ಮಂಗಳಾದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಅನ್ವಯಿಸಲು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಗೆ ದೊರೆತ ಯಶಸ್ಸು !

ರಣರಾಗಿಣಿ ಶಾಖೆಗೆ ಅಭಿನಂದನೆ !
ದೇವಸ್ಥಾನದ ಆಡಳಿತ ಮಂಡಳಿ ಹಾಕಿದ ಫಲಕ
ಮಂಗಳೂರು : ದೇವಸ್ಥಾನದ ಪಾವಿತ್ರ್ಯ ಉಳಿಸಲು ದೇವಸ್ಥಾನಕ್ಕೆ ಬರುವಾಗ ಮಹಿಳೆಯರಿಗೆ ವಸ್ತ್ರಸಂಹಿತೆ ಅನ್ವಯಿಸುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯು ಇಲ್ಲಿ ಕೈಗೆತ್ತಿಕೊಂಡ ಅಭಿಯಾನದ ಮೊದಲ ಪ್ರಯತ್ನಕ್ಕೇ ಶ್ಲಾಘನೀಯ ಯಶಸ್ಸು ದೊರೆತಿದೆ.
ಇಲ್ಲಿನ ಗ್ರಾಮದೇವತೆಯಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ. ರಮಾನಾಥ ಹೆಗ್ಡೆಯವರಿಗೆ ರಣರಾಗಿಣಿ ಶಾಖೆಯಿಂದ ಮನವಿ ನೀಡಿ ಆ ಮೂಲಕ ದೇವಸ್ಥಾನಕ್ಕೆ ಬರುವಾಗ ವಸ್ತ್ರಸಂಹಿತೆ ಅನ್ವಯಿಸುವಂತೆ ವಿನಂತಿಸ ಲಾಗಿತ್ತು. ಶ್ರೀ. ಹೆಗ್ಡೆಯವರು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದರು.
ಅದೇ ರೀತಿ ಜುಲೈ ೮ ರಂದು ಮಂಡಳಿಯ ಸಭೆಯಲ್ಲಿ ರಣರಾಗಿಣಿ ಶಾಖೆಯು ನೀಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲ ಭಕ್ತರು ವಸ್ತ್ರಸಂಹಿತೆ ಅನುಸರಿಸಬೇಕೆಂದು ಸಮಿತಿಯ ಫಲಕ ದಲ್ಲಿ ಹಾಕಿದೆ. ರಣರಾಗಿಣಿ ಶಾಖೆಯ ಮೊದಲ ಪ್ರಯತ್ನಕ್ಕೆ ದೊರೆತ ಯಶಸ್ಸಿನಿಂದ ಸದಸ್ಯರ ಆತ್ಮವಿಶ್ವಾಸ ಹೆಚ್ಚಾಗಿದ್ದು ಅಲ್ಲದೇ ಇದೇ ರೀತಿ ಮಂಗಳೂರು ನಗರದ ಎಲ್ಲ ಪ್ರಸಿದ್ಧ ದೇವಸ್ಥಾನಗಳಲ್ಲೂ ಪ್ರಯತ್ನಿಸ ಲಾಗುವುದು ಎಂದು ನಿರ್ಧರಿಸಲಾಗಿದೆ. (ಇತರ ದೇವಸ್ಥಾನಗಳು ಶ್ರೀ ಮಂಗಲಾ ದೇವಿ ದೇವಸ್ಥಾನದ ಆದರ್ಶವನ್ನಿಟ್ಟು ರಣರಾಗಿಣಿ ಶಾಖೆಯು ಆರಂಭಿಸಿದ ಅಭಿಯಾನಕ್ಕೆ ಯೋಗ್ಯ ರೀತಿಯಲ್ಲಿ ಸ್ಪಂದಿಸ ಬೇಕು ಮತ್ತು ದೇವಸ್ಥಾನದ ಪಾವಿತ್ರ್ಯ ಕಾಪಾಡಲು ಕೈಜೋಡಿಸಬೇಕು ಎಂದು ಎಲ್ಲ ಹಿಂದೂಗಳ ಅಪೇಕ್ಷೆಯಾಗಿದೆ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಂಗಳಾದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಅನ್ವಯಿಸಲು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಗೆ ದೊರೆತ ಯಶಸ್ಸು !