ಭಕ್ತರಿಗೆ ವಿವಿಧ ವಿಷಯಗಳನ್ನು ಕಲಿಸುವ ಬಾಬಾ

ದೇಹಬುದ್ಧಿಯನ್ನು ನಾಶ ಮಾಡುವುದು
ಬಾಬಾರವರು ಭಜನೆ ಹೇಳುತ್ತಾ ವಿವಿಧ ಸ್ಥಳಗಳಿಗೆ ಸಂಚರಿಸುತ್ತಿದ್ದರು. ಅನೇಕ ಬಾರಿ ಬಾಬಾರವರನ್ನು ಭೇಟಿ ಮಾಡಲೆಂದು ಹೋದ ಕೆಲವು ಭಕ್ತರಿಗೆ ಬಾಬಾರವರು ಯಾವುದೇ ಪೂರ್ವಕಲ್ಪನೆ ನೀಡದೇ ಅಂದರೆ ಪ್ರವಾಸಕ್ಕಾಗಿ ಆ ಭಕ್ತರ ಯಾವುದೇ ತಯಾರಿ ಇಲ್ಲದಿರುವಾಗಲೂ ಅವರಿಗೆ ‘ವಾಹನ ಹತ್ತು’ ಎಂದು ಹೇಳುತ್ತಿದ್ದರು. ಆಗ ಆ ಭಕ್ತರು ಟವೆಲ್, ದಂತಮಂಜನ, ಬಟ್ಟೆ ಇತ್ಯಾದಿಗಳಿಲ್ಲದೇ ಬಾಬಾರವರೊಂದಿಗೆ ವಾಹನ ಹತ್ತಬೇಕಾಗುತ್ತಿತ್ತು. ಈ ರೀತಿಯ ಅನುಭವವನ್ನು ಪ್ರಥಮಬಾರಿಗೆ ಅನುಭವಿಸುತ್ತಿದ್ದ ಭಕ್ತನಿಗೆ ಪ್ರವಾಸದ ಮಧ್ಯದಲ್ಲಿ ಶೌಚಕ್ಕೆ ಹೋಗಬೇಕಾದರೆ ಅಥವಾ ಹಸಿವೆ-ನೀರಡಿಕೆ ಆದರೆ ಏನು ಮಾಡಬೇಕು ಎಂದು ಚಿಂತೆಯಾಗುತ್ತಿತ್ತು. ಆದರೆ ಪ್ರವಾಸದಲ್ಲಿದ್ದಾಗ ಬಾಬಾರವರು ಶೌಚಕ್ಕಾಗಿ ವಾಹನವನ್ನು ಮಧ್ಯದಲ್ಲಿ ನಿಲ್ಲಿಸು ತ್ತಿದ್ದರು ಮತ್ತು ಹಸಿವೆ-ನೀರಡಿಕೆಗಳ ನೆನಪು ಸಹ ಆಗುತ್ತಿರಲಿಲ್ಲ, ಏಕೆಂದರೆ ಒಮ್ಮೆಲೆ ದುಪ್ಪಟ್ಟು ಊಟ ಮಾಡುವಷ್ಟು, ಪ್ರತಿ ನಿತ್ಯಕ್ಕಿಂತಲೂ ಹೆಚ್ಚು ಆಹಾರ ಸಿಗುತ್ತಿತ್ತು. ಆದರೆ ಬಾಬಾರವರೊಂದಿಗೆ ೨-೩ ಬಾರಿ ಪ್ರವಾಸ ಮಾಡಿದ ಭಕ್ತನಿಗೆ ಬಾಬಾರವರೊಂದಿಗೆ ಪ್ರವಾಸವೆಂದರೆ ಮೃಷ್ಟಾನ್ನದ ಭಾಗ್ಯ ಎಂಬ ವಿಚಾರ ಬಂದರೆ ಅವನಿಗೆ ದಿನವಿಡೀ ತಿನ್ನಲು ಏನೂ ಸಿಗುತ್ತಿರಲಿಲ್ಲ !

