ಅನೆಸ್ಥೇಸಿಯಾ ಕೊಟ್ಟಾಗ ರೋಗಿಗೆ ಶಸ್ತ್ರಚಿಕಿತ್ಸೆಯ ವೇದನೆ ಆಗುವುದಿಲ್ಲ, ಅದೇ ರೀತಿ ಗುರುಕೃಪೆಯು ಸಾಧಕನಿಗೆ ಪ್ರಾರಬ್ಧಭೋಗವನ್ನು ಭೋಗಿಸುವ ಶಕ್ತಿ ನೀಡುವುದು

‘ಗುರುಗಳು ಸಾಧಕನ ಪ್ರಾರಬ್ಧದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ; ಆದರೆ ಅದನ್ನು ಭೋಗಿಸಿ ತೀರಿಸಲು ಶಕ್ತಿಯನ್ನು ಅವಶ್ಯವಾಗಿ ಕೊಡುತ್ತಾರೆ ಮತ್ತು ಹಾಗೆ ಮಾಡುತ್ತಿರುವಾಗ ಸಾಧಕನ ಪ್ರಗತಿಯನ್ನೂ ಮಾಡಿಸಿಕೊಳ್ಳುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ಶಸ್ತ್ರಚಿಕಿತ್ಸೆ ಮಾಡಲಿಕ್ಕಿದ್ದರೆ, ಅವನಿಗೆ ಮೊದಲು ಅರಿವಳಿಕೆ (ಅನೆಸ್ಥೇಸಿಯಾ) ಕೊಡುತ್ತಾರೆ. ನಂತರ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆದ್ದರಿಂದ ಶಸ್ತ್ರಚಿಕಿತ್ಸೆ ಮಾಡುವಾಗ ಅವನಿಗೆ ನೋವಾಗುವುದಿಲ್ಲ ಹಾಗೂ ಶಸ್ತ್ರಚಿಕಿತ್ಸೆಯ ಪ್ರಾರಬ್ಧವನ್ನೂ ಅವನು ಭೋಗಿಸಿರುತ್ತಾನೆ. ಅದೇರೀತಿ ಗುರುಕೃಪೆಯಾದ ನಂತರ ಸಾಧಕನು ಎಲ್ಲ ಭೋಗಗಳನ್ನು ಭೋಗಿಸಿ ತೀರಿಸುತ್ತಾನೆ; ಆದರೆ ಅವನಿಗೆ ಅದರ ದುಃಖವಾಗುವುದಿಲ್ಲ. ಅಧ್ಯಾತ್ಮದಲ್ಲಿ ಗುರುಕೃಪೆಯು ‘ಅನೆಸ್ಥೇಸಿಯಾ’ ದಂತೆ ಕಾರ್ಯ ಮಾಡುತ್ತದೆ. - ಶ್ರೀ. ಗಣೇಶ ಕಾಮತ್, ಮಂಗಳೂರು. (೨೯.೨.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅನೆಸ್ಥೇಸಿಯಾ ಕೊಟ್ಟಾಗ ರೋಗಿಗೆ ಶಸ್ತ್ರಚಿಕಿತ್ಸೆಯ ವೇದನೆ ಆಗುವುದಿಲ್ಲ, ಅದೇ ರೀತಿ ಗುರುಕೃಪೆಯು ಸಾಧಕನಿಗೆ ಪ್ರಾರಬ್ಧಭೋಗವನ್ನು ಭೋಗಿಸುವ ಶಕ್ತಿ ನೀಡುವುದು