ಗುರುಪೂರ್ಣಿಮೆ ನಿಮಿತ್ತ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಸಂದೇಶ

ಮಾನವ ಜೀವನವನ್ನು ಸಾರ್ಥಕಗೊಳಿಸಲು ಅಧ್ಯಾತ್ಮವನ್ನು ಅನುಸರಿಸಿ ! 
- ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ, ಕಲ್ಯಾಣ, ಠಾಣೆ
ॐ ಆನಂದಂ ಹಿಮಾಲಯಂ ವಿಷ್ಣುಂ ಗರುಡಧ್ವಜಮ್ ॐ |
ॐ ಶಿವಂ ದತ್ತಂ ಗಾಯತ್ರಿ ಸರಸ್ವತೀ ಮಹಾಲಕ್ಷ್ಮೀ ಪ್ರಣಮಾಮ್ಯಹಮ್ ॐ ॥
ಹಿಂದೂ ಧರ್ಮದ ತತ್ತ್ವಜ್ಞಾನವು ಸರ್ವಶ್ರೇಷ್ಠವಾಗಿದೆ. ಯಾವುದೇ ಕಠಿಣ ಪರಿಸ್ಥಿತಿಯನ್ನು  ಸಾಮರ್ಥ್ಯವನ್ನು ಹಿಂದೂ ಧರ್ಮವೇ ಕೊಡುತ್ತದೆ. ಮಾನವ ಜೀವನದಲ್ಲಿ ಅಧ್ಯಾತ್ಮಕ್ಕೆ ಅಸಾಧಾರಣ ಮಹತ್ವವಿದೆ. ಅಧ್ಯಾತ್ಮವು ಯಶಸ್ವಿ ಹಾಗೂ ಆನಂದಮಯ ಜೀವನದ ಅಡಿಪಾಯವೆಂದು ನಂಬಬೇಕು. ಯಾರು ಈ ಅಡಿಪಾಯವನ್ನು ಗಟ್ಟಿಮುಟ್ಟಾಗಿಸುತ್ತಾನೋ, ಅವನ ಮುಂದಿನ ಜೀವನವು ಯಶಸ್ವಿಯಾಗುವುದು. ಮಾನವ ಜೀವನದಲ್ಲಿ ಏರಿಳಿತ, ಸಂಕಟಗಳು, ಸುಖ-ದುಃಖ ಇತ್ಯಾದಿ ತುಂಬಿರುತ್ತವೆ; ಆದರೆ ಈ ಪ್ರಯಾಣದಲ್ಲಿ ಸಿಲುಕಿಕೊಳ್ಳದೆ ಆಂತರಿಕ ತಳಮಳದಿಂದ ಮುಂದೆ-ಮುಂದೆ ಪ್ರಯಾಣ ಬೆಳೆಸುವ ಶಕ್ತಿಯನ್ನು ನಮಗೆ ಅಧ್ಯಾತ್ಮವೇ  ಕೊಡುತ್ತದೆ; ಆದ್ದರಿಂದ ಸಾಧಕರು ನಿರಂತರ ಅಧ್ಯಾತ್ಮವನ್ನು ಅನುಸರಿಸಿದರೆ  ಮಾನವ  ಜೀವನವು ನಿಜವಾಗಿಯೂ ಸಾರ್ಥಕವಾಗುವುದು ಹಾಗೂ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸಾಧಕನು ನಿರಂತರ ಸುವಿಚಾರದಿಂದಲೇ ಅದನ್ನು ಕಡಿಮೆಗೊಳಿಸಬೇಕು. ಈ ಆದರ್ಶವನ್ನಿಟ್ಟುಕೊಳ್ಳಲು ಎಲ್ಲ ಸಾಧಕರಿಗೆ ಶುಭಾಶಯಗಳು !
॥ ಶುಭಮ್ ಭವತು ॥

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಪೂರ್ಣಿಮೆ ನಿಮಿತ್ತ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಸಂದೇಶ