ಫಲಕ ಪ್ರಸಿದ್ಧಿಗಾಗಿ

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !
ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
೧. ಇಂತಹ ದೇಶದ್ರೋಹಿ ಪ್ರತ್ಯೇಕತಾವಾದಿಗಳನ್ನು ಸರಕಾರ ಗಲ್ಲಿಗೇರಿಸುವುದೇ ?
ಜುಲೈ ೮ ರಂದು ಹಿಜ್ಬುಲ್ ಮುಜಾಹಿದೀನ್‌ನ ಮೋಸ್ಟ್ ವಾಂಟೆಡ್ ಉಗ್ರ ಬುರ್ಹಾನ್ ಮುಝಫ್ಫರ್ ವಾನಿ ಸಹಿತ ಇಬ್ಬರು ಉಗ್ರರನ್ನು ಸೈನ್ಯದೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಯಿತು. ಅನಂತರ ಪ್ರತ್ಯೇಕತಾವಾದಿ ದೇಶದ್ರೋಹಿ ಮುಸಲ್ಮಾನ ನಾಯಕರು ಕಾಶ್ಮೀರದಲ್ಲಿ ಬಂದ್‌ಗೆ ಕರೆ ನೀಡಿದರು.
೨. ಬಂಗಾಳದ ಹಿಂದೂಗಳು ಹಿಂದೂದ್ವೇಷಿ ತೃಣಮೂಲ ಕಾಂಗ್ರೆಸ್‌ಅನ್ನು ಆರಿಸಿದರ ದುಷ್ಪರಿಣಾಮ !
ಬಂಗಾಳ ರಾಜ್ಯದ ಉತ್ತರ ದಿನಾಜ್‌ಪೂರ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಶಾಸಕ ಹಮಿದುಲ್ ರೆಹಮಾನ್‌ನ ಕಣ್ಮುಂದೆಯೇ ಮತಾಂಧರು ಹಿಂದೂಗಳ ಮೇಲೆ ಬಾಂಬ್‌ನಿಂದ ದಾಳಿ ನಡೆಸಿದರು. ಅದರಲ್ಲಿ ಹಲವಾರು ಹಿಂದೂಗಳ ಮನೆಗಳು ಸುಟ್ಟುಹೋದವು ಹಾಗೂ ಅವರ ಸಂಪತ್ತನ್ನು ಕೊಳ್ಳೆ ಹೊಡೆದರು. ಅವರು ನಡೆಸಿದ ಗುಂಡಿನ ಹಾರಾಟದಲ್ಲಿ ಹಲವಾರು ಹಿಂದೂಗಳು ಗಾಯಗೊಂಡರು.

೩. ಡಾ. ಝಾಕೀರ್ ನಾಯಿಕ್ ಸಹಿತ ಅವರನ್ನು ಗೌರವಿಸುವ ಕಾಂಗ್ರೆಸ್ಸಿನ ಮೇಲೆ ನಿಷೇಧ ಹೇರುವರೇ ?
ಬಾಂಗ್ಲಾದೇಶವು ಬೇಡಿಕೆ ಸಲ್ಲಿಸಿದರೆ ಭಾರತವು ಇಸ್ಲಾಮಿ ವಿಚಾರವಂತ ನಾದ ಡಾ. ಝಾಕೀರ್ ನಾಯಿಕ್ ಮೇಲೆ ನಿಷೇಧ ಹೇರಲು ಗಂಭೀರವಾಗಿ ಚಿಂತನೆ ಮಾಡುವುದು, ಎಂದು ಕೇಂದ್ರೀಯ ಗೃಹರಾಜ್ಯ ಸಚಿವರಾದ ಕಿರೆನ್ ರಿಜಿಜೂ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಝಾಕೀರ್ ನನ್ನೇ ಶಾಂತಿದೂತರೆಂದು ಹೇಳಿದ್ದರು.
೪. ಕೇವಲ ಝಾಕೀರ್ ನಾಯಿಕ್ ಮಾತ್ರವಲ್ಲ ಪ್ರಚೋದನಕಾರಿ ಭಾಷಣ ಮಾಡುವ ಎಲ್ಲ ಮತಾಂಧರನ್ನು ನಿಷೇಧಿಸಿ !
