ್ಸೂಚನೆಯನ್ನು ನೀಡದೇ ಸನಾತನದ ಸಾಧಕರನ್ನು ಬಂಧಿಸುವುದು, ಅವರ ಮೇಲೆ ಹೇರಿದ ಅನೇಕ ತೊಂದರೆದಾಯಕ ಕಲಂಗಳು, ಸುಳ್ಳು ಸಾಕ್ಷಿದಾರರು ಹಾಗೂ ಸುಳ್ಳು ಪುರಾವೆಗಳು, ಸಾಧಕರಿಗೆ ನೀಡಿದ ಅಸಹನೀಯ ಶಾರೀರಿಕ ಹಾಗೂ ಮಾನಸಿಕ ಹಿಂಸೆ, ಸಾಧಕರ ಕುಟುಂಬದವರಿಗೆ ನೀಡಿದ ಕಿರುಕುಳ ಮುಂತಾದ ಯಾತನೆಗಳ ಮಾಲಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಸಂಕಲನಕಾರರು : ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ
ಸೆರೆಮೆನೆಯೆಂದರೆ ಭೂಲೋಕದಲ್ಲಿರುವ ನರಕ !
೬. ಸೆರೆಮನೆಯುಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನ
೬ ಉ. ನಿರ್ವಹಣೆ ಮತ್ತು  ದುರಸ್ತಿಯನ್ನು ಅತಿಯಾಗಿ ನಿರ್ಲಕ್ಷಿಸುವುದು
೬ ಉ ೧. ಶ್ರೀ. ಪ್ರಶಾಂತ ಅಷ್ಟೇಕರ
೬ ಉ ೧ ಅ. ದುರಸ್ತಿ ಹಾಗೂ ಸ್ವಚ್ಛತೆಯ ಕೆಲಸಗಳನ್ನು ಕೈದಿಗಳೇ ಮಾಡುವುದು : ಸೆರೆಮನೆಯಲ್ಲಿ ದುರಸ್ತಿಯ ಎಲ್ಲ ಕೆಲಸಗಳನ್ನು ಕೈದಿಗಳೇ ಮಾಡುತ್ತಿದ್ದರು. ವಿದ್ಯುತ್ತಿಗೆ ಸಂಬಂಧಿಸಿದ ಕೆಲಸ ಬಲ್ಲ ಕೈದಿಗಳಿಂದ ಅವರು ವಿದ್ಯುತ್ತಿನ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಲ್ಲಿ ದುರಸ್ತಿಯ ಕೆಲಸ ಬಲ್ಲ ಕೈದಿಗಳಿಂದ ಆ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಕಸ ಗುಡಿಸುವ ಕೆಲಸವನ್ನೂ ಕೈದಿಗಳೇ ಮಾಡುತ್ತಾರೆ.