ಪ್ರವಾಸವನ್ನು ಮುಂದುವರಿಸಿದ ನಂತರ ಭಕ್ತರಿಗೆ ಶೌಚ, ತಿಂಡಿ ತಿನಿಸುಗಳ ಬಗ್ಗೆಯಂತೂ ಚಿಂತೆ ತಪ್ಪುತ್ತಿತ್ತು. ಆದರೆ ಈಗ ನಾವು ಎಲ್ಲಿ ಉಳಿದುಕೊಳ್ಳುತ್ತೇವೆಯೋ ಅಲ್ಲಿ ಸ್ನಾನಕ್ಕಾಗಿ ಟವೆಲ್ ಬೇಕಾಗುವುದು, ಬದಲಾಯಿಸಲು ಬಟ್ಟೆಗಳು ಬೇಕಾಗುವವು ಅದಕ್ಕೇನು ಮಾಡುವುದು ? ಎಂಬ ಹೊಸ ಚಿಂತೆ ! ಹಣವಿಲ್ಲದ ಕಾರಣ ಯಾರಾದರು ಭಕ್ತರು ವಾಹನದಲ್ಲಿದ್ದ ಇತರರಿಂದ ಅಥವಾ ವಾಸ್ತವ್ಯಕ್ಕಿದ್ದ ಸಾಧಕರಿಂದ ದುಡ್ಡು ಪಡೆದುಕೊಂಡು ಟವೆಲ್, ಬಟ್ಟೆ ಇತ್ಯಾದಿಗಳನ್ನು ಖರೀದಿಸಿದರೆ ಬಾಬಾ ರವರು ಕೆಲವೊಮ್ಮೆ ಅವರನ್ನು ಅಲ್ಲಿಂದಲೇ ಮನೆಗೆ ಕಳುಹಿಸಿಬಿಡುತ್ತಿದ್ದರು.
ಬಾಬಾರವರೊಂದಿಗೆ ಪ್ರವಾಸವನ್ನು ಮುಂದುವರಿಸಿದ ಕೆಲವು ಭಕ್ತರಿಗೆ ಸ್ನಾನ ಮಾಡದೇ, ಬಟ್ಟೆ ಬದಲಾಯಿಸದೇ ಎರಡು-ಮೂರು ದಿನಗಳಾದ ನಂತರ ಈಗ ತಮ್ಮ ಶರೀರಕ್ಕೆ ದುರ್ಗಂಧ ಬರುತ್ತಿಲ್ಲ ಅಥವಾ ತಮಗೆ ಈಗ ಈ ವಿಷಯಗಳ ಕಡೆ ಗಮನವಿಲ್ಲ ಎಂಬುದು ಗಮನಕ್ಕೆ ಬರುತ್ತಿತ್ತು. ಅಂದರೆ ಅವರ ದೇಹಬುದ್ಧಿಯು ಕಡಿಮೆಯಾಗುತ್ತಿತ್ತು. ನಂತರ ಬಾಬಾರವರೇ ಅವರಿಗೆ ಒಂದು ಹೊಸ ಬಟ್ಟೆಯನ್ನು ತಂದುಕೊಡುತ್ತಿದ್ದರು.
ಬಾಬಾರವರು ರಾತ್ರಿ ಮಲಗುವಾಗ ಯಾವುದಾದ ರೊಂದು ಪೆಟ್ರೋಲ್ ಪಂಪ್, ಬಯಲು ಜಾಗ, ಹೊಲ ಅಥವಾ ಕಾಲುದಾರಿಯಲ್ಲೆ ವಾಸ್ತವ್ಯ ಮಾಡಿಸಿ ಉಳಿದ ದೇಹಬುದ್ಧಿಯನ್ನೂ ತೆಗೆದು ಬಿಡುತ್ತಿದ್ದರು. ಶೌಚಕ್ಕಾಗಿ ಹೊರಗಡೆ ಹೋಗಬೇಕಾದ ಕಾರಣ ಶೌಚಾಲಯವೇ ಬೇಕು ಎಂಬ ಸಂಸ್ಕಾರವನ್ನೂ ದೂರಗೊಳಿಸುತ್ತಿದ್ದರು. ಹೀಗೆ ಯಾವುದೇ ಗ್ರಂಥದ ವಾಚನದಿಂದ ಅಥವಾ ಪ್ರವಚನದಿಂದ ಕಡಿಮೆಯಾಗದ ಭಕ್ತರ ದೇಹ ಬುದ್ಧಿಯು ಬಾಬಾರವರೊಂದಿಗೆ ಪ್ರವಾಸ ಮಾಡು ವುದರಿಂದ ಕಡಿಮೆಯಾಗುತ್ತಿತ್ತು.
