ಸಮಾನ ನಾಗರಿಕ ಕಾನೂನು ಮತ್ತು ವಿರೋಧ

ನಮ್ಮ ದೇಶದಲ್ಲಿ ಕೆಲವು ಸಮಸ್ಯೆಗಳು ವರ್ಷಾನುಗಟ್ಟಲೆ ಕೊಳೆಯುತ್ತಾ ಇರುತ್ತವೆ. ಅವುಗಳಿಗೆ ತಕ್ಷಣ ಪರಿಹಾರ ಹುಡುಕಿ ಸಮಸ್ಯೆಗಳನ್ನು ನಿವಾರಿಸುವುದು ನಿಜವಾಗಿಯೂ ಅಸಾಧ್ಯ ವಿಷಯವಲ್ಲ. ಆದರೂ ಆ ವಿಷಯಗಳ ಬಂಡವಾಳ ಮಾಡಿಕೊಂಡು ಪುನಃ ಪುನಃ ಚುನಾವಣೆಯ ಕಣಕ್ಕಿಳಿಯಲು ಹಾಗೂ ಗೆಲ್ಲಲು ಸಾಧ್ಯವಾಗಬೇಕೆಂದು ಅನೇಕ ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ನೆನೆಗುದಿಯಲ್ಲಿಡಲಾಗಿದೆ. ಅದರಲ್ಲಿ ಒಂದು ಸಮಸ್ಯೆಯೆಂದರೆ ಸಮಾನ ನಾಗರಿಕ ಕಾನೂನು ! ಈಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಕಣ್ಣೆದುರು ಇಟ್ಟುಕೊಂಡು ಸಮಾನ ನಾಗರಿಕ ಕಾನೂನಿನ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಚರ್ಚೆ ಆರಂಭವಾಗಿದೆ. ಆದರೆ ಭಾರತಾದ್ಯಂತ ಅದರ ವಿಷಯದಲ್ಲಿ ಸ್ವಾಗತವಾಗುತ್ತಿದ್ದರೂ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅದಕ್ಕೆ ವಿರೋಧಿಸಿದ್ದು ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ಭಾಜಪ ಈ ವಿಷಯವನ್ನು ಎತ್ತಿಹಿಡಿದಿದೆ, ಎಂದು ಆರೋಪಿಸಿದೆ. ಈ ವಿರೋಧದಿಂದ ಹಾಗೂ ಓಲೈಕೆಯ ರಾಜಕಾರಣದಿಂದಲೇ ಇದುವರೆಗೆ ಸಮಾನ ನಾಗರಿಕ ಕಾನೂನಿನ ಆಗ್ರಹವನ್ನು ದುರ್ಲಕ್ಷಿಸಲಾಗಿದೆ, ಎಂಬುದು ಸತ್ಯಸಂಗತಿಯಾಗಿದೆ. ಲೋಕಸಭೆ ಚುನಾವಣೆ  ಸಮಯದಲ್ಲಿ ಭಾಜಪ ತನ್ನ ಘೋಷಣಾಪತ್ರದಲ್ಲಿ ಸಮಾನ ನಾಗರಿಕ ಕಾನೂನನ್ನು ಉಲ್ಲೇಖಿಸಿತ್ತು. ಈಗ ಎರಡು ವರ್ಷಗಳಾದರೂ ಆ ಬಗ್ಗೆ ಚರ್ಚೆಯೇ ನಡೆದಿದೆ. ಯಾವಾಗಲೂ ಚರ್ಚೆ ನಡೆಯುತ್ತದೆ, ಅದರಲ್ಲಿ ಮುಸಲ್ಮಾನರು ಅಡ್ಡಗಾಲಿಡುತ್ತಾರೆ, ಆ ಮೇಲೆ ವಾತಾವರಣ ತಿಳಿಯಾಗುತ್ತದೆ.
ಜಟಿಲ ಸಮಸ್ಯೆಗಳಿಗೆ ಸಮಾನ ನಾಗರಿಕ ಕಾನೂನು ಉತ್ತರ !
ವಾಸ್ತವದಲ್ಲಿ ಭಾಜಪ ಸರಕಾರದ ವಿಕಾಸವೆಂಬ ಮುಖ್ಯ ಅಜೆಂಡಾವನ್ನು ಸಮಾನ ನಾಗರಿಕ ಕಾನೂನು ಪುಷ್ಟೀಕರಿಸುತ್ತದೆ. ಇಂದು ಎಲ್ಲಡೆ ಹಮ್ ದೋ, ಹಮಾರೆ ದೋ ಎಂಬ ಧ್ವನಿ ಕೇಳುತ್ತಿದೆ. ಆದರೂ ಹಿಂದೂಗಳ ಎರಡು ಅಥವಾ ಇತ್ತೀಚೆಗಂತೂ ಒಂದೇ; ಆದರೆ ಮುಸಲ್ಮಾನರ ಮಿತಿ ಇಲ್ಲದ್ದಾಗಿರುವುದರಿಂದ ಅವರ ಜನಸಂಖ್ಯೆ ರಭಸದಿಂದ ಹೆಚ್ಚುತ್ತಿದೆ. ೨೦೧೧ ರ ಜನಗಣತಿಯ ವರದಿಯನ್ನು ಭಾಜಪ ಸರಕಾರ ಪ್ರಸಿದ್ಧಪಡಿಸಿತ್ತು. ಅದರಲ್ಲಿಯೂ ಅದೇ ನಿರೀಕ್ಷಣೆ ಬೆಳಕಿಗೆ ಬಂದಿತ್ತು. ಮುಸಲ್ಮಾನರಿಗೆ ಬಹುಪತ್ನಿತ್ವದ ಕಾನೂನು ಮತ್ತು ಕುಟುಂಬ ನಿಯೋಜನೆಯ ಕಡ್ಡಾಯ ಇಲ್ಲದಿರುವುದೂ ದೇಶದ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗಿದೆ. ಆ ಸಮಸ್ಯೆಗಳಿಗೆ ಉತ್ತರ  ಸಮಾನ ನಾಗರಿಕ ಕಾನೂನಿನಲ್ಲಿದೆ. ಆದ್ದರಿಂದಲೇ ಮುಸಲ್ಮಾನರಿಂದ ಅದಕ್ಕೆ ವಿರೋಧವಾಗುತ್ತಿದೆ. ರಾಷ್ಟ್ರವು ರಸಾತಳಕ್ಕೆ ಹೋದರೂ ಅಡ್ಡಿಯಿಲ್ಲ; ಆದರೆ ಧರ್ಮ (ತಪ್ಪಾಗಿದ್ದರೂ) ಬಿಡುವುದಿಲ್ಲ, ಎಂಬುದು ಭಾರತೀಯ ಮತಾಂಧರ ಮಾನಸಿಕತೆಯಾಗಿದೆ; ಆದರೆ ಅದರಿಂದ ಕುಪೋಷಣೆ, ನಿರುದ್ಯೋಗ ಇತ್ಯಾದಿಗಳ ವಿತರಣೆಯಲ್ಲಿ ಅಸಮಾನತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಉದ್ಭವಿಸುತ್ತವೆ, ಅದಕ್ಕೆ ಯಾರು ಹೊಣೆ ? ಮತಾಂಧರು ಬಹುಪತ್ನಿತ್ವ, ತಲಾಖ್ ಇಂತಹ ಸ್ತ್ರೀಯರ ಅಧಿಕಾರಗಳಿಗೆ ಧಕ್ಕೆಯುಂಟು ಮಾಡುವ ಪದ್ಧತಿ ಯನ್ನು ಪೋಷಿಸುತ್ತಿರುವುದರಿಂದ ಅವರು ಈ ಕಾನೂನನ್ನು ವಿರೋಧಿಸುತ್ತಾರೆ.
ಓಲೈಕೆಯ ದುಷ್ಪರಿಣಾಮ !
ಧರ್ಮದ ಹೆಸರಿನಲ್ಲಿ ವಿಶೇಷ ಸೌಲಭ್ಯಗಳು, ಮೀಸಲಾತಿ ಪಡೆಯುವುದು ಇತ್ಯಾದಿ ಮುಂದುವರಿದಿದೆ. ಮತಾಂಧರ ಧಾರ್ಮಿಕ ಕಟ್ಟರತೆ ಇಡೀ ವಿಶ್ವಕ್ಕೇ ತಲೆನೋವಾಗಿದೆ. ಆರಂಭದಲ್ಲಿ ಇರಾಕ್ ಮತ್ತು ಸಿರಿಯಾದ ಮೇಲೆ ವರ್ಚಸ್ಸನ್ನು ಸ್ಥಾಪಿಸುವ ಮತಾಂಧರು ಈಗ ದೇಶದೆಲ್ಲೆಡೆ ಹಿಂಸಾಚಾರ  ನಡೆಸಲು ಆರಂಭಿಸಿದೆ. ಆದ್ದರಿಂದ ಅನೇಕ ಯುರೋಪ್ ರಾಷ್ಟ್ರಗಳಲ್ಲಿ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂಬ ಸ್ಥಾನ ಬಿಡಿ ಅವರ ಮೇಲೆ ನಿರ್ಬಂಧ ಹೇರಲಾಗಿದೆ. ನಮ್ಮ ದೇಶದಲ್ಲಿ ಮಾತ್ರ ಮುಸಲ್ಮಾನರ ಮತಪೆಟ್ಟಿಗೆಗಾಗಿ ಅವರನ್ನು ಮುದ್ದಿಸಲಾಗುತ್ತದೆ. ಸಮಾನ ನಾಗರಿಕ ಕಾನೂನು ಅನ್ವಯವಾದರೆ ಧರ್ಮದ ಹೆಸರಲ್ಲಿ ಸಿಗುವ ವಿಶೇಷ ಸ್ಥಾನಮಾನ ಸಿಗದೆಂಬ ಭಯದಿಂದ  ಅವರಿಂದ ವಿರೋಧವಾಗುತ್ತಿದೆ.
ವಿರೋಧವನ್ನು ಹತ್ತಿಕ್ಕುವ ಧೈರ್ಯ ಮಾಡಿರಿ !
ಧರ್ಮವೇ ಭಾರತೀಯ ರಾಜಕಾರಣದ ಅಡಿಪಾಯವಾಗಿದೆ. ಸಮಾನ ನಾಗರಿಕ ಕಾನೂನಿಗೆ ಮುಸಲ್ಮಾನರ ವಿರೋಧಕ್ಕೆ ಅವರ ಶರಿಯತ್ ಪಾಲನೆ ಸಾಧ್ಯವಿಲ್ಲ, ಎಂಬುದೂ  ಕಾರಣವಿದೆ. ನಾವು ಒಂದೆಡೆ ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಹೀಗಿರುವಾಗ ಕೇವಲ ಮೂರು ಬಾರಿ ತಲಾಕ್ ಹೇಳಿ ನಡೆಯುವ ವಿವಾಹ ವಿಚ್ಛೇದನೆ ನಿಲ್ಲಿಸಲು ಯಾರೂ ಮುಂದೆ ಬರುವುದಿಲ್ಲ, ಎಂಬುದು ದೇಶದ ನಿಜವಾದ ದುರಂತವಾಗಿದೆ. ಪ್ರಜಾಪ್ರಭುತ್ವ ಹೇಳುತ್ತದೆ, ಪ್ರತಿಯೊಬ್ಬರೊಂದಿಗೆ ಸಮಾನವಾಗಿ ಹಾಗೂ ಗೌರವದಿಂದ ವರ್ತಿಸಬೇಕು, ಅದು ಅವನ ಅಧಿಕಾರವಾಗಿದೆ. ಆದರೂ ಕಳೆದ ೬೮ ವರ್ಷಗಳಿಂದ ಈ ಸಮಾನ ನಾಗರಿಕ ಕಾನೂನನ್ನು ಉಪೇಕ್ಷಿಸುವುದು ಜನರು ಜನರಿಗಾಗಿ ನಡೆಸುತ್ತಿರುವ ರಾಜ್ಯವೆಂದು ಹೇಳುವ ಪ್ರಜಾಪ್ರಭುತ್ವದ ದೊಡ್ಡ ವೈಫಲ್ಯವೆಂದೇ ಹೇಳಬೇಕು. ಈ ಕಾನೂನಿನಿಂದ ಹೇಗೆ ಸಾಮಾಜಿಕ ಸಮಸ್ಯೆಗಳು ನಿವಾರಣೆಯಾಗುವವೋ, ಹಾಗೆಯೇ ಭಾರತೀಯ ರಾಜಕಾರಣಕ್ಕೆ ಹಿಡಿದ ಓಲೈಕೆಯ ಕೀಟವೂ ನಾಶವಾಗಲು ಸಹಾಯವಾಗುವುದು. ಇಂದು ನಿರ್ದಿಷ್ಟ ಸಮಾಜಘಟಕಗಳ ಧಾರ್ಮಿಕ ಸ್ವಾಭಿಮಾನ ಪುರಸ್ಕರಿಸಿ ತಮ್ಮ ಮತಪೆಟ್ಟಿಗೆಯನ್ನು ಸುರಕ್ಷಿತಗೊಳಿಸಲಾಗುತ್ತದೆ. ಅದನ್ನು ನಾವು ಶಾಹಬಾನೋ ಮಾಶಾಸನ ಪ್ರಕರಣದಲ್ಲಿ ನೋಡಿದೆವು. ಆದ್ದರಿಂದಲೇ ಯಾರು ಹೆಚ್ಚು ಓಲೈಸುತ್ತಾರೋ, ಅವರಿಗೇ ಓಟು ಎಂಬ ಸಮೀಕರಣ ನಿರ್ಮಾಣವಾಗಿದೆ. ಒಮ್ಮೆ ಕಾನೂನೇ ಎಲ್ಲರನ್ನೂ ಸಮಾನ ಮಟ್ಟಕ್ಕೆ ತಂದರೆ, ತನ್ನಿಂತಾನೇ ರಾಜಕಾರಣದ ದಿಕ್ಕು ಬದಲಾಗುವುದು. ಅದಕ್ಕಾಗಿ ಮುಸಲ್ಮಾನರ ವಿರೋಧವನ್ನು ಕಡೆಗಣಿಸುವ ಸವಾಲನ್ನು ಸರಕಾರ ಸಹಿಸಿಕೊಳ್ಳಬೇಕಾಗುವುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಮಾನ ನಾಗರಿಕ ಕಾನೂನು ಮತ್ತು ವಿರೋಧ