೬ ಉ ೨. ಶ್ರೀ. ಪ್ರಶಾಂತ ಜುವೇಕರ್
ಮನೋರೋಗಿಯಾಗಿರುವ ಕೈದಿಗೆ ವಿದ್ಯುತ್ ದುರಸ್ತಿಯ ಕೆಲಸ ಕೊಡುವುದು ಅಪಾಯಕಾರಿಯಾದ್ದರಿಂದ ಆ ಕೆಲಸಕ್ಕೆಂದು ಮತ್ತೊಬ್ಬ ವ್ಯಕ್ತಿಯನ್ನು ನೇಮಿಸಬೇಕೆಂದು ಹೇಳಿಯೂ ಅಧಿಕಾರಿಗಳು ಅದನ್ನು ನಿರ್ಲಕ್ಷಿಸುವುದು : ನಾವು ಸೆರೆಮನೆಯಲ್ಲಿದ್ದಾಗ ಒಬ್ಬ ಕೈದಿಯು ವಿದ್ಯುತ್ ಕೆಲಸಗಾರನಾಗಿದ್ದನು. ಎಲ್ಲ ಜವಾಬ್ದಾರಿಯೂ ಅವನ ಮೇಲೆಯೇ ಇತ್ತು. ಆತನು ಮನೋರೋಗಿಯಾಗಿದ್ದನು. ಕೆಲವೊಮ್ಮೆ ಹಿಂಸಾತ್ಮಕನಾಗುತ್ತಿದ್ದನು. ಆತನು ತನಗೆ ತಾನೇ ವಿದ್ಯುತ್ ಆಘಾತವನ್ನು ಕೊಟ್ಟುಕೊಂಡು ಅಥವಾ ಯಾವುದಾದರೂ ಸಂದರ್ಭದಲ್ಲಿ ಜಗಳವಾದರೆ ಸ್ವಿಚ್‌ನಿಂದ ಏನೂ ಮಾಡಬಹುದು. ವಿದ್ಯುತ್ತಿನ ಕೆಲಸಗಳ ಜವಾಬ್ದಾರಿಯನ್ನು ಮನೋರೋಗಿಯಾಗಿರುವ ಕೈದಿಗೆ ಕೊಡುವುದು ಸರಿಯಲ್ಲ. ನೀವು ಈ ಕೆಲಸಕ್ಕಾಗಿ ಬೇರೊಬ್ಬ ವ್ಯಕ್ತಿಯನ್ನು ನೇಮಿಸಬಹುದು. ಆತನು ದಿನದಲ್ಲಿ ೧-೨ ಗಂಟೆಕಾಲ ಬಂದು ದುರಸ್ತಿಯ ಕೆಲಸವನ್ನು ಮಾಡಿ ಹೋಗಬಹುದು ಎಂದು ನಾವು ಅಧಿಕಾರಿಗಳಿಗೆ ಹೇಳಿದ್ದೆವು. ಪ್ರಾರಂಭದಲ್ಲಿ ಅವರು ನಿರ್ಲಕ್ಷಿಸಿದರು.
೬ ಉ ೨ ಆ. ಮನೋರೋಗಿಯಾಗಿರುವ ಕೈದಿಯು ಮಾಡಿದ ನಿಯಮಬಾಹ್ಯ ಕೃತಿಗಳನ್ನು ಕಂಡು ಅಧಿಕಾರಿಗಳು ಅವನ ಜಾಗದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೇಮಿಸುವುದು, ಆತನೂ ಒಂದು ವಾರದ ನಂತರ ಆ ಕೆಲಸಕ್ಕೆ ಬರದಿರುವುದರಿಂದ ಅಧಿಕಾರಿಗಳು ಪುನಃ ಆ ಕೈದಿಗೇ ಕೆಲಸವನ್ನು ಕೊಡುವುದು : ಆತನು ಮನೋರೋಗಿಯಾಗಿದ್ದಾನೆ. ಆತನು ಬಹಳಷ್ಟು ಬಾರಿ ತಕ್ಷಣ ಅಸ್ಥಿರನಾಗುತ್ತಾನೆ. ಅನೇಕ ಬಾರಿ ಜಗಳ ಮಾಡುತ್ತಾನೆ. ಅವನು