ಉದ್ದೇಶಿತ ಮೌಢ್ಯನಿಷೇಧ ಮಸೂದೆಯನ್ನು ಪರಿಷ್ಕರಣೆ ಮಾಡಲು ಸಚಿವ ಸಂಪುಟದಿಂದ ಉಪಸಮಿತಿಗೆ ಪುನಃ ಸಲ್ಲಿಕೆ

ಬೆಂಗಳೂರು : ಇತ್ತೀಚೆಗೆ ನೆರವೇರಿದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಮೌಢ್ಯ ನಿಷೇಧ ಮಸೂದೆಗೆ ಅನುಮೋದನೆ ಸಿಗಲಿಲ್ಲ. ಈ ಕಾನೂನಿಗೆ ವಿಪಕ್ಷದ ಸದಸ್ಯರು ಸಮೇತ ಅಧಿಕಾರರೂಢ ಕಾಂಗ್ರೆಸ್ ಪಕ್ಷದ ಸದಸ್ಯರೂ ವಿರೋಧಿಸಿದ್ದರು. ಹಾಗಾಗಿ ಈ ಮಸೂದೆಯನ್ನು ಪರಿಷ್ಕರಿಸಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪರವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಗೆ ಕಳುಹಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಪ್ರಸ್ತಾವಿತ ಕಾನೂನು ಮಹಾರಾಷ್ಟ್ರ ಸರಕಾರವು ಅನುಮೋದಿಸಿದ ಕಾನೂನನ್ನು ಆಧರಿಸಿದೆ. ಈ ಕಾನೂನನ್ನು ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಹಾಗೂ ಇತರ ಹಿಂದೂ ಸಂಘಟನೆಗಳು ವಿರೋಧಿಸಿದ್ದವು.
೧. ಮುಖ್ಯಮಂತ್ರಿಗಳು ೨೦೧೩ ರಂದು ಅಧಿಕಾರಕ್ಕೆ ಬಂದಾಗಿನಿಂದ ಮೌಢ್ಯ ನಿಷೇಧ ಮಸೂದೆಯನ್ನು ವಿಧಾನಮಂಡಲದಲ್ಲಿ ಅನುಮೋದಿಸುವ ಆಶ್ವಾಸನೆ ನೀಡಿದ್ದರು. ಅದಕ್ಕನುಸಾರ ಈ ಮಸೂದೆಯ ವಿಷಯದ ವಿವರವನ್ನು ಸಿದ್ಧಪಡಿಸಲು ರಾಷ್ಟ್ರೀಯ ಕಾನೂನು ಶಾಲೆಗೆ ನೀಡಲಾಗಿತ್ತು; ಆದರೆ ಅದರಲ್ಲಿನ ಅನೇಕ ವಿವಾದಿತ ಕಲಂಗಳ ಬಗ್ಗೆ ಮಂತ್ರಿಗಳಲ್ಲಿ ಒಮ್ಮತ ಮೂಡಲಿಲ್ಲ.

೨. ಈ ಮಸೂದೆಯ ಕಲಂಗಳ ಬಗ್ಗೆ ವಿಪಕ್ಷ ಸಹಿತ ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರ ವಿರೋಧವೂ ಇದೆ. ಹಾಗಾಗಿ ಇತ್ತೀಚೆಗೆ ನೆರವೇರಿದ ಸಚಿವ ಸಂಪುಟ ಸಭೆಯಲ್ಲೇ ಅನೇಕ ಸಚಿವರು ಆಕ್ಷೇಪಿಸಿದರು.
೩. ಸಚಿವರ ಅಭಿಪ್ರಾಯದಲ್ಲಿ ಸಂತರ ಪಲ್ಲಕಿಸೇವೆ, ಅವರ ಪಾದಪೂಜೆ, ಮಡೆಸ್ನಾನದಂತಹ ಅಂಶಗಳು ಅನಾವಶ್ಯಕವಾಗಿದ್ದು ಅವನ್ನು ಕೈಬಿಡಬೇಕು.
೪. ಅಲ್ಲದೇ ಈ ವಿಧೇಯಕವನ್ನು ಅಭ್ಯಸಿಸಲು ಇನ್ನೂ ಸಮಯ ನೀಡಬೇಕು, ಎಂದು ಸಚಿವ ಸಂಪುಟದ ಸಭೆಯಲ್ಲಿ ಆಗ್ರಹಿಸಲಾಯಿತು.
೫. ಸಚಿವರ ಆಗ್ರಹದಿಂದ ಮುಖ್ಯಮಂತ್ರಿಗಳೂ ಹಿಂದೆ ಸರಿದರು. ರಾಜ್ಯದಲ್ಲಿ ಈ ಕಾನೂನು ತರಲು ಆಗ್ರಹಿಸುತ್ತಿದ್ದವರಿಗೆ ಮುಖಭಂಗವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉದ್ದೇಶಿತ ಮೌಢ್ಯನಿಷೇಧ ಮಸೂದೆಯನ್ನು ಪರಿಷ್ಕರಣೆ ಮಾಡಲು ಸಚಿವ ಸಂಪುಟದಿಂದ ಉಪಸಮಿತಿಗೆ ಪುನಃ ಸಲ್ಲಿಕೆ