ಸತತ ವರ್ತಮಾನ ಕಾಲದಲ್ಲಿರಲು ಕಲಿಸುವುದು
ಯಾವಾಗ ಹೊರಡಬೇಕು, ಯಾವಾಗ ಎಲ್ಲಿ ತಲುಪಬೇಕು, ದಾರಿಯಲ್ಲಿ ಎಲ್ಲಿ ಊಟ ಮಾಡಬೇಕು, ತಿನ್ನಬೇಕು ಇತ್ಯಾದಿ ವಿಷಯಗಳನ್ನು ಬಾಬಾರವರೇ ನಿರ್ಧರಿಸುತ್ತಿದ್ದರು ಮತ್ತು ಅದರಲ್ಲಿ ಅನೇಕ ಬಾರಿ ಬದಲಾವಣೆಗಳನ್ನು ಮಾಡುತ್ತಿದ್ದರು. ಇದರಿಂದ ಅವರ ಭಕ್ತರು ಸತತ ವರ್ತಮಾನ ಕಾಲದಲ್ಲಿರಲು ಕಲಿಯುತ್ತಿದ್ದರು.
ವಿಶ್ವವೇ ನಮ್ಮ ಮನೆ ಎಂಬ ಭಾವವನ್ನು ಬೆಳೆಸುವುದು
ಯಾವುದಾದರೂ ವ್ಯಕ್ತಿಯ ಮನೆಯಲ್ಲಿ ವಾಸ್ತವ್ಯಕ್ಕಿದ್ದಾಗ ಅತಿಥಿಗಳಾಗಿ ಅತಿಥಿಗೃಹದಲ್ಲಿ ಕುಳಿತುಕೊಳ್ಳದೇ ಅವರ ಅಡುಗೆಮನೆಗೆ ಹೋಗಿ ಸಹಾಯ ಮಾಡುತ್ತಿದ್ದರು, ತಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಎಂದು ಎಲ್ಲವನ್ನೂ ಮಾಡುತ್ತಿದ್ದರು. ಇದರಿಂದ ಬಾಬಾರವರು ಎಲ್ಲರಿಗೂ ಎಲ್ಲ ಮನೆಗಳು ನಮ್ಮದೇ ಆಗಿವೆ ಎಂಬ ವ್ಯಾಪಕಭಾವವನ್ನು ಬೆಳೆಸಿಕೊಳ್ಳಲು ಕಲಿಸುತ್ತಿದ್ದರು. ಇದರಿಂದಲೇ ಮುಂದೆ ಯಾವಾಗಲಾದರೂ ಒಮ್ಮೆ ‘ಈ ವಿಶ್ವವೇ ನಮ್ಮ ಮನೆ’ ಎಂಬ ಭಾವವು ನಿರ್ಮಾಣವಾಗಬಲ್ಲದು.
ಮಾನ-ಅಪಮಾನ ಮತ್ತು ಸುಖ-ದುಃಖಗಳ ಆಚೆ ಹೋಗಲು ಕಲಿಸುವುದು
ಕೆಲವೊಮ್ಮೆ ಬಾಬಾರವರು ಹೋಗುವ ಕೆಲವು ಮನೆಯಲ್ಲಿ ಅವರೊಂದಿಗಿದ್ದ ಭಕ್ತರನ್ನು ದುರ್ಲಕ್ಷಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ ‘ಬಾಬಾರವರು ಇತರರನ್ನು ಕರೆದುಕೊಂಡು ಏಕೆ ಬಂದರು !’ ಎಂಬ ಮಾತುಗಳನ್ನೂ ಕೇಳಲು ಸಿಗುತ್ತಿತ್ತು. ಇದರಿಂದ ಭಕ್ತರು ಅದರ ಕಡೆ ದುರ್ಲಕ್ಷ್ಯ ಮಾಡಲು ಕಲಿಯುತ್ತಿದ್ದರು. ಆದುದರಿಂದ ಬಾಹ್ಯತಃವಾಗಿ ಬಾಬಾರವರೊಂದಿಗೆ ಪ್ರವಾಸದಲ್ಲಿರುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದೆನಿಸುತ್ತಿದ್ದರೂ ಪ್ರತ್ಯಕ್ಷದಲ್ಲಿ ಶಿಷ್ಯರು ಎಷ್ಟು ಕಲಿಯುತ್ತಿದ್ದರೆಂದರೆ ಅವರಿಗೆ ಕಲಿಯುವಿಕೆಯಿಂದ ಬಿಡುವೇ ಸಿಗುತ್ತಿರಲಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಕ್ತರಿಗೆ ವಿವಿಧ ವಿಷಯಗಳನ್ನು ಕಲಿಸುವ ಬಾಬಾ