ಎಲೆಕ್ಟ್ರಿಶಿಯನ್ ಆಗಿದ್ದು ಆ ಕೆಲಸವನ್ನೇ ಮಾಡುತ್ತಿದ್ದರಿಂದ ಎಲ್ಲ ಉಪಕರಣಗಳೂ, ತಂತಿಗಳೂ ಅವನ ಕೈಯಲ್ಲಿಯೇ ಇರುತ್ತಿದ್ದವು. ತಂತಿಗಳನ್ನು ಕತ್ತರಿಸಿ ಕೈದಿಗಳಿಗೆ ಕೊಡುವುದು, ಕೈದಿಗಳ ಸಂಚಾರಿವಾಣಿಗಳಿಗೆ ಚಾಜರ್ ಮಾಡಲು ಅದನ್ನು ಬಳಸುವುದು, ವಿದ್ಯುತ್ ಸಾಹಿತ್ಯವನ್ನು ತರಿಸುವುದು ಹಾಗೂ ಸೋಲ್ಡರಿಂಗ್ ಉಪಕರಣವನ್ನು ತನ್ನ  ಬಳಿಯೇ ಇಟ್ಟುಕೊಳ್ಳುವುದು ಮುಂತಾದ ನಿಯಮಬಾಹ್ಯ ಕೃತಿಗಳನ್ನು ಆತನು ಮಾಡುತ್ತಿದ್ದನು. ಇದು ಅಧಿಕಾರಿಗಳ ಗಮನಕ್ಕೆ ಬಂದಾಗ ಅವರು ಬೇರೊಬ್ಬ ವ್ಯಕ್ತಿಯನ್ನು ನೇಮಿಸಿದರು. ಆದರೆ ಅವನು ಒಂದು ವಾರ ಮಾತ್ರ ಕೆಲಸಕ್ಕೆ ಬಂದನು. ಆಗ ಪುನಃ ಮೊದಲಿನ ಕೈದಿಗೇ ಎಲ್ಲ ಕೆಲಸಗಳನ್ನು ಮಾಡಲು ಹೇಳಿದರು. ಇನ್ನು ಮುಂದೆ ಏನಾದರೂ ಆದರೆ ಆಗ ನೋಡಿಕೊಳ್ಳೋಣ ಎಂದು ಅಧಿಕಾರಿಗಳು ಹೇಳಿದರು.
೬ ಉ ೨ ಇ. ಸಮಸ್ಯೆಗೆ ಪರಿಹಾರವನ್ನು ಹುಡುಕುವ ಬದಲು ಅದನ್ನು ನಿರ್ಲಕ್ಷಿಸುವ ಹಾಗೂ ಜಾರಿಕೊಳ್ಳುವಂತಹ ಉತ್ತರಗಳನ್ನು ನೀಡುವ ಸೆರೆಮನೆಯ ಅಧಿಕಾರಿಗಳು ! : ನಾವು ಸೆರೆಮನೆಗೆ ಹೋದಾಗ ಅದರ ಎರಡು ಮಾಳಿಗೆಗಳ ಪೈಕಿ ನೆಲಮಾಳಿಗೆಯ ಕೆಲಸ ನಡೆದಿತ್ತು. ಆ ಕೆಲಸ ಪೂರ್ಣವಾದ ನಂತರ ನಮ್ಮನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಮಳೆಗಾಲದಲ್ಲಿ ಗೋಡೆಯೊಳಗಿಂದ ನೀರು ಒಳಗೆ ಬರುತ್ತಿತ್ತು ಎಂಬ ವಿಷಯವು ನಮ್ಮ ಗಮನಕ್ಕೆ ಬಂದಿತು.  ಪಕ್ಕದಲ್ಲಿಯೇ ಸೆಪ್ಟಿಕ್ ಟ್ಯಾಂಕ್ ಇತ್ತು. ಅದರ ನಿರ್ವಹಣೆಯು ಸರಿಯಾಗಿ ಆಗದಿದ್ದರಿಂದ ನೀರು ಕೋಣೆಯೊಳಗೆ ಬರುತ್ತಿತ್ತು. ನಮ್ಮ ಕೋಣೆಯೊಳಗೆ ಎಷ್ಟು ನೀರು ಬಂದಿತ್ತೆಂದರೆ ನಾವೆಲ್ಲರೂ ನಮ್ಮ ಹಾಸಿಗೆಗಳನ್ನು ತೆಗೆದು ರಾತ್ರಿಯಿಡೀ ನೀರನ್ನೇ ತೆಗೆಯುತ್ತಿದ್ದೆವು. ಇದನ್ನು ದುರಸ್ತಿ ಮಾಡಲೂ ಅವರು ಬಹಳ ತಡ ಮಾಡಿದರು. ಮೊದಲು ಅವರು ಇದರೆಡೆ ಗಮನವನ್ನೇ ಕೊಡಲಿಲ್ಲ. ನಂತರ ಅವರು ನಿರ್ಮಾಣ ಇಲಾಖೆಯಲ್ಲಿನ ಅಭಿಯಂತರ(ಇಂಜಿನೀಯರ್)ನನ್ನು ಕರೆಸಿದರು. ಅವರು ಪರಿಹಾರ ಹುಡುಕಿದ ನಂತರವೂ ಹತ್ತು ದಿನಗಳಲ್ಲಿ ಪುನಃ ಕೋಣೆ ಯೊಳಗೆ ನೀರು ಬರತೊಡಗಿತು. ಈ ಬಗ್ಗೆ ಮಾತನಾಡುವಾಗ ಸೆರೆಮನೆಯ ಅಧಿಕಾರಿಗಳು, ಸೆರೆಮನೆಯನ್ನು ಕಟ್ಟುವಾಗಲೇ ಎಲ್ಲ ಸಮಸ್ಯೆಗಳ ಬಗ್ಗೆ ವಿಚಾರ ಮಾಡಿ ಕಟ್ಟಬೇಕಾಗಿತ್ತು ಎಂದರು. ಗೋಡೆಯೊಳಗಿಂದ ನೀರು ಬರುತ್ತಿತ್ತು, ಗೋಡೆಗಳಲ್ಲಿ ಬಿರುಕುಗಳಿದ್ದವು. ಒಂದು ವೇಳೆ ಕಟ್ಟಡವು ಬಿದ್ದರೆ ಏನಾಗುವುದು ಎಂಬ ಭಯವು ನಮ್ಮನ್ನು ಕಾಡುತ್ತಿತ್ತು. ಮಳೆಗಾಲವಾಗಿದ್ದರಿಂದ ವರ್ತಮಾನಪತ್ರಿಕೆಗಳಲ್ಲಿ ಪ್ರತಿದಿನ ಮುಂಬೈಯಲ್ಲಿ ಕಟ್ಟಡಗಳು ಕುಸಿಯುವ ವಾರ್ತೆಗಳು ಬರುತ್ತಿದ್ದವು.
೬ ಉ ೩. ವಿನಾಯಕ ಪಾಟಿಲ್
೬ ಉ ೩ ಅ. ಸೆರೆಮನೆಯ ನಿರ್ವಹಣಾ-ದುರಸ್ತಿಗಾಗಿ ಯಾರೂ ಜವಾಬ್ದಾರರಿಲ್ಲದಿರುವುದರಿಂದ ಈ ಕೆಲಸಗಳನ್ನು ಕೈದಿಗಳೇ ಮಾಡಬೇಕಾಗುವುದು ಹಾಗೂ ಅದರಲ್ಲಿ ಬಹಳ ಅಪಾಯವಿರುವುದು : ಶೌಚಾಲಯ-ಸ್ನಾನಗೃಹದ ಸ್ವಚ್ಛತೆಯನ್ನೂ ಕೈದಿಗಳೇ ಮಾಡುತ್ತಾರೆ. ನಳ್ಳಿಯನ್ನು ದುರಸ್ತಿ ಮಾಡಬಲ್ಲ ಕೈದಿಯು ಇಲ್ಲದಿದ್ದರೆ ನಳ್ಳಿಯಿಂದ ನೀರು ಹಾಗೆಯೇ ಸೋರುತ್ತಿರುತ್ತಿತ್ತು ಮತ್ತು ನೀರಿನ ಅಪವ್ಯಯವಾಗುತ್ತಿತ್ತು. ಅವರು ಸರಕಾರಿ ಕೆಲಸಗಾರರನ್ನು ಕರೆಸುತ್ತಿದ್ದರು. ಆದರೆ ಅವರು ೮ ರಿಂದ ೧೫ ದಿನಗಳ ನಂತರ ಬಂದು ಅಷ್ಟು ಕೆಲಸವನ್ನು ಮಾತ್ರ ಮಾಡಿ ಹೋಗುತ್ತಿದ್ದರು. ಸೆರೆಮನೆಯಲ್ಲಿಯೇ ವಿದ್ಯುತ್ತು ಅಥವಾ ನಳ್ಳಿದುರಸ್ತಿ ಮಾಡುವ  ಕೆಲಸಗಾರರಿರುತ್ತಿರಲಿಲ್ಲ. ಎಲ್ಲವನ್ನೂ ಕೈದಿಗಳೇ ನೋಡಿಕೊಳ್ಳುತ್ತಿದ್ದರು. ಇದರಲ್ಲಿ ಬಹಳ ಅಪಾಯವಿರುತ್ತಿತ್ತು. ಒಂದು ವೇಳೆ ವಿದ್ಯುತ್ತಿನ ಕೆಲಸವನ್ನು ಮಾಡುವಾಗ ಶಾಕ್ ತಗಲಿ ಮರಣವಪ್ಪಿದರೆ ಅದಕ್ಕೆ ಯಾರೂ ಜವಾಬ್ದಾರರಿರುತ್ತಿರಲಿಲ್ಲ. ಸ್ನಾನಗೃಹದ ಬಾಗಿಲುಗಳು ಮುರಿದಿರುತ್ತಿದ್ದವು. ಚಿಲಕಗಳೂ ಇರುತ್ತಿರಲಿಲ್ಲ. ಟೈಲ್ಸ್‌ಗಳು ಸಹ ಒಡೆದಿರುತ್ತಿದ್ದವು. ಅವುಗಳ ಮೇಲೆ ಬಿದ್ದರೆ ಎಲ್ಲರಿಗೂ ಬಹಳ ತೊಂದರೆಯಾಗುತ್ತಿತ್ತು. ಸೆರೆಮನೆಯಲ್ಲಿನ ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಎಲ್ಲವೂ ಕೈದಿಗಳ ಮೇಲೆಯೇ ಅವಲಂಬಿಸಿರುತ್ತಿತ್ತು.
೬ ಊ. ಕೈದಿಗಳಿಗೆ ಅಂಚೆ ಪತ್ರಗಳನ್ನು ಕೊಡುವಲ್ಲಿ ಅಧಿಕಾರಿಗಳಿಂದ ವಿಳಂಬ !
೬ ಊ ೧. ಶ್ರೀ. ಪ್ರಶಾಂತ ಅಷ್ಟೇಕರ್
೬ ಊ ೧. ಕೈದಿಗಳು ತಮ್ಮ ಸಂಬಂಧಿಕರಿಗೆಂದು ಬರೆದು ಕೊಟ್ಟ ಪತ್ರಗಳನ್ನು ಜೇಲರ್‌ರವರು ಹರಿದು ಕಸದ ಬುಟ್ಟಿಗೆ ಹಾಕುವುದು : ಕೆಲವು ಕೈದಿಗಳಿಗೆ ತಮ್ಮ ಸಂಬಂಧಿಕರಿಗಾಗಿ ಪತ್ರವನ್ನು ಕಳುಹಿಸಲು ಅನುಮತಿಯಿರುತ್ತದೆ. ಅಂತವರು ಬರೆದು ಕೊಟ್ಟ ಪತ್ರಗಳನ್ನು ಜೇಲರ್‌ರವರು ಹರಿದು ಓದುತ್ತಾರೆ ಮತ್ತು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ ಅಥವಾ ಎರಡು ದಿನಗಳ ನಂತರ ಕಳುಹಿಸೋಣ ಎಂದು ವಿಚಾರ ಮಾಡಿ ಅಲ್ಲಿಯೇ ಇಡುತ್ತಾರೆ. ನಂತರ ಆ ಪತ್ರಗಳನ್ನು ಅವರು ಕಳುಹಿಸುವುದೇ ಇಲ್ಲ. ಕೈದಿಗಳು ಮಾತ್ರ ತಾವು ಪತ್ರವನ್ನು ಕಳುಹಿಸಿದ್ದೇವೆ ಎಂಬ ವಿಚಾರದಲ್ಲಿರುತ್ತಾರೆ.