ನನ್ನ ಪೀಸ್ ಟೀವಿ ವಾಹಿನಿ, ಫೇಸ್‌ಬುಕ್ ಇತ್ಯಾದಿಗಳಲ್ಲಿ ಸೇರಿಸಿದರೆ ನನಗೆ ಕೋಟಿಗಟ್ಟಲೆ ಅನುಯಾಯಿಗಳಿದ್ದಾರೆ. ಆದ್ದರಿಂದ ಢಾಕಾ ದಾಳಿಯ ಉಗ್ರರಿಗೆ ನನ್ನ ಪರಿಚಯವಿದ್ದರೆ ಅದರಲ್ಲಿ ಆಶ್ಚರ್ಯವೇನು ?, ಎಂದು ತಥಾಕಥಿತ ವಿಚಾರವಂತ ಡಾ. ಝಾಕೀರ್ ನಾಯಿಕ್ ಉದ್ಧಟವಾಗಿ ಹೇಳಿದ್ದಾನೆ. 
೫. ಭಾರತವನ್ನು ಅಸಹಿಷ್ಣು ಎಂದು ನಿರ್ಧರಿಸುವ ಅಮೇರಿಕಾದ ಸಹಿಷ್ಣುತೆ ಇದೇನಾ ?
ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಇಬ್ಬರು ಮುಸಲ್ಮಾನ ಯುವಕರ ಮೇಲೆ ದಾಳಿ ನಡೆಸಲಾಯಿತು. ದಾಳಿ ನಡೆಸಿದ ಯುವಕರು ಇಡೀ ದೇಶದ ಸಮಸ್ಯೆಗಳಿಗೆ ನೀವು ಮುಸಲ್ಮಾನರೇ ಕಾರಣರಾಗಿದ್ದೀರಿ, ಎಂದು ಹೇಳಿದ್ದಾರೆ. ಇದು ಅಮೇರಿಕಾದಲ್ಲಿ ಒಂದು ವಾರದಲ್ಲಿ ಮುಸಲ್ಮಾನರ ಮೇಲೆ ನಡೆದ ಮೂರನೇ ದಾಳಿಯಾಗಿದೆ.
೬. ದೇಶದ್ರೋಹಿಗಳಿಗೆ ಶ್ರೀನಗರದ ಲಾಲ್ ಚೌಕ್‌ನಲ್ಲಿ ಗಲ್ಲಿಗೇರಿಸಿ !
ಉಗ್ರ ಬುರ್ಹಾನ್ ಮುಝಫ್ಫರ್ ವಾನಿಯನ್ನು ಕೊಂದ ಕಾರಣಕ್ಕೆ ದೇಶದ್ರೋಹಿ ಮತಾಂಧರು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಿದರು. ಅವರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿ ಲೂಟಿ ಮಾಡಿದರು, ಮಹಿಳಾ ಯಾತ್ರಿಕರ ಮೇಲೆ ಬಲಾತ್ಕಾರ ಎಸಗಿದರು. ಸೈನಿಕರ ಮೇಲೆ ನಡೆದ ಕಲ್ಲುತೂರಾಟದಲ್ಲಿ ೯೬ ಸೈನಿಕರು ಗಾಯಗೊಂಡರು.
೭. ೧೯೯೦ ರ ಕಾಶ್ಮೀರಿ ಹಿಂದೂಗಳ ವಂಶನಾಶದ ಇತಿಹಾಸದ ಪುನರಾವೃತ್ತಿ ?
ಕಾಶ್ಮೀರ ಕಣಿವೆಯ ಮಸೀದಿಯ ಬೋಂಗಾದಿಂದ ಪಾಕ್‌ಪರ ಘೋಷಣೆ ಕೂಗಲಾಯಿತು. ಅಲ್ಲದೇ ಭಾರತವಿರೋಧಿ ‘ಜಿಹಾದ್’ನಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗುತ್ತಿದೆ. ಇನ್ನೊಂದೆಡೆ ಜುಲೈ ೧೧ ರಂದು ಮತಾಂಧರು ಪುಲವಾಮಾದಲ್ಲಿ ಇಬ್ಬರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕ ಪ್ರಸಿದ್ಧಿಗಾಗಿ