೬ ಊ ೨. ಶ್ರೀ. ದಿಲೀಪ ಮಾಣಗಾವ್‌ಕರ್
೬ ಊ ೨ ಅ. ಕುರಿಯರ್ ಮೂಲಕ ಬಂದಿದ್ದ ಅಂಚೆಯನ್ನು ಪರಿಶೀಲಿಸಿ ಕೈದಿಗಳಿಗೆ ಕೊಡಲಾಗುವುದು; ಆದರೆ ಕೆಲವೊಮ್ಮೆ ಪಾರ್ಸೆಲ್ ಅಥವಾ ನ್ಯಾಯಾಲಯಕ್ಕೆ ಸಂಬಂಧಿತ ಪತ್ರಗಳು ಸಿಗಲು ಅಡಚಣೆಯುಂಟಾಗುವುದು : ಸೆರೆಮನೆಗೆ ಹೊರಗಿನಿಂದ ಬಂದಿರುವ ಕೈದಿಗಳಿಗಾಗಿ ಕುರಿಯರ್ ಬರುತ್ತದೆ. ಕುರಿಯರ್ ಬಂದಾಗ ಮೊದಲು ಅಧಿಕಾರಿಗಳು ಅದರಲ್ಲಿ ಏನಿದೆ, ಅದು ಎಲ್ಲಿಂದ ಬಂದಿದೆ ಮುಂತಾದ ವಿವರಗಳಿಗಾಗಿ ಅದನ್ನು ಒಡೆದು ನೋಡಿ ತಿಳಿದುಕೊಳ್ಳುತ್ತಾರೆ. ಅದರಲ್ಲಿನ ವಸ್ತುಗಳು ಕೊಡಬಹುದಂತಹದ್ದಾಗಿದ್ದರೆ ಕೈದಿಯನ್ನು ಕರೆದು ಅವನಿಗೆ ಕೊಡುತ್ತಾರೆ. ಕೆಲವು ವಸ್ತುಗಳು ಕೈದಿಗಳಿಗೆ ಕೊಡುವಂತಹದ್ದಾಗಿರದಿದ್ದರೆ ಅವುಗಳನ್ನು ಹಿಂತಿರುಗಿಸುತ್ತಾರೆ. ಆದರೆ ಬಹಳಷ್ಟು ಬಾರಿ ನ್ಯಾಯಾಲಯಕ್ಕೆ ಸಂಬಂಧಿತ ದಾಖಲೆಗಳು ಬಂದಿರುವ ವಿಷಯವು ಕೈದಿಗೆ ತಿಳಿಯುವುದೇ ಇಲ್ಲ. ಕೆಲವೊಮ್ಮೆ ಪಾರ್ಸೆಲ್‌ಗಳು ಅಲ್ಲಿಯೇ ಬಿದ್ದಿರುತ್ತವೆ. ಇದರಿಂದ ಕೈದಿಗಳಿಗೆ ಬಹಳ ತೊಂದರೆಯಾಗುತ್ತದೆ. ಏನಾದರೂ ಪಾರ್ಸೆಲ್ ಬಂದಿದೆಯಾ ಎಂಬುದರ ಬಗ್ಗೆ ಅವರು ಬಹಳಷ್ಟು ಬೆಂಬೆತ್ತುವಿಕೆ ಮಾಡಬೇಕಾಗುತ್ತದೆ.
೭. ಸೆರೆಮನೆಯ ಭ್ರಷ್ಟ ಅಧಿಕಾರಿಗಳು
೭ ಅ. ಹಣಕ್ಕಾಗಿ ದುರಾಸೆಪಡುವ ಅಧಿಕಾರಿಗಳು
೭ ಅ ೧. ಶ್ರೀ ಧನಂಜಯ ಅಷ್ಟೇಕರ್
೭ ಅ ೧ ಅ. ಬದಲಿಗಾಗಿ ಬಂದಿದ್ದ ಅಧಿಕಾರಿಯು ಕ್ಯಾಂಟೀನ್‌ನ ಲೆಕ್ಕದ ವಹಿಯನ್ನು ಮುಚ್ಚಿಡುವುದು ಮತ್ತು ಆತನೇ ಲೆಕ್ಕದಲ್ಲಿ ತಪ್ಪು ಮಾಡಿದ್ದಾನೆ ಎಂಬ ವಿಷಯವನ್ನು ವರಿಷ್ಠ ಅಧಿಕಾರಿಯ ಗಮನಕ್ಕೆ ತಂದು ಕೊಡುವುದು : ನಾನು ಕ್ಯಾಂಟೀನ್ ವಿಭಾಗದ ಪ್ರಮುಖನಾಗಿದ್ದಾಗ ಸಂಪೂರ್ಣ ಲೆಕ್ಕಾಚಾರದ ಜವಾಬ್ದಾರಿಯು ನನ್ನ ಮೇಲಿತ್ತು. ನಾನು ಕನಿಷ್ಠ ಒಂದೂವರೆ ಲಕ್ಷ ರೂಪಾಯಿಗಳಷ್ಟು ಹಣದ ಲೆಕ್ಕವನ್ನಿಡುತ್ತಿದ್ದೆನು. ನಿಜ ನೋಡಿದರೆ ಈ ಕೆಲಸವೂ ಅಧಿಕಾರಿಗಳದ್ದೇ ಆಗಿರುತ್ತದೆ. ಆದರೆ ಕ್ಯಾಂಟೀನ್‌ನ ಅಧಿಕಾರಿಯು ಬೇಜವಾಬ್ದಾರಿಯಿಂದಿರುತ್ತಿದ್ದರಿಂದ ಆ ಕೆಲಸವನ್ನು ನಾನು ಮಾಡಬೇಕಾಗುತ್ತಿತ್ತು. ಒಮ್ಮೆ ಕ್ಯಾಂಟೀನ್‌ನ ಕೆಲಸವನ್ನು ನೋಡಿಕೊಳ್ಳುತ್ತಿದ್ದ ದಿನನಿತ್ಯದ ಅಧಿಕಾರಿಗೆ ಬೇರೆ ಕೆಲಸಗಳಿದ್ದ ಕಾರಣ ಮತ್ತೊಬ್ಬ ಅಧಿಕಾರಿಯು ಕ್ಯಾಂಟೀನ್ ವಿಭಾಗಕ್ಕೆ ಬಂದನು. ಆತನು ಲೆಕ್ಕದ ಪುಸ್ತಕವನ್ನು ಬಚ್ಚಿಟ್ಟು ಬಿಟ್ಟನು. ತದನಂತರ ಆ ಪುಸ್ತಕದಲ್ಲಿ ಮೂರೂವರೆ ಸಾವಿರ ರೂಪಾಯಿಯಷ್ಟು  ಹಣದ ಲೆಕ್ಕ ಸಿಗುತ್ತಿರಲಿಲ್ಲ. ಈಗ ಇದರ ಆರೋಪವು ನನ್ನ ಹಾಗೂ ನಾನು ಯಾವ ಅಧಿಕಾರಿಯ ಕೈಕೆಳಗೆ ಕೆಲಸ ಮಾಡುತ್ತಿದ್ದೆನೋ ಆ ಅಧಿಕಾರಿಯ ಮೇಲೆ ಬರುವುದು ಎಂದು ನನಗನಿಸಿತು. ನಾವು ಈ ಬಗ್ಗೆ ತನಿಖೆಯಾಗಬೇಕೆಂದು ದೂರು ಸಲ್ಲಿಸಿದೆವು. ಸಿಸಿಟಿವಿಯಲ್ಲಿನ ರೆಕಾರ್ಡಿಂಗ್‌ಅನ್ನು ತಪಾಸಣೆ ಮಾಡಿ ನೋಡಿದಾಗ ಗಮನಕ್ಕೆ ಬಂದಿದ್ದೇನೆಂದರೆ ಬದಲಿಗಾಗಿ ಬಂದಿದ್ದ ಅಧಿಕಾರಿಯು ಕನಿಷ್ಠ ೧೩ ಬಾರಿ ಲೆಕ್ಕದ ಪತ್ರವನ್ನಿಟ್ಟಿದ್ದ ಜಾಗಕ್ಕೆ ಬಂದು ಹೋಗಿದ್ದನು. ಈ ವಿಷಯವನ್ನು ನಾವು ವರಿಷ್ಠ ಅಧಿಕಾರಿಯ ಗಮನಕ್ಕೆ ತಂದು ಕೊಟ್ಟೆವು. ೪ ದಿನಗಳ ನಂತರ, ನಮಗೆ ಯಾವ ಅಧಿಕಾರಿಯ ಮೇಲೆ ಅನುಮಾನವಿತ್ತೋ ಆ ಅಧಿಕಾರಿಯು ಬಂದು ಹಣ ಕೊಟ್ಟು ಹೋದನು ಎಂಬುದು ತಿಳಿಯಿತು.

ಸೆರೆಮನೆಯಲ್ಲಾಗುವ ಭ್ರಷ್ಟಾಚಾರವನ್ನು ತಡೆಯಲಾರದ ಅಧಿಕಾರಿಗಳು, ಮೇಲಿನ ಮಟ್ಟದವರೆಗಿನ ಅವರ ವರಿಷ್ಠರು ಹಾಗೂ ಮಂತ್ರಿಗಳೂ ಆ ಭ್ರಷ್ಟಾಚಾರದಲ್ಲಿ ಸಹಭಾಗಿಯಾಗಿರುತ್ತಾರೆಯೇ ?
- (ಪರಾತ್ಪರ ಗುರು) ಡಾ. ಆಠವಲೆ

ಸ್ವಾತಂತ್ರ್ಯ ದೊರೆತಾಗಿನಿಂದ ಇಂದಿನವರೆಗೆ ಸರಕಾರದಿಂದ ಹಿಡಿದು ಕೆಳಗಿನ ಮಟ್ಟದ ಕರ್ಮಚಾರಿಗಳ ವರೆಗೆ ಪ್ರತಿಯೊಂದು ಕ್ಚೇತ್ರದಲ್ಲಿರುವ ಪ್ರತಿಯೊಬ್ಬನೂ ಭ್ರಚ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿರುವುದರಿಂದ ಒಳ್ಳೆಯ ದಿನಗಳು ಯಾವಾಗ ಬರುವವು ಎಂಬ ಬಗ್ಗೆ ಅಪೇಕ್ಷೆಯಿಡುವುದನ್ನು ಬಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಿದ್ಧರಾಗಿರಿ !  - (ಪರಾತ್ಪರ ಗುರು) ಡಾ. ಆಠವಲೆ

ಮೈಗಳ್ಳ, ವ್ಯಸನಾಧೀನ, ಗೂಂಡಾ ಪ್ರವೃತ್ತಿಯ ಅಧಿಕಾರಿಗಳನ್ನು ಅವಲಂಬಿಸಿರದೇ ಜನತೆಯು ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಲು ಸಿದ್ಧವಾಗಬೇಕು !